ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಕೋವಿಡ್–19 ಪರಿಸ್ಥಿತಿಯ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಮಂತ್ರಿಯವರು ಸಂತಾಪ ವ್ಯಕ್ತಪಡಿಸಿದರು. “ಕುಟುಂಬದ ಒಬ್ಬ ಸದಸ್ಯನಾಗಿ, ಈ ದುಃಖದ ಸಮಯದಲ್ಲಿ ನಿಮ್ಮೊಂದಿಗೆ ನಾನಿದ್ದೇನೆ. ಸವಾಲು ದೊಡ್ಡದಾಗಿದೆ ನಿಜ. ನಾವು ದೃಢ ನಿರ್ಧಾರ, ಧೈರ್ಯ ಮತ್ತು ಸಿದ್ಧತೆಯೊಂದಿಗೆ ಒಟ್ಟಾಗಿ ಅದನ್ನು ಜಯಿಸಬೇಕಾಗಿದೆ,” ಎಂದು ಪ್ರಧಾನಿ ಹೇಳಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ನೀಡಿದ ಕೊಡುಗೆಗಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ಆಂಬ್ಯುಲೆನ್ಸ್ ಚಾಲಕರು, ಭದ್ರತಾ ಪಡೆಗಳು ಮತ್ತು ಪೊಲೀಸ್ ಪಡೆಗಳಿಗೆ ಅವರು ಗೌರವ ಸಲ್ಲಿಸಿದರು.
ದೇಶದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಸರಕಾರ ಶರವೇಗ ಮತ್ತು ಸಂವೇದನಾಶೀಲತೆಯಿಂದ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಅಗತ್ಯವಿರುವ ಪ್ರತಿಯೊಬ್ಬ ವ್ಯಕ್ತಿಗೂ ಆಮ್ಲಜನಕ ದೊರಕಿಸಿಕೊಡಲು ಕೇಂದ್ರ, ರಾಜ್ಯ ಸರಕಾರಗಳು ಮತ್ತು ಖಾಸಗಿ ವಲಯಗಳು ಪ್ರಯತ್ನಗನ್ನು ಮಾಡುತ್ತಿವೆ. ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವ ಪ್ರಯತ್ನಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ. ಹೊಸ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದು, ಒಂದು ಲಕ್ಷ ಹೊಸ ಸಿಲಿಂಡರ್ಗಳನ್ನು ಒದಗಿಸುವುದು, ಆಮ್ಲಜನಕವನ್ನು ಕೈಗಾರಿಕಾ ಬಳಕೆಯಿಂದ ವೈದ್ಯಕೀಯ ಬಳಕೆಯತ್ತ ತಿರುಗಿಸುವುದು, ʻಆಕ್ಸಿಜನ್ ರೈಲುʼ ಸಂಚಾರ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನಮ್ಮ ವಿಜ್ಞಾನಿಗಳು ಅತ್ಯಂತ ಕಡಿಮೆ ಸಮಯದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ಅಗ್ಗದ ಲಸಿಕೆಯನ್ನು ಹೊಂದಿದೆ. ಭಾರತದಲ್ಲಿ ಲಭ್ಯವಿರುವ ಶೀತ–ಸಂಗ್ರಹಾಗಾರ ಸರಪಳಿ ವ್ಯವಸ್ಥೆಗೆ ಹೊಂದುವಂಥ ಲಸಿಕೆ ಇದಾಗಿದೆ ಎಂದು ಪ್ರಧಾನಿ ಹೇಳಿದರು. ಈ ತಂಡದ ಪ್ರಯತ್ನದಿಂದಾಗಿ, ಭಾರತವು ಎರಡು ‘ಮೇಡ್ ಇನ್ ಇಂಡಿಯಾ‘ ಲಸಿಕೆಗಳೊಂದಿಗೆ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದೆ. ಲಸಿಕೆಯ ಮೊದಲ ಹಂತದಿಂದಲೇ, ಲಸಿಕೆಯು ಗರಿಷ್ಠ ಪ್ರದೇಶಗಳಿಗೆ ಮತ್ತು ಅಗತ್ಯವಿರುವ ಗರಿಷ್ಠ ಜನರಿಗೆ ತಲುಪುವತ್ತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ಮೊದಲ 10 ಕೋಟಿ, 11 ಕೋಟಿ ಮತ್ತು 12 ಕೋಟಿ ಲಸಿಕೆ ಡೋಸ್ ಗಳನ್ನು ನೀಡಿದ ಹಿರಿಮೆ ಭಾರತದ್ದು ಎಂದರು.
ಲಸಿಕೆಗೆ ಸಂಬಂಧಿಸಿದ ಇತ್ತೀಚೆಗಿನ ನಿರ್ಧಾರದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಮೇ 1ರ ನಂತರ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಲಸಿಕೆ ಪಡೆಯಬಹುದು ಎಂದರು. ಭಾರತದಲ್ಲಿ ಉತ್ಪತ್ತಿಯಾಗುವ ಲಸಿಕೆಯ ಅರ್ಧದಷ್ಟನ್ನು ನೇರವಾಗಿ ರಾಜ್ಯಗಳು ಮತ್ತು ಆಸ್ಪತ್ರೆಗಳಿಗೆ ತಲುಪಲಿದೆ ಎಂದರು.
ಜೀವಗಳನ್ನು ಉಳಿಸುವ ಜೊತೆಗೆ, ಆರ್ಥಿಕ ಚಟುವಟಿಕೆಗಳನ್ನು ಉಳಿಸಲು ಮತ್ತು ಜನರ ಜೀವನೋಪಾಯದ ಮೇಲೆ ಸಾಧ್ಯವಾದಷದ್ಟು ಕನಿಷ್ಠ ಪ್ರತಿಕೂಲ ಪರಿಣಾಮ ಆಗುವ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಲಾಗತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 18 ವರ್ಷ ಮೇಲ್ಪಟ್ಟ ಜನಸಂಖ್ಯೆಗೆ ಲಸಿಕೆಯನ್ನು ಮುಕ್ತಗೊಳಿಸಿರುವುದರಿಂದ, ನಗರಗಳಲ್ಲಿನ ದುಡಯುವ ವರ್ಗಕ್ಕೆ ತ್ವರಿತವಾಗಿ ಲಸಿಕೆ ಲಭ್ಯವಾಗಲಿದೆ. ರಾಜ್ಯ ಸರಕಾರಗಳು ಕಾರ್ಮಿಕರ ವಿಶ್ವಾಸವನ್ನು ಹೆಚ್ಚಿಸಬೇಕು ಮತ್ತು ಅವರನ್ನು ಇದ್ದಲ್ಲೇ ಉಳಿಯುವಂತೆ ಮನವೊಲಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು. ರಾಜ್ಯಗಳ ಈ ಆಶ್ವಾಸನೆಯು ಶ್ರಮಿಕರು ಮತ್ತು ಕಾರ್ಮಿಕರಿಗೆ ಬಹಳ ಸಹಾಯ ಮಾಡುತ್ತದೆ. ಅವರು ಎಲ್ಲೇ ಇದ್ದರೂ ಅಲ್ಲಿಯೇ ಲಸಿಕೆಯನ್ನು ಪಡೆಯುತ್ತಾರೆ. ಇದರಿಂದ ಅವರ ಕೆಲಸಕ್ಕೂ ತೊಂದರೆಯಾಗುವುದಿಲ್ಲ ಎಂದರು.
ಮೊದಲ ಅಲೆಯ ಆರಂಭಿಕ ದಿನಗಳಿಗೆ ಹೋಲಿಸಿದರೆ, ಈಗ ಸವಾಲನ್ನು ಎದುರಿಸಲು ನಮಗೆ ಉತ್ತಮ ಜ್ಞಾನ ಮತ್ತು ಸಂಪನ್ಮೂಲಗಳಿವೆ ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕದ ವಿರುದ್ಧ ಉತ್ತಮ ಮತ್ತು ತಾಳ್ಮೆಯ ಹೋರಾಟದ ಶ್ರೇಯವನ್ನು ಶ್ರೀ ಮೋದಿ ಅವರು ಭಾರತದ ಜನತೆಗೆ ಅರ್ಪಿಸಿದರು. ಜನರ ಪಾಲ್ಗೊಳ್ಳುವಿಕೆ, ಸಹಕಾರದ ಬಲದಿಂದ ನಾವು ಈ ಎರಡನೇ ಕೊರೊನಾ ಅಲೆಯನ್ನೂ ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅಗತ್ಯ ಸಮಯದಲ್ಲಿ ಜನರಿಗೆ ಸಹಾಯ ಮಾಡುತ್ತಿರುವ ಸಾಮಾಜಿಕ ಸಂಸ್ಥೆಗಳ ಕೊಡುಗೆಯನ್ನು ಅವರು ಸ್ಮರಿಸಿದರು. ಜೊತೆಗೆ, ಸಹಾಯ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕೆಂದು ಅವರು ಕರೆ ನೀಡಿದರು.
ತಾವಿರುವ ಪ್ರದೇಶಗಳು ಮತ್ತು ನೆರೆಹೊರೆಯಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುವಂತೆ ಯುವಕರಿಗೆ ಪ್ರಧಾನಿ ಕರೆ ನೀಡಿದರು. ಇದರಿಂದ ಕಂಟೈನ್ಮೆಂಟ್ ವಲಯಗಳು, ಕರ್ಫ್ಯೂಗಳು ಅಥವಾ ಲಾಕ್ಡೌನ್ಗಳನ್ನು ತಪ್ಪಿಸಲು ಸಹಾಯಕವಾಗಲಿದೆ. ತಮ್ಮ ಕುಟುಂಬ ಸದಸ್ಯರು ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತಹ ವಾತಾವರಣವನ್ನು ಸೃಷ್ಟಿಸುವಂತೆ ಅವರು ಮಕ್ಕಳಿಗೆ ಕರೆ ನೀಡಿದರು.
ಇಂದಿನ ಪರಿಸ್ಥಿತಿಯಲ್ಲಿ ನಾವು ದೇಶವನ್ನು ಲಾಕ್ಡೌನ್ನಿಂದ ರಕ್ಷಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ಲಾಕ್ಡೌನ್ ಅನ್ನು ಕೊನೆಯ ಅಸ್ತ್ರವಾಗಿ ಮಾತ್ರ ಪರಿಗಣಿಸುವಂತೆ ಅವರು ರಾಜ್ಯ ಸರಕಾರಗಳಿಗೆ ಸೂಚಿಸಿದರು. ನಾವು ಸಣ್ಣ ಕಂಟೈನ್ಮೆಂಟ್ ವಲಯಗಳತ್ತ ಗಮನ ಹರಿಸಬೇಕು ಮತ್ತು ಲಾಕ್ಡೌನ್ ತಪ್ಪಿಸಲು ನಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡಬೇಕು ಎಂದು ಪ್ರಧಾನಿ ಹೇಳಿದರು.
***
Addressing the nation on the COVID-19 situation. https://t.co/rmIUo0gkbm
— Narendra Modi (@narendramodi) April 20, 2021
कोरोना के खिलाफ देश आज फिर बहुत बड़ी लड़ाई लड़ रहा है।
— PMO India (@PMOIndia) April 20, 2021
कुछ सप्ताह पहले तक स्थितियां संभली हुई थीं और फिर ये कोरोना की दूसरी वेव तूफान बनकर आ गई।
जो पीड़ा आपने सही है, जो पीड़ा आप सह रहे हैं, उसका मुझे ऐहसास है: PM @narendramodi
जिन लोगों ने बीते दिनो में अपनो को खोया है, मैं सभी देशवासियों की तरफ़ से उनके प्रति संवेदनाएं व्यक्त करता हूँ।
— PMO India (@PMOIndia) April 20, 2021
परिवार के एक सदस्य के रूप में, मैं आपके दुःख में शामिल हूं।
चुनौती बड़ी है लेकिन हमें मिलकर अपने संकल्प, हौसले और तैयारी के साथ इसको पार करना है: PM @narendramodi
इस बार कोरोना संकट में देश के अनेक हिस्से में ऑक्सीजन की डिमांड बहुत ज्यादा बढ़ी है।
— PMO India (@PMOIndia) April 20, 2021
इस विषय पर तेजी से और पूरी संवेदनशीलता के साथ काम किया जा रहा है।
केंद्र सरकार, राज्य सरकारें, प्राइवेट सेक्टर, सभी की पूरी कोशिश है कि हर जरूरतमंद को ऑक्सीजन मिले: PM @narendramodi
ऑक्सीजन प्रॉडक्शन और सप्लाई को बढ़ाने के लिए भी कई स्तरों पर उपाय किए जा रहे हैं।
— PMO India (@PMOIndia) April 20, 2021
राज्यों में नए ऑक्सीजन प्लांट्स हों, एक लाख नए सिलेंडर पहुंचाने हों, औद्योगिक इकाइयों में इस्तेमाल हो रही ऑक्सीजन का मेडिकल इस्तेमाल हो, ऑक्सीजन रेल हो, हर प्रयास किया जा रहा है: PM @narendramodi
हमारे वैज्ञानिकों ने दिन-रात एक करके बहुत कम समय में देशवासियों के लिए vaccines विकसित की हैं।
— PMO India (@PMOIndia) April 20, 2021
आज दुनिया की सबसे सस्ती वैक्सीन भारत में है।
भारत की कोल्ड चेन व्यवस्था के अनुकूल वैक्सीन हमारे पास है: PM @narendramodi
यह एक team effort है जिसके कारण हमारा भारत, दो made in India vaccines के साथ दुनिया का सबसे बड़ा टीकाकरण अभियान शुरू कर पाया।
— PMO India (@PMOIndia) April 20, 2021
टीकाकरण के पहले चरण से ही गति के साथ ही इस बात पर जोर दिया गया कि ज्यादा से ज्यादा क्षेत्रों तक, जरूरतमंद लोगों तक वैक्सीन पहुंचे: PM @narendramodi
दुनिया में सबसे तेजी से भारत में पहले 10 करोड़, फिर 11 करोड़ और अब 12 करोड़ वैक्सीन के doses दिए गए हैं: PM @narendramodi
— PMO India (@PMOIndia) April 20, 2021
कल ही वैक्सीनेशन को लेकर एक और अहम फैसला लिया गया है।
— PMO India (@PMOIndia) April 20, 2021
एक मई के बाद से, 18 वर्ष के ऊपर के किसी भी व्यक्ति को वैक्सीनेट किया जा सकेगा।
अब भारत में जो वैक्सीन बनेगी, उसका आधा हिस्सा सीधे राज्यों और अस्पतालों को भी मिलेगा: PM @narendramodi
हम सभी का प्रयास, जीवन बचाने के लिए तो है ही, प्रयास ये भी है कि आर्थिक गतिविधियां और आजीविका, कम से कम प्रभावित हों।
— PMO India (@PMOIndia) April 20, 2021
वैक्सीनेशन को 18 वर्ष की आयु के ऊपर के लोगों के लिए Open करने से शहरों में जो हमारी वर्कफोर्स है, उसे तेजी से वैक्सीन उपलब्ध होगी: PM @narendramodi
मेरा राज्य प्रशासन से आग्रह है कि वो श्रमिकों का भरोसा जगाए रखें, उनसे आग्रह करें कि वो जहां हैं, वहीं रहें।
— PMO India (@PMOIndia) April 20, 2021
राज्यों द्वारा दिया गया ये भरोसा उनकी बहुत मदद करेगा कि वो जिस शहर में हैं वहीं पर अगले कुछ दिनों में वैक्सीन भी लगेगी और उनका काम भी बंद नहीं होगा: PM @narendramodi
मेरा युवा साथियों से अनुरोध है की वो अपनी सोसायटी में, मौहल्ले में, अपार्टमेंट्स में छोटी छोटी कमेटियाँ बनाकर COVID अनुशासन का पालन करवाने में मदद करे।
— PMO India (@PMOIndia) April 20, 2021
हम ऐसा करेंगे तो सरकारों को न कंटेनमेंट ज़ोन बनाने की ज़रुरत पड़ेगी, न कर्फ़्यू लगाने की, न लॉकडाउन लगाने की: PM
अपने बाल मित्रों से एक बात विशेष तौर पर कहना चाहता हूं।
— PMO India (@PMOIndia) April 20, 2021
मेरे बाल मित्र, घर में ऐसा माहौल बनाएं कि बिना काम, बिना कारण घर के लोग, घर से बाहर न निकलें।
आपकी जिद बहुत बड़ा परिणाम ला सकती है: PM @narendramodi
आज की स्थिति में हमें देश को लॉकडाउन से बचाना है।
— PMO India (@PMOIndia) April 20, 2021
मैं राज्यों से भी अनुरोध करूंगा कि वो लॉकडाउन को अंतिम विकल्प के रूप में ही इस्तेमाल करें।
लॉकडाउन से बचने की भरपूर कोशिश करनी है।
और माइक्रो कन्टेनमेंट जोन पर ही ध्यान केंद्रित करना है: PM @narendramodi