ನನಗೆ ಇಂದು ಜಮ್ಮು ಮತ್ತು ಕಾಶ್ಮೀರದ ಇಬ್ಬರು ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಅನುಭವವನ್ನು ಆಲಿಸುವ ಅವಕಾಶ ದೊರೆತಿತ್ತು. ಇವು ನನಗೆ ಕೇವಲ ಅನುಭವಗಳು ಎನಿಸುತ್ತಿಲ್ಲ. ಕೆಲವೊಮ್ಮೆ ನಾವು ಯಾರಿಗಾಗಿ ಕೆಲಸ ಮಾಡುತ್ತವೆಯೋ, ಯಾರಿಗಾಗಿ ನಿರ್ಧಾರ ಕೈಗೊಳ್ಳುತ್ತೇವೆಯೋ ಅವರ ಮಾತುಗಳನ್ನು ಕೇಳಿದಾಗ ಆ ಮಾತುಗಳು ನನಗೆ ಆಶೀರ್ವಾದವಾಗುತ್ತವೆ. ಈ ಆಶೀರ್ವಾದವು ನನಗೆ ಬಡವರಿಗಾಗಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಹೆಚ್ಚಿನ ಸಾಮರ್ಥ್ಯ ನೀಡಲಿದೆ. ಕಾಕತಾಳೀಯವೆಂದರೆ,ಜಮ್ಮು ಮತ್ತು ಕಾಶ್ಮೀರದ ಸಹೋದರರು ಸಣ್ಣ ಸಣ್ಣ ವ್ಯಾಪಾರಗಳನ್ನು ನಡೆಸುತ್ತಾರೆ, ಒಬ್ಬರು ಚಾಲಕರು ಮತ್ತು ಮತ್ತೊಬ್ಬರು ಬೇರೆ ಕೆಲಸ ಮಾಡುತ್ತಾರೆ, ಆದರೆ ಯೋಜನೆ ಸಂಕಷ್ಟದ ಕಾಲದಲ್ಲಿ ಅವರಿಗೆ ತುಂಬಾ ನೆರವಾಗಿದೆ. ಆ ಬಗ್ಗೆ ನಿಮ್ಮಿಂದ ಕೇಳುವುದು ನನಗೆ ತುಂಬಾ ಒಳ್ಳೆಯದೆನಿಸುತ್ತಿದೆ. ಅಭಿವೃದ್ಧಿ ಯೋಜನೆಗಳ ಪ್ರಯೋಜನ, ಸಮಾಜದ ಕಟ್ಟ ಕಡೆಯ, ದೇಶದ ಮೂಲೆ ಮೂಲೆಗಳಲ್ಲಿರುವ ಬಡವರಲ್ಲಿ ಅತಿ ಕಡುಬಡವರಿಗೆ ತಲುಪಿಸಬೇಕು ಎಂಬುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನಮ್ಮ ಸಂಪುಟ ಸಹೋದ್ಯೋಗಿಗಳಾದ ಗೃಹ ಸಚಿವ ಶ್ರೀ ಅಮಿತ್ ಶಾ ಜಿ, ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಪಿಎಂಒ ಕಚೇರಿಯಲ್ಲಿ ನನ್ನ ಜೊತೆ ಕಾರ್ಯನಿರ್ವಹಿಸುತ್ತಿರುವ ಸಹೋದರ ಡಾ.ಜಿತೇಂದ್ರ ಸಿಂಗ್ ಜಿ, ಸಂಸತ್ತಿನ ಇತರೆ ನನ್ನ ಸಹೋದ್ಯೋಗಿಗಳೇ, ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೇ ಮತ್ತು ಜಮ್ಮು ಮತ್ತು ಕಾಶ್ಮೀರದ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ.
ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ತುಂಬಾ ಐತಿಹಾಸಿಕ ದಿನವಾಗಿದೆ. ಇಂದು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬರಿಗೂ ಆಯುಷ್ಮಾನ್ ಯೋಜನೆಯ ಪ್ರಯೋಜನ ದೊರಕಲಿದೆ. ಸೇಹತ್ ಯೋಜನೆಯೇ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ಈ ನಿಟ್ಟಿನಲ್ಲಿ ತನ್ನ ಜನರ ಅಭಿವೃದ್ಧಿಗಾಗಿ ಈ ಕ್ರಮವನ್ನು ಕೈಗೊಂಡಿರುವುದು ನನಗೆ ಸಂತಸ ತಂದಿದೆ.
ಆದ್ದರಿಂದ ಶ್ರೀ ಮನೋಜ್ ಸಿನ್ಹಾ ಜಿ ಮತ್ತು ಇಡೀ ತಂಡಕ್ಕೆ ನಾನು ಅಭಿನಂದಿಸುತ್ತೇನೆ. ಜಮ್ಮುಮತ್ತು ಕಾಶ್ಮೀರದ ಎಲ್ಲ ಜನರ ಪರವಾಗಿ ಸರ್ಕಾರದ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ನಾನು ಈ ಕಾರ್ಯಕ್ರಮ ನಿನ್ನೆಯೇ ನಡೆದಿದ್ದರೆ ಚೆನ್ನಾಗಿತ್ತು ಎಂದು ಬಯಸಿದ್ದೆ. ನಿನ್ನೆ 25ರಂದು ಅಟಲ್ ಜಿ ಅವರ ಜನ್ಮದ ದಿನದ ವೇಳೆ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಿನ್ನೆ ಈ ಕಾರ್ಯಕ್ರಮ ನಡೆಯಲಿಲ್ಲ. ನಾನು ಇಂದಿನ ದಿನಾಂಕಕ್ಕೆ ಇದನ್ನು ನಿಗದಿಪಡಿಸಿದೆ. ಅಟಲ್ ಜಿ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವಿಶೇಷ ಮಮತೆಯನ್ನು ಹೊಂದಿದ್ದರು. ಅಟಲ್ ಜಿ ಅವರು, ಇನ್ಸಾನಿಯತ್(ಮಾನವೀಯತೆ) ಜಾಮ್ ಹುರಿಯತ್(ಪ್ರಜಾಪ್ರಭುತ್ವ) ಮತ್ತು ಕಾಶ್ಮೀರಿಯತ್(ಕಾಶ್ಮೀರದ ಜನತೆಯ ಅಸ್ಮಿತೆ) ತತ್ವಗಳಿಗಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಅವು ನಿರಂತರವಾಗಿ ನಮಗೆ ಮಾರ್ಗದರ್ಶಿಯಾಗಿವೆ. ಈ ಮೂರು ಮಂತ್ರಗಳೊಂದಿಗೆ ಮತ್ತು ಅದೇ ಭಾವನೆಯ ಬಲವರ್ಧನೆಯೊಂದಿಗೆ ಇಂದು ಜಮ್ಮು ಮತ್ತು ಕಾಶ್ಮೀರ ಮುನ್ನಡೆಯುತ್ತಿದೆ.
ಮಿತ್ರರೇ,
ನಾನು ಈ ಯೋಜನೆಯ ಪ್ರಯೋಜನಗಳ ವಿವರ ತಿಳಿಸುವುದಕ್ಕೆ ಮುನ್ನ ಇಂದು ನಿಮ್ಮೊಡನೆ ಇರುವುದರಿಂದ ಕೆಲವು ವಿಷಯಗಳನ್ನು ಹೇಳಲು ಬಯಸುತ್ತೇನೆ. ಮೊದಲಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಲವರ್ಧನೆ ಮಾಡಿದ್ದಕ್ಕಾಗಿ ನಾನು ಜನತೆಯನ್ನು ಅಭಿನಂದಿಸುತ್ತೇನೆ. ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ನಡೆದ ಚುನಾವಣೆಗಳು ಹೊಸ ಅಧ್ಯಾಯವನ್ನು ಬರೆದಿದೆ. ನಾನು ಪ್ರತಿಯೊಂದು ಹಂತದ ಚುನಾವಣೆ ಹೇಗೆ ನಡೆಯಿತು ಎಂದು ಗಮನಿಸಿದ್ದೇನೆ. ಕೊರೊನಾ ಮತ್ತು ಹಿಮಗಟ್ಟುವ ಚಳಿಯ ನಡುವೆಯೂ ಯುವ ಜನಾಂಗ, ವೃದ್ಧರು ಮತ್ತು ಮಹಿಳೆಯರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಅವರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಮತದಾರರ ಮುಖದಲ್ಲಿ ಅಭಿವೃದ್ಧಿಯ ಭರವಸೆ ಮತ್ತು ಉತ್ಸಾಹವನ್ನು ನಾನು ಗಮನಿಸಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಮತದಾರನ ಕಣ್ಣಿನಲ್ಲಿ ಹಿಂದಿನದ್ದಕ್ಕೆಲ್ಲಾ ವಿದಾಯ ಹೇಳಿ ಉತ್ತಮ ಭವಿಷ್ಯದ ವಿಶ್ವಾಸ ಕಂಡಿದ್ದೇನೆ.
ಮಿತ್ರರೇ,
ಈ ಚುನಾವಣೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರು ಪ್ರಜಾಪ್ರಭುತ್ವದ ಬೇರುಗಳನ್ನು ಬಲವರ್ಧನೆಗೊಳಿಸಲು ಶ್ರಮಿಸಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದ ಆಡಳಿತದ ವೈಖರಿಯ ಬಗ್ಗೆ ನಾನು ಹೇಳಲು ಬಯಸುತ್ತೇನೆ ಮತ್ತು ಭದ್ರತಾ ಪಡೆಗಳು ಈ ಚುನಾವಣೆಯನ್ನು ನಡೆಸಿವೆ. ಎಲ್ಲ ಪಕ್ಷಗಳ ಆದರ್ಶ ಉದ್ದೇಶಗಳೊಂದಿಗೆ ಈ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳ ಬಗ್ಗೆ ಕೇಳುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ ಮತ್ತ ಪ್ರಜಾಪ್ರಭುತ್ವದ ಶಕ್ತಿ ಮತ್ತಷ್ಟು ಬಲವರ್ಧನೆಯಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ. ಅದಕ್ಕಾಗಿ ನಾನು ಆಡಳಿತ ಮತ್ತು ಭದ್ರತಾ ಪಡೆಗಳನ್ನು ಅಭಿನಂದಿಸುತ್ತೇನೆ. ನೀವು ಸಣ್ಣ ಕೆಲಸವನ್ನು ಮಾಡಿಲ್ಲ, ಅತ್ಯಂತ ದೊಡ್ಡ ಕೆಲಸವನ್ನು ಮಾಡಿದ್ದೀರಿ. ನಾನು ಇಂದು ನಿಮ್ಮೊಡನೆ ಮುಖಾಮುಖಿಯಾಗಬೇಕಿತ್ತು. ನಿಮ್ಮ ಕಾರ್ಯವನ್ನು ಶ್ಲಾಘಿಸುತ್ತಿರುವ ಪದಗಳು ಅತ್ಯಲ್ಪ. ನೀವು ಅತ್ಯಂತ ಶ್ರೇಷ್ಠ ಕೆಲಸ ಮಾಡಿದ್ದೀರಿ. ನೀವು ದೇಶದಲ್ಲಿ ಹೊಸ ವಿಶ್ವಾಸವನ್ನು ಸೃಷ್ಟಿಸಿದ್ದೀರಿ ಮತ್ತು ಅದರ ಇಡೀ ಶ್ರೇಯಸ್ಸು ಮನೋಜ್ ಜಿ ಮತ್ತು ಅವರ ಸರ್ಕಾರ ಹಾಗೂ ಆಡಳಿತದ ಎಲ್ಲ ಜನರಿಗೆ ಸಲ್ಲಬೇಕು. ಭಾರದಲ್ಲಿ ಇದು ಹೆಮ್ಮೆಯ ಕ್ಷಣವಾಗಿದೆ.
ಮಿತ್ರರೇ,
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆ ಇದೆ. ಒಂದು ರೀತಿಯಲ್ಲಿ ಅದು ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸಾಗಿದೆ. ಒಂದು ರೀತಿಯಲ್ಲಿ ಈ ಚುನಾವಣೆಗಳು ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕನಸನ್ನು ನನಸಾಗಿಸಿವೆ ಮತ್ತು ಇಂದು ಜಮ್ಮು ಮತ್ತು ಕಾಶ್ಮೀರದ ನೆಲದಲ್ಲಿ ದೇಶದ ಪಂಚಾಯತ್ ರಾಜ್ ವ್ಯವಸ್ಥೆ ಪರಿಪೂರ್ಣತೆಯನ್ನು ಸಾಧಿಸಿದೆ. ಇದು ಹೊಸ ಶತಮಾನದಲ್ಲಿ, ಹೊಸ ಯುಗದಲ್ಲಿ ನಾಯಕತ್ವದ ಆರಂಭವಾಗಿದೆ. ಕೆಲವು ವರ್ಷಗಳಿಂದೀಚೆಗೆ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಬಲವರ್ಧನೆಗೊಳಿಸಲು ಮತ್ತು ಪ್ರಜಾಸತ್ತೆಯ ಸಂಸ್ಥೆಗಳ ಬಲವರ್ಧನೆಗೆ ಹಗಲು ರಾತ್ರಿ ಪ್ರಯತ್ನಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಸಹೋದರ ಸಹೋದರಿಯರಿಗೆ ನಾವು ಜಮ್ಮು ಮತ್ತು ಕಾಶ್ಮೀರದ ಸರ್ಕಾರದ ಭಾಗವಾಗಿದ್ದೇವೆ ಎಂಬುದನ್ನು ತಿಳಿದುಕೊಂಡಿರುವ ಕಾಲ ಇದಾಗಿದೆ. ನಾವು ನಮ್ಮ ಉಪಮುಖ್ಯಮಂತ್ರಿಗಳಿದ್ದರು, ಮಂತ್ರಿಗಳಿದ್ದರು, ಆದರೆ ಅಧಿಕಾರದ ಆನಂದವನ್ನು ತ್ಯಜಿಸಿದ್ದೇವೆ. ನಾವು ಸರ್ಕಾರದಿಂದ ಹೊರ ಬಂದೆವು. ನಾವು ಯಾವ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದಿಂದ ಹೊರ ಬಂದೆವು ಎಂಬುದು ನಿಮಗೆ ತಿಳಿದಿದೆ. ಮತ್ತೊಂದು ವಿಚಾರವೆಂದರೆ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಬಯಸಿದ್ದೆವು ಮತ್ತು ಜಮ್ಮು ಮತ್ತು ಕಾಶ್ಮೀರದ ಗ್ರಾಮಗಳಲ್ಲಿ ಜನರಿಗೆ ಹಕ್ಕುಗಳನ್ನು ನೀಡುವುದಾಗಿತ್ತು. ಅವರಿಗೆ ತಮ್ಮ ಗ್ರಾಮಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲು ಶಕ್ತಿ ನೀಡಲು ಬಯಸಿದ್ದೆವು. ಈ ವಿಚಾರದಲ್ಲಿ ನಾವು ಸರ್ಕಾರವನ್ನು ಬಿಟ್ಟೆವು ಮತ್ತು ನಿಮ್ಮೊಂದಿಗೆ ನಾವು ಬೀದಿಗಿಳಿದೆವು ಮತ್ತು ಇಂದು ಬ್ಲಾಕ್ ಪಂಚಾಯತ್ ಅಥವಾ ಜಿಲ್ಲಾ ಮಟ್ಟದಲ್ಲಿ ಬಹುತೇಕ ಮಂದಿ ನೀವು ಆಯ್ಕೆಯಾಗಿದ್ದೀರಿ ಮತ್ತು ನೀವೆಲ್ಲಾ ಚುನಾವಣೆಗಳಲ್ಲಿ ಜಯಗಳಿಸಿದ್ದೀರಿ ಎಂಬುದು ನನಗೆ ಸಂತಸ ತಂದಿದೆ. ನೀವು ಎದುರಿಸಿದಂತೆ ಅವರೂ ಕೂಡ ಕಷ್ಟಗಳನ್ನು ಎದುರಿಸಿದ್ದಾರೆ. ನಿಮ್ಮ ಆನಂದ, ದುಃಖ, ಕನಸುಗಳು, ಭರವಸೆಗಳು ಸಂಪೂರ್ಣವಾಗಿ ಅವರ ಸಂತೋಷ, ದುಃಖ, ಕನಸುಗಳು ಮತ್ತು ನಿರೀಕ್ಷೆಗಳಲ್ಲಿ ಸೇರಿ ಹೋಗುವಂತಹವು. ಇವೆರೆಲ್ಲರೂ ನಿಮ್ಮ ಆಶೀರ್ವಾದವನ್ನು ಪಡೆದಿದ್ದು ತಮ್ಮ ಹೆಸರಿನ ಬಲದಿಂದ ಅಲ್ಲ, ಅವರ ಕೆಲಸದ ಸಾಮರ್ಥ್ಯದಿಂದಾಗಿ ಮತ್ತು ಇಂದು ನೀವು ಅವರಿಗೆ ನಿಮ್ಮನ್ನು ಪ್ರತಿನಿಧಿಸುವ ಹಕ್ಕನ್ನು ನೀಡಿದ್ದೀರಿ. ಇಂದು ನೀವು ಆಯ್ಕೆ ಮಾಡಿರುವ ಯುವಜನಾಂಗ ನಿಮ್ಮ ಜೊತೆ ಕಾರ್ಯ ನಿರ್ವಹಿಸಲಿದ್ದಾರೆ ಮತ್ತು ನಿಮಗಾಗಿ ಕೆಲಸ ಮಾಡಲಿದ್ದಾರೆ. ಹಾಗಾಗಿ ನಾನು ಆಯ್ಕೆಯಾಗಿರುವ ಎಲ್ಲರನ್ನು ಅಭಿನಂದಿಸುತ್ತೇನೆ ಮತ್ತು ಈ ಬಾರಿ ಆಯ್ಕೆಯಾಗದವರನ್ನೂ ಸಹ ಅಭಿನಂದಿಸುತ್ತೇನೆ ಮತ್ತು ನೀವು ಯಾವುದೇ ಕಾರಣಕ್ಕೂ ನಿರುತ್ಸಾಹಗೊಳ್ಳಬೇಕಿಲ್ಲ. ನೀವು ಜನತೆಯ ಸೇವೆ ಮಾಡುವುದನ್ನು ಮುಂದುವರಿಸಿ. ಇಂದಲ್ಲದಿದ್ದರೆ ನಾಳೆ ನಿಮ್ಮ ಭವಿಷ್ಯದಲ್ಲಿ ಗೆಲುವು ಸಿಗಲಿದೆ, ಇದು ಪ್ರಜಾಪ್ರಭುತ್ವದಲ್ಲಿ ನಡೆಯುವಂತಹುದೇ. ಯಾರಿಗೆ ಅವಕಾಶ ಸಿಕ್ಕಿದೆಯೋ ಅವರು ಸೇವೆ ಸಲ್ಲಿಸಬೇಕು ಮತ್ತು ಯಾರಿಗೆ ಅವಕಾಶ ಸಿಕ್ಕಿಲ್ಲವೋ ಅವರೂ ಕೂಡ ಸದಾ ಕ್ರಿಯಾಶೀಲರಾಗಿರಬೇಕು. ಅವರನ್ನು ನೀವು ನಿಮ್ಮ ಪ್ರಾಂತ್ಯದಲ್ಲಿ ಮತ್ತು ದೇಶಕ್ಕಾಗಿ ಭವಿಷ್ಯದಲ್ಲಿ ದೊಡ್ಡ ಪಾತ್ರಗಳನ್ನು ವಹಿಸಲು ಸಜ್ಜುಗೊಳಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿನ ಈ ಚುನಾವಣೆಗಳು ನಮ್ಮ ದೇಶದಲ್ಲಿ ಹೇಗೆ ಬಲಿಷ್ಠ ಪ್ರಜಾಪ್ರಭುತ್ವವಿದೆ ಎಂಬುದನ್ನು ಸಾಬೀತುಪಡಿಸಿವೆ. ಆದರೆ ಇಂದು ನಾನು ದೇಶದಲ್ಲಿನ ಮತ್ತೊಂದು ನೋವಿನ ಸಂಗತಿಯನ್ನು ಹೇಳಲು ಬಯಸುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದ ಪಂಚಾಯಿತಿ ಚುನಾವಣೆಗಳನ್ನು ಅತ್ಯಂತ ಶಾಂತಿಯುತವಾಗಿ ನಡೆಸಲಾಗಿದೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಒಂದು ವರ್ಷದೊಳಗೆ ಜನರಿಗೆ ಅವರ ಹಕ್ಕುಗಳನ್ನು ನೀಡಲಾಗಿದೆ. ಇದೀಗ ಈ ಚುನಾಯಿತ ಜನರು ತಮ್ಮ ಗ್ರಾಮಗಳು, ಜಿಲ್ಲೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ವಲಯಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಆದರೆ ದೆಹಲಿಯಲ್ಲಿನ ಕೆಲವು ಜನರು ಮೋದಿ ಅವರಿಗೆ ಪ್ರತಿ ದಿನ ಶಾಪ ಹಾಕುತ್ತಿದ್ದಾರೆ, ಟೀಕಿಸುತ್ತಿದ್ದಾರೆ ಮತ್ತು ಅವಮಾನಿಸುತ್ತಿದ್ದಾರೆ ಹಾಗೂ ಪ್ರತಿ ದಿನ ಪ್ರಜಾಪ್ರಭುತ್ವದ ಹೊಸ ಪಾಠಗಳನ್ನು ಕಲಿಸುತ್ತಿದ್ದಾರೆ. ನಾನು ಅವರಿಗೆ ಕನ್ನಡಿಯನ್ನು ತೋರಿಸಲು ಬಯಸುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಕಡೆ ನೋಡಿ, ಕೇಂದ್ರಾಡಳಿತ ಪ್ರದೇಶವಾದ ಅತ್ಯಲ್ಪ ಅವಧಿಯಲ್ಲಿಯೇ ಅವರು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಮುಂದುವರಿದರು. ಅವರಿಗೆ ವಿಚಿತ್ರವೆಂದರೆ ಮತ್ತೊಂದೆಡೆ ಸುಪ್ರೀಂಕೋರ್ಟ್ ನ ಆದೇಶದ ಹೊರತಾಗಿಯೂ ಪುದುಚೆರಿಯಲ್ಲಿ ಪಂಚಾಯಿತಿ ಮತ್ತು ಮುನಿಸಿಪಲ್ ಚುನಾವಣೆಗಳು ನಡೆದಿಲ್ಲ. ಪ್ರತಿ ದಿನ ನಮಗೆ ಪ್ರಜಾಪ್ರಭುತ್ವದ ಬಗ್ಗ ಬೋಧಿಸುವವರ ಆ ಪಕ್ಷವೇ ಅಲ್ಲಿ ಅಧಿಕಾರದಲ್ಲಿದೆ. ನಿಮಗೆ ಆಶ್ಚರ್ಯವಾಗಬಹುದು ಸುಪ್ರೀಂಕೋರ್ಟ್ 2018ರಲ್ಲೇ ಚುನಾವಣೆ ನಡೆಸಬೇಕೆನ್ನುವ ಆದೇಶವನ್ನು ನೀಡಿದೆ. ಆದರೆ ಅಲ್ಲಿರುವ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಯಾವುದೇ ನಂಬಿಕೆ ಇಲ್ಲ ಮತ್ತು ನಿರಂತರವಾಗಿ ಅದು ಚುನಾವಣೆಯನ್ನು ತಪ್ಪಿಸುತ್ತಿದೆ.
ಮಿತ್ರರೇ,
ದಶಕಗಳ ಕಾಯುವಿಕೆ ನಂತರ ಪುದುಚೆರಿಯಲ್ಲಿ 2006ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿದ್ದವು. ಅಲ್ಲಿನ ಚುನಾಯಿತ ಪ್ರತಿನಿಧಿಗಳ ಅವಧಿ 2011ಕ್ಕೆ ಮುಕ್ತಾಯಗೊಂಡಿತ್ತು. ಇದು ಕೆಲವು ರಾಜಕೀಯ ಪಕ್ಷಗಳ ಕ್ರಿಯೆ ಮತ್ತು ಮಾತುಗಳ ನಡುವೆ ಬಹುದೊಡ್ಡ ವ್ಯತ್ಯಾಸವಿರುವುದನ್ನು ತೋರುತ್ತದೆ ಮತ್ತು ಅವರು ಪ್ರಜಾಪ್ರಭುತ್ವದ ಬಗ್ಗೆ ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ತೋರುತ್ತದೆ. ಪುದುಚೆರಿಯಲ್ಲಿ ಪಂಚಾಯಿತಿ ಚುನಾವಣೆಗಳಿಗೆ ಅವಕಾಶ ನೀಡದಿರುವುದನ್ನು ನಾವು ಹಲವು ವರ್ಷಗಳಿಂದ ಗಮನಿಸಿದ್ದೇವೆ.
ಸಹೋದರ ಮತ್ತು ಸಹೋದರಿಯರೇ,
ಕೇಂದ್ರ ಸರ್ಕಾರ ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮಗಳ ಜನರು ಬಹುದೊಡ್ಡ ಪಾತ್ರವನ್ನು ವಹಿಸುವಂತೆ ಮಾಡಬೇಕು ಎಂದು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಯೋಜನೆಗಳನ್ನು ರೂಪಿಸುವುದು ಮತ್ತು ಅನುಷ್ಠಾನದಲ್ಲಿ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಬಡವರ ಅಗತ್ಯತೆಗಳನ್ನು ಪೂರೈಸಲು ಪಂಚಾಯಿತಿಗಳಿಗೆ ಎಷ್ಟು ಜವಾಬ್ದಾರಿಯನ್ನು ವಹಿಸಲಾಗಿದೆ ಎಂಬುದನ್ನು ನೀವು ಇದೀಗ ಕಾಣಬಹುದು. ಅದರ ಪ್ರಯೋಜನವನ್ನು ಜಮ್ಮು ಮತ್ತು ಕಾಶ್ಮೀರದಲ್ಲೂ ಸಹ ನೋಡಬಹುದು. ವಿದ್ಯುತ್, ಜಮ್ಮು ಮತ್ತು ಕಾಶ್ಮೀರದ ಎಲ್ಲ ಗ್ರಾಮಗಳನ್ನು ತಲುಪಿದೆ. ಗ್ರಾಮಗಳು ಇಂದು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಮನೋಜ್ ಜಿ ಅವರ ನಾಯಕತ್ವದಲ್ಲಿ ಇಡೀ ಆಡಳಿತ ಹಲವು ಕಷ್ಟಗಳ ನಡುವೆಯೂ ಗ್ರಾಮಗಳಲ್ಲಿ ರಸ್ತೆಗಳ ನಿರ್ಮಾಣ ಕಾರ್ಯವನ್ನು ಅತ್ಯಂತ ಚುರುಕುಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಮುಂದಿನ ಎರಡು-ಮೂರು ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಮನೆಗೂ ಕೊಳವೆ ಮಾರ್ಗದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಪ್ರಯತ್ನಗಳು ನಡೆದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಆಡಳಿತ ಬಲವರ್ಧನೆಯಿಂದಾಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತಷ್ಟು ಒತ್ತು ಸಿಗಲಿದೆ.
ಮಿತ್ರರೇ,
ಇಂದು ಜಮ್ಮು ಮತ್ತು ಕಾಶ್ಮೀರದ ಜನರ ಅಭಿವೃದ್ಧಿ ನಮ್ಮ ಸರ್ಕಾರದ ಅಗ್ರ ಆದ್ಯತೆಗಳಲ್ಲಿ ಒಂದಾಗಿದೆ. ನಮ್ಮ ಸರ್ಕಾರ ಅದು ಮಹಿಳಾ ಸಬಲೀಕರಣವಾಗಿರಬಹುದು, ಯುವಜನತೆಗೆ ಅವಕಾಶಗಳನ್ನು ಸೃಷ್ಟಿಸುವುದ್ದಾಗಿರಬಹುದು. ದಲಿತರು, ಸಂತ್ರಸ್ತರು ಮತ್ತು ಶೋಷಿತರಿಗೆ ಕಲ್ಯಾಣ ಗುರಿಗಳನ್ನು ಸಾಧಿಸುವುದ್ದಾಗಿರಬಹುದು ಅಥವಾ ಜನರಿಗೆ ಸಾಂವಿಧಾನಿಕ ಹಾಗೂ ಮೂಲ ಹಕ್ಕುಗಳನ್ನು ದೊರಕಿಸಿ ಕೊಡುವುದಾಗಿರಬಹುದು. ಈ ಎಲ್ಲ ವಿಚಾರಗಳಲ್ಲಿ ರಾಜ್ಯದ ಅಭ್ಯುದಯಕ್ಕಾಗಿ ಪ್ರತಿಯೊಂದು ನಿರ್ಧಾರಗಳನ್ನು ನಮ್ಮ ಸರ್ಕಾರ ಕೈಗೊಳ್ಳುತ್ತಿದೆ. ಇಂದು ಪಂಚಾಯತ್ ರಾಜ್ ನಂತಹ ಪ್ರಜಾಪ್ರಭುತ್ವ ಸಂಸ್ಥೆಗಳು ಭರವಸೆಯ ಈ ಸಕಾರಾತ್ಮಕ ಸಂದೇಶಗಳನ್ನು ಹರಡುತ್ತಿದೆ. ಇಂದು ಬದಲಾವಣೆ ಸಾಧ್ಯ ಎಂದು ನಾವು ಜನರಲ್ಲಿ ವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಈ ಬದಲಾವಣೆಗಳನ್ನು ಅವರು ಆಯ್ಕೆ ಮಾಡಿರುವ ಪ್ರತಿನಿಧಿಗಳಿಂದಲೇ ತರಲಾಗುತ್ತಿದೆ. ತಳಮಟ್ಟದಲ್ಲಿ ನಾವು ಪ್ರಜಾಪ್ರಭುತ್ವವನ್ನು ಪರಿಚಯಿಸುವುದರೊಂದಿಗೆ ಜನರ ಆಶೋತ್ತರಗಳ ಈಡೇರಿಕೆಗೆ ಅವಕಾಶಗಳನ್ನು ಒದಗಿಸುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನದೇ ಆದ ಶ್ರೇಷ್ಠ ಪರಂಪರೆ ಇದೆ ಮತ್ತು ಅಲ್ಲಿನ ವಿಶಿಷ್ಟ ಜನರು ತಮ್ಮದೇ ಆದ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ಪ್ರಾಂತ್ಯದ ಬಲವರ್ಧನೆಗೆ ಹೊಸ ಮಾರ್ಗಗಳ ಸಲಹೆಗಳನ್ನು ನೀಡುತ್ತಿದ್ದಾರೆ ಎಂದರು.
ಮಿತ್ರರೇ,
ರಾವಿ, ಬಿಯಾಸ್ ಮತ್ತು ಸಟ್ಲೆಜ್ ಗೂ ಮುನ್ನ ಹಲವು ಉಪ ನದಿಗಳು ಜೀಲಮ್ ನದಿಯೊಂದಿಗೆ ಸೇರುತ್ತಿದ್ದವು, ಅದನ್ನು ಜಮ್ಮು ಮತ್ತು ಕಾಶ್ಮೀರದ ಜೀವನಾಡಿ ಎಂದು ಕರೆಯಲಾಗುತ್ತದೆ. ನಂತರ ಈ ಎಲ್ಲ ನದಿಗಳು ಸಿಂಧೂ ನದಿಯಲ್ಲಿ ಸೇರಿಕೊಂಡವು. ಸಿಂಧೂ ನದಿ ನಮ್ಮ ನಾಗರಿಕತೆ, ನಮ್ಮ ಪರಂಪರೆ ಮತ್ತು ಅಭಿವೃದ್ಧಿ ಪಯಣದ ಸಮಾನಾರ್ಥಕವಾಗಿದೆ. ಅಂತೆಯೇ ಅಭಿವೃದ್ಧಿಯ ಕ್ರಾಂತಿ, ಉಪನದಿಗಳು ಮತ್ತು ನದಿಗಳಂತೆ, ಒಂದು ದೊಡ್ಡ ತತ್ವದೊಂದಿಗೆ ಹಲವು ಆದರ್ಶಗಳು ಹುಟ್ಟಿಕೊಂಡವು. ಈ ಚಿಂತನೆಯೊಂದಿಗೆ ನಾವು ಆರೋಗ್ಯ ವಲಯದಲ್ಲೂ ಸಹ ಬದಲಾವಣೆಗಳನ್ನು ತರಲು ಬಯಸಿದ್ದೇವೆ. ನಮ್ಮ ಸರ್ಕಾರ ಆರೋಗ್ಯ ವಲಯದಲ್ಲಿ ಕ್ರಾಂತಿಯನ್ನು ತರಲು ಅದೇ ಉದ್ದೇಶದೊಂದಿಗೆ ಹಲವು ಸಣ್ಣ ವಿಭಾಗಗಳೂ ಸೇರಿದಂತೆ ಪ್ರತಿಯೊಬ್ಬರಿಗೂ ಅನುಕೂಲವಾಗುವ ಹಲವು ಯೋಜನೆಗಳನ್ನು ಆರಂಭಿಸಿದೆ. ನಾವು ಉಜ್ವಲ ಯೋಜನೆ ಅಡಿ ದೇಶದ ಸಹೋದರ ಮತ್ತು ಸಹೋದರಿಯರಿಗೆ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಿದ್ದೇವೆ. ಇದನ್ನು ಕೇವಲ ಇಂಧನ ಮಾತ್ರ ಒದಗಿಸಬೇಕು ಎಂಬ ಉದ್ದೇಶದಿಂದ ಮಾಡಿದ ಯೋಜನೆ ಅಲ್ಲ. ನಾವು ನಮ್ಮ ಸಹೋದರಿಯರನ್ನು ಹೊಗೆಯಿಂದ ಮುಕ್ತಗೊಳಿಸಬೇಕು ಮತ್ತು ಇಡೀ ಕುಟುಂಬದ ಆರೋಗ್ಯ ಸುಧಾರಿಸಬೇಕು ಎಂದು ಜಾರಿಗೊಳಿಸಲಾಗಿದೆ. ಸಾಂಕ್ರಾಮಿಕದ ಸಮಯದಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ 18 ಲಕ್ಷ ಅನಿಲ ಸಿಲಿಂಡರ್ ಗಳನ್ನು ರಿಫಿಲ್ ಮಾಡಲಾಗಿದೆ. ಅಂತೆಯೇ ನೀವು ಉದಾಹರಣೆಯಾಗಿ ಸ್ವಚ್ಛ ಭಾರತ ಯೋಜನೆಯನ್ನು ತೆಗೆದುಕೊಳ್ಳಿ, ಈ ಅಭಿಯಾನದಡಿ ಜಮ್ಮು ಮತ್ತು ಕಾಶ್ಮೀರದಲ್ಲಿ 10 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಮ್ಮ ಗುರಿ ಕೇವಲ ಶೌಚಾಲಯಗಳನ್ನು ನಿರ್ಮಾಣ ಮಾಡುವುದು ಮಾತ್ರವಲ್ಲ, ಜನರ ಆರೋಗ್ಯ ಸುಧಾರಿಸುವ ಪ್ರಯತ್ನವಾಗಿದೆ. ಶೌಚಾಲಯಗಳ ಮೂಲಕ ಶುಚಿತ್ವ ಕಾಯ್ದುಕೊಳ್ಳುತ್ತಿರುವುದರಿಂದ ಹಲವು ಬಗೆಯ ರೋಗಗಳನ್ನು ನಿಯಂತ್ರಿಸಲಾಗಿದೆ. ಇದರ ಅದರ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಆಯುಷ್ಮಾನ್ ಭಾರತ ಸೇಹತ್ ಯೋಜನೆಯನ್ನು ಇಂದು ಆರಂಭಿಸಲಾಗುತ್ತಿದೆ. ನೀವೆ ಯೋಚಿಸಿ ಈ ಯೋಜನೆ ಅಡಿ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಪಡೆಯುವಂತಾದರೆ ಅವರ ಜೀವನ ಎಷ್ಟು ಸುಲಭವಾಗುತ್ತದೆ ಎಂದು. ಈವರೆಗೆ ಆಯುಷ್ಮಾನ್ ಭಾರತ್ ಯೋಜನೆ ಅಡಿ ರಾಜ್ಯದಲ್ಲಿನ ಸುಮಾರು 6 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿವೆ. ಇದೀಗ ಸೇಹತ್ ಯೋಜನೆಯಿಂದ ಅದೇ ಪ್ರಯೋಜನ ಸುಮಾರು 21 ಲಕ್ಷ ಕುಟುಂಬಗಳಿಗೆ ದೊರಕಲಿದೆ.
ಮಿತ್ರರೇ,
ಕಳೆದ ಎರಡು ವರ್ಷಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಿಂದ ಸುಮಾರು 1.5 ಕೋಟಿಗೂ ಅಧಿಕ ಜನರಿಗೆ ಪ್ರಯೋಜನವಾಗಿದೆ. ಸಂಕಷ್ಟದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇದು ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಸುಮಾರು ಒಂದು ಲಕ್ಷ ಬಡ ರೋಗಿಗಳು ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆದಿರುವ ಬಹುತೇಕ ಮಂದಿ ಕ್ಯಾನ್ಸರ್, ಹೃದ್ರೋಗ ಮತ್ತು ಮೂಳೆಗೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಕೆಲವು ಬಡವರು ಚಿಕಿತ್ಸೆಗೆ ಹಣ ಹೊಂದಿಸಲು ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದರು. ಬಡ ಕುಟುಂಬಗಳು ಹೇಗೆ ಸಮಾಜದಲ್ಲಿ ಸ್ವಲ್ಪವಾದರೂ ಮುಂದೆ ಬರಬೇಕು ಎಂದು ಶ್ರಮ ವಹಿಸುತ್ತಿರುವುದನ್ನು ಅಥವಾ ಮಧ್ಯಮ ವರ್ಗದ ಕುಟುಂಬಗಳು ಮೇಲೇರಬೇಕು, ಕುಟುಂಬದಲ್ಲಿ ರೋಗಗಳಿದ್ದರೆ ಅಂತಹ ಕುಟುಂಬ ಮತ್ತೆ ಬಡತನರೇಖೆಗೆ ಸಿಲುಕದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸಹೋದರ ಮತ್ತು ಸಹೋದರಿಯರೇ,
ಜಮ್ಮು ಮತ್ತು ಕಾಶ್ಮೀರದ ಕಣಿವೆಗಳಲ್ಲಿನ ಗಾಳಿ ಅತ್ಯಂತ ಶುದ್ಧವಾಗಿದೆ. ಇಲ್ಲಿ ಮಾಲಿನ್ಯ ಕಡಿಮೆ ಇದೆ ಮತ್ತು ಪ್ರತಿಯೊಬ್ಬರಿಗೂ ಇದು ಬೇಕಾಗಿದೆ ಮತ್ತು ನೀವು ಸದಾ ಆರೋಗ್ಯದಿಂದ ಇರಬೇಕು ಎಂದು ನಾನು ಬಯಸುತ್ತೇನೆ ಮತ್ತು ನಾನು ಆಯುಷ್ಮಾನ್ ಭಾರತ್ – ಸೇಹತ್ ಯೋಜನೆಯ ಮೂಲಕ ನಿಮಗೆ ನೀವು ಚಾಂಪಿಯನ್ ಆಗಬೇಕು ಎಂದು ನೀವು ಬಯಸುತ್ತೇನೆ ಮತ್ತು ಇದು ನನಗೆ ತೃಪ್ತಿಯಾಗುತ್ತಿದೆ.
ಮಿತ್ರರೇ,
ಈ ಯೋಜನೆಯಿಂದ ಮತ್ತೊಂದು ಲಾಭವಿದೆ. ಅದರ ಬಗ್ಗೆ ಮತ್ತೆ ಮತ್ತೆ ಹೇಳುವ ಅಗತ್ಯವಿದೆ. ನಿಮ್ಮ ಚಿಕಿತ್ಸೆ ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿಲ್ಲ. ದೇಶದಲ್ಲಿಯೂ ಈ ಸೌಕರ್ಯ ನಿಮಗೆ ಲಭ್ಯವಾಗಲಿದ್ದು, ಸಹಸ್ರಾರು ಆಸ್ಪತ್ರೆಗಳು ಈ ಯೋಜನೆ ಅಡಿ ಸಂಯೋಜನೆಗೊಂಡಿವೆ. ನೀವೆ ಊಹಿಸಿಕೊಳ್ಳಿ ನೀವು ಮುಂಬೈಗೆ ಹೋಗಿರುತ್ತೀರಿ ಮತ್ತು ಇದ್ದಕ್ಕಿದ್ದಂತೆ ಅಲ್ಲಿ ಈ ಕಾರ್ಡ್ ನಿಮ್ಮ ನೆರವಿಗೆ ಬರುತ್ತದೆ. ನೀವು ಚೆನ್ನೈಗೆ ಹೋಗಿದ್ದರೆ ಅಲ್ಲೂ ಸಹ ಇದು ನಿಮಗೆ ಸಹಕಾರಿಯಾಗಲಿದ್ದು, ಅಲ್ಲಿನ ಆಸ್ಪತ್ರೆ ನಿಮಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತದೆ. ನೀವು ಒಂದು ವೇಳೆ ಕೋಲ್ಕತ್ತಾಕ್ಕೆ ಹೋಗಿದ್ದರೆ ಅಲ್ಲಿ ನಿಮಗೆ ಚಿಕಿತ್ಸೆ ಸಿಗದೆ ತೊಂದರೆಯಾಗುತ್ತದೆ. ಏಕೆಂದರೆ ಅಲ್ಲಿನ ಸರ್ಕಾರ ಆಯುಷ್ಮಾನ್ ಯೋಜನೆಯ ಭಾಗವಾಗಿಲ್ಲ. ಕೆಲವು ಜನರು ಹಾಗೆಯೇ ಇರುತ್ತಾರೆ, ಅದಕ್ಕೆ ಏನು ಮಾಡುವುದು. ದೇಶಾದ್ಯಂತ 24,000ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ನೀವು ಸೇಹತ್ ಯೋಜನೆ ಅಡಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಯಾವುದೇ ನಿರ್ಬಂಧವಿಲ್ಲ, ಯಾವುದೇ ಅಡೆತಡೆ ಇಲ್ಲ, ಯಾರಿಗೂ ನೀವು ಕಮಿಷನ್ ನೀಡಬೇಕಾಗಿಲ್ಲ ಮತ್ತು ಯಾವುದೇ ಕಡಿತ, ಯಾವುದೇ ಶಿಫಾರಸ್ಸು, ಯಾವುದೇ ಭ್ರಷ್ಟಾಚಾರ ಇರುವುದಿಲ್ಲ. ನೀವು ಸೇಹತ್ ಯೋಜನೆಯ ಕಾರ್ಡ್ ಅನ್ನು ತೋರಿಸಿ ಎಲ್ಲಿ ಬೇಕಾದರೂ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಮಿತ್ರರೇ,
ಜಮ್ಮು ಮತ್ತು ಕಾಶ್ಮೀರ ಇದೀಗ ದೇಶದ ಜೊತೆ ಜೊತೆಗೆ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಕೊರೊನಾಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕೈಗೊಂಡಿರುವ ಕಾರ್ಯ ಶ್ಲಾಘನೀಯ. 3,000ಕ್ಕೂ ಅಧಿಕ ವೈದ್ಯರು, 14,000ಕ್ಕೂ ಅಧಿಕ ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಅತ್ಯಲ್ಪ ಅವಧಿಯಲ್ಲಿಯೇ ನೀವು ಕೊರೊನಾ ವಿರುದ್ಧದ ಹೋರಾಟಕ್ಕೆ ರಾಜ್ಯದಲ್ಲಿನ ಆಸ್ಪತ್ರೆಗಳನ್ನು ಸಜ್ಜುಗೊಳಿಸಿದ್ದೀರಿ. ಅಂತಹ ವ್ಯವಸ್ಥೆಗಳಿಂದಾಗಿ ನಾವು ಕೊರೊನಾದ ಹೆಚ್ಚು ಹೆಚ್ಚು ರೋಗಿಗಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಸಹೋದರ ಮತ್ತು ಸಹೋದರಿಯರೇ,
ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ವಲಯಕ್ಕೆ ಇಂದು ನೀಡಿರುವಷ್ಟು ಪ್ರಾಮುಖ್ಯತೆಯನ್ನು ಹಿಂದೆಂದೂ ನೀಡಿರಲಿಲ್ಲ. ಆಯುಷ್ಮಾನ್ ಭಾರತ್ ಯೋಜನೆ ಅಡಿ 1100ಕ್ಕೂ ಅಧಿಕ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ರಾಜ್ಯದಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ. ಆ ಪೈಕಿ ಸುಮಾರು 800ಕ್ಕೂ ಅಧಿಕ ಕೇಂದ್ರಗಳ ಆರಂಭಕ್ಕೆ ಕಾರ್ಯ ಪೂರ್ಣಗೊಂಡಿದೆ. ಅತಿ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಒದಗಿಸುವ ಮತ್ತು ಉಚಿತ ಡಯಾಲಿಸಿಸ್ ಸೌಕರ್ಯದಿಂದ ಸಹಸ್ರಾರು ಜನರಿಗೆ ಪ್ರಯೋಜನವಾಗಿದೆ. ಜಮ್ಮು ಮತ್ತು ಶ್ರೀನಗರ ವಲಯದಲ್ಲಿ ಎರಡು ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಎರಡು ಏಮ್ಸ್ ಗಳನ್ನು ಸ್ಥಾಪಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗಿದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಶಿಕ್ಷಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಕಾರ್ಯ ಪ್ರಗತಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಏಳು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ, ಇದರಿಂದ ಎಂಬಿಬಿಎಸ್ ಸೀಟುಗಳ ಸಂಖ್ಯೆ ಎರಡು ಪಟ್ಟು ಅಧಿಕವಾಗಲಿದೆ. ಅಲ್ಲದೆ ಹೆಚ್ಚುವರಿಯಾಗಿ 15 ಹೊಸ ನರ್ಸಿಂಗ್ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ಯುವ ಜನಾಂಗಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಇದಲ್ಲದೆ ಜಮ್ಮುವಿನಲ್ಲಿ ಐಐಟಿ ಮತ್ತು ಐಐಎಂ ಸ್ಥಾಪನೆಯಿಂದ ಯುವಕರಿಗೆ ಉನ್ನತ ಶಿಕ್ಷಣದಲ್ಲಿ ಉತ್ತಮ ಅವಕಾಶಗಳು ದೊರಕಲಿವೆ. ರಾಜ್ಯದಲ್ಲಿ ಕ್ರೀಡಾ ಸೌಕರ್ಯಗಳ ವೃದ್ಧಿಗೆ ಕೈಗೊಂಡಿರುವ ಯೋಜನೆಗಳಿಂದಾಗಿ ಕ್ರೀಡಾ ಜಗತ್ತಿನಲ್ಲಿ ಸ್ಥಳೀಯ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯಕವಾಗಲಿದೆ.
ಸಹೋದರ ಮತ್ತು ಸಹೋದರಿಯರೇ,
ಆರೋಗ್ಯದ ಜೊತೆಗೆ ಹೊಸ ಜಮ್ಮು ಮತ್ತು ಕಾಶ್ಮೀರ ಇತರೆ ಮೂಲಸೌಕರ್ಯ ವಲಯದಲ್ಲೂ ಸಹ ಕ್ಷಿಪ್ರವಾಗಿ ಮುನ್ನಡೆಯುತ್ತಿದೆ. ಜಲವಿದ್ಯುತ್ ಇದಕ್ಕೊಂದು ಉತ್ತಮ ಉದಾಹರಣೆಯಾಗಿದ್ದು, ಕಳೆದ ಎರಡು-ಮೂರು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಒತ್ತು ನೀಡಲಾಗಿದೆ. ಕಳೆದ ಏಳು ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಧನ ಉತ್ಪಾದನಾ ಸಾಮರ್ಥ್ಯ 3,500 ಮೆಗಾವ್ಯಾಟ್ ಇತ್ತು. ಕಳೆದ 2-3 ವರ್ಷಗಳಲ್ಲಿ 3000 ಮೆಗಾವ್ಯಾಟ್ ಗೂ ಅಧಿಕ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದ್ದೇವೆ. ಪ್ರಧಾನಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಕೈಗೊಂಡಿರುವ ಯೋಜನೆಗಳ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ. ವಿಶೇಷವಾಗಿ ಸಂಪರ್ಕ ಯೋಜನೆಗಳು ರಾಜ್ಯದ ಭವಿಷ್ಯ ಮತ್ತು ಚಿತ್ರಣ ಎರಡನ್ನೂ ಬದಲಾಯಿಸುತ್ತಿವೆ. ಚೆನಾಬ್ ನದಿಗೆ ಸುಂದರವಾದ ರೈಲ್ವೆ ಸೇತುವೆ ನಿರ್ಮಾಣದ ಚಿತ್ರಗಳನ್ನು ನಾನು ಗಮನಿಸಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ಬಹುಶಃ ದೇಶದ ಪ್ರತಿಯೊಬ್ಬರೂ ಅದನ್ನು ನೋಡಿರಬಹುದು. ಆ ಚಿತ್ರಣವನ್ನು ನೋಡಿದರೆ ಎಲ್ಲರೂ ಅತ್ಯಂತ ಹೆಮ್ಮೆಯಿಂದ ತಲೆಯೆತ್ತಿ ನಡೆಯುವಂತಾಗುತ್ತದೆ. ರೈಲ್ವೆ ಮುಂದಿನ ಎರಡು-ಮೂರು ವರ್ಷಗಳಲ್ಲಿ ಕಣಿವೆಗೆ ರೈಲು ಸಂಪರ್ಕ ಒದಗಿಸಲು ಸಜ್ಜಾಗಿದೆ. ಜಮ್ಮು ಮತ್ತು ಶ್ರೀನಗರದಲ್ಲಿ ಹಗುರ ರೈಲು ಸಂಚಾರ, ಮೆಟ್ರೋ ಯೋಜನೆ ಗಮನಾರ್ಹ ರೀತಿಯಲ್ಲಿ ಪ್ರಗತಿಯಲ್ಲಿದೆ. ಬನಿಹಾಲ್ ಸುರಂಗಮಾರ್ಗ ಮುಂದಿನ ವರ್ಷದ ವೇಳೆಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಅಲ್ಲದೆ ಜಮ್ಮುವಿನಲ್ಲಿ ಸೆಮಿ ವರ್ತುಲ ರಸ್ತೆಯ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ.
ಮಿತ್ರರೇ,
ಸಂಪರ್ಕ ಉತ್ತಮವಾದರೆ ಅದರಿಂದ ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳೆರಡಕ್ಕೂ ಭಾರೀ ಉತ್ತೇಜನ ದೊರಕಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಒಂದು ಪ್ರಮುಖ ಅಂಶವಾಗಿದೆ. ಸರ್ಕಾರ ಕೈಗೆತ್ತಿಕೊಂಡಿರುವ ಎಲ್ಲ ಸಂಪರ್ಕಕ್ಕೆ ಸಂಬಂಧಿಸಿದ ಯೋಜನೆಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಅನುಕೂಲವಾಗಲಿದೆ. ನೆಲಹಾಸಿನಿಂದ ಕೇಸರಿವರೆಗೆ, ಸೇಬುಗಳಿಂದ ಬಾಸುಮತಿವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಏನುಂಟು ಎಂದು ಕೇಳುವಂತಿಲ್ಲ. ಕೊರೊನಾದ ಲಾಕ್ ಡೌನ್ ಸಮಯದಲ್ಲೂ ಸಹ ಸೇಬು ಬೆಳೆಗಾರರಿಗೆ ಕನಿಷ್ಠ ತೊಂದರೆಗಳಾಗದಂತೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಸೂಕ್ತ ರೀತಿಯಲ್ಲಿ ಸಕಾಲದಲ್ಲಿ ಮಾರುಕಟ್ಟೆಗೆ ಸರಕುಗಳ ಆಗಮನವನ್ನು ಖಾತ್ರಿಪಡಿಸಲು ನಮ್ಮ ಸರ್ಕಾರ ಕೆಲವು ತಿಂಗಳ ಹಿಂದೆಯೇ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಮೂಲಕ ಕಳೆದ ವರ್ಷದಂತೆ ಈ ವರ್ಷವೂ ಸೇಬು ಖರೀದಿಯನ್ನು ಮುಂದುವರಿಸಲು ನಿರ್ಧರಿಸಿದೆ. ಇದರಡಿ ಸರ್ಕಾರ ನಾಫೆಡ್ ಮೂಲಕ ಮತ್ತು ರೈತರಿಂದ ನೇರವಾಗಿ ಸೇವುಗಳನ್ನು ಖರೀದಿಸಲಿದೆ. ರೈತರಿಂದ ಖರೀದಿಸುವ ಸೇಬುಗಳ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಆಗಲಿದೆ. ಈ ಯೋಜನೆ ಅಡಿ, 12 ಲಕ್ಷ ಮೆಟ್ರಿಕ್ ಟನ್ ಗೂ ಅಧಿಕ ಸೇಬುಗಳನ್ನು ಖರೀದಿಸಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಅತ್ಯಂತ ಪ್ರಮುಖ ಸೌಕರ್ಯವಾಗಿದೆ. ಅಲ್ಲದೆ ನಮ್ಮ ಸರ್ಕಾರ 2,500 ಕೋಟಿ ರೂ.ಗಳವರೆಗೆ ಸರ್ಕಾರಿ ಖಾತ್ರಿಯನ್ನು ಬಳಕೆ ಮಾಡಿಕೊಳ್ಳಲು ನಾಫೆಡ್ ಗೆ ಅನುಮೋದನೆ ನೀಡಿದೆ. ಸೇಬು ಖರೀದಿಗೆ ಆಧುನಿಕ ಮಾರುಕಟ್ಟೆ ವೇದಿಕೆಗಳನ್ನು ಖಾತ್ರಿಪಡಿಸಲು ಸಾರಿಗೆ ಸೌಕರ್ಯಗಳ ಹೆಚ್ಚಳ ಮಾಡುವಲ್ಲಿ ಸರ್ಕಾರ ಸ್ಥಿರ ಪ್ರಗತಿಯನ್ನು ಸಾಧಿಸುತ್ತಿದೆ. ಸೇಬು ದಾಸ್ತಾನಿಗೆ ಅವಕಾಶ ಒದಗಿಸಿ, ಸರ್ಕಾರದ ನೆರವು ನೀಡಿದ್ದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಆಡಳಿತ ಹೆಚ್ಚು ಹೆಚ್ಚು ಹೊಸ ರೈತರ ಉತ್ಪನ್ನ ಸಂಸ್ಥೆಗಳು(ಎಫ್ ಪಿಒ)ಗಳನ್ನು ಸ್ಥಾಪಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ಹೊಸ ಕೃಷಿ ಸುಧಾರಣೆಗಳು, ಆಹಾರ ಸಂಸ್ಕರಣಾ ಉದ್ಯಮದಲ್ಲಿ ಜಮ್ಮು ಮತ್ತು ಕಾಶ್ಮೀರ ಎರಡರಲ್ಲೂ ಹೊಸ ಅವಕಾಶವನ್ನು ಸೃಷ್ಟಿಸಿದೆ. ಇದರಿಂದಾಗಿ ಸಹಸ್ರಾರು ಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಸಹೋದರ ಮತ್ತು ಸಹೋದರಿಯರೇ
ಒಂದೆಡೆ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವಿರಾರು ಸರ್ಕಾರಿ ಉದ್ಯೋಗಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನೊಂದೆಡೆ ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಲು ವ್ಯವಸ್ಥೆಗಳನ್ನು ಸೃಷ್ಟಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಯುವ ಉದ್ಯಮಿಗಳಿಗೆ ಬ್ಯಾಂಕುಗಳು ಇದೀಗ ಸಾಲವನ್ನು ನೀಡಲಾರಂಭಿಸಿದೆ. ನಮ್ಮ ಸ್ವಸಹಾಯ ಗುಂಪುಗಳ ಜೊತೆ ಸಂಬಂಧ ಹೊಂದಿರುವ ನಮ್ಮ ಸಹೋದರಿಯರು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ.
ಮಿತ್ರರೇ,
ಹಿಂದೆ ದೇಶದಲ್ಲಿ ಯಾವುದೇ ಕಾನೂನುಗಳನ್ನು ಮತ್ತು ಯೋಜನೆಗಳನ್ನು ರೂಪಿಸಿದರೂ ಅವೆಲ್ಲಾ ಜಮ್ಮು ಮತ್ತು ಕಾಶ್ಮೀರವನ್ನು ಹೊರತಾಗಿದ್ದವು. ಇದೀಗ ಅದೆಲ್ಲಾ ಇತಿಹಾಸವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಪಥ ಸಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಹೊಸ ಅವಕಾಶಗಳು ತೆರೆದುಕೊಂಡಿವೆ. ಇಂದು ಜಮ್ಮು ಮತ್ತು ಕಾಶ್ಮೀರ ಕೂಡ ಸ್ವಾವಲಂಬಿ ಭಾರತ ಅಭಿಯಾನಕ್ಕೆ ನೆರವು ನೀಡುತ್ತಿದೆ. ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗದ 170ಕ್ಕೂ ಅಧಿಕ ಕೇಂದ್ರ ಕಾನೂನುಗಳು ಇದೀಗ ಆಡಳಿತದ ಭಾಗವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪ್ರಜೆಗಳಿಗೆ ಇದೀಗ ಹಕ್ಕುಗಳ ಅವಕಾಶ ಲಭ್ಯವಾಗಿದೆ.
ಮಿತ್ರರೇ,
ನಮ್ಮ ಸರ್ಕಾರದ ನಿರ್ಧಾರಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ವರ್ಗದ ಬಡವರಿಗೆ ಇದೇ ಮೊದಲ ಬಾರಿಗೆ ಮೀಸಲು ಸೌಲಭ್ಯ ದೊರಕುತ್ತಿದೆ. ಇದೇ ಮೊದಲ ಬಾರಿಗೆ ಗುಡ್ಡಗಾಡು ಪ್ರದೇಶದ ಜನರು ಮೀಸಲು ಅನುಕೂಲ ಪಡೆದಿದ್ದಾರೆ. ನಮ್ಮ ಸರ್ಕಾರ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ನೆಲೆಸಿರುವವರಿಗೆ ಶೇ.4ರಷ್ಟು ಮೀಸಲು ಸೌಲಭ್ಯದ ಪ್ರಯೋಜನವನ್ನು ಒದಗಿಸಿದೆ. ಅರಣ್ಯ ಕಾಯ್ದೆ ಜಾರಿಯಿಂದಾಗಿ ಜನರಿಗೆ ಹೊಸ ಹಕ್ಕುಗಳು ದೊರಕಿವೆ. ಗುಜ್ಜರ್, ಬಕರ್ ವಾಲಾಸ್, ಪರಿಶಿಷ್ಟ ಪಂಗಡ ಮತ್ತು ಸಾಂಪ್ರದಾಯಿಕವಾಗಿ ಅರಣ್ಯದ ಸುತ್ತಮುತ್ತ ನೆಲೆಸಿರುವವರಿಗೆ ಅರಣ್ಯದ ಭೂಮಿ ಬಳಕೆ ಮಾಡಲು ಕಾನೂನುಬದ್ಧ ಹಕ್ಕನ್ನು ನೀಡಲಾಗಿದೆ. ಇದೀಗ ಯಾವುದೇ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡಲು ಯಾವುದೇ ಅವಕಾಶ ಇರುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳಿಂದ ನೆಲೆಸಿರುವವರಿಗೆ ಸ್ಥಳೀಯ ನಿವಾಸಿ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ. ಇದು ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಸಂಕೇತವಾಗಿದೆ.
ಮಿತ್ರರೇ,
ಗಡಿಯಾಚೆಯಿಂದ ನಡೆಯುತ್ತಿರುವ ಗುಂಡಿನ ದಾಳಿ ಸದಾ ಆತಂಕದ ವಿಚಾರವಾಗಿದೆ. ಗಡಿಯಲ್ಲಿ ಬಂಕರ್ ಗಳ ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದ್ದು, ಇದರಿಂದ ಗುಂಡಿನ ದಾಳಿ ಸಮಸ್ಯೆ ನಿವಾರಣೆಯಾಗಲಿದೆ. ಸಾಂಬಾ, ಪೂಂಚ್, ಜಮ್ಮು, ಕತುವಾ ಮತ್ತು ರಜೌರಿಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಬಂಕರ್ ಗಳನ್ನಷ್ಟೇ ನಿರ್ಮಿಸಲಾಗುತ್ತಿಲ್ಲ. ಸೇನೆ ಮತ್ತು ಭದ್ರತಾ ಪಡೆಗಳಿಗೆ ನಾಗರಿಕರ ರಕ್ಷಣೆಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ.
ಮಿತ್ರರೇ,
ದಶಕಗಳ ಕಾಲ ನಮ್ಮನ್ನಾಳಿದವರು ದೊಡ್ಡ ತಪ್ಪುಗಳನ್ನು ಮಾಡಿದ್ದಾರೆ. ಅವರು ದೇಶದ ಗಡಿ ಪ್ರದೇಶಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅಂತಹ ಸರ್ಕಾರಗಳ ಮನೋಧೋರಣೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಅಥವಾ ಈಶಾನ್ಯ ಭಾಗದ ಪ್ರದೇಶಗಳು ಹಿಂದುಳಿದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೀವನಕ್ಕೆ ಮೂಲ ಅಗತ್ಯತೆಗಳಾದ ಗೌರವಯುತ ಬಾಳ್ವೆ ನಡೆಸುವುದು ಮತ್ತು ಅಭಿವೃದ್ಧಿಯ ಅಗತ್ಯತೆಗಳು ಎಷ್ಟು ಪ್ರಮಾಣದಲ್ಲಿ ತಲುಪಬೇಕಾಗಿತ್ತೋ ಅಷ್ಟು ಪ್ರಮಾಣದಲ್ಲಿ ಸಾಮಾನ್ಯ ಜನರಿಗೆ ತಲುಪಲಿಲ್ಲ. ಅಂತಹ ಮನೋಭಾವದಿಂದಾಗಿ ದೇಶದಲ್ಲಿ ಸಮತೋಲಿತ ಪ್ರಗತಿ ಕಾಣಲು ಎಂದಿಗೂ ಸಾಧ್ಯವಿಲ್ಲ. ಅಂತಹ ನಕಾರಾತ್ಮಕ ಆಲೋಚನೆಗಳಿಗೆ ನಮ್ಮಲ್ಲಿ ಎಂದಿಗೂ ಜಾಗವಿಲ್ಲ. ಅದು ಇಲ್ಲಿ ಆಗಿರಬಹುದು. ಅದು ಗಡಿ ಪ್ರದೇಶದ ಹತ್ತಿರವಾಗಿರಬಹುದು ಅಥವಾ ಗಡಿಯಿಂದ ದೂರವಾಗಿರಬಹುದು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಪ್ರದೇಶ ವಂಚಿತವಾಗಬಾರದು ಎಂಬುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಅಂತಹ ಪ್ರದೇಶಗಳ ಜನರು ಉತ್ತಮ ಜೀವನ ಸಾಗಿಸುವಂತಾದರೆ ಅದು ಭಾರತದ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಗೊಳಿಸಿದಂತಾಗುತ್ತದೆ.
ಮಿತ್ರರೇ,
ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಪ್ರತಿಯೊಂದು ಪ್ರದೇಶದ ಅಭಿವೃದ್ಧಿಗೆ ನಾವು ನಿರಂತರವಾಗಿ ಕಾರ್ಯ ನಿರ್ವಹಿಸಬೇಕಿದೆ. ಮತ್ತೊಮ್ಮೆ ನಾನು ಶ್ರೀ ಮನೋಜ್ ಸಿನ್ಹಾ ಜಿ ಮತ್ತು ಅವರ ತಂಡಕ್ಕೆ ಇಂದು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ನಾನು ಮನೋಜ್ ಜಿ ಅವರ ಭಾಷಣವನ್ನು ಆಲಿಸುತ್ತಿದ್ದಾಗ ಅವರು ಎಷ್ಟು ಪ್ರಮಾಣದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು ಹಾಗೂ ಜಮ್ಮು ಮತ್ತು ಕಾಶ್ಮೀರ ಜನರ ನಡುವೆಯೇ ಇದನ್ನು ಸಾಧಿಸಲಾಗಿದೆ. ಎಷ್ಟು ವೇಗದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದರೆ ಅದರಿಂದ ಇಡೀ ದೇಶದಲ್ಲಿ ಹೊಸ ವಿಶ್ವಾಸ ಮತ್ತು ಹೊಸ ಭರವಸೆ ಸೃಷ್ಟಿಯಾಗುತ್ತಿದೆ. ಹಲವು ದಶಕಗಳಿಂದ ಆಗದೇ ಇದ್ದ ಜಮ್ಮು-ಕಾಶ್ಮೀರದ ಕೆಲಸ ಕಾರ್ಯಗಳನ್ನು ಮನೋಜ್ ಜಿ ಮತ್ತು ಅವರ ತಂಡ ಅವಧಿಗೆ ಮುನ್ನವೇ ಪೂರ್ಣಗೊಳಿಸುತ್ತಿದ್ದಾರೆ. ನನಗೆ ಅವರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಮತ್ತೊಮ್ಮೆ ನಾನು ಆಯುಷ್ಮಾನ್ ಭಾರತ್ ಯೋಜನೆ ಮತ್ತು ಸೇಹತ್ ಯೋಜನೆಗಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಮಾತದೆ ವೈಷ್ಣವೋ ದೇವಿ ಆಶೀರ್ವದಿಸಲಿ ಮತ್ತು ಬಾಬಾ ಅಮರನಾಥ ಕೃಪೆ ನಮ್ಮೆಲ್ಲರಲ್ಲೂ ಇರಲಿ. ಆ ನಿರೀಕ್ಷೆಯೊಂದಿಗೆ, ನಿಮಗೆ ಧನ್ಯವಾದಗಳು ತುಂಬಾ ತುಂಬಾ ಧನ್ಯವಾದಗಳು.
ಘೋಷಣೆ: ಪ್ರಧಾನಮಂತ್ರಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು, ಇದು ಅದರ ಅಂದಾಜು ಅನುವಾದ.
***
आज का दिन जम्मू कश्मीर के लिए बहुत ऐतिहासिक है।
— PMO India (@PMOIndia) December 26, 2020
आज से जम्मू कश्मीर के सभी लोगों को आयुष्मान योजना का लाभ मिलने जा रहा है।
सेहत स्कीम- अपने आप में ये एक बहुत बड़ा कदम है।
और जम्मू-कश्मीर को अपने लोगों के विकास के लिए ये कदम उठाता देख, मुझे भी बहुत खुशी हो रही है: PM
मैं जम्मू-कश्मीर के लोगों को लोकतंत्र को मजबूत करने के लिए भी बधाई देता हूं,
— PMO India (@PMOIndia) December 26, 2020
District Development Council के चुनाव ने एक नया अध्याय लिखा है,
मैं चुनावों के हर Phase में देख रहा था कि कैसे इतनी सर्दी के बावजूद, कोरोना के बावजूद, नौजवान, बुजुर्ग, महिलाएं बूथ पर पहुंच रहे थे: PM
जम्मू कश्मीर के हर वोटर के चेहरे पर मुझे विकास के लिए, डेवलपमेंट के लिए एक उम्मीद नजर आई, उमंग नजर आई।
— PMO India (@PMOIndia) December 26, 2020
जम्मू कश्मीर के हर वोटर की आंखों में मैंने अतीत को पीछे छोड़ते हुए, बेहतर भविष्य का विश्वास देखा: PM
जम्मू-कश्मीर में इन चुनावों ने ये भी दिखाया कि हमारे देश में लोकतंत्र कितना मजबूत है।
— PMO India (@PMOIndia) December 26, 2020
लेकिन एक पक्ष और भी है, जिसकी तरफ मैं देश का ध्यान आकर्षित कराना चाहता हूं।
पुडुचेरी में सुप्रीम कोर्ट के आदेश के बावजूद पंचायत और म्यूनिसिपल इलेक्शन नहीं हो रहे: PM
आप हैरान होंगे, सुप्रीम कोर्ट ने 2018 में ये आदेश दिया था।
— PMO India (@PMOIndia) December 26, 2020
लेकिन वहां जो सरकार है, इस मामले को लगातार टाल रही है।
साथियों,
पुडुचेरी में दशकों के इंतजार के बाद साल 2006 में Local Body Polls हुए थे।
इन चुनावों में जो चुने गए उनका कार्यकाल साल 2011 में ही खत्म हो चुका है: PM
महामारी के दौरान भी यहां जम्मू-कश्मीर में करीब 18 लाख सिलेंडर रिफिल कराए गए।
— PMO India (@PMOIndia) December 26, 2020
स्वच्छ भारत अभियान के तहत जम्मू कश्मीर में 10 लाख से ज्यादा टॉयलेट बनाए गए।
लेकिन इसका मकसद सिर्फ शौचालय बनाने तक सीमित नहीं, ये लोगों के स्वास्थ्य को सुधारने की भी कोशिश है: PM
आज जम्मू कश्मीर आयुष्मान भारत- सेहत स्कीम शुरु की गई है।
— PMO India (@PMOIndia) December 26, 2020
इस स्कीम 5 लाख रुपए तक का मुफ्त इलाज मिलेगा तो जीवन में कितनी बड़ी सहूलियत आएगी।
अभी आयुष्मान भारत योजना का लाभ राज्य के करीब 6 लाख परिवारों को मिल रहा था।
सेहत योजना के बाद यही लाभ सभी 21 लाख परिवारों को मिलेगा: PM
इस स्कीम का एक और लाभ होगा जिसका जिक्र बार-बार किया जाना जरूरी है।
— PMO India (@PMOIndia) December 26, 2020
आपका इलाज सिर्फ जम्मू कश्मीर के सरकारी और प्राइवेट अस्पतालों तक सीमित नहीं रहेंगा।
बल्कि देश में इस योजना के तहत जो हज़ारों अस्पताल जुड़े हैं, वहां भी ये सुविधा आपको मिल पाएगी: PM
Ensuring top quality healthcare for the people of Jammu and Kashmir. https://t.co/RdKKRo33lh
— Narendra Modi (@narendramodi) December 26, 2020