ಜೈ ಹಿಂದ್ !
ಜೈ ಹಿಂದ್ !
ಜೈ ಹಿಂದ್ !
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಜಗದೀಪ್ ಧನಖರ್ ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಹೋದರಿ ಮಮತಾ ಬ್ಯಾನರ್ಜಿ, ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಪ್ರಹ್ಲಾದ್ ಪಾಟೀಲ್ ಜಿ ಮತ್ತು ಬಾಬುಲಾಲ್ ಸುಪ್ರಿಯೊ ಜಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಸಂಬಂಧಿಗಳೇ, ಭಾರತದ ಹೆಮ್ಮೆಯನ್ನು ಹೆಚ್ಚಿಸಿರುವ ಆಜಾದ್ ಹಿಂದ್ ಪೌಜ್ ನ ಧೈರ್ಯಶಾಲಿ ಸದಸ್ಯರೇ ಹಾಗೂ ಅವರ ಸಂಬಂಧಿಗಳೇ, ಇಲ್ಲಿ ನೆರೆದಿರುವ ಸಾಹಿತ್ಯ ಮತ್ತು ಕಲಾ ವಿಭಾಗದ ಗಣ್ಯರೇ ಮತ್ತು ಈ ಬಂಗಾಳದ ಶ್ರೇಷ್ಠ ನೆಲದ ನನ್ನೆಲ್ಲಾ ಸಹೋದರ ಸಹೋದರಿಯರೇ.
ಇಂದು ಕೋಲ್ಕತ್ತಾಕ್ಕೆ ಆಗಮಿಸಿದಾಕ್ಷಣ ನಾನು ತುಂಬಾ ಭಾವುಕನಾದೆ. ಬಾಲ್ಯದಿಂದಲೂ ನನಗೆ ಯಾವಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಕೇಳಿದರೂ ನನ್ನಲ್ಲಿ ಹೊಸ ಶಕ್ತಿಯನ್ನು ಹುಟ್ಟುಹಾಕುತ್ತದೆ. ಅದು ಯಾವುದೇ ಸಂದರ್ಭವಾಗಿರಬಹುದು. ಅಂತಹ ಶ್ರೇಷ್ಠ ವ್ಯಕ್ತಿಯನ್ನು ವರ್ಣಿಸಲು ಪದಗಳೇ ಕಡಿಮೆ. ಅದು ನನ್ನಲ್ಲಿ ಹೊಸ ಶಕ್ತಿಯನ್ನು ಹುಟ್ಟು ಹಾಕುತ್ತದೆ. ಅವರಿಗೆ ಅತ್ಯಂತ ಆಳವಾದ ದೂರದೃಷ್ಟಿ ಇತ್ತು, ಅದನ್ನು ಗ್ರಹಿಸಲು ಹಲವು ಜನ್ಮಗಳೇ ತೆಗೆದುಕೊಳ್ಳುತ್ತದೆ. ಅವರಿಗೆ ಎಂತಹ ನೈತಿಕ ಧೈರ್ಯ ಮತ್ತು ಸ್ಥೈರ್ಯವಿತ್ತೆಂದರೆ, ವಿಶ್ವದ ಶ್ರೇಷ್ಠ ಸವಾಲುಗಳನ್ನು ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುವ ಛಾತಿ ಇತ್ತು. ಅಂತಹುದರಿಂದ ಅವರು ವಿಚಲಿತರಾಗುತ್ತಿರಲಿಲ್ಲ. ನಾನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಶಿರಬಾಗಿ ನಮಿಸುತ್ತೇನೆ ಮತ್ತು ಗೌರವಿಸುತ್ತೇನೆ. ನೇತಾಜಿ ಅವರಿಗೆ ಜನ್ಮ ನೀಡಿದ ತಾಯಿ ಪ್ರಭಾದೇವಿ ಜಿ ಅವರಿಗೂ ಸಹ ನಮನ ಸಲ್ಲಿಸುತ್ತೇನೆ. ಇಂದು ಆ ಪವಿತ್ರ ದಿನವು 125 ವರ್ಷಗಳು ಪೂರ್ಣಗೊಳ್ಳುತ್ತಿದೆ. 125 ವರ್ಷಗಳ ಹಿಂದೆ ಇದೇ ದಿನ ಸ್ವತಂತ್ರ ಭಾರತದ ಕನಸಿಗೆ ಹೊಸ ದಿಕ್ಕು ನೀಡಿದ ದಿಟ್ಟ ಪುತ್ರ ಭಾರತಾಂಬೆಯ ಮಡಿಲಲ್ಲಿ ಜನಿಸಿದರು. ಇದೇ ದಿನ ಗುಲಾಮಗಿರಿಯ ಕತ್ತಲೆಯಲ್ಲಿ ಆತ್ಮಸಾಕ್ಷಿ ಪುಟಿದೆದ್ದಿತ್ತು ಮತ್ತು ವಿಶ್ವದ ಶ್ರೇಷ್ಠ ಶಕ್ತಿ ಎದುರು ಎದ್ದು ನಿಂತಿತು ಮತ್ತು “ನಾನು ಸ್ವಾತಂತ್ರ್ಯವನ್ನು ಕೇಳುವುದಿಲ್ಲ. ನಾನು ಸ್ವಾತಂತ್ರ್ಯವನ್ನು ಕಸಿದು ಕೊಳ್ಳುತ್ತೇನೆ” ಎಂದು ಹೇಳಿದ್ದರು. ಇದೇ ದಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಾತ್ರ ಜನಿಸಿದ್ದಲ್ಲ, ಭಾರತದ ಹೊಸ ಸ್ವಯಂ ಹೆಮ್ಮೆ ಜನಿಸಿತು. ಭಾರತದ ಹೊಸ ಮಿಲಿಟರಿ ಶಕ್ತಿ ಉದಯಿಸಿತು. ಇಂದು ನೇತಾಜಿ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರದ ಪರವಾಗಿ ನಾನು ಆ ಶ್ರೇಷ್ಠ ವ್ಯಕ್ತಿಗೆ ಗೌರವ ಸಲ್ಲಿಸುತ್ತೇನೆ.
ಮಿತ್ರರೇ,
ಬಾಲ ಸುಭಾಷ್ ಅವರನ್ನು ನೇತಾಜಿ ಅವರನ್ನಾಗಿ ಮಾಡಿದ ಈ ಬಂಗಾಳದ ಸದ್ಗುಣಶೀಲ ಭೂಮಿಗೆ ನಾನು ಇಂದು ಗೌರವ ಪೂರ್ವಕವಾಗಿ ನಮಿಸುತ್ತೇನೆ ಮತ್ತು ಕಠಿಣತೆ, ತ್ಯಾಗ ಮತ್ತು ತಾಳ್ಮೆಯಿಂದ ಅವರು ಜೀವನವನ್ನು ನಡೆಸಿದರು. ಶ್ರೇಷ್ಠ ವ್ಯಕ್ತಿಗಳಾದ ಗುರುದೇವ್ ಶ್ರೀ ರವೀಂದ್ರ ನಾಥ ಠ್ಯಾಗೂರ್, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಶರತ್ ಚಂದ್ರ ಅವರಂತಹ ಶ್ರೇಷ್ಠ ವ್ಯಕ್ತಿಗಳು ಈ ಪವಿತ್ರ ಭೂಮಿಯಲ್ಲಿ ರಾಷ್ಟ್ರ ಭಕ್ತಿಯ ಸ್ಫೂರ್ತಿಯನ್ನು ತುಂಬಿದರು. ಸಂತರಾದ ಸ್ವಾಮಿ ವಿವೇಕಾನಂದ ಪರಮಹಂಸ, ಚೈತನ್ಯ ಮಹಾಪ್ರಭು, ಶ್ರೀ ಅರಬಿಂದೋ, ಮಾತೆ ಶಾರದಾ, ಮಾತಾ ಆನಂದಮಯಿ, ಸ್ವಾಮಿ ವಿವೇಕಾನಂದ, ಶ್ರೀ ಶ್ರೀ ಠಾಕೂರ್ ಅಂಕುಲಚಂದ್ರ ಅವರುಗಳು ಈ ಪೂಜ್ಯ ಭೂಮಿಯನ್ನು ತಪಸ್ವಿ, ಸೇವೆ ಮತ್ತು ಆಧ್ಯಾತ್ಮಿಕತೆಯೊಂದಿಗೆ ಅಲೌಕಿಕಗೊಳಿಸಿದರು. ಹಲವು ಸಮಾಜ ಸುಧಾರಕರಾದ ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾ ರಾಮ್ ಮೋಹನ್ ರಾಯ್, ಗುರುಚಂದ್ ಠಾಕೂರ್, ಹರಿಚಂದ್ ಠಾಕೂರ್, ಅವರು ಸಮಾಜ ಸುಧಾರಣೆಯ ದಿಗ್ಗಜರಾಗಿದ್ದು, ಈ ಸದ್ಗುಣಶೀಲ ಭೂಮಿಯಲ್ಲಿ ದೇಶದ ಹೊಸ ಸುಧಾರಣೆಗಳಿಗೆ ಭದ್ರ ಬುನಾದಿಯನ್ನು ಹಾಕಿದರು. ಜಗದೀಶ್ ಚಂದ್ರ ಬೋಸ್, ಪಿ.ಸಿ. ರಾಯ್, ಎಸ್.ಎನ್. ಬೋಸ್ ಮತ್ತು ಮೇಘನಾದ್ ಸಾಹ ಮತ್ತು ಅಸಂಖ್ಯಾತ ವಿಜ್ಞಾನಿಗಳು ಈ ನೆಲವನ್ನು ಜ್ಞಾನ ಮತ್ತು ವಿಜ್ಞಾನದಿಂದ ಸದ್ಗುಣಶೀಲ ಭೂಮಿಯನ್ನಾಗಿ ಮಾಡಿದ್ದಾರೆ. ಇದೇ ಪವಿತ್ರ ನೆಲ ದೇಶಕ್ಕೆ ರಾಷ್ಟ್ರಗೀತೆಯನ್ನು ನೀಡಿದೆ ಮತ್ತು ಅದೇ ರಾಷ್ಟ್ರೀಯ ಹಾಡಾಗಿದೆ. ಇದೇ ನೆಲ ದೇಶಬಂಧು ಚಿತ್ತರಂಜನ್ ದಾಸ್, ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ನಮ್ಮ ನೆಚ್ಚಿನ ಭಾರತರತ್ನ ಪ್ರಣಬ್ ಮುಖರ್ಜಿ ಅವರನ್ನು ಪರಿಚಯಿಸಿದೆ. ನಾನು ಈ ಪವಿತ್ರ ದಿನದಂದು ಈ ನೆಲದ ಎಲ್ಲ ಅಂತಹ ಶ್ರೇಷ್ಠ ವ್ಯಕ್ತಿಗಳ ಪಾದಗಳಿಗೆ ಶಿರಬಾಗಿ ನಮಿಸುತ್ತೇನೆ.
ಮಿತ್ರರೇ,
ಈ ಮೊದಲು ನಾನು ರಾಷ್ಟ್ರೀಯ ಗ್ರಂಥಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನೇತಾಜಿ ಅವರ ವೈಭವದ ಕುರಿತಂತೆ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಕಲಾವಿದರ ಶಿಬಿರ ಆಯೋಜಿಸಲಾಗಿತ್ತು. ನೇತಾಜಿ ಅವರ ಹೆಸರು ಕೇಳುತ್ತಿದ್ದಂತೆಯೇ ಪ್ರತಿಯೊಬ್ಬರಲ್ಲೂ ಎಷ್ಟೊಂದು ಶಕ್ತಿ ತುಂಬುತ್ತದೆ ಎಂಬ ಅನುಭವ ನನಗಾಗಿದೆ. ನೇತಾಜಿ ಅವರ ಜೀವನ ಅವರ ಆಂತರಿಕೆ ಮನಸ್ಸಿನೊಂದಿಗೆ ಬೆಸೆದುಕೊಂಡಿದೆ. ಅವರ ಶಕ್ತಿ, ಆದರ್ಶಗಳು ಮತ್ತು ಕಾಠಿಣ್ಯ ಅವರ ತ್ಯಾಗ ದೇಶದ ಪ್ರತಿಯೊಬ್ಬ ಯುವಕರಿಗೂ ದೊಡ್ಡ ಸ್ಫೂರ್ತಿಯಾಗಿದೆ. ಇಂದು ಭಾರತ ನೇತಾಜಿ ಅವರ ಪ್ರೇರಣೆ ಪಡೆದು, ಮುನ್ನಡೆಯುತ್ತಿದ್ದು, ಸರ್ವ ಕಾಲಕ್ಕೂ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದನ್ನು ಹಲವು ಪೀಳಿಗೆಗಳ ವರಗೆ ನನೆಪಿನಲ್ಲಿಟ್ಟುಕೊಳ್ಳಬಹುದಾಗಿದೆ. ಆದ್ದರಿಂದ ದೇಶ ನೇತಾಜಿ ಅವರ 125ನೇ ಜನ್ಮ ದಿನವನ್ನು ಐತಿಹಾಸಿಕವಾಗಿ ಮತ್ತು ಹಿಂದೆಂದೂ ಇಲ್ಲದಂತಹ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ. ಇಂದು ಬೆಳಗ್ಗೆಯಿಂದೀಚೆಗೆ ದೇಶದ ಮೂಲೆ ಮೂಲೆಯಲ್ಲೂ ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಒಂದು ಭಾಗವಾಗಿ ಇಂದು ನೇತಾಜಿ ಅವರ ನೆನಪಿನಲ್ಲಿ ಸ್ಮಾರಕ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ. ನೇತಾಜಿ ಅವರ ಪತ್ರಗಳ ಕುರಿತಂತೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ವಸ್ತು ಪ್ರದರ್ಶನದಲ್ಲಿ ಮತ್ತು ಪ್ರಾಜೆಕ್ಟ್ ಗುರುತಿಸುವಿಕೆಯಲ್ಲಿ ನೇತಾಜಿ ಅವರ ಜೀವನ ಕೋಲ್ಕತ್ತಾದ ಬಂಗಾಳದಲ್ಲಿ ಆರಂಭವಾಗಿದ್ದು, ಅದು ಅವರ ‘ಕರ್ಮಭೂಮಿ’ಯಾಗಿದೆ. ಹೌರಾದಿಂದ ಸಂಚರಿಸುವ ‘ಹೌರಾ–ಕಲ್ಕಾ ಮೇಲ್’ ರೈಲ್ ಅನ್ನು ನೇತಾಜಿ ಎಕ್ಸ್ ಪ್ರೆಸ್ ಎಂದು ಮರು ನಾಮಕರಣ ಮಾಡಲಾಗಿದೆ. ದೇಶವೂ ಸಹ ನೇತಾಜಿ ಅವರ ಜಯಂತಿಯನ್ನು ಅಂದರೆ ಜನವರಿ 23ಅನ್ನು ಪ್ರತಿ ವರ್ಷ ‘ಪರಾಕ್ರಮ ದಿನ’(ಶೌರ್ಯ ದಿನ)ವನ್ನಾಗಿ ಆಚರಿಸಲು ನಿರ್ಧರಿಸಿದೆ. ನಮ್ಮ ನೇತಾಜಿ ಭಾರತದ ಶೌರ್ಯ ಮತ್ತು ಸ್ಫೂರ್ತಿಯ ಮಾದರಿಯಾಗಿದ್ದಾರೆ. ಇಂದು ದೇಶ 75ನೇ ಸ್ವಾತಂತ್ರ್ಯೋತ್ಸವದತ್ತ ಸಾಗುತ್ತಿದ್ದು, ದೇಶ ಆತ್ಮನಿರ್ಭರ ಭಾರತ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದು, ನೇತಾಜಿ ಅವರ ಜೀವನ ಚರಿತ್ರೆ ಅವರ ಪ್ರತಿಯೊಂದು ಕಾರ್ಯ ಹಾಗು ಅವರ ಪ್ರತಿಯೊಂದು ನಿರ್ಧಾರಗಳು ನಮ್ಮೆಲ್ಲರಿಗೂ ಶ್ರೇಷ್ಠ ಸ್ಫೂರ್ತಿಯಾಗಿದೆ. ಅವರಂತಹ ದೃಢ ಇಚ್ಛೆಯುಳ್ಳ ವ್ಯಕ್ತಿತ್ವಕ್ಕೆ ಯಾವುದೂ ಅಸಾಧ್ಯವಾಗಿರಲಿಲ್ಲ. ಅವರು ವಿದೇಶಕ್ಕೆ ಹೋದರು ಮತ್ತು ಅಲ್ಲಿನ ರಾಷ್ಟ್ರಗಳಲ್ಲಿ ನೆಲೆಸಿದ್ದ ಭಾರತೀಯರ ಆತ್ಮ ಪ್ರಜ್ಞೆಯನ್ನು ಅಲುಗಾಡಿಸಿದರು ಹಾಗೂ ಸ್ವಾತಂತ್ರ್ಯಕ್ಕಾಗಿ ಆಜಾದ್ ಹಿಂದ್ ಫೌಜ್ ಸಂಘಟನೆಯನ್ನು ಬಲವರ್ಧನೆಗೊಳಿದರು. ಅವರು ದೇಶದ ಪ್ರತಿಯೊಂದು ಜಾತಿ, ಧರ್ಮ, ಪ್ರದೇಶದ ಜನರನ್ನು ತಮ್ಮ ಸೇನೆಯ ಯೋಧರನ್ನಾಗಿ ಮಾಡಿಕೊಂಡರು. ಇಡೀ ಜಗತ್ತಿನಲ್ಲಿ ಮಹಿಳೆಯರ ಸಾಮಾನ್ಯ ಹಕ್ಕುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ನೇತಾಜಿ ಅವರು ಮಹಿಳೆಯರನ್ನು ಸೇರಿಸಿಕೊಂಡು ‘ರಾಣಿ ಝಾನ್ಸಿ ರೆಜಿಮೆಂಟ್’ ಅನ್ನು ಸ್ಥಾಪಿಸಿದರು. ಅವರು ಸೇನಾ ಯೋಧರಿಗೆ ಆಧುನಿಕ ಯುದ್ಧ ಕುರಿತು ತರಬೇತಿ ನೀಡಿದರು. ದೇಶಕ್ಕಾಗಿ ಪ್ರಾಣ ನೀಡುವ ಸ್ಫೂರ್ತಿಯನ್ನು ತುಂಬಿದರು ಮತ್ತು ದೇಶಕ್ಕಾಗಿ ಸಾವನ್ನಪ್ಪುವ ಉದ್ದೇಶವನ್ನು ನೀಡಿದರು. ನೇತಾಜಿ ಅವರು ಹೀಗೆ भारोत डाकछे। रोकतो डाक दिए छे रोक्तो के। ओठो, दाड़ांओ आमादेर नोष्टो करार मतो सोमोय नोय। ಎಂದು ಹೇಳಿದ್ದರು. ಅದರ ಅರ್ಥ “ಭಾರತ ಕರೆಯುತ್ತಿದೆ, ರಕ್ತ, ರಕ್ತವನ್ನು ಕರೆಯುತ್ತಿದೆ, ಏಳಿ ಎದ್ದೇಳಿ, ನಮ್ಮಲ್ಲಿ ಕಳೆದುಕೊಳ್ಳಲು ಸಮಯವಿಲ್ಲ”.
ಮಿತ್ರರೇ,
ಕೇವಲ ನೇತಾಜಿ ಅವರಿಂದ ಮಾತ್ರ ಇಂತಹ ವಿಶ್ವಾಸದ ಯುದ್ಧ ಕರೆ ನೀಡಲು ಸಾಧ್ಯ. ಏಕೆಂದರೆ ಅವರು ಸಹ ಸೂರ್ಯ ಮೊಳಗದಂತಹ ಸಾಮ್ರಾಜ್ಯವನ್ನು ತೋರಿದ್ದರು. ಯುದ್ಧ ಭೂಮಿಯಲ್ಲಿ ಭಾರತೀಯ ದಿಟ್ಟ ಯೋಧರನ್ನು ಸೋಲಿಸಲಾಗದು. ಸ್ವತಂತ್ರ್ಯ ಭಾರತದ ನೆಲದಲ್ಲಿ ಸ್ವತಂತ್ರ ಭಾರತ ಸರ್ಕಾರವನ್ನು ಸ್ಥಾಪಿಸಲು ಬುನಾದಿ ಹಾಕಿದರು. ನೇತಾಜಿ ಕೂಡ ತಮ್ಮ ಭರವಸೆಯನ್ನು ಈಡೇರಿಸಿಕೊಂಡರು. ಅವರು ಅಂಡಮಾನ್ ಗೆ ತಮ್ಮ ಯೋಧರ ಜೊತೆ ಆಗಮಿಸಿದರು ಮತ್ತು ತ್ರಿವರ್ಣ ಧ್ವಜ ಹಾರಿಸಿದ್ದರು. ಅವರು ಬ್ರಿಟೀಷರಿಂದ ಕಿರುಕುಳ ಅನುಭವಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಯಿತು. ಏಕೀಕೃತ ಭಾರತದಲ್ಲಿ ಮೊದಲ ಸ್ವತಂತ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಿತು. ನೇತಾಜಿ ಅವರು, ಆಜಾದ್ ಹಿಂದ್ ಸರ್ಕಾರದ ಮೊದಲ ಮುಖ್ಯಸ್ಥರಾದರು, ಸ್ವಾತಂತ್ರ್ಯದ ಮೊದಲ ನೋಟವನ್ನು ಕಂಡರು, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ ಮತ್ತು ನಾವು ಅಂಡಮಾನ್ ದ್ವೀಪವನ್ನು 2018ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ನಾಮಕರಣ ಮಾಡಿದೆವು. ದೇಶದ ಭಾವನೆಗಳಿಗೆ ಅನುಗುಣವಾಗಿ ನೇತಾಜಿ ಅವರಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ನಮ್ಮ ಸರ್ಕಾರ ಬಹಿರಂಗಗೊಳಿಸಿತು. ಜನವರಿ 26ರ ಪಥಸಂಚಲನದಲ್ಲಿ ಐಎನ್ಎ ಹಿರಿಯ ಯೋಧರು ಭಾಗವಹಿಸಿದ್ದು ನಮ್ಮ ಸರ್ಕಾರಕ್ಕೆ ಹೆಮ್ಮೆಯಾಗಿದೆ. ಇಂದು ಆಜಾದ್ ಹಿಂದ್ ಫೌಜ್ ನ ದಿಟ್ಟ ಪುತ್ರರ ಮತ್ತು ಪುತ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಾನು ಮತ್ತೊಮ್ಮೆ ಅವರಿಗೆ ಶಿರಬಾಗಿ ನಮಿಸುತ್ತೇನೆ ಮತ್ತು ಅವರಿಗೆ ಸದಾ ಕೃತಜ್ಞನಾಗಿರುತ್ತೇನೆ.
ಮಿತ್ರರೇ,
2018ರಲ್ಲಿ ದೇಶ ಆಜಾದ್ ಹಿಂದ್ ಸರ್ಕಾರದ 75ನೇ ವರ್ಷಾಚರಣೆಯನ್ನು ಆಚರಿಸಿತು. ದೇಶ ಅದೇ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಪತ್ತು ನಿರ್ವಹಣಾ ಪ್ರಶಸ್ತಿಗಳನ್ನು ಆರಂಭಿಸಿತು. ನೇತಾಜಿ ಅವರು, “ದೆಹಲಿ ದೂರವಿಲ್ಲ” ಎಂಬ ಘೋಷಣೆಯೊಂದಿಗೆ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಬೇಕು ಎಂದು ಕನಸು ಕಂಡಿದ್ದರು. ಹಾಗಾಗಿ ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ಅದನ್ನು ಪೂರ್ಣಗೊಳಿಸಲಾಯಿತು.
ಸಹೋದರ ಮತ್ತು ಸಹೋದರಿಯರೇ,
ಆಜಾದ್ ಹಿಂದ್ ಫೌಜ್ ನ ಟೋಪಿ ಧರಿಸಿ ಕೆಂಪು ಕೋಟೆಯಲ್ಲಿ ನಾನು ಆ ಬಾವುಟವನ್ನು ಹಾರಿಸಿ ಅದನ್ನು ನನ್ನ ಹಣೆಯ ಮೇಲಿಟ್ಟು ನಮಿಸಿದ್ದೆ, ಆ ಸಮಯದಲ್ಲಿ ನನ್ನೊಳಗೆ ಸಾಕಷ್ಟು ಭಾವನೆಗಳು ಬಂದವು. ನನಗೆ ಹಲವು ಪ್ರಶ್ನೆಗಳು ಮತ್ತು ವಿಚಾರಗಳು, ಭಿನ್ನ ಭಾವನೆಗಳು ಮೂಡಿದವು. ನಾನು ನೇತಾಜಿ ಅವರ ಬಗ್ಗೆ ಮತ್ತು ದೇಶವಾಸಿಗಳ ಬಗ್ಗೆ ಚಿಂತಿಸುತ್ತಿದ್ದೆ. ನೇತಾಜಿ ಅವರು ಯಾರಿಗಾಗಿ ಜೀವನದುದ್ದಕ್ಕೂ ಅಪಾಯವನ್ನು ಎದುರು ಹಾಕಿಕೊಂಡರು ? ಉತ್ತರ ಅದು ನಮ್ಮೆಲ್ಲರಿಗಾಗಿ ಮತ್ತು ನಿಮಗಾಗಿ. ಯಾರಿಗಾಗಿ ಅವರು ಉಪವಾಸ ನಡೆಸಿದರು, ಅದು ನಿಮಗೆ ಮತ್ತು ನಮ್ಮೆಲ್ಲರಿಗಾಗಿ. ಯಾರಿಗಾಗಿ ಅವರು ತಿಂಗಳುಗಟ್ಟಲೆ ಜೈಲುವಾಸ ಅನುಭವಿಸಿದರು. ನಿಮಗಾಗಿ ಮತ್ತು ನಮಗಾಗಿ ಅಲ್ಲವೇ. ಬ್ರಿಟೀಷ್ ಸಾಮ್ರಾಜ್ಯದಿಂದ ಅವರು ಹೇಗೆ ತಪ್ಪಿಸಿಕೊಳ್ಳುವ ಧೈರ್ಯ ಮಾಡಿದರು ? ಯಾರಿಗಾಗಿ ಅವರು ಜೀವನದಲ್ಲಿ ಅಪಾಯವನ್ನು ಎದುರು ಹಾಕಿಕೊಂಡರು ಮತ್ತು ಹಲವು ವಾರಗಳ ಕಾಲ ಅವರು ಕಾಬೂಲ್ ನ ರಾಯಭಾರ ಕಚೇರಿಗಳನ್ನು ಸುತ್ತಿದರು. ನಿಮಗಾಗಿ ಮತ್ತು ನಮಗಾಗಿ ಅಲ್ಲವೇ ? ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ದೇಶಗಳ ನಡುವಿನ ಸಂಬಂಧ ಪ್ರತಿಯೊಂದು ಕ್ಷಣಕ್ಕೂ ಬದಲಾಗುತ್ತಿತ್ತು. ಆಗ ಅವರು ಏಕೆ ಪ್ರತಿಯೊಂದು ರಾಷ್ಟ್ರಗಳಿಗೂ ಹೋದರು ಮತ್ತು ಭಾರತಕ್ಕೆ ನೆರವು ಕೋರಿದರು? ಇದರಿಂದಾಗಿ ಭಾರತವನ್ನು ಸ್ವತಂತ್ರಗೊಳಿಸಲು ಸಾಧ್ಯವಾಯಿತು. ಆಗ ನಾವು ನೀವೆಲ್ಲಾ ಸ್ವತಂತ್ರ ಭಾರತದ ಉಸಿರಾಡುತ್ತೇವೆ ಎಂದು. ಪ್ರತಿಯೊಬ್ಬ ಭಾರತೀಯನಲ್ಲೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗುಣಗಳಿವೆ. ದೇಶದಲ್ಲಿನ 130 ಕೋಟಿಗೂ ಅಧಿಕ ಭಾರತೀಯರಲ್ಲಿ ಹರಿಯುತ್ತಿರುವ ಪ್ರತಿಯೊಂದು ರಕ್ತದ ಹನಿಯಲ್ಲೂ ನೇತಾಜಿ ಸುಭಾಷ್ ಅವರು ಸೇರಿಕೊಂಡಿದ್ದಾರೆ. ಈ ಸಾಲವನ್ನು ನಾವು ತೀರಿಸುವುದು ಯಾವಾಗ. ಈ ಸಾಲದ ಋಣವನ್ನು ತೀರಿಸುವುದು ಸಾಧ್ಯವೇ ?
ಮಿತ್ರರೇ,
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕೋಲ್ಕತ್ತಾದ 38/2 ಎಲ್ಗಿನ್ ರಸ್ತೆಯ ಮನೆಯಲ್ಲಿ ಬಂಧನಕ್ಕೊಳಗಾಗಿದ್ದರು. ಅವರು ಭಾರತದಿಂದ ಫಲಾಯನಗೈಯಲು ನಿರ್ಧರಿಸಿದ್ದರು. ಅವರು ತಮ್ಮ ಸಂಬಂಧಿ ಶಿಶಿರ್ ನನ್ನು ಕರೆದು, “ನೀನು ನನಗೊಂದು ಸಹಾಯ ಮಾಡಬಹುದೇ ?’’ ಎಂದು ಕೇಳಿದ್ದರು. ಆಗ ಶಿಶಿರ್ ಜಿ ಒಂದು ಸಹಾಯ ಮಾಡಿದರು. ಅದು ಭಾರತದ ಸ್ವಾತಂತ್ರ್ಯಕ್ಕೆ ಅತಿ ದೊಡ್ಡ ಕಾರಣವಾಯಿತು. ಬ್ರಿಟೀಷ್ ಸಾಮ್ರಾಜ್ಯಕ್ಕೆ ದೇಶದ ಹೊರಗೆ ಜಾಗತಿಕ ಮಹಾಯುದ್ಧದ ವೇಳೆ ಬಲವಾದ ಹೊಡೆತ ಎಂಬುದನ್ನು ನೇತಾಜಿ ಅರ್ಥ ಮಾಡಿಕೊಂಡರು. ಅವರು ಹೊರಗೆ ಬ್ರಿಟೀಷ್ ಆಡಳಿತ ದುರ್ಬಲಗೊಂಡರೆ ವಿಶ್ವ ಮಹಾಯುದ್ಧ ದೀರ್ಘ ಕಾಲ ಮುಂದುವರೆದರೆ ಆಗ ಭಾರತದ ಮೇಲಿನ ಹಿಡಿತ ತಗ್ಗಲಿದೆ ಎಂಬ ದೂರದೃಷ್ಟಿಯನ್ನು ಅವರು ಗ್ರಹಿಸಿದ್ದರು. ಅದು ಅವರ ಮುನ್ನೋಟವಾಗಿತ್ತು ಮತ್ತು ದೂರದೃಷ್ಟಿಯಾಗಿತ್ತು. ನಾನು ಆ ಸಮಯದ ಬಗ್ಗೆ ಬೇರೆಲ್ಲೋ ಓದಿದ್ದೆ, ಸಹೋದರನ ಮಗಳು ಇಲಾ ನನ್ನು ದಕ್ಷಿಣೇಶ್ವರ ದೇವಾಲಯಕ್ಕೆ ತಮ್ಮ ತಾಯಿಯ ಆಶೀರ್ವಾದಕ್ಕಾಗಿ ಕಳುಹಿಸಿದ್ದರು ಎಂದು. ಅವರು ತಕ್ಷಣವೇ ದೇಶದಿಂದ ಹೊರ ಹೋಗಲು ಬಯಸಿದ್ದರು. ದೇಶದ ಹೊರಗೆ ಭಾರತದ ಪರ ಶಕ್ತಿಗಳನ್ನು ಒಗ್ಗೂಡಿಸಲು ಬಯಸಿದ್ದರು. ಆದ್ದರಿಂದ ಯುವ ಶಿಶಿರ್ ಗೆ ಅವರು ‘ನನಗಾಗಿ ಒಂದು ಸಹಾಯ ಮಾಡಬಹುದೇ ಎಂದು ಕೇಳಿದ್ದರು’.
ಮಿತ್ರರೇ,
ಇಂದು ಪ್ರತಿಯೊಬ್ಬ ಭಾರತೀಯರೂ ಸಹ ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಳ್ಳಬೇಕಾಗಿದೆ ಮತ್ತು ಆಗ ನೀವು ಕೂಡ ನನಗೊಂದು ಕೆಲಸ ಮಾಡಬಹುದೇ ಎಂದು ಕೇಳಬಹುದು. ಆ ಕೆಲಸವೆಂದರೆ ಇಂದು ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡುವುದು. ದೇಶದ ಪ್ರತಿಯೊಂದು ಭಾಗ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಅದರ ಜೊತೆ ಸಂಪರ್ಕ ಹೊಂದಿದ್ದಾರೆ. ನೇತಾಜಿ ಹೀಗೆ ಹೇಳಿದ್ದರು पुरुष, ओर्थो एवं उपोकरण निजेराई बिजोय बा साधिनता आंते पारे ना. आमादेर अबोशोई सेई उद्देश्यो शोकति थाकते होबे जा आमादेर साहोसिक काज एवंम बीरतपुरनो शोसने उदबुधो कोरबे ಅಂದರೆ ನಮಗೆ ಉದ್ದೇಶವಿರಬೇಕು ಮತ್ತು ಧೈರ್ಯದಿಂದ ಮತ್ತು ವಿರೋಚಿತವಾಗಿ ಆಡಳಿತ ನಡೆಸುವ ಶಕ್ತಿ ನೀಡಬೇಕು ಎಂದು. ಇಂದು ನಾವು ಅದೇ ಧ್ಯೇಯ ಮತ್ತು ಶಕ್ತಿಯನ್ನು ಹೊಂದಿದ್ದೇವೆ. ನಮ್ಮ ಆತ್ಮನಿರ್ಭರ ಭಾರತದ ಗುರಿ ನಮ್ಮ ಸಾಮರ್ಥ್ಯ ಮತ್ತು ನಮ್ಮ ಸ್ವಯಂ ದೃಢ ಬದ್ಧತೆಯಿಂದಾಗಿ ಸಾಕಾರವಾಗುತ್ತಿದೆ. ನೇತಾಜಿ ಹೇಳಿದ್ದರು “आज आमादेर केबोल एकटी इच्छा थाका उचित – भारोते ईच्छुक जाते, भारोते बांचते पारे। ಅಂದರೆ ಇಂದು ನಮ್ಮ ಭಾರತ ಸದೃಢವಾಗಿ ಉಳಿಯಬೇಕು ಮತ್ತು ಮುನ್ನಡೆಯಬೇಕು ಎಂಬ ಒಂದೇ ಒಂದು ಬಯಕೆಯನ್ನು ಹೊಂದಲಾಗಿತ್ತು. ನಾವು ಕೂಡ ಅದೇ ಗುರಿಯನ್ನು ಹೊಂದಿದ್ದೆವು. ನಿಮ್ಮ ರಕ್ತವನ್ನು ಹರಿಸುವ ದೇಶದಲ್ಲಿ ನಾವು ಬಾಳ್ವೆ ನಡೆಸುತ್ತಿದ್ದೇವೆ. ನಮ್ಮ ಶ್ರದ್ಧೆ ಮತ್ತು ಆವಿಷ್ಕಾರಗಳಿಂದಾಗಿ ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡುತ್ತಿದ್ದೇವೆ. ನೇತಾಜಿ ಅವರು ಹೀಗೆ ಹೇಳುತ್ತಿದ್ದರು “निजेर प्रोती शात होले सारे बिस्सेर प्रोती केउ असोत होते पारबे ना’ ಅಂದರೆ “ನಿಮಗೆ ನೀವು ಸತ್ಯವಾಗಿದ್ದರೆ, ಆಗ ನೀವು ಜಗತ್ತಿಗೆ ಎಂದಿಗೂ ಸುಳ್ಳಾಗುವುದಿಲ್ಲ”. ನಾವು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಬೇಕಿದೆ ಮತ್ತು ಯಾರಿಗೂ ಕಡಿಮೆ ಇಲ್ಲದಂತೆ ಹಾಗೂ ಶೂನ್ಯ ದೋಷ – ಶೂನ್ಯ ಪರಿಣಾಮದ ವಸ್ತುಗಳ ಉತ್ಪಾದನೆಗೆ ಮುಂದಾಗಬೇಕಿದೆ. ನೇತಾಜಿ ನಮಗೆ ಹೀಗೆ ಹೇಳಿದ್ದರು “स्वाधीन भारोतेर स्वोप्ने कोनो दिन आस्था हारियो ना। बिस्से एमुन कोनो शोक्ति नेई जे भारोत के पराधीनांतार शृंखलाय बेधे राखते समोर्थों होबे” ಅಂದರೆ ಎಂದಿಗೂ ಸ್ವತಂತ್ರ ಭಾರತದ ಕನಸಿನಲ್ಲಿ ವಿಶ್ವಾಸ ಕಳೆದುಕೊಳ್ಳಬೇಡ. ಭಾರತವನ್ನು ಬಂಧಿಸುವಂತಹ ಯಾವುದೇ ಶಕ್ತಿ ವಿಶ್ವದಲ್ಲಿ ಇಲ್ಲ” 130 ಕೋಟಿ ದೇಶವಾಸಿಗಳು ತಮ್ಮ ಭಾರತವನ್ನು ಸ್ವಾವಲಂಬಿ ಭಾರತವನ್ನಾಗಿ ಮಾಡಲು ಮುಂದಾದರೆ, ವಿಶ್ವದ ಯಾವುದೇ ಶಕ್ತಿ ಅವರನ್ನು ತಡೆಯಲಾಗದು.
ಮಿತ್ರರೇ,
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ದೇಶದಲ್ಲಿ ಬಡತನ, ಸಾಕ್ಷರತೆ ಮತ್ತು ರೋಗಗಳು ಅತಿ ದೊಡ್ಡ ಸಮಸ್ಯೆಗಳಾಗಿವೆ ಎಂದು ಪ್ರತಿಪಾದಿಸಿದರು. ಅವು ಹೀಗೆ ಹೇಳಿದರು ‘आमादेर शाब्छे बोरो जातियो समस्या होलो, दारिद्रो अशिकखा, रोग, बैज्ञानिक उत्पादोन। जे समस्यार समाधान होबे, केबल मात्रो सामाजिक भाबना–चिन्ता दारा” ಅಂದರೆ “ನಮ್ಮ ಅತಿ ದೊಡ್ಡ ಸಮಸ್ಯೆ ಎಂದರೆ ಬಡತನ, ಸಾಕ್ಷರತೆ ಮತ್ತು ಕಾಯಿಲೆ ಹಾಗೂ ವೈಜ್ಞಾನಿಕ ಉತ್ಪಾದನೆಯ ಕೊರತೆ. ಈ ಸಮಸ್ಯೆಗಳನ್ನು ಬಗೆಹರಿಸಲು ಸಮಾಜ ಒಗ್ಗೂಡಬೇಕು ಮತ್ತು ನಿರಂತರ ಪ್ರಯತ್ನಗಳನ್ನು ನಡೆಸಬೇಕು. ಇಂದು ದೇಶದಲ್ಲಿ ಶೋಷಿತ, ದೌರ್ಜನ್ಯಕ್ಕೊಳಗಾದ ಅವಕಾಶ ವಂಚಿತ ರೈತರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿರುವುದು ನನಗೆ ತೃಪ್ತಿ ತಂದಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯೂ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದ ರೈತರು ಬೀಜಗಳಿಂದ ಮಾರುಕಟ್ಟೆಯವರೆಗೆ ಆಧುನಿಕ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ಕೃಷಿಯ ಮೇಲಿನ ವೆಚ್ಚವನ್ನು ತಗ್ಗಿಸಲು ಹಲವು ಪ್ರಯತ್ನಗಳನ್ನು ನಡೆಸಲಾಗಿದೆ. ಪ್ರತಿಯೊಬ್ಬ ಯುವಕರಿಗೂ ಆಧುನಿಕ ಮತ್ತು ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಶಿಕ್ಷಣ ವಲಯದಲ್ಲಿ ಆಧುನೀಕರಣವನ್ನು ಕೈಗೊಳ್ಳಲಾಗುತ್ತಿದೆ. ಬಹು ಸಂಖ್ಯೆಯ ಏಮ್ಸ್
ಐಐಟಿಎಸ್, ಐಐಎಂಗಳನ್ನು ದೇಶಾದ್ಯಂತ ಸ್ಥಾಪಿಸಲಾಗುತ್ತಿದೆ. ಇಂದು 21ನೇ ಶತಮಾನದ ಅಗತ್ಯತೆಗೆ ತಕ್ಕಂತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.
ಮಿತ್ರರೇ,
ದೇಶದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳು ಮತ್ತು ಭಾರತ ಪಡೆದುಕೊಳ್ಳುತ್ತಿರುವ ಸ್ವರೂಪದ ಬಗ್ಗೆ ನೇತಾಜಿ ಹೇಗೆ ನೋಡುತ್ತಿದ್ದರು ಎಂದು ನಾನು ಆಗಾಗ್ಗೆ ಯೋಚಿಸುತ್ತೇನೆ. ದೇಶ ವಿಶ್ವದ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಸಾಧಿಸಿರುವ ಬಗ್ಗೆ ಅವರು ಯಾವ ರೀತಿಯ ಭಾವನೆಗಳನ್ನು ಹೊಂದಬಹುದು. ಶಿಕ್ಷಣ ಮತ್ತು ವೈದ್ಯಕೀಯ ವಲಯದಲ್ಲಿ ಜಗತ್ತಿನಾದ್ಯಂತ ದೊಡ್ಡ ಕಂಪನಿಗಳು ತಮ್ಮ ಹೆಸರು ಮಾಡುತ್ತಿರುವುದಕ್ಕೆ ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರು. ಇಂದು ಆಧುನಿಕ ಯುದ್ಧ ವಿಮಾನ ರಫೇಲ್ ಅನ್ನು ಭಾರತೀಯ ಸೇನೆ ಹೊಂದಿದೆ ಮತ್ತು ಭಾರತ ತೇಜಸ್ ನಂತಹ ಅತ್ಯಾಧುನಿಕ ವಿಮಾನಗಳನ್ನು ಸಿದ್ಧಪಡಿಸುತ್ತಿದೆ. ಇಂದು ದೇಶದ ಸೇನಾ ಪಡೆ ಎಷ್ಟು ಬಲಿಷ್ಠವಾಗಿದೆ ಎಂಬುದು ನೋಡಬೇಕಾಗಿದೆ. ಅವರು ಬಯಸಿದ ಆಧುನಿಕ ಉಪಕರಣಗಳನ್ನು ಪಡೆದುಕೊಳ್ಳಲಾಗುತ್ತಿದೆ. ಭಾರತ ಭಾರೀ ಸಾಂಕ್ರಾಮಿಕದ ವಿರುದ್ಧ ಹೇಗೆ ಹೋರಾಟ ನಡೆಸುತ್ತಿದೆ ಮತ್ತು ಲಸಿಕೆಯಂತಹ ಆಧುನಿಕ ವೈಜ್ಞಾನಿಕ ಪರಿಹಾರಗಳ ಅಭಿವೃದ್ಧಿ ಬಗ್ಗೆ ಅವರು ಯಾವ ರೀತಿ ಭಾವನೆ ವ್ಯಕ್ತಪಡಿಸುತ್ತಿದ್ದರೆಂಬ ಕುತೂಹಲವಿದೆ. ದೇಶದ ಇತರೆ ರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ನೀಡುವ ಮೂಲಕ ಭಾರತ ಹಲವು ರಾಜ್ಯಗಳಿಗೆ ಸಹಾಯ ಮಾಡುತ್ತಿರುವ ಬಗ್ಗೆ ಅವರು ಹೇಗೆ ಹೆಮ್ಮೆ ಪಡುತ್ತಿದ್ದರು ಎಂಬುದು. ಇಂದು ನೇತಾಜಿ ಅವರನ್ನು ನಾವೆಲ್ಲಾ ಹೇಗೆ ನೋಡುತ್ತಿದ್ದೇವೆಯೋ ಹಾಗೆ ಅವರು ನಮಗೆ ಆಶೀರ್ವಾದ ಹಾಗೂ ಪ್ರೀತಿಯನ್ನು ತೋರುತ್ತಿದ್ದಾರೆ. ಇಂದು ಎಲ್ಎಸಿ ಯಿಂದ ಎಲ್ಒಸಿ ವರೆಗಿನ ಬಲಿಷ್ಠ ಭಾರತವನ್ನು ಇಡೀ ವಿಶ್ವ ಗಮನಿಸುತ್ತಿದೆ. ಭಾರತದ ಸಾರ್ವಭೌಮತೆಯ ಸವಾಲುಗಳ ವಿಷಯದಲ್ಲಿ ಭಾರತ ಇಂದು ತಕ್ಕ ಉತ್ತರ ನೀಡುವ ಪ್ರಯತ್ನ ನಡೆಸಿದೆ.
ಮಿತ್ರರೇ,
ನೇತಾಜಿ ಅವರ ಬಗ್ಗೆ ಮಾತನಾಡಲು ಸಾಕಷ್ಟು ವಿಷಯಗಳಿವೆ. ಅವರ ಬಗ್ಗೆ ಮಾತನಾಡಲು ಹಲವು ರಾತ್ರಿಗಳೇ ಕಳೆದು ಹೋಗುತ್ತದೆ. ನಾವೆಲ್ಲರೂ ವಿಶೇಷವಾಗಿ ಯುವ ಜನಾಂಗ ನೇತಾಜಿ ಅಂತಹ ಶ್ರೇಷ್ಠ ವ್ಯಕ್ತಿಗಳ ಜೀವನದಿಂದ ನಾವು ಹೆಚ್ಚಿನದನ್ನು ತಿಳಿದುಕೊಳ್ಳಬೇಕಿದೆ. ಆದರೆ ನಮ್ಮ ಗಮನವನ್ನು ಸೆಳೆಯುವ ಮತ್ತೊಂದು ಸಂಗತಿಯೆಂದರೆ ಒಂದು ಗುರಿ ಸಾಧನೆಗೆ ನಿರಂತರ ಪ್ರಯತ್ನಗಳನ್ನು ನಡೆಸುವುದು. ಜಾಗತಿಕ ಮಹಾಯುದ್ಧದ ವೇಳೆ ಹಲವು ದೇಶವಾಸಿಗಳು ಸೋಲು ಮತ್ತು ಶರಣಾಗತಿ ಎದುರಿಸುವುದನ್ನು ಕಂಡಾಗ, ಅವರು ಸೋತಿರಬಹುದು, ಆದರೆ ಅದು ನಾವಲ್ಲ ಎಂದಿದ್ದರು. ಅವರ ಸಂಕಲ್ಪಗಳನ್ನು ಸಾಕಾರಗೊಳಿಸುವ ಸಾಮರ್ಥ್ಯ ವಿಶಿಷ್ಟವಾಗಿದೆ. ಅವರು ಭಗವದ್ಗೀತೆಯನ್ನು ಸದಾ ತಮ್ಮ ಬಳಿ ಇಟ್ಟುಕೊಂಡಿರುತ್ತಿದ್ದರು ಮತ್ತು ಅದರಿಂದ ಅವರು ಸ್ಫೂರ್ತಿ ಪಡೆದುಕೊಳ್ಳುತ್ತಿದ್ದರು. ಅವರಿಗೆ ಕೆಲವೊಂದು ವಿಚಾರಗಳ ಬಗ್ಗೆ ಮನದಟ್ಟಾದರೆ ಅವರು ಯಾವುದೇ ಹಂತಕ್ಕೆ ಹೋಗಲು ಸಿದ್ಧರಾಗಿದ್ದರು. ಅವರು ನಮಗೆ ಚಿಂತನೆ ಕೂಡ ಒಂದು ಸರಳ ಪ್ರಕ್ರಿಯೆಯಲ್ಲ. ಅದು ಸಾಮಾನ್ಯವೂ ಅಲ್ಲ, ಅದಕ್ಕೆ ಆರಂಭಿಸಲು ಧೈರ್ಯ ಅಗತ್ಯವಿದೆ. ಒಮ್ಮೆ ನಿಮಗೆ ಝರಿಯ ವಿರುದ್ಧ ನಾವು ಹರಿಯುತ್ತಿದ್ದೇವೆ ಎನಿಸಿದರೆ ಆದರೆ ಆಗ ನಿಮ್ಮ ಗುರಿ ಪವಿತ್ರವಾಗಿದ್ದರೆ, ಸ್ಪಷ್ಟವಾಗಿದ್ದರೆ ನೀವು ಹೆದರಬೇಕಾದ ಅಗತ್ಯವಿಲ್ಲ. ನಿಮ್ಮ ದೂರದೃಷ್ಟಿಯ ಗುರಿಗಳಿಗೆ ನೀವು ಸಮರ್ಪಿತರಾಗಿದ್ದರೆ, ನೀವು ಯಶಸ್ಸನ್ನು ಪಡೆಯುತ್ತೀರಿ ಎಂದು ಅವರು ತೋರಿಸಿದರು
ಮಿತ್ರರೇ,
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸೋನಾರ್ ಬಾಂಗ್ಲಾಕ್ಕೆ ಆತ್ಮನಿರ್ಭರ ಭಾರತದ ಕನಸಿನಷ್ಟೇ ದೊಡ್ಡ ಸ್ಫೂರ್ತಿಯಾಗಿದ್ದಾರೆ. ದೇಶದ ಸ್ವಾತಂತ್ರ್ಯದ ಸಮಯದಲ್ಲಿ ನೇತಾಜಿ ಅವರು ವಹಿಸಿದ ಪಾತ್ರವನ್ನೇ, ಪಶ್ಚಿಮ ಬಂಗಾಳ ಇಂದು ಆತ್ಮನಿರ್ಭರ ಭಾರತ ಅಭಿಯಾನದಲ್ಲೂ ವಹಿಸಬೇಕಿದೆ. ಆತ್ಮನಿರ್ಭರ ಭಾರತ ಅಭಿಯಾನದ ನೇತೃತ್ವವನ್ನು ಸ್ವಾವಲಂಬಿ ಬಂಗಾಳ ಮತ್ತು ಸೋನಾರ್ ಬಾಂಗ್ಲಾ ವಹಿಸಬೇಕು. ಬಂಗಾಳ ಇನ್ನಷ್ಟು ಮುಂದುವರಿಯಬೇಕಾಗಿದೆ. ಅದು ದೇಶದ ಹೆಮ್ಮೆಯನ್ನು ವೃದ್ಧಿಸಬೇಕಾಗಿದೆ. ನೇತಾಜಿ ಅಂತೆ ನಾವು ಎಲ್ಲಿಯವರೆಗೆ ಗುರಿ ತಲುಪುವುದಿಲ್ಲವೋ ಅಲ್ಲಿಯವರೆಗೆ ನಾವೆಲ್ಲೂ ನಿಲ್ಲಬೇಕಾಗಿಲ್ಲ. ನಿಮ್ಮೆಲ್ಲಾ ಪ್ರಯತ್ನಗಳು ಮತ್ತು ನಿರ್ಣಯಗಳು ಯಶಸ್ವಿಯಾಗಲಿ. ಈ ಪವಿತ್ರ ಸಂದರ್ಭದಲ್ಲಿ ಈ ನೆಲದ ಆಶೀರ್ವಾದದೊಂದಿಗೆ ನೇತಾಜಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ. ಅದೇ ಸ್ಫೂರ್ತಿಯೊಂದಿಗೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಜೈಹಿಂದ್, ಜೈಹಿಂದ್, ಜೈಹಿಂದ್ ! ತುಂಬಾ ತುಂಬಾ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.
***
India marks #ParakramDivas and pays homage to Netaji Subhas Chandra Bose. https://t.co/5mQh5GuAuk
— Narendra Modi (@narendramodi) January 23, 2021
His bravery and ideals inspire every Indian. His contribution to India is indelible.
— PMO India (@PMOIndia) January 23, 2021
India bows to the great Netaji Subhas Chandra Bose.
PM @narendramodi began his Kolkata visit and #ParakramDivas programmes by paying homage to Netaji Bose at Netaji Bhawan. pic.twitter.com/2DG49aB4vW
At Kolkata’s National Library, a unique tribute is being paid to Netaji Subhas Bose on #ParakramDivas, through beautiful art. pic.twitter.com/Mytasoq2n6
— PMO India (@PMOIndia) January 23, 2021
आज के ही दिन माँ भारती की गोद में उस वीर सपूत ने जन्म लिया था, जिसने आज़ाद भारत के सपने को नई दिशा दी थी।
— PMO India (@PMOIndia) January 23, 2021
आज के ही दिन ग़ुलामी के अंधेरे में वो चेतना फूटी थी, जिसने दुनिया की सबसे बड़ी सत्ता के सामने खड़े होकर कहा था, मैं तुमसे आज़ादी मांगूंगा नहीं, छीन लूँगा: PM
देश ने ये तय किया है कि अब हर साल हम नेताजी की जयंती, यानी 23 जनवरी को ‘पराक्रम दिवस’ के रूप में मनाया करेंगे।
— PMO India (@PMOIndia) January 23, 2021
हमारे नेताजी भारत के पराक्रम की प्रतिमूर्ति भी हैं और प्रेरणा भी हैं: PM
ये मेरा सौभाग्य है कि 2018 में हमने अंडमान के द्वीप का नाम नेताजी सुभाष चंद्र बोस द्वीप रखा।
— PMO India (@PMOIndia) January 23, 2021
देश की भावना को समझते हुए, नेताजी से जुड़ी फाइलें भी हमारी ही सरकार ने सार्वजनिक कीं।
ये हमारी ही सरकार का सौभाग्य रहा जो 26 जनवरी की परेड के दौरान INA Veterans परेड में शामिल हुए: PM
आज हर भारतीय अपने दिल पर हाथ रखे, नेताजी सुभाष को महसूस करे, तो उसे फिर ये सवाल सुनाई देगा:
— PMO India (@PMOIndia) January 23, 2021
क्या मेरा एक काम कर सकते हो?
ये काम, ये काज, ये लक्ष्य आज भारत को आत्मनिर्भर बनाने का है।
देश का जन-जन, देश का हर क्षेत्र, देश का हर व्यक्ति इससे जुड़ा है: PM
नेताजी सुभाष चंद्र बोस, गरीबी को, अशिक्षा को, बीमारी को, देश की सबसे बड़ी समस्याओं में गिनते थे।
— PMO India (@PMOIndia) January 23, 2021
हमारी सबसे बड़ी समस्या गरीबी, अशिक्षा, बीमारी और वैज्ञानिक उत्पादन की कमी है।
इन समस्याओं के समाधान के लिए समाज को मिलकर जुटना होगा, मिलकर प्रयास करना होगा: PM
नेताजी सुभाष, आत्मनिर्भर भारत के सपने के साथ ही सोनार बांग्ला की भी सबसे बड़ी प्रेरणा हैं।
— PMO India (@PMOIndia) January 23, 2021
जो भूमिका नेताजी ने देश की आज़ादी में निभाई थी, वही भूमिका पश्चिम बंगाल को आत्मनिर्भर भारत में निभानी है।
आत्मनिर्भर भारत का नेतृत्व आत्मनिर्भर बंगाल और सोनार बांग्ला को भी करना है: PM
Went to Netaji Bhawan in Kolkata to pay tributes to the brave Subhas Bose.
— Narendra Modi (@narendramodi) January 23, 2021
He undertook numerous measures for the development of Kolkata. #ParakramDivas pic.twitter.com/XdChQG36nk
A spectacular Projection Mapping show underway at the Victoria Memorial. This show traces the exemplary life of Netaji Subhas Bose. #ParakramDivas pic.twitter.com/YLnCDcV8YY
— PMO India (@PMOIndia) January 23, 2021
Creating an Aatmanirbhar Bharat is an ideal tribute to Netaji Bose, who always dreamt of a strong and prosperous India. #ParakramDivas pic.twitter.com/laYP6braCt
— Narendra Modi (@narendramodi) January 23, 2021
Whatever Netaji Subhas Chandra Bose did, he did for India...he did for us.
— Narendra Modi (@narendramodi) January 23, 2021
India will always remain indebted to him. #ParakramDivas pic.twitter.com/Iy96plu8TQ
Netaji rightly believed that there is nothing that constrain India’s growth.
— Narendra Modi (@narendramodi) January 23, 2021
He was always thoughtful towards the poor and put great emphasis on education. #ParakramDivas pic.twitter.com/Pqmb5UvhzL
The positive changes taking place in India today would make Netaji Subhas Bose extremely proud. #ParakramDivas pic.twitter.com/mdemUH4tey
— Narendra Modi (@narendramodi) January 23, 2021
I bow to the great land of West Bengal. pic.twitter.com/fSPjnTsqSU
— Narendra Modi (@narendramodi) January 23, 2021
The National Library is one of Kolkata’s iconic landmarks. At the National Library, I interacted with artists, researchers and other delegates as a part of #ParakramDivas.
— Narendra Modi (@narendramodi) January 23, 2021
The 125th Jayanti celebrations of Netaji Bose have captured the imagination of our entire nation. pic.twitter.com/r3xVdTKFXf
Some glimpses from the programme at Victoria Memorial. #ParakramDivas pic.twitter.com/rBmhawJAwA
— Narendra Modi (@narendramodi) January 23, 2021