ಮೊಜಾಂಬಿಕ್, ದಕ್ಷಿಣ ಆಫ್ರಿಕಾ, ತಾಂಜೇನಿಯಾ ಮತ್ತು ಕೀನ್ಯಾಗೆ ತೆರಳುವ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆಯ ಪಠ್ಯ ಈ ಕೆಳಗಿನಂತಿದೆ.
“ಜುಲೈ 7ರ ಗುರುವಾರ, ನಾನು ಮೊಜಾಂಬಿಕ್ ನಲ್ಲಿರುತ್ತೇನೆ. ಸಾಂಸ್ಕೃತಿಕ ನಂಟು ಉತ್ತೇಜಿಸಲು ಮತ್ತು ಸಹಕಾರ ಹೆಚ್ಚಿಸುವುದು ನನ್ನ ಭೇಟಿಯ ಉದ್ದೇಶವಾಗಿದೆ. ನಾನು ಅಧ್ಯಕ್ಷ ಫಿಲಿಪಿ ನ್ಯೂಸಿ ಅವರನ್ನು ಭೇಟಿ ಮಾಡುತ್ತೇನೆ ಮತ್ತು ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಲಿದ್ದೇನೆ.
ನನ್ನ ಇತರ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಾದ ಶ್ರೀಮತಿ ವೆರೋನಿಕಾ ಮಕಾಮೋ ಅವರೊಂದಿಗಿನ ಭೇಟಿ ಮತ್ತು ನಾನು ಮಕ್ಕಳೊಂದಿಗೆ ಸಂವಾದ ನಡೆಸಲಿರುವ ಮಲುಅನಾದ ಎಸ್.ಮತ್ತು ಟಿ ಉದ್ಯಾನದ ಭೇಟಿಯೂ ಸೇರಿದೆ.
ನಾನು ಭಾರತೀಯ ಸಮುದಾಯದೊಂದಿಗೆ ಕೂಡ ಕೆಲ ಕಾಲ ಸಂವಾದ ನಡೆಸಲಿದ್ದೇನೆ.
ಜುಲೈ 7ರ ಸಂಜೆ, ನಾನು ದಕ್ಷಿಣ ಆಫ್ರಿಕಾದ ಪ್ರೆಟೋರಿಯಾ ತಲುಪಲಿದ್ದೇನೆ. ದಕ್ಷಿಣ ಆಫ್ರಿಕಾ ಒಂದು ಮಹತ್ವದ ಕಾರ್ಯತಂತ್ರಾತ್ಮಕ ಪಾಲುದಾರನಾಗಿದ್ದು, ಅವರೊಂದಿಗೆ ನಮ್ಮ ಬಾಂಧವ್ಯ ಐತಿಹಾಸಿಕ ಮತ್ತು ಆಳವಾದುದಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನನ್ನ ಕಾರ್ಯಕ್ರಮಗಳು ಪ್ರೆಟೋರಿಯಾ, ಜೋಹಾನ್ಸ್ ಬರ್ಗ್, ಡರ್ಬನ್ ಮತ್ತು ಪೀಟರ್ಮೆರಿಟ್ಜಬರ್ಗ್ ನಲ್ಲಿ ವ್ಯಾಪಿಸಿದೆ. ಮಹಾತ್ಮಾಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ಇದ್ದ ಕಾಲದಲ್ಲಿ ಅವರ ಮೇಲೆ ಆದ ಪರಿಣಾಮಗಳನ್ನು ಇತಿಹಾಸ ಸಾಕ್ಷೀಕರಿಸಿದೆ ಮತ್ತು ಇದು ವಿಶ್ವದ ಇತಿಹಾಸವಾಗಿದೆ. ಅವರು ಕೆಲಸ ಹುಡುಕಿಕೊಂಡು ವಕೀಲರಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದರು, ಆದರೆ ಮಾನವೀಯ ಮೌಲ್ಯಗಳ ದೊಡ್ಡ ದನಿಯಾಗಿ ಭಾರತಕ್ಕೆ ಮರಳಿದರು, ಮನುಕುಲದ ಇತಿಹಾಸಕ್ಕೆ ಹೊಸ ಸ್ವರೂಪವನ್ನೇ ನೀಡಿದರು.
ಮಹಾತ್ಮಾ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿದ್ದ ಕಾಲದಲ್ಲಿ ಅವರೊಂದಿಗೆ ಹತ್ತಿರದ ನಂಟು ಹೊಂದಿದ್ದ ಎರಡು ಸ್ಥಳಗಳಾದ ಫಿನಿಕ್ಸ್ ಸೆಟ್ಲ್ಮೆಂಟ್ ಮತ್ತು ಪೀಟರ್ಮೆರಿಟ್ಜಬರ್ಗ್ ಸ್ಟೇಷನ್ ಗೆ ಭೇಟಿ ನೀಡುವ ಸೌಭಾಗ್ಯ ನನಗೆ ಲಭಿಸಿದೆ. ಗೌರವಾನ್ವಿತ ಮಡಿಬಾ ಅವರನ್ನು ಸ್ಮರಿಸದೆ ದಕ್ಷಿಣ ಆಫ್ರಿಕಾ ಪ್ರವಾಸ ಅಪೂರ್ಣವಾಗುತ್ತದೆ. ಕಾನ್ಸ್ ಟಿಟ್ಯೂಷನಲ್ ಹಿಲ್ ಮತ್ತು ನೆಲ್ಸನ್ ಮಂಡೇಲಾ ಪ್ರತಿಷ್ಠಾನಕ್ಕೆ ಭೇಟಿ ನೀಡುವ ಗೌರವವೂ ನನಗೆ ದೊರೆತಿದೆ. ಅಲ್ಲಿ ನಾನು ಮಾನವ ಇತಿಹಾಸದ ಪ್ರತೀಕವಾದ, ತಮ್ಮ ದೇಶ ಮತ್ತು ವಿಶ್ವವನ್ನು ಹೆಚ್ಚು ಉತ್ತಮ ತಾಣ ಮಾಡಿದ ವ್ಯಕ್ತಿಗೆ ನನ್ನ ಗೌರವಾರ್ಪಣೆಗಳನ್ನು ಸಲ್ಲಿಸಲಿದ್ದೇನೆ.
ನನ್ನ ಭೇಟಿಯ ಕಾಲದಲ್ಲಿ, ನಾನು ಅಧ್ಯಕ್ಷ ಜುಮಾ ಅವರನ್ನು ಭೇಟಿ ಮಾಡಲಿದ್ದೇನೆ. ನಾನು ಉಪ ರಾಷ್ಟ್ರಾಧ್ಯಕ್ಷ ಶ್ರೀ. ಸಿರಿಲ್ ರಾಮಪೋಸ ಅವರನ್ನೂ ಭೇಟಿ ಮಾಡುತ್ತೇನೆ.
ನಮ್ಮ ಆರ್ಥಿಕ ಬಾಂಧವ್ಯವನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿ, ನಾನು ಭಾರತ- ದಕ್ಷಿಣ ಆಫ್ರಿಕಾ ವಾಣಿಜ್ಯ ಸಭೆಯಲ್ಲಿ ಭಾಷಣ ಮಾಡಲಿದ್ದೇನೆ. ಇತರ ಕಾರ್ಯಕ್ರಮದಲ್ಲಿ ಡರ್ಬನ್ ಅಲ್ಯುಮಿನಿ ಜಾಲದೊಂದಿಗಿನ ಭೇಟಿ ಮತ್ತು ಡರ್ಬನ್ ಮೇಯರ್ ಅವರು ಡರ್ಬನ್ ಸಿಟಿ ಹಾಲ್ ನಲ್ಲಿ ಏರ್ಪಡಿಸಿರುವ ಔತಣಕೂಟವೂ ಸೇರಿದೆ.
ದಕ್ಷಿಣ ಆಫ್ರಿಕಾ ಚಲನಶೀಲ ಭಾರತೀಯ ಸಮುದಾಯದ ಮನೆಯಾಗಿದೆ, ಹೀಗಾಗಿಯೇ ಹಲವು ವರ್ಷಗಳಿಂದ ಆಫ್ರಿಕಾ ಅವರ ನೆಲೆಯಾಗಿದೆ. ನಾನು ಜುಲೈ 8ರಂದು ಜೋಹಾನ್ಸ್ ಬರ್ಗ್ ನಲ್ಲಿನ ಒಂದು ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದೊಂದಿಗೆ ಮಾತುಕತೆ ನಡೆಸುತ್ತೇನೆ. ನಾನು ಮಾಡಲಿರುವ ಭಾಷಣಕ್ಕೆ ನಿಮ್ಮ ಕಲ್ಪನೆ ಮತ್ತು ಹೂರಣವನ್ನು ನರೇಂದ್ರ ಮೋದಿ ಮೊಬೈಲ್ ಆಪ್ ನಲ್ಲಿ ನನ್ನೊಂದಿಗೆ ಹಂಚಿಕೊಳ್ಳಿ.
ಜುಲೈ 10ರ ಭಾನುವಾರ ನಾನು ಅಲ್ಪ ಕಾಲದ ಆದರೆ ಮಹತ್ವದ ಭೇಟಿಯಲ್ಲಿ ತಾಂಜೇನಿಯಾದಲ್ಲಿರುತ್ತೇನೆ. ಇದು ಆಫ್ರಿಕಾದಲ್ಲಿನ ಮೌಲ್ಯಯುತ ಮಿತ್ರ ರಾಷ್ಟ್ರವಾದ ತಾಂಜೇನಿಯಾದೊಂದಿಗಿನ ಬಾಂಧವ್ಯಕ್ಕೆ ಪ್ರಚೋದನೆ ನೀಡಲಿದೆ.
ಅಧ್ಯಕ್ಷ ಡಾ. ಜಾನ್ ಮಗುಫುಲಿ ಅವರೊಂದಿಗೆ ನಾನು ವ್ಯಾಪಕ ಮಾತುಕತೆ ನಡೆಸಲಿದ್ದೇನೆ, ಅಲ್ಲಿ ನಾವು ಭಾರತ – ತಾಂಜೇನಿಯಾ ನಡುವಿನ ಬಾಂಧವ್ಯವನ್ನು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಉತ್ತಮ ಪಡಿಸುವ ಮುಂದಿನ ದಾರಿಗಳ ಬಗ್ಗೆ ರೂಪುರೇಶೆ ಸಿದ್ದಪಡಿಸಲಿದ್ದೇವೆ. ಭಾರತ ಸರ್ಕಾರದ ಬೆಂಬಲಿತ ಕಾರ್ಯಕ್ರಮದಡಿ ತಮ್ಮ ಹಳ್ಳಿಗಳಲ್ಲಿಯೇ ಮನೆಯ ಸೌರ ವಿದ್ಯುತ್ ದೀಪಗಳನ್ನು ಮತ್ತು ಸೌರಲಾಂದ್ರಗಳ ತಯಾರಿಕೆ, ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿ ಮಾಡುವ ತರಬೇತಿ ಪಡೆದ ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರುಗಳ ಸೋಲಾರ್ ಮಮಾಸ್ ಗುಂಪನ್ನು ನಾನು ಭೇಟಿ ಮಾಡಲಿದ್ದೇನೆ. ನಾನು ಭಾರತೀಯ ಸಮುದಾಯದೊಂದಿಗೂ ಮಾತುಕತೆ ನಡೆಸಲಿದ್ದೇನೆ.
ನಾನು ಜುಲೈ 10ರ ಸಂಜೆ ಕೀನ್ಯಾ ಭೇಟಿ ಆರಂಭಿಸಲಿದ್ದೇನೆ. ಭಾರತ – ಕೀನ್ಯ ಬಾಂಧವ್ಯ ದೀರ್ಘಕಾಲದ್ದಾಗಿದೆ. ನಮ್ಮ ಎರಡೂ ರಾಷ್ಟ್ರಗಳು ಜನರಿಂದ ಜನರ ಸಂಪರ್ಕವನ್ನು ಬಲವಾಗಿ ಹೊಂದಿವೆ ಮತ್ತು ಎರಡೂ ರಾಷ್ಟ್ರಗಳು ಕಳೆದ ಶತಮಾನದಲ್ಲಿ ವಸಾಹತು ವಿರುದ್ಧ ಹೋರಾಟ ನಡೆಸಿವೆ.
ಅಧ್ಯಕ್ಷ ಉಹ್ರು ಕೆನ್ಯಟ್ಟಾ ಅವರೊಂದಿಗಿನ ಮಾತುಕತೆಗಳು ಭಾರತ ಕೀನ್ಯ ದ್ವಿಪಕ್ಷೀಯ ಸಹಕಾರ ಹೇಗೆ ವೃದ್ಧಿಸಬೇಕು ಎಂಬ ನಿರ್ಣಯ ಕುರಿತಾಗಿರುತ್ತದೆ. ಭಾರತ ಮತ್ತು ಕೀನ್ಯ ನಡುವಿನ ವಾಣಿಜ್ಯ, ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯಗಳ ಕಲ್ಪನೆಯನ್ನು ಉತ್ತಮ ಪಡಿಸುವತ್ತ ಒತ್ತು ನೀಡಲಿದ್ದೇನೆ. ನಮ್ಮ ಸಾಮರ್ಥ್ಯ ಅಗಾಧವಾಗಿದ್ದು, ಒಟ್ಟಾಗಿ ಅದರನ್ನು ಪಡೆಯುವತ್ತ ಚಿಂತಿಸಲಿದ್ದೇವೆ.
ಇನ್ನು ನೈರೋಬಿಯಲ್ಲಿ ನಾನು ಕೀನ್ಯದಲ್ಲಿ ಬಹಳ ಗೌರವಿಸಲ್ಪಡುವ ಮಹಾತ್ಮಾ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಲಿದ್ದೇನೆ. ನಾನು ಕೀನ್ಯಾದ ಪ್ರಥಮ ಅಧ್ಯಕ್ಷರಾದ ಹಾಗೂ ಆಫ್ರಿಕಾದ ಅತಿ ಎತ್ತರದ ರಾಜಕೀಯ ನೇತಾರ ಮೆಜೀ ಜೋಮೋ ಕೆನ್ಯಾಟ್ಟಾ ಅವರಿಗೂ ಗೌರವ ನಮನ ಸಲ್ಲಿಸಲಿದ್ದೇನೆ.
ಆರ್ಥಿಕ ವಿಚಾರಗಳ ಬಗ್ಗೆ ಮತ್ತು ಕೀನ್ಯಾದೊಂದಿಗಿನ ನಮ್ಮ ಬಾಂಧವ್ಯವನ್ನು ವಿಸ್ತಾರವಾಗಿ ಹೇಳಲು ಭಾರತ- ಕೀನ್ಯಾ ವಾಣಿಜ್ಯ ವೇದಿಕೆಯ ಸಭೆ ಒಂದು ಮಹತ್ವದ ವೇದಿಕೆಯಾಗಿದೆ.
ನೈರೋಬಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಕಾತರಿಸುತ್ತಿದ್ದೇನೆ.
ಸಮುದಾಯದೊಂದಿಗೆ ನಮ್ಮ ಬಾಂಧವ್ಯ ಆಳಗೊಳಿಸುವ ಸಲುವಾಗಿ, ನಾನು ಜುಲೈ 10ರಂದು ಸಮುದಾಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದೇನೆ. ನನ್ನ ಭೇಟಿಯ ಕಾಲದಲ್ಲಿ ಭಾರತ್ ವಾಲಾ ಅಲ್ಯುಮಿನಿ ಸಂಘದೊಂದಿಗೆ ಸಭೆಯೂ ಇದೆ. ಮತ್ತೊಂದು ಆಂಬುಲೆನ್ಸ್ ಮತ್ತು ಬೆಬೆಟ್ರಾನ್ ಮಾದರಿಗಳ ಹಸ್ತಾಂತರ ಕಾರ್ಯಕ್ರಮವಾಗಿದೆ.”
My Africa tour, aimed at enhancing ties between India & Africa will begin from Mozambique in a brief but key visit. https://t.co/LaOw7lk2fp
— Narendra Modi (@narendramodi) July 6, 2016
My programmes in South Africa will span across Pretoria, Johannesburg, Durban & Pietermaritzburg. Here are details. https://t.co/BTF9fpGRy6
— Narendra Modi (@narendramodi) July 6, 2016
In Tanzania I will hold talks with President Dr. John Magufuli, meet ‘Solar Mamas’ & interact with Indian community. https://t.co/gUqFNIr0Wz
— Narendra Modi (@narendramodi) July 6, 2016
Talks with President @UKenyatta, deliberations on economic & people-to-people ties will be focus of my Kenya visit. https://t.co/PGtDaEWKUU
— Narendra Modi (@narendramodi) July 6, 2016
Inviting you to share ideas via the Mobile App for my speeches at the community programmes in Johannesburg & Nairobi https://t.co/TYuxNO0R6P
— Narendra Modi (@narendramodi) 6 July 2016