Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಟಿ ಹಾರ್ಡ್ ವೇರ್‌ಗೆ ಉತ್ಪಾದನೆ ಆಧರಿತ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮಾಹಿತಿ ತಂತ್ರಜ್ಞಾನದ ಹಾರ್ಡ್ ವೇರ್ ಗೆ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್ ) ಯೋಜನೆಗೆ ಅನುಮೋದನೆ ನೀಡಿತು. ಐಟಿ ಹಾರ್ಡ್ ವೇರ್ ಮೌಲ್ಯ ಸರಣಿಯಲ್ಲಿ ಬೃಹತ್ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಉತ್ಪಾದನೆ ಆಧರಿತ ಪ್ರೋತ್ಸಾಹಕರ ಯೋಜನೆಯ ಉದ್ದೇಶವಾಗಿದೆ. ನಿರ್ದಿಷ್ಟ ಉದ್ದೇಶಿತ ಯೋಜನೆಯಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಪಿಸಿಗಳು ಮತ್ತು ಸರ್ವರ್ ಗಳು ಸೇರಿವೆ.

ಯೋಜನೆ ಅಡಿಯಲ್ಲಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳ ಒಟ್ಟು ಮಾರಾಟದ ಮೇಲೆ (ಮೂಲ ವರ್ಷ ಅಂದರೆ 2019-20) ಅಲ್ಲಿ ವಿಸ್ತರಿತ ಪ್ರೋತ್ಸಾಹ ಶೇ.4ರಿಂದ ಶೇ.2ರಷ್ಟು/ಶೇ.1ರಷ್ಟು ಇರಲಿವೆ ಮತ್ತು ನಿರ್ದಿಷ್ಟ ವಲಯದ ಅರ್ಹ ಕಂಪನಿಗಳಿಗೆ ನಾಲ್ಕು ವರ್ಷಗಳವರೆಗೆ ಇದು ಲಭ್ಯವಾಗಲಿದೆ.  

ಲ್ಯಾಪ್ ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಪಿಸಿ ಮತ್ತು ಸರ್ವರ್ ಗಳು ಸೇರಿದಂತೆ ಐಟಿ ಹಾರ್ಡ್ ವೇರ್ ಉತ್ಪಾದನಾ ಕ್ಷೇತ್ರದ ಐದು ಪ್ರಮುಖ ಜಾಗತಿಕ ಕಂಪನಿಗಳು ಮತ್ತು ಹತ್ತು ದೇಶೀಯ ಕಂಪನಿಗಳಿಗೆ ಯೋಜನೆಯಿಂದ ಪ್ರಯೋಜನವಾಗುವ ನಿರೀಕ್ಷೆ ಇದೆ. ಪ್ರಸ್ತುತ ಬಹುತೇಕ ಉತ್ಪನ್ನಗಳನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಇದು ಅತ್ಯಂತ ಪ್ರಮುಖವಾಗಿದೆ.

ಆರ್ಥಿಕ ಹೊರೆ:

ಉದ್ದೇಶಿತ ಯೋಜನೆಯಿಂದ ಪ್ರೋತ್ಸಾಹ ಧನಕ್ಕಾಗಿ 7,325 ಕೋಟಿ ರೂ. ಮತ್ತು ಆಡಳಿತಾತ್ಮಕ ವೆಚ್ಚ 25 ಕೋಟಿ ರೂ. ಸೇರಿದಂತೆ ನಾಲ್ಕು ವರ್ಷಗಳಿಗೆ ಅಂದಾಜು 7,350 ಕೋಟಿ ರೂ. ಆರ್ಥಿಕ ಹೊರೆ ತಗುಲಲಿದೆ.

ಪ್ರಯೋಜನಗಳು:

ಯೋಜನೆ ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಪೂರಕ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ವಿದ್ಯುನ್ಮಾನ ವ್ಯವಸ್ಥೆಗಳ ವಿನ್ಯಾಸ ಮತ್ತು ಉತ್ಪಾದನೆ(ಇಎಸ್ ಡಿಎಂ)ಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆಯಲಿದೆ. ಜಾಗತಿಕ ಮೌಲ್ಯ ಸರಣಿಗಳು ಒಗ್ಗೂಡಲಿದ್ದು, ಮೂಲಕ ಭಾರತ ಐಟಿ ಹಾರ್ಡ್ ವೇರ್ ರಫ್ತು ತಾಣವಾಗಿಯೂ ಸಹ ರೂಪುಗೊಳ್ಳಲಿದೆ.

ಯೋಜನೆಯಿಂದ ನಾಲ್ಕು ವರ್ಷಗಳಲ್ಲಿ ಸುಮಾರು 1,80,000(ಪ್ರತ್ಯಕ್ಷ ಮತ್ತು ಪರೋಕ್ಷ) ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಂಭವನೀಯತೆ ಇದೆ.

ಯೋಜನೆಯಡಿ ಐಟಿ ಹಾರ್ಡ್ ವೇರ್ ಉತ್ಪಾದನೆಯಲ್ಲಿ ದೇಶೀಯ ಮೌಲ್ಯ 2025 ವೇಳೆಗೆ ಶೇ.20 ರಿಂದ ಶೇ.25ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ.

ಹಿನ್ನೆಲೆ:

2019 ಫೆಬ್ರವರಿ 25ರಂದು ಅಧಿಸೂಚನೆ ಹೊರಡಿಸಲಾಗಿರುವ ಎಲೆಕ್ಟ್ರಾನಿಕ್ಸ್ ರಾಷ್ಟ್ರೀಯ ನೀತಿ 2019 ಮುನ್ನೋಟ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನೆ(ಇಎಸ್ ಡಿಎಂ)ಯಲ್ಲಿ ಜಾಗತಿಕ ತಾಣವನ್ನಾಗಿ ಭಾರತವನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಮೂಲಕ ದೇಶದಲ್ಲಿ ಚಿಪ್ ಸೆಟ್  ಗಳು ಸೇರಿದಂತೆ ಪ್ರಮುಖ ಬಿಡಿ ಭಾಗಗಳ ಅಭಿವೃದ್ಧಿ ಸಾಮರ್ಥ್ಯವನ್ನು ವೃದ್ಧಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ ಉದ್ಯಮ ಸ್ಪರ್ಧೆ ನಡೆಸುವಂತಾಗಲು ಪೂರಕ ವಾತಾವರಣವನ್ನು ಸೃಷ್ಟಿಸುವ ಗುರಿ ಇದೆ

ಸದ್ಯ ಭಾರತದ ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಬೇಡಿಕೆ ಬಹುತೇಕ ಆಮದಿನಿಂದ ಪೂರೈಸಲಾಗುತ್ತಿದ್ದು, ಅದರ ಮೌಲ್ಯ 2019-20ರಲ್ಲಿ ಕ್ರಮವಾಗಿ 4.21 ಬಿಲಿಯನ್ ಅಮೆರಿಕನ್ ಡಾಲರ್ ಮತ್ತು 0.41 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಐಟಿ ಹಾರ್ಡ್ ವೇರ್ ಮಾರುಕಟ್ಟೆಯಲ್ಲಿ ಸುಮಾರು 6-7 ಕಂಪನಿಗಳು ಪ್ರಾಬಲ್ಯ ಸಾಧಿಸಿದ್ದು, ಅವರು ಶೇಕಡ 70ರಷ್ಟು ವಿಶ್ವದ ಮಾರುಕಟ್ಟೆ ಪಾಲನ್ನು ಹೊಂದಿವೆ. ಕಂಪನಿಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧೆ ಮಾಡಲು ದೊಡ್ಡ ಆರ್ಥಿಕ ರಾಷ್ಟ್ರಗಳ ಮೇಲೆ ಶೋಷಿಸುತ್ತಿವೆ. ಕಂಪನಿಗಳು ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಬೇಕೆಂದು ಬಯಸಲಾಗಿದೆ ಮತ್ತು ಭಾರತವನ್ನು ಐಟಿ ಹಾರ್ಡ್ ವೇರ್ ಉತ್ಪಾದನೆಯಲ್ಲಿ ಪ್ರಮುಖ ತಾಣವನ್ನಾಗಿ ಮಾಡುವ ಉದ್ದೇಶವಿದೆ.

ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಉತ್ಪಾದನಾ ಜಗತ್ತಿನಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಜಗತ್ತಿನಾದ್ಯಂತ ಉತ್ಪಾದನಾ ಕಂಪನಿಗಳು ಏಕರೂಪದ ಮಾರುಕಟ್ಟೆ ಅವಲಂಬನೆಯ ಅಪಾಯದಿಂದ ಪಾರಾಗಲು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಬೇರೆ ಬೇರೆ ಕಡೆ ನೆಲೆಗೊಳಿಸಲು ಎದುರು ನೋಡುತ್ತಿವೆ.

***