ಗೌರವಾನ್ವಿತರಿಗೆ ನಮಸ್ಕಾರ!
ಮೊದಲನೆಯದಾಗಿ, ಸ್ವೀಡನ್ನಲ್ಲಿ ಕೋವಿಡ್–19ನಿಂದ ಪ್ರಾಣ ಕಳೆದುಕೊಂಡವರಿಗೆ ಭಾರತದ ಪರವಾಗಿ ನನ್ನ ಹೃದಯಪೂರ್ವಕ ಸಂತಾಪಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಸ್ವೀಡನ್ನಲ್ಲಿ ಮೊನ್ನೆ ನಡೆದ ಹಿಂಸಾತ್ಮಕ ದಾಳಿಯ ವಿಚಾರದಲ್ಲಿ ಸ್ವೀಡಿಷ್ ಜನರಿಗೆ ಸಂಪೂರ್ಣ ಬೆಂಬಲದ ಒತ್ತಾಸೆಯನ್ನು ಎಲ್ಲ ಭಾರತೀಯರ ಪರವಾಗಿ ನಾನು ನೀಡಲು ಬಯಸುತ್ತೇನೆ. ದಾಳಿಯಲ್ಲಿ ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಹಾರೈಸುತ್ತೇನೆ.
ಗೌರವಾನ್ವಿತರೇ,
2018ರಲ್ಲಿ ʻಭಾರತ–ನಾರ್ಡಿಕ್ʼ ದೇಶಗಳ ಚೊಚ್ಚಲ ಶೃಂಗಸಭೆಯನ್ನು ಸ್ವೀಡನ್ ಆಯೋಜಿಸಿತು. ಆ ಸಮಯದಲ್ಲಿ ನನಗೆ ಸ್ಟಾಕ್ಹೋಮ್ಗೆ ಬರುವಂತಹ ಅವಕಾಶ ಒದಗಿಬಂದಿತು. ಎರಡನೇ ʻಭಾರತ–ನಾರ್ಡಿಕ್ʼ ಶೃಂಗಸಭೆಯ ಸಂದರ್ಭದಲ್ಲಿ ಶೀಘ್ರದಲ್ಲೇ ಮತ್ತೊಮ್ಮೆ ಭೇಟಿಯಾಗುವ ಅವಕಾಶ ನಮಗೆ ದೊರೆಯಲಿದೆ ಎಂದು ನಾನು ಆಶಿಸುತ್ತೇನೆ. 2019ರಲ್ಲಿ ಘನತೆವೆತ್ತ ಮಹಾರಾಜರು ಗೌರವಾನ್ವಿತ ರಾಣಿಯವರ ಸಮೇತ ಭಾರತಕ್ಕೆ ಭೇಟಿ ನೀಡಿದ್ದು ನಮ್ಮ ಸುಯೋಗ, ನಮಗೆ ದೊರೆತ ವಿಶೇಷ ಗೌರವ. ಹಲವಾರು ವಿಷಯಗಳ ಬಗ್ಗೆ ನಾನು ಅವರೊಂದಿಗೆ ಒಳ್ಳೆಯ ಚರ್ಚೆ ನಡೆಸಿದ್ದೆ. ಹೊಲಗಳಲ್ಲಿ ಬೆಳೆಯ ನಂತರ ಉಳಿಯುವ ಕುಳೆಯನ್ನು ಕಲ್ಲಿದ್ದಲಿನ ಚಪ್ಪಡಿ ರೂಪಕ್ಕೆ ಪರಿವರ್ತಿಸಿ, ವಿದ್ಯುತ್ ಸ್ಥಾವರಗಳಲ್ಲಿ ಬಳಸುವ ನಿಟ್ಟಿನಲ್ಲಿ ಪರಸ್ಪರ ಕೈಜೋಡಿಸುವ ಬಗ್ಗೆ ನಾನು ಮತ್ತು ಮಹಾರಾಜರು ಚರ್ಚಿಸಿದ್ದು ನನಗೆ ತುಂಬಾ ಸ್ಪಷ್ಟವಾಗಿ ನೆನಪಿದೆ. ಅದರ ಪ್ರಾತ್ಯಕ್ಷಿಕೆ ಘಟಕವು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ತಿಳಿದರೆ ನೀವು ಸಂತೋಷಪಡುತ್ತೀರಿ. ಈಗ ನಾವು ಜೈವಿಕ ಉತ್ಪನ್ನದಿಂದ ಕಲ್ಲಿದ್ದಲನ್ನು ತಯಾರಿಸಲು ಅದನ್ನು ಬಳಸಬಹುದು ಮತ್ತು ವ್ಯಾಪಕ ಮಟ್ಟಕ್ಕೆ ಅದರ ಬಳಕೆಯನ್ನು ವಿಸ್ತರಿಸಬಹುದು.
ಗೌರವಾನ್ವಿತರೇ,
ಕೋವಿಡ್–19 ಸಮಯದಲ್ಲಿ, ನಾವು ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಸಹಕಾರದ ಪ್ರಾಮುಖ್ಯವನ್ನು ಗುರುತಿಸಿದ್ದೇವೆ. ಕೋವಿಡ್–19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು 150ಕ್ಕೂ ಹೆಚ್ಚು ದೇಶಗಳಿಗೆ ಭಾರತವು ಔಷಧಗಳು ಮತ್ತು ಇತರ ಅಗತ್ಯ ಸಲಕರಣೆಗಳನ್ನು ಒದಗಿಸಿತು. ಅಲ್ಲದೆ, ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ನೀತಿ ನಿರೂಪಕರೊಂದಿಗೆ ಆನ್ಲೈನ್ ತರಬೇತಿ ಕಾರ್ಯಕ್ರಮಗಳ ಮೂಲಕ ನಮ್ಮ ಅನುಭವಗಳನ್ನು ಹಂಚಿಕೊಂಡೆವು. ನಾವು ಇದುವರೆಗೆ ಸುಮಾರು 50 ದೇಶಗಳಿಗೆ ‘ಮೇಡ್ ಇನ್ ಇಂಡಿಯಾ‘ ಲಸಿಕೆಗಳನ್ನು ಸಹ ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ದೇಶಗಳಿಗೆ ಲಸಿಕೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.
ಗೌರವಾನ್ವಿತರೇ,
ಇಂದಿನ ಪರಿಸ್ಥಿತಿಯಲ್ಲಿ ಸಮಾನ ಮನಸ್ಕ ರಾಷ್ಟ್ರಗಳ ನಡುವೆ ಸಮನ್ವಯ, ಸಹಕಾರ ಮತ್ತು ಸಹಯೋಗ ಹೆಚ್ಚು ಮುಖ್ಯ. ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಕಾನೂನು, ಸಮಾನತೆ, ಸ್ವಾತಂತ್ರ್ಯ, ನ್ಯಾಯದಂತಹ ಮೌಲ್ಯಗಳು ನಮ್ಮ ಸಂಬಂಧಗಳನ್ನು ಹಾಗೂ ಪರಸ್ಪರ ಸಹಕಾರವನ್ನು ಬಲಪಡಿಸುತ್ತವೆ. ಪ್ರಮುಖ ವಿಷಯವಾದ ಹವಾಮಾನ ಬದಲಾವಣೆಯು ನಮ್ಮೆರಡೂ ದೇಶಗಳಿಗೆ ಆದ್ಯತೆಯ ವಿಚಾರವಾಗಿದೆ ಮತ್ತು ಈ ನಿಟ್ಟಿನಲ್ಲಿ ನಾವು ನಿಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತೇವೆ. ಪರಿಸರ ಸಂರಕ್ಷಣೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕಿಗೆ ಭಾರತದ ಸಂಸ್ಕೃತಿಯಲ್ಲಿ ಸದಾ ಪ್ರಾಮುಖ್ಯವಿದೆ.
ಪ್ಯಾರಿಸ್ ಒಪ್ಪಂದದಲ್ಲಿ ನಾವು ನೀಡಿದ ಬದ್ಧತೆ, ವಚನಗಳ ದಿಕ್ಕಿನಲ್ಲಿ ನಾವು ದೃಢವಾಗಿ ಸಾಗುತ್ತಿದ್ದೇವೆ. ನಾವು ಈ ಗುರಿಗಳನ್ನು ಸಾಧಿಸುವುದಷ್ಟೇ ಅಲ್ಲ, ಅವುಗಳನ್ನು ಮೀರಿಯೂ ಸಾಧನೆ ಮಾಡುತ್ತೇವೆ. ಜಿ20 ರಾಷ್ಟ್ರಗಳ ಪೈಕಿ ಭಾರತವು ತನ್ನ ಬದ್ಧತೆಗಳ ವಿಚಾರದಲ್ಲಿ ಬಹುಶಃ ಉತ್ತಮ ಪ್ರಗತಿ ಸಾಧಿಸಿದೆ. ನಮ್ಮ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯವು ಕಳೆದ ಐದು ವರ್ಷಗಳಲ್ಲಿ ಶೇ.162ರಷ್ಟು ಹೆಚ್ಚಿದೆ. 2030ರ ವೇಳೆಗೆ 450 ಗಿಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನದ ಗುರಿಯನ್ನು ನಾವು ಹೊಂದಿದ್ದೇವೆ. ಎಲ್ಇಡಿ ದೀಪಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ನಾವು 30 ದಶಲಕ್ಷ ಟನ್ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಿದ್ದೇವೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿ ಸೇರುವ ಸ್ವೀಡನ್ನ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟಕ್ಕೆ ಶೀಘ್ರವೇ ಸೇರ್ಪಡೆಗೊಳ್ಳಬೇಕೆಂದು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಗೌರವಾನ್ವಿತರೇ,
ಕೋವಿಡ್–19 ನಂತರದ ಸ್ಥಿರೀಕರಣ ಮತ್ತು ಚೇತರಿಕೆಯಲ್ಲಿ ಭಾರತ–ಸ್ವೀಡನ್ ಪಾಲುದಾರಿಕೆಯು ಪ್ರಮುಖ ಪಾತ್ರ ವಹಿಸಬಹುದು. ಅನ್ವೇಷಣೆ, ತಂತ್ರಜ್ಞಾನ, ಹೂಡಿಕೆ, ನವೋದ್ಯಮಗಳು ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ನಾವು ಮತ್ತಷ್ಟು ಆಳವಾಗಿಸಬಹುದು. ಸ್ಮಾರ್ಟ್ ಸಿಟಿ, ನೀರಿನ ಸಂಸ್ಕರಣೆ, ತ್ಯಾಜ್ಯ ನಿರ್ವಹಣೆ, ವರ್ತುಲ ಆರ್ಥಿಕತೆ, ಸ್ಮಾರ್ಟ್ಗ್ರಿಡ್, ಇ–ಮೊಬಿಲಿಟಿ, ಡಿಜಿಟಲ್ ಪರಿವರ್ತನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಸಾಧ್ಯತೆಗಳು ಅಪಾರವಾಗಿವೆ. ಇಂದು ನಮ್ಮ ವರ್ಚುಯಲ್ ಶೃಂಗಸಭೆಯು ನಮ್ಮ ಸಹಕಾರಕ್ಕೆ ಹೊಸ ಆಯಾಮಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನನಗಿದೆ.
ಗೌರವಾನ್ವಿತರೇ,
ಸ್ವೀಡನ್ ನಾಗರಿಕರೊಂದಿಗೆ ಭಾರತದ ಅತ್ಯುತ್ತಮ ಸ್ನೇಹದ ಪಯಣವನ್ನು ನಾನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ, ಉದ್ಘಾಟನಾ ಭಾಷಣ ಮಾಡುವಂತೆ ತಮ್ಮನ್ನು ಆಹ್ವಾನಿಸುತ್ತೇನೆ.
ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿದೆ
***
Addressing the Virtual Summit with @SwedishPM Stefan Löfven. https://t.co/ItxSF2HlXx
— Narendra Modi (@narendramodi) March 5, 2021
COVID-19 से स्वीडन में हुई जनहानि के लिए मेरी ओर से और पूरे भारत की ओर से हार्दिक संवेदनाएं व्यक्त करना चाहता हूँ: PM @narendramodi
— PMO India (@PMOIndia) March 5, 2021
स्वीडन में परसों हुए हिंसक हमले के लिए भी, मैं सभी भारतीय नागरिकों की ओर से स्वीडन के लोगों के साथ solidarity व्यक्त करना चाहता हूँ।
— PMO India (@PMOIndia) March 5, 2021
हमले में घायल लोग शीघ्र ही पूरी तरह recover होंगे, यही हमारी कामना है: PM @narendramodi
हमने अब तक लगभग 50 देशों को ‘Made in India’ vaccines भी उपलब्ध कराई हैं।
— PMO India (@PMOIndia) March 5, 2021
और आने वाले दिनों में और भी अनेक देशों को vaccines की supply करने के लिए हम प्रतिबद्ध हैं: PM @narendramodi
Democracy, human rights, rule of law, equality, freedom, justice जैसी shared values हमारे संबंधों और आपसी सहयोग को मजबूती देते हैं।
— PMO India (@PMOIndia) March 5, 2021
Climate change का महत्वपूर्ण मुद्दा हम दोनों देशों के लिए एक प्राथमिकता है और हम इस पर आपके साथ काम करना चाहेंगे: PM @narendramodi
पिछले पांच सालों में हमारी renewable power क्षमता 162 percent बढ़ी है।
— PMO India (@PMOIndia) March 5, 2021
और हमने 2030 तक 450 गीगावाट renewable energy लगाने का target रखा है।
LED lights के इस्तेमाल को बढ़ावा देने से हम 38 million tons carbon dioxide emissions बचा रहें हैं: PM @narendramodi