Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಕಾಶ ಪೂರಬ್: ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಪ್ರಧಾನಮಂತ್ರಿ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಕಾಶ್ ಪೂರಬ್ ಪವಿತ್ರ ಸಂದರ್ಭದಲ್ಲಿ ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರಿಗೆ ನಮನ ಸಲ್ಲಿಸಿದ್ದಾರೆ.

ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು , “ಪವಿತ್ರ ಪ್ರಕಾಶ್ ಪೂರಬ್ ಸಂದರ್ಭದಲ್ಲಿ ನಾನು ಶ್ರೀ ಗುರು ಗೋವಿಂದ್ ಸಿಂಗ್ ಜಿ ಅವರಿಗೆ ನಮಿಸುತ್ತೇನೆ. ಅವರು ನ್ಯಾಯಯುತ ಮತ್ತು ಅಂತರ್ಗತ ಸಮಾಜವನ್ನು ಸೃಷ್ಟಿಸಲು ಜೀವನ ಮುಡಿಪಾಗಿಟ್ಟಿದ್ದರು. ತಮ್ಮ ತತ್ವಗಳನ್ನು ಎತ್ತಿಹಿಡಿಯುವಲ್ಲಿ ಅವರು ಅಚಲವಾಗಿದ್ದರು. ಅವರ ಧೈರ್ಯ ಮತ್ತು ತ್ಯಾಗವನ್ನೂ ನಾವು ಸ್ಮರಿಸುತ್ತೇವೆ.

ಗುರು ಸಾಹೀಬ್ ಗಳು ನನ್ನ ಮೇಲೆ ವಿಶೇಷ ಕೃಪೆ ತೋರಿವೆ, ಶ್ರೀ ಗುರು ಗೋವಿಂದ್ ಸಿಂಗ್ ಅವರ  350ನೇ ಪ್ರಕಾಶ ಪೂರಬ್ ತಮ್ಮ ಸರ್ಕಾರದ ಕಾರ್ಯಕಾಲದಲ್ಲಿ ಜರುಗಿದೆ. ನಾನು ಪಾಟ್ನಾದಲ್ಲಿ ನಡೆದ ವೈಭವದ ಸಮಾರಂಭವನ್ನು ಸ್ಮರಿಸುತ್ತೇನೆ, ನನಗೆ ಅಲ್ಲಿಗೆ ಹೋಗಿ ನನ್ನ ಗೌರವ ಸೂಚಿಸುವ ಅವಕಾಶ ದೊರೆತಿತ್ತು.” ಎಂದು ತಿಳಿಸಿದ್ದಾರೆ.

***