ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಕಾಂಬೋಡಿಯಾ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ)ಗೆ ತನ್ನ ಅನುಮೋದನೆ ನೀಡಿದೆ.
ಈ ಒಪ್ಪಂದವು ದ್ವಿಪಕ್ಷೀಯ ಹೂಡಿಕೆಯ ಹರಿವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಎರಡೂ ರಾಷ್ಟ್ರಗಳ ಹೂಡಿಕೆಯನ್ನು ಮತ್ತೊಂದು ರಾಷ್ಟ್ರದ ಎಲ್ಲೆಯೊಳಗೆ ಉತ್ತೇಜಿಸುತ್ತದೆ ಮತ್ತು ಸಂರಕ್ಷಿಸುತ್ತದೆ.
ಈ ಒಪ್ಪಂದವು ಮತ್ತೊಂದು ರಾಷ್ಟ್ರದ ಹೂಡಿಕೆದಾರರಿಗೆ ತನ್ನ ಗಡಿಯೊಳಗೆ ಹೂಡಿಕೆ ಮಾಡಲು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸುವಂತೆ ಪ್ರತಿ ರಾಷ್ಟ್ರಕ್ಕೆ ಉತ್ತೇಜನ ನೀಡುತ್ತದೆ ಮತ್ತು ತನ್ನ ಕಾನೂನಿನ ಅನುಸಾರ ಹೂಡಿಕೆಯನ್ನು ಒಪ್ಪಿಕೊಳ್ಳುತ್ತದೆ.
2015ರ ಡಿಸೆಂಬರ್ ನಲ್ಲಿ ಸಂಪುಟ ಅನುಮೋದನೆ ನೀಡಿದ ಭಾರತೀಯ ಮಾದರಿಯ ಬಿ.ಐ.ಟಿ. ಪಠ್ಯದ ರೀತ್ಯ ಮಾಡಿಕೊಂಡ ಮೊದಲ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಇದಾಗಿದೆ.