ನಮಸ್ಕಾರ!
ಅಸೋಚಾಮ್ ಅಧ್ಯಕ್ಷರಾದ ಶ್ರೀ ನಿರಂಜನ್ ಹಿರಾನಂದಾನಿಯವರೇ; ಈ ದೇಶದ ಕೈಗಾರಿಕಾ ಪ್ರಪಂಚದ ಸ್ಫೂರ್ತಿಯಾದ ಶ್ರೀ ರತನ್ ಟಾಟಾರವರೇ; ದೇಶದ ಕೈಗಾರಿಕಾ ಕ್ಷೇತ್ರವನ್ನು ಮುನ್ನಡೆಸುತ್ತಿರುವ ಎಲ್ಲಾ ಸ್ನೇಹಿತರು; ಮಹಿಳೆಯರೇ ಮತ್ತು ಮಹನೀಯರೇ!
ಇಲ್ಲಿ, ಇದನ್ನು ಹೇಳಲಾಗಿದೆ – ಕರ್ವನ್ನೇಹ್ ಕರ್ಮಾಣಿ ಜಿಜಿ ವಿಷೇತ್ ಶಂತ್ ಸಮಾಃ ಅಂದರೆ, ನಿಮ್ಮ ಕರ್ಮವನ್ನು ಅನುಸರಿಸಿ ನೂರು ವರ್ಷಗಳ ಕಾಲ ಬದುಕುವ ಬಯಕೆ ಇರಲಿ ಎಂದು ಅರ್ಥ. ಈ ಮಾತು ಅಸೋಚಾಮ್ ಗೆ ಸೂಕ್ತವಾಗಿದೆ. ಕಳೆದ 100 ವರ್ಷಗಳಲ್ಲಿ ದೇಶದ ಆರ್ಥಿಕತೆ ಮತ್ತು ಕೋಟ್ಯಂತರ ಭಾರತೀಯರ ಜೀವನವನ್ನು ಸುಧಾರಿಸಲು ನೀವೆಲ್ಲರೂ ಶ್ರಮಿಸುತ್ತಿದ್ದೀರಿ.
ಶ್ರೀ ರತನ್ ಟಾಟಾಜಿ ಮತ್ತು ಇಡೀ ಟಾಟಾ ಗುಂಪಿಗೆ ಕೂಡ ಇದು ಅನ್ವಯಿಸುತ್ತದೆ. ಭಾರತದ ಅಭಿವೃದ್ಧಿಯಲ್ಲಿ ಟಾಟಾ ಕುಟುಂಬ ಅಥವಾ ಟಾಟಾ ಸಮೂಹದ ಕೊಡುಗೆ ಮತ್ತು ಕೊಡುಗೆಗಾಗಿ ಅವರನ್ನೂ ಸಹ ಇಂದು ಇಲ್ಲಿ ಗೌರವಿಸಲಾಗಿದೆ. ಟಾಟಾ ಸಮೂಹವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಸ್ನೇಹಿತರೇ,
ಕಳೆದ 100 ವರ್ಷಗಳಲ್ಲಿ, ಭಾರತದ ಸ್ವಾತಂತ್ರ್ಯದ ಹೋರಾಟದಿಂದ ಹಿಡಿದು ದೇಶದ ಅಭಿವೃದ್ಧಿಯವರೆಗಿನ ಪ್ರಯಾಣದಲ್ಲಿ ನೀವು ಎಲ್ಲಾ ಏರಿಳಿತಗಳ ಭಾಗವಾಗಿದ್ದೀರಿ. ಅಸೋಚಾಮ್ ಸ್ಥಾಪನೆಯಾದ ಮೊದಲ 27 ವರ್ಷಗಳು ವಸಾಹತುಶಾಹಿಯ ಅವಧಿಯಲ್ಲಿ ಕಳೆದವು. ಆ ಸಮಯದಲ್ಲಿ ಸ್ವಾತಂತ್ರ್ಯವೇ ದೇಶದ ದೊಡ್ಡ ಗುರಿಯಾಗಿತ್ತು.
ಆ ಸಮಯದಲ್ಲಿ, ನಿಮ್ಮ ಕನಸುಗಳು ಸಂಕೋಲೆಗಳಿಂದ ಬಂಧಿತವಾಗಿದ್ದವು. ಈಗ ಮುಂದಿನ 27 ವರ್ಷಗಳು ಅಸೋಚಾಮ್ ಭವಿಷ್ಯಕ್ಕಾಗಿ ಬಹಳ ಮುಖ್ಯವಾಗಿವೆ. 27 ವರ್ಷಗಳ ನಂತರ, ದೇಶವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು 2047 ರಲ್ಲಿ ಪೂರ್ಣಗೊಳಿಸುತ್ತದೆ. ನೀವು ಎಲ್ಲಾ ರೀತಿಯ ಸಂಕೋಲೆಗಳಿಂದ ಮುಕ್ತರಾಗಿದ್ದೀರಿ; ಆಕಾಶ ಮುಟ್ಟುವಷ್ಟು ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಮತ್ತು ನೀವು ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು. ಈಗ ನೀವು ಮುಂದಿನ ವರ್ಷಗಳಲ್ಲಿ ನಿಮ್ಮ ಸಂಪೂರ್ಣ ಶಕ್ತಿಯನ್ನು ಸ್ವಾವಲಂಬಿ ಭಾರತಕ್ಕಾಗಿ ಬಳಸಬೇಕು. ಇಂದು, ಜಗತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ವೇಗವಾಗಿ ಸಾಗುತ್ತಿದೆ.
ಹೊಸ ತಂತ್ರಜ್ಞಾನದ ರೂಪದಲ್ಲಿ ಸವಾಲುಗಳು ಎದುರಾಗುತ್ತವೆ ಮತ್ತು ವಿವಿಧ ಹೊಸ ಮತ್ತು ಸರಳ ಪರಿಹಾರಗಳನ್ನು ಸಹ ಕಾಣಬಹುದು. ಆದ್ದರಿಂದ ಇಂದು ನಾವು ಯೋಜನೆ ಮತ್ತು ಕಾರ್ಯ ನಿರ್ವಹಿಸಬೇಕಾದ ಸಮಯವಾಗಿದೆ. ನಾವು ಪ್ರತಿವರ್ಷವನ್ನು ರಾಷ್ಟ್ರ ಕಟ್ಟುವಲ್ಲಿನ ಒಂದು ದೊಡ್ಡ ಗುರಿಯೊಂದಿಗೆ ಪ್ರತಿ ಗುರಿಯನ್ನು ಜೋಡಿಸಬೇಕು.
ಸ್ನೇಹಿತರೇ,
ಮುಂಬರುವ 27 ವರ್ಷಗಳು ಭಾರತದ ಜಾಗತಿಕ ಪಾತ್ರವನ್ನು ನಿರ್ಧರಿಸುವುದು ಮಾತ್ರವಲ್ಲ, ಭಾರತೀಯರ ಕನಸುಗಳು ಮತ್ತು ಸಮರ್ಪಣೆ ಎರಡನ್ನೂ ಪರೀಕ್ಷಿಸಲಿವೆ. ಈ ಬಾರಿ, ಭಾರತೀಯ ಉದ್ಯಮವಾಗಿ, ನಿಮ್ಮ ಸಾಮರ್ಥ್ಯ, ಬದ್ಧತೆ ಮತ್ತು ಧೈರ್ಯವನ್ನು ವಿಶ್ವದಾದ್ಯಂತ ಆತ್ಮವಿಶ್ವಾಸದಿಂದ ತೋರಿಸಬೇಕಾಗಿದೆ. ಮತ್ತು ನಮ್ಮ ಸವಾಲು ಕೇವಲ ಸ್ವಾವಲಂಬಿಗಳಾಗುವುದಲ್ಲ ಜೊತೆಗೆ ಈ ಗುರಿಯನ್ನು ನಾವು ಎಷ್ಟು ಬೇಗನೆ ಸಾಧಿಸಬಹುದು ಎನ್ನುವುದು ಅಷ್ಟೇ ಮುಖ್ಯ.
ಸ್ನೇಹಿತರೇ,
ಭಾರತದ ಯಶಸ್ಸಿನ ಬಗ್ಗೆ ಇಂದು ಜಗತ್ತಿನಲ್ಲಿರುವ ಸಕಾರಾತ್ಮಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. 130 ಕೋಟಿ ಭಾರತೀಯರ ಅಭೂತಪೂರ್ವ ವಿಶ್ವಾಸದಿಂದ ಈ ಸಕಾರಾತ್ಮಕತೆ ಬಂದಿದೆ. ಈಗ ಭಾರತವು ಹೊಸ ಶಕ್ತಿಯೊಂದಿಗೆ ಮುಂದುವರಿಯಲು ಹೊಸ ಮಾರ್ಗಗಳನ್ನು ರೂಪಿಸುತ್ತಿದೆ.
ಸ್ನೇಹಿತರೇ,
ಹಿಂದಿನ ಅಧಿವೇಶನಗಳಲ್ಲಿ, ಸಚಿವರು ಮತ್ತು ಇತರ ಸಹೋದ್ಯೋಗಿಗಳು ಸರ್ಕಾರದ ನೀತಿಗಳು ಮತ್ತು ಕಾರ್ಯತಂತ್ರಗಳು ಮತ್ತು ಪ್ರತಿ ವಲಯಕ್ಕೆ ತಂದ ಬದಲಾವಣೆಗಳ ಬಗ್ಗೆ ನಿಮ್ಮೊಂದಿಗೆ ವಿವರವಾಗಿ ಚರ್ಚಿಸಿದ್ದಾರೆ. ಈ ಮೊದಲು ಇದ್ದ ಪರಿಸ್ಥಿತಿಗಳಿಂದಾಗಿ ‘ಯಾಕೆ ಭಾರತ?‘ ಎಂದು ಈ ರೀತಿ ಕೇಳುವ ಕಾಲವಿತ್ತು . ಈಗ ದೇಶದಲ್ಲಿ ನಡೆದ ಸುಧಾರಣೆಗಳ ಪರಿಣಾಮವನ್ನು ನೋಡಿದ ನಂತರ ‘ಭಾರತ ಯಾಕಾಗಬಾರದು?’ ಎಂದು ಕೇಳಲಾಗುತ್ತಿದೆ- ಉದಾ: ಮೊದಲು ತೆರಿಗೆ ದರಗಳು ಇದ್ದಾಗ, ಜನರು ಹೇಳುತ್ತಿದ್ದರು ‘ಯಾಕೆ ಭಾರತ? ಇಂದು ಅದೇ ಜನರು ‘ಭಾರತ ಯಾಕಾಗಬಾರದು?’ ಎಂದು ಹೇಳುತ್ತಿದ್ದಾರೆ ಏಕೆಂದರೆ ಭಾರತವು ಇಂದು ಹೆಚ್ಚು ಸ್ಪರ್ಧಾತ್ಮಕ ತೆರಿಗೆ ದರಗಳನ್ನು ಹೊಂದಿದೆ. ಈ ಮೊದಲು ಕಾನೂನು ಮತ್ತು ನಿಯಮಗಳ ಕಠಿಣ ಜಾಲವಿತ್ತು, ಆದ್ದರಿಂದ ಸ್ವಾಭಾವಿಕವಾಗಿ ಹೂಡಿಕೆದಾರರು ‘ಯಾಕೆ ಭಾರತ?‘ ಎನ್ನುತ್ತಿದ್ದರು ಇಂದು ಅವರು ಕಾರ್ಮಿಕ ಕಾನೂನುಗಳಲ್ಲಿ ಸುಲಭವಾಗಿ ಅನುಸರಣೆ ಇದೆ ಎಂದು ಹೇಳುತ್ತಿದ್ದಾರೆ, ಆದ್ದರಿಂದ ‘ಭಾರತ ಯಾಕಾಗಬಾರದು?’ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಮಿತಿ ಮೀರಿದ ಕಾನೂನು ಕಟ್ಟಳೆಗಳಿದ್ದಾಗ (ರೆಡ್ ಟೇಪಿಸಂ) , ‘ಯಾಕೆ ಭಾರತ?‘ ಈಗ ಅದೇ ಜನರು ರೆಡ್ ಕಾರ್ಪೆಟ್ ಅವರಿಗಾಗಿ ಹಾಸಿರುವುದನ್ನು ನೋಡಿದಾಗ, ಹೇಳುತ್ತಾರೆ, ಆದ್ದರಿಂದ ‘ಭಾರತ ಯಾಕಾಗಬಾರದು?’ ನಾವೀನ್ಯತೆಯ ಸಂಸ್ಕೃತಿಯ ಕೊರತೆಯ ವಿರುದ್ಧ ಈ ಹಿಂದೆ ದೂರುಗಳು ಬಂದಿದ್ದವು, ಹಾಗಾದರೆ ‘ಯಾಕೆ ಭಾರತ?‘ ಎನ್ನುತ್ತಿದ್ದರು. ಇಂದು, ಭಾರತದ ಪ್ರಾರಂಭಿಕ ಪರಿಸರ ವ್ಯವಸ್ಥೆಗಳ ಬಲವನ್ನು ಗಮನಿಸುತ್ತಾ, ಜಗತ್ತು ಆತ್ಮವಿಶ್ವಾಸದಿಂದ ಹೇಳುತ್ತಿದೆ, ‘ಭಾರತ ಯಾಕಾಗಬಾರದು?’ ಎಂದು. ಎಲ್ಲದರಲ್ಲೂ ಸರ್ಕಾರದ ಹಸ್ತಕ್ಷೇಪ ಇರುವುದರಿಂದ, ‘ಯಾಕೆ ಭಾರತ?‘ ಎಂದು ಅವರು ಕೇಳಿದರು. ಇಂದು ಖಾಸಗಿ ಭಾಗವಹಿಸುವಿಕೆಯನ್ನು ನಂಬಲಾಗುತ್ತಿರುವುದರಿಂದ, ವಿದೇಶಿ ಹೂಡಿಕೆದಾರರನ್ನು ಪ್ರೋತ್ಸಾಹಿಸಲಾಗುತ್ತಿದೆ, ಆಗ ಅದೇ ಜನರು ಕೇಳುತ್ತಿದ್ದಾರೆ ‘ಭಾರತ ಯಾಕಾಗಬಾರದು?’ ಕೆಲಸ ಸಾಧ್ಯವಾಗದ ಕಾರಣ ಹಿಂದಿನ ಜನರು ಡಿಜಿಟಲ್ ಮೂಲಸೌಕರ್ಯಗಳ ಅನುಪಸ್ಥಿತಿಯ ವಿರುದ್ಧ ದೂರು ನೀಡಿದ್ದರು, ಆಗ ‘ಯಾಕೆ ಭಾರತ?‘ ಇಂದು ನಾವು ಆಧುನಿಕ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಹೊಂದಿರುವಾಗ, ಇಲ್ಲಿರುವ ಮನೋಭಾವವು ‘ಭಾರತ ಯಾಕಾಗಬಾರದು?’ ಎಂದು.
ಸ್ನೇಹಿತರೇ,
ನವ ಭಾರತವು, ತನ್ನ ಶಕ್ತಿ ಮತ್ತು ಸಂಪನ್ಮೂಲಗಳನ್ನು ಅವಲಂಬಿಸಿ, ಸ್ವಾವಲಂಬಿ ಭಾರತದ ಗುರಿಯೆಡೆಗೆ ಸಾಗುತ್ತಿದ್ದೆ ಮುಂದಕ್ಕೆ ಹಾಕುತ್ತಿದೆ. ಮತ್ತು ಈ ಗುರಿಯನ್ನು ಸಾಧಿಸಲು ಉತ್ಪಾದನೆಯಲ್ಲಿ ನಾವು ವಿಶೇಷ ಗಮನ ಹರಿಸಿದ್ದೇವೆ. ಉತ್ಪಾದನೆಯನ್ನು ಉತ್ತೇಜಿಸಲು ನಾವು ಪಟ್ಟುಹಿಡಿದು ಸುಧಾರಣೆಗಳನ್ನು ತರುತ್ತಿದ್ದೇವೆ. ಸುಧಾರಣೆಗಳಲ್ಲದೆ, ಪ್ರತಿಫಲಗಳು ಇಂದು ದೇಶದ ನೀತಿಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿವೆ. ಮೊದಲ ಬಾರಿಗೆ, 10 ಕ್ಕೂ ಹೆಚ್ಚು ಕ್ಷೇತ್ರಗಳನ್ನು ದಕ್ಷತೆ ಮತ್ತು ಉತ್ಪಾದಕತೆ ಆಧಾರಿತ ಪ್ರೋತ್ಸಾಹದ ವ್ಯಾಪ್ತಿಗೆ ತರಲಾಗಿದೆ. ಅದರ ಸಕಾರಾತ್ಮಕ ಫಲಿತಾಂಶಗಳು ಬಹಳ ಕಡಿಮೆ ಸಮಯದಲ್ಲಿಯೇ ಕಾಣತೊಡಗಿವೆ ಎಂದು ನನಗೆ ಖುಷಿಯಾಗಿದೆ. ಅಂತೆಯೇ, ಉತ್ತಮ ಸಂಪರ್ಕ, ಉತ್ತಮ ಸೌಲಭ್ಯಗಳು ಮತ್ತು ಸಾರಿಗೆ ವ್ಯವಸ್ಥೆಯ ಎಲ್ಲಾ ಪ್ರಯತ್ನಗಳು ಸಹ ಉದ್ಯಮಕ್ಕೆ ಕೊಡುಗೆಯಾಗಿವೆ. ನಮ್ಮ ಲಕ್ಷಾಂತರ ಎಂಎಸ್ಎಂಇಗಳಿಗೆ, ಅದರ ವ್ಯಾಖ್ಯಾನವನ್ನು ಬದಲಾಯಿಸುವುದಾಗಲಿ, ಮಾನದಂಡಗಳನ್ನು ಬದಲಾಯಿಸುವುದಾಗಲಿ,, ಸರ್ಕಾರಿ ಒಪ್ಪಂದಗಳಿಗೆ ಆದ್ಯತೆ ನೀಡುವುದಾಗಲಿ ಅಥವಾ ದ್ರವತೆಯ ಸಮಸ್ಯೆಗಳನ್ನು ಪರಿಹರಿಸುವುದಾಗಲಿ, ಇವುಗಳೆಲ್ಲವೂ ಒಂದು ದೊಡ್ಡ ಪ್ರೋತ್ಸಾಹವಾಗಿದೆ.
ಸ್ನೇಹಿತರೇ,
ದೇಶ ಇಂದು ಲಕ್ಷಾಂತರ ಯುವಕರಿಗೆ ಅವಕಾಶಗಳನ್ನು ನೀಡುವ ಉದ್ಯಮಗಳು ಮತ್ತು ಸಂಪತ್ತು ಸೃಷ್ಟಿಕರ್ತರ ಬೆನ್ನಿಗೆ ದೇಶವು ನಿಂತಿದೆ. ಇಂದು, ಯುವಜನರು ನವೋದ್ಯಮ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ವಿಶ್ವ ವೇದಿಕೆಯಲ್ಲಿ ಸ್ಥಾಪಿಸುತ್ತಿದ್ದಾರೆ. ದಕ್ಷ ಮತ್ತು ಸೌಹಾರ್ದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಯತ್ನವನ್ನು ಸರ್ಕಾರ ಮುಂದುವರಿಸುತ್ತಿದೆ. ಈಗ ಅಸೋಚಾಮ್ ಮತ್ತು ನಿಮ್ಮ ಪ್ರತಿಯೊಬ್ಬ ಸದಸ್ಯರು ಇದರ ಪ್ರಯೋಜನಗಳು ಸಮಾಜದ ಪ್ರತಿಯೊಂದು ಸ್ತರದಲ್ಲಿ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು.
ಇದಕ್ಕಾಗಿ, ನೀವು ಉದ್ಯಮದೊಳಗಿನ ಸುಧಾರಣೆಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ. ನಮ್ಮಲ್ಲಿ ನಾವು ನೋಡಲು ಬಯಸುವ ಬದಲಾವಣೆಗಳನ್ನು ನಮ್ಮ ಸಂಸ್ಥೆಗಳಲ್ಲೂ ತರಬೇಕು. ಸರ್ಕಾರ ಮತ್ತು ಸಮಾಜದಿಂದ ನೀವು ಬಯಸುವ ಸ್ವಾತಂತ್ರ್ಯ, ಸೇರ್ಪಡೆ, ಸಹಾಯ ಹಸ್ತ ಚಾಚುವಿಕೆ ಮತ್ತು ಪಾರದರ್ಶಕತೆಯನ್ನು ಮಹಿಳೆಯರು, ಯುವ ಪ್ರತಿಭೆಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಉದ್ಯಮದೊಳಗೆ ಎಲ್ಲದರಲ್ಲೂ ಒಂದೇ ಮಟ್ಟದಲ್ಲಿರುವಂತೆ ನೀವು ಖಾತ್ರಿಪಡಿಸಿಕೊಳ್ಳಬೇಕು. ಸಾಂಸ್ಥಿಕ ಆಡಳಿತದಿಂದ ಲಾಭ ಹಂಚಿಕೆಯವರೆಗೆ ನಾವು ವಿಶ್ವದ ಅತ್ಯುತ್ತಮ ಅಭ್ಯಾಸಗಳನ್ನು ಆದಷ್ಟು ಬೇಗ ಅಳವಡಿಸಿಕೊಳ್ಳಬೇಕು. ಲಾಭ ಕೇಂದ್ರಿತ ಅನುಸಂಧಾನದೊಂದಿಗೆ, ನಾವು ಅದನ್ನು ಉದ್ದೇಶಪೂರ್ವಕವಾಗಿ ಮಾಡಿದರೆ, ಸಮಾಜದೊಂದಿಗೆ ಉತ್ತಮವಾಗಿ ಸೇರಿಕೊಳ್ಳಲು ಸಾಧ್ಯ.
ಸ್ನೇಹಿತರೇ,
ಉತ್ತಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಾಮಾಣಿಕ ಅಭಿಪ್ರಾಯದ ಪಾತ್ರವನ್ನು ನಿಮಗಿಂತ ಬೇರೆ ಯಾರು ತಾನೆ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು? ಜನರು ಹೂಡಿಕೆ ಮಾಡಲು ಉತ್ತಮ ಷೇರುಗಳು ಮತ್ತು ಕ್ಷೇತ್ರಗಳನ್ನು ಸೂಚಿಸುವುದನ್ನು ನಾವು ಹೆಚ್ಚಾಗಿ ಕಾಣುತ್ತೇವೆ. ಆದರೆ ಸಲಹೆಗಾರರೇ ಅದರಲ್ಲಿ ಹೂಡಿಕೆ ಮಾಡುತ್ತಿದ್ದಾರೋ ಇಲ್ಲವೋ ಎಂದು ನಾವು ಮೊದಲು ಪರಿಶೀಲಿಸುತ್ತೇವೆ. ಅದೇ ಆರ್ಥಿಕತೆಗೆ ಅನ್ವಯಿಸುತ್ತದೆ. ಇಂದು, ವಿಶ್ವವು ಭಾರತೀಯ ಆರ್ಥಿಕತೆಯನ್ನು ನಂಬುತ್ತದೆ, ಏಕೆಂದರೆ ಅದರ ಪುರಾವೆಗಳಿವೆ. ಸಾಂಕ್ರಾಮಿಕ ಪೀಡಿತ ಸಮಯದಲ್ಲಿ, ಹೂಡಿಕೆಯ ವಿಷಯದಲ್ಲಿ ಇಡೀ ಜಗತ್ತು ತೊಂದರೆಗೀಡಾದಾಗ, ಆ ಸಮಯದಲ್ಲಿ ಭಾರತವು ದಾಖಲೆಯ ಮಟ್ಟದ ಎಫ್ಡಿಐ ಮತ್ತು ಪಿಎಫ್ಐ ಒಳಹರಿವನ್ನು ಪಡೆದಿದೆ.
ಪ್ರಪಂಚದ ಈ ವಿಶ್ವಾಸವು ಹೊಸ ಮಟ್ಟವನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು, ನಾವು ನಮ್ಮ ಹೂಡಿಕೆಗಳನ್ನು ದೇಶೀಯವಾಗಿ ಹೆಚ್ಚಿಸಬೇಕು. ಇಂದು ನೀವು ಪ್ರತಿಯೊಂದು ವಲಯದಲ್ಲೂ ಹೂಡಿಕೆಯ ಹೊಸ ಅವಕಾಶಗಳನ್ನು ಹೊಂದಿದ್ದೀರಿ.
ಸ್ನೇಹಿತರೇ,
ಹೂಡಿಕೆಯ ಬಗ್ಗೆ ಮತ್ತೊಂದು ಅಂಶವಿದೆ, ಅದನ್ನು ಚರ್ಚಿಸಬೇಕಾಗಿದೆ. ಅದೇನೆಂದರೆ ಇದು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಹೂಡಿಕೆ – ಆರ್ & ಡಿ ಬಗ್ಗೆ. ಭಾರತದಲ್ಲಿ ಆರ್ & ಡಿ ಹೂಡಿಕೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಅಮೆರಿಕದಂತಹ ದೇಶದಲ್ಲಿ ಆರ್ & ಡಿ ಮೇಲಿನ ಹೂಡಿಕೆಯ 70% ಖಾಸಗಿ ವಲಯದಿಂದ ಬಂದಿದ್ದರೆ, ಅಷ್ಟೇ ಶೇಕಡಾವಾರು ಭಾರತದಲ್ಲಿ ಸಾರ್ವಜನಿಕ ವಲಯದಿಂದ ಬರುತ್ತದೆ.
ಇದರ ಪ್ರಮುಖ ಭಾಗವನ್ನು ಐಟಿ, ಫಾರ್ಮಾ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅಂದರೆ, ಆರ್ & ಡಿ ಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಈಗಿನ ಅಗತ್ಯವಾಗಿದೆ. ಪ್ರತಿ ಸಣ್ಣ ಮತ್ತು ದೊಡ್ಡ ಕಂಪನಿಯು ಕೃಷಿ, ರಕ್ಷಣಾ, ಬಾಹ್ಯಾಕಾಶ, ಇಂಧನ, ನಿರ್ಮಾಣ ಕ್ಷೇತ್ರಗಳಲ್ಲಿ ಅಂದರೆ ಪ್ರತಿ ವಲಯದಲ್ಲೂ ಆರ್ & ಡಿ ಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಬೇಕು,
ಸ್ನೇಹಿತರೇ,
ಇಂದು, ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಇರಿಸಲು ನಾವು ‘ಮಿಷನ್ ಮೋಡ್’ನಲ್ಲಿ ಮುಂದುವರಿಯುತ್ತಿರುವಾಗ, ನಾವು ಪ್ರತಿ ಭೌಗೋಳಿಕ-ರಾಜಕೀಯ ಬೆಳವಣಿಗೆಗೆ ಶೀಘ್ರವಾಗಿ ಪ್ರತಿಕ್ರಿಯಿಸಬೇಕು ಮತ್ತು ಹೊಂದಿಕೊಳ್ಳಬೇಕು. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಯಾವುದೇ ಹಠಾತ್ ಬೇಡಿಕೆಯನ್ನು ಹೇಗೆ ಪೂರೈಸುತ್ತದೆ ಎಂಬುದರ ಕುರಿತು ಪರಿಣಾಮಕಾರಿ ಕಾರ್ಯವಿಧಾನವನ್ನು ಹೊಂದಿರುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ನೀವು ವಿದೇಶಾಂಗ ಸಚಿವಾಲಯ(ಎಂಇಎ)ದ ಸಹಾಯವನ್ನೂ ಪಡೆಯಬಹುದು. ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಎಂಇಎಯ ಸಂಪೂರ್ಣ ಜಾಲದ ಉತ್ತಮ ಬಳಕೆಯೊಂದಿಗೆ ನಾವು ನಮ್ಮ ಗುರಿಗಳನ್ನು ಹೇಗೆ ವೇಗವಾಗಿ ಸಾಧಿಸಬಹುದು ಎಂಬುದನ್ನು ನಾವು ನೋಡಿದ್ದೇವೆ. ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಮತ್ತು ವ್ಯಾಪಾರ ಸಚಿವಾಲಯ ಮತ್ತು ಅಸೋಚಾಮ್ ನಂತಹ ಕೈಗಾರಿಕಾ ಸಂಸ್ಥೆಗಳ ನಡುವೆ ಉತ್ತಮ ಹೊಂದಾಣಿಕೆ ಈಗಿನ ಅಗತ್ಯವಾಗಿದೆ.
ಜಾಗತಿಕ ರೂಪಾಂತರಗಳಿಗೆ ಹೇಗೆ ವೇಗವಾಗಿ ಪ್ರತಿಕ್ರಿಯಿಸಬೇಕು, ವೇಗವಾಗಿ ಪ್ರತಿಕ್ರಿಯಿಸುವ ಕಾರ್ಯವಿಧಾನವನ್ನು ಹೇಗೆ ಸುಧಾರಿಸಬೇಕು ಎಂಬುದರ ಕುರಿತು ನಿಮ್ಮ ಸಲಹೆಗಳನ್ನು ನಮಗೆ ನೀಡುವಂತೆ ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ನಿಮ್ಮ ಆಲೋಚನೆಗಳು ನನಗೆ ಅತ್ಯಂತ ಅಮೂಲ್ಯವಾದವು.
ಸ್ನೇಹಿತರೇ,
ಭಾರತವು ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಜೊತೆಗೆ ಜಗತ್ತಿಗೆ ಸಹಾಯ ಮಾಡುವ ಸಾಮರ್ಥ್ಯ ಕೂಡ ಹೊಂದಿದೆ. ರೈತನಿಂದ ಔಷಧದವರೆಗೆ ಭಾರತ ಇದನ್ನು ಮಾಡಿ ಸಾಬೀತುಪಡಿಸಿದೆ. ಕೊರೊನಾ ಯುಗದಲ್ಲಿ ಎಲ್ಲಾ ತೊಂದರೆಗಳ ನಡುವೆಯೂ, ಭಾರತವು ವಿಶ್ವದ ಔಷಧದ ಜವಾಬ್ದಾರಿಯನ್ನು ತೆಗೆದುಕೊಂಡು ವಿಶ್ವದಾದ್ಯಂತ ಅಗತ್ಯ ಔಷಧಿಗಳನ್ನು ತಲುಪಿಸಿದೆ. ಈಗ, ಲಸಿಕೆಗಳನ್ನು ಭಾರತವು ತನ್ನ ಸ್ವಂತ ಅಗತ್ಯಗಳನ್ನು ಪೂರೈಸುವುದಲ್ಲದೆ, ವಿಶ್ವದ ಇತರ ಹಲವು ದೇಶಗಳ ನಿರೀಕ್ಷೆಗಳನ್ನು ಸಹ ಪೂರೈಸುತ್ತದೆ.
ಸ್ನೇಹಿತರೇ,
ಗ್ರಾಮೀಣ ಮತ್ತು ನಗರದ ತಾರತಮ್ಯವನ್ನು ಕಡಿಮೆ ಮಾಡಲು ಸರ್ಕಾರ ಕಳೆದ 6 ವರ್ಷಗಳಿಂದ ಮಾಡುತ್ತಿರುವ ಪ್ರಯತ್ನಗಳನ್ನು ಉದ್ಯಮವು ಹಲವು ಪಟ್ಟು ಮಾಡಬಹುದು. ನಮ್ಮ ಹಳ್ಳಿಗಳ ಉತ್ಪನ್ನಗಳಿಗೆ ಜಾಗತಿಕ ವೇದಿಕೆಯನ್ನು ಒದಗಿಸಲು ಅಸೋಚಾಮ್ ಸದಸ್ಯರು ಹೆಚ್ಚಿನ ಸಹಾಯ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕೆಲವು ಅಧ್ಯಯನಗಳ ಪ್ರಕಾರ ಪ್ರೋಟೀನ್ ಸಮೃದ್ಧ ಉತ್ಪನ್ನಗಳಿವೆ ಎಂದು ನೀವು ಕೇಳಿರಬಹುದು ಮತ್ತು ಜನರು ಆ ಉತ್ಪನ್ನಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ . ನಾವು ಅವುಗಳನ್ನು ಆಮದು ಮಾಡಲು ಸಹ ಪ್ರಾರಂಭಿಸುತ್ತೇವೆ.
ನಮ್ಮ ತಟ್ಟೆಗಳಲ್ಲಿ, ಟೇಬಲ್ಗಳಲ್ಲಿ ಮತ್ತು ನಮ್ಮ ಮನೆಯಲ್ಲಿ ವಿದೇಶಿ ಉತ್ಪನ್ನಗಳು ಹೇಗೆ ಸೇರಿಕೊಳ್ಳುತ್ತವೇ ಎನ್ನುವುದು ನಮಗೆ ತಿಳಿಯುವುದಿಲ್ಲ. ನಮ್ಮ ದೇಶದಲ್ಲಿ ಇದೇ ರೀತಿಯ ಉತ್ಪನ್ನಗಳ ಅಪಾರ ಸಂಗ್ರಹವಿದೆ. ಮತ್ತು ಈ ಸಂಗ್ರಹವು ದೇಶದ ರೈತರೊಂದಿಗೆ, ದೇಶದ ಹಳ್ಳಿಗಳಲ್ಲಿವೆ. ನಮ್ಮ ಸಾವಯವ ಕೃಷಿ, ಗಿಡಮೂಲಿಕೆ ಉತ್ಪನ್ನಗಳು, ಸಾವಯವ ಕೃಷಿ ಉತ್ಪನ್ನಗಳು, ಗಿಡಮೂಲಿಕೆ ಉತ್ಪನ್ನಗಳಂತಹವುಗಳನ್ನು ಅಸೋಚಾಮ್ ಉತ್ತೇಜಿಸಬೇಕಾದ ಹಲವು ವಿಷಯಗಳಿವೆ.
ಭಾರತೀಯ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಉತ್ತೇಜಿಸಬೇಕು. ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸುವ ಮೂಲಕ, ಅವುಗಳನ್ನು ಉತ್ತೇಜಿಸುವ ಮೂಲಕ ಮತ್ತು ನವೋದ್ಯಮವನ್ನು ಉತ್ತೇಜಿಸುವ ಮೂಲಕ ನೀವು ಇದನ್ನು ಮಾಡಬಹುದು.
ಭಾರತದ ಸರ್ಕಾರ, ರಾಜ್ಯ ಸರ್ಕಾರಗಳು, ಕೃಷಿ ಸಂಸ್ಥೆಗಳು ಮತ್ತು ಎಲ್ಲರೂ ಈ ದಿಕ್ಕಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮ್ಮ ಕೃಷಿ ಕ್ಷೇತ್ರವು ಉತ್ತಮ ಪ್ರಚಾರ, ಉತ್ತಮ ಮೂಲಸೌಕರ್ಯ, ಉತ್ತಮ ಮಾರುಕಟ್ಟೆ ಪಡೆದರೆ, ನಮ್ಮ ಇಡೀ ಗ್ರಾಮೀಣ ಆರ್ಥಿಕತೆಯು ಉತ್ತಮ ಮಟ್ಟವನ್ನು ತಲುಪಬಹುದು.
ಸ್ನೇಹಿತರೇ,
21 ನೇ ಶತಮಾನದ ಆರಂಭದಲ್ಲಿ, ಅಟಲ್ ಜಿ ಭಾರತವನ್ನು ಹೆದ್ದಾರಿಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದ್ದರು. ಇಂದು, ದೇಶದ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳತ್ತ ಒಂದು ವಿಶೇಷವಾದ ಗಮನವನ್ನು ಹರಿಸಲಾಗಿದೆ. ದೇಶದ ಪ್ರತಿ ಹಳ್ಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಒದಗಿಸುವಲ್ಲಿ ನಾವು ನಿರತರಾಗಿದ್ದೇವೆ, ಇದರಿಂದಾಗಿ ಗ್ರಾಮದ ರೈತರ ಸಂಪರ್ಕ ಡಿಜಿಟಲ್ ಗ್ಲೋಬಲ್ ಮಾರ್ಕೆಟ್ಗಳವರೆಗೆ ಇರುತ್ತದೆ. ಅಂತೆಯೇ, ನಮ್ಮ ಐಟಿ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ನೀಡಲು, ಈ ಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲಾ ಅಡೆತಡೆಗಳನ್ನು ಸಹ ತೆಗೆದುಹಾಕಲಾಗಿದೆ. ಡಿಜಿಟಲ್ ಕ್ಷೇತ್ರದ ಸುರಕ್ಷತೆಗಾಗಿ ಒಂದೊಂದಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಸ್ನೇಹಿತರೇ,
ಉತ್ತಮ ಮೂಲಸೌಕರ್ಯಗಳನ್ನು ನಿರ್ಮಿಸಲು ಸಹಾಯಧನಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾರ್ಗವನ್ನು ಬಳಸಬಹುದು. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಬಲಪಡಿಸುವುದು, ಬಾಂಡ್ ಮಾರುಕಟ್ಟೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಆ ದಿಕ್ಕಿನಲ್ಲಿರುವ ಕೆಲವು ಪ್ರಯತ್ನಗಳು. ಅಂತೆಯೇ, ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ; ಆರ್ಇಐಟಿ (ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್) ಗಳು ಮತ್ತು ಐಎನ್ ವಿ ಐ ಟಿ (ಮೂಲಸೌಕರ್ಯ ಹೂಡಿಕೆ ಟ್ರಸ್ಟ್) ಗಳನ್ನು ಉತ್ತೇಜಿಸಲಾಗುತ್ತಿದೆ. ಮೂಲಸೌಕರ್ಯ ಸಂಬಂಧಿತ ಸ್ವತ್ತುಗಳನ್ನು ಸಹ ಹಣವನ್ನಾಗಿ ಪರಿವರ್ತಿಸಲಾಗುತ್ತಿದೆ.
ಸ್ನೇಹಿತರೇ,
ಸರ್ಕಾರವು ಅಗತ್ಯ ಸೌಲಭ್ಯಗಳನ್ನು ಒದಗಿಸಬಹುದು ಮತ್ತು ಸರಿಯಾದ ವಾತಾವರಣವನ್ನು ಸೃಷ್ಟಿಸಬಹುದು. ಸರ್ಕಾರವು ಪ್ರೋತ್ಸಾಹ ನೀಡಬಹುದು, ಸರ್ಕಾರವು ನೀತಿಗಳನ್ನು ಬದಲಾಯಿಸಬಹುದು. ಆದರೆ ನಿಮ್ಮಂತಹ ಉದ್ಯಮಕ್ಕೆ ಸಂಬಂಧಿಸಿದ ಸ್ನೇಹಿತರು ಈ ಬೆಂಬಲವನ್ನು ಯಶಸ್ಸನ್ನಾಗಿ ಪರಿವರ್ತಿಸಬಹುದು. ನಿಯಮಗಳು ಮತ್ತು ನಿಬಂಧನೆಗಳಲ್ಲಿ ಅಗತ್ಯವಾದ ಬದಲಾವಣೆಗಳಿಗಾಗಿ ದೇಶವು ಮನಸ್ಸು ಮಾಡಿದೆ; ದೇಶವು ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸಲು ಬದ್ಧವಾಗಿದೆ. ಕಳೆದ 6 ವರ್ಷಗಳಲ್ಲಿ, ನಾವು 1500 ಕ್ಕೂ ಹೆಚ್ಚು ಪುರಾತನ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ದೇಶದ ಅಗತ್ಯಗಳನ್ನು ಪರಿಗಣಿಸಿ, ಹೊಸ ಕಾನೂನುಗಳನ್ನು ರೂಪಿಸುವ ಕಾರ್ಯವೂ ಏಕಕಾಲದಲ್ಲಿ ನಡೆಯುತ್ತಿದೆ.
6 ತಿಂಗಳ ಹಿಂದೆ ಜಾರಿಗೆ ತರಲಾದ ಕೃಷಿ ಸುಧಾರಣೆಗಳ ಪ್ರಯೋಜನಗಳು ಸಹ ರೈತರನ್ನು ತಲುಪಲು ಪ್ರಾರಂಭಿಸಿವೆ. ನಾವೆಲ್ಲರೂ ಸ್ವಾವಲಂಬಿ ಭಾರತವನ್ನು ನಿರ್ಮಿಸಲು ದೃಢನಿಶ್ಚಯದಿಂದ ಮುಂದುವರಿಯಬೇಕಾಗಿದೆ. ಮುಂದಿನ ವರ್ಷಗಳಿಗೆ ಅಸೋಚಾಮ್ ನ ನನ್ನ ಸ್ನೇಹಿತರಾದ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಶ್ರೀ ರತನ್ ಟಾಟಾ ಜಿ ಅವರಿಗೂ ಕೂಡ ನನ್ನ ಶುಭಾಶಯಗಳು, ನಾನು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ ಮತ್ತು ಅಸೋಚಾಮ್ ಹೊಸ ಎತ್ತರವನ್ನು ತಲುಪಲಿ! 2047 ರ ಹೊತ್ತಿಗೆ ರಾಷ್ಟ್ರವು 100 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸಿದಾಗ, ಗುರಿಗಳನ್ನು ಸಾಧಿಸಲು ಮುಂದಿನ 27 ವರ್ಷಗಳಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಶತಮಾನೋತ್ಸವಗಳು ನಡೆಯಲಿವೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ ಬಹಳ ಧನ್ಯವಾದಗಳು!
ಧನ್ಯವಾದಗಳು!
बीते 100 सालों से आप सभी देश की Economy को, करोड़ों भारतीयों के जीवन को बेहतर बनाने में जुटे हैं: PM @narendramodi speaks about @ASSOCHAM4India and the @TataCompanies
— PMO India (@PMOIndia) December 19, 2020
अब आने वाले वर्षों में आत्मनिर्भर भारत के लिए आपको पूरी ताकत लगा देनी है।
— PMO India (@PMOIndia) December 19, 2020
इस समय दुनिया चौथी औद्योगिक क्रांति की तरफ तेज़ी से आगे बढ़ रही है।
नई टेक्नॉलॉजी के रूप में Challenges भी आएंगे और अनेक Solutions भी: PM @narendramodi
इसलिए आज वो समय है, जब हमें प्लान भी करना है और एक्ट भी करना है।
— PMO India (@PMOIndia) December 19, 2020
हमें हर साल के, हर लक्ष्य को Nation Building के एक Larger Goal के साथ जोड़ना है: PM @narendramodi
आने वाले 27 साल भारत के Global Role को ही तय नहीं करेंगे, बल्कि ये हम भारतीयों के Dreams और Dedication, दोनों को टेस्ट करेंगे।
— PMO India (@PMOIndia) December 19, 2020
ये समय भारतीय इंडस्ट्री के रूप में आपकी Capability, Commitment और Courage को दुनिया भर को दिखा देने का है: PM @narendramodi
हमारा चैलेंज सिर्फ आत्मनिर्भरता ही नहीं है। बल्कि हम इस लक्ष्य को कितनी जल्दी हासिल करते हैं, ये भी उतना ही महत्वपूर्ण है: PM @narendramodi
— PMO India (@PMOIndia) December 19, 2020
एक जमाने में हमारे यहां जो परिस्थितियां थीं, उसके बाद कहा जाने लगा था- Why India.
— PMO India (@PMOIndia) December 19, 2020
अब जो Reforms देश में हुए हैं, उनका जो प्रभाव दिखा है, उसके बाद कहा जा रहा है- ‘Why not India’: PM @narendramodi
नया भारत, अपने सामर्थ्य पर भरोसा करते हुए, अपने संसाधनों पर भरोसा करते हुए आत्मनिर्भर भारत को आगे बढ़ा रहा है।
— PMO India (@PMOIndia) December 19, 2020
और इस लक्ष्य की प्राप्ति के लिए मैन्युफेक्चरिंग पर हमारा विशेष फोकस है।
मैन्युफेक्चरिंग को बढ़ावा देने के लिए हम निरंतर Reforms कर रहे हैं: PM @narendramodi
देश आज करोड़ों युवाओं को अवसर देने वाले Enterprise और Wealth Creators के साथ है: PM @narendramodi
— PMO India (@PMOIndia) December 19, 2020
निवेश का एक और पक्ष है जिसकी चर्चा आवश्यक है।
— PMO India (@PMOIndia) December 19, 2020
ये है रिसर्च एंड टेवलपमेंट- R&D, पर होने वाला निवेश।
भारत में R&D पर निवेश बढ़ाए जाने की जरूरत है: PM @narendramodi
21वीं सदी की शुरुआत में अटल जी ने भारत को highways से connect करने का लक्ष्य रखा था।
— PMO India (@PMOIndia) December 19, 2020
आज देश में Physical और Digital Infrastructure पर विशेष फोकस किया जा रहा है: PM @narendramodi
Speaking at the #ASSOCHAMFoundationWeek. Watch. https://t.co/faC1nltKrJ
— Narendra Modi (@narendramodi) December 19, 2020