Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಕಾಶ್ ಜಾವಡೇಕರ್ ಅವರಿಗೆ ಸಂಪುಟ ದರ್ಜೆ ಸ್ಥಾನ

ಪ್ರಕಾಶ್ ಜಾವಡೇಕರ್ ಅವರಿಗೆ ಸಂಪುಟ ದರ್ಜೆ ಸ್ಥಾನ


ಹತ್ತೊಂಬತ್ತು ಹೊಸ ಸಚಿವರ ಸೇರ್ಪಡೆಯೊಂದಿಗೆ ಕೇಂದ್ರ ಸಚಿವ ಸಂಪುಟ ಇಂದು ವಿಸ್ತರಣೆ ಆಗಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸ್ವತಂತ್ರ ನಿರ್ವಹಣೆ ಸಹಾಯಕ ಸಚಿವರಾಗಿದ್ದ ಶ್ರೀ ಪ್ರಕಾಶ್ ಜಾವಡೇಕರ್ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು 20 ಸಚಿವರುಗಳಿಗೆ ಅಧಿಕಾರದ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಉಪ ರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಶ್ರೀ ರಾಜನಾಥಸಿಂಗ್, ಶ್ರೀ ಅರುಣ್ ಜೈಟ್ಲಿ, ಶ್ರೀ ರಾಮವಿಲಾಸ್ ಪಾಸ್ವಾನ್, ಶ್ರೀ ಅನಂತ್ ಗೀತೆ, ಶ್ರೀ ಸದಾನಂದಗೌಡ, ಶ್ರೀಮತಿ ಸ್ಮೃತಿ ಇರಾನಿ ಅವರಲ್ಲದೆ ಇತರ ಸಚಿವರು ಹಾಗೂ ಗಣ್ಯರು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದರು.

ಇಂದು ಸಂಪುಟ ಸೇರಿದ 10 ರಾಜ್ಯಗಳ 19 ನೂತನ ಸಚಿವರ ಪೈಕಿ 15 ಮಂದಿಗೆ ಸಂಸತ್ತಿನಲ್ಲಿ ಹಾಗೂ ರಾಜ್ಯ ವಿಧಾನಮಂಡಲದಲ್ಲಿ ಹಿಂದಿನ ಶಾಸಕಾಂಗದ ಅನುಭವ ಇದ್ದರೆ, 10 ಮಂದಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ ಮತ್ತು ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಹೊಸ ಸಚಿವರುಗಳ ಪೈಕಿ, 9 ಮಂದಿ ಸ್ನಾತಕೋತ್ತರ ಪದವೀಧರರಾದರೆ, 7 ಮಂದಿ ಪದವೀಧರರಾಗಿದ್ದಾರೆ. ಇವರಲ್ಲಿ 7 ಮಂದಿ ಕಾನೂನು ಪದವೀಧರು, ಇಬ್ಬರು ವಾಣಿಜ್ಯ ಪದವೀಧರರು ಮತ್ತು ವೈದ್ಯರೊಬ್ಬರು ಸೇರಿದ್ದಾರೆ.

ನೂತನ ಸಚಿವರ ಪರಿಚಯ ಈ ಕೆಳಗಿನಂತಿದೆ:

ನೂತನ ಸಂಪುಟ ಸಚಿವರು:

ಹೆಸರು: ಪ್ರಕಾಶ್ ಜಾವಡೇಕರ್

ಹುಟ್ಟಿದ ಸ್ಥಳ: ಪುಣೆ, ಮಹಾರಾಷ್ಟ್ರ

ಹುಟ್ಟಿದ ದಿನಾಂಕ: ಜನವರಿ 30, 1951

ವಿದ್ಯಾರ್ಹತೆ: ಬಿ.ಕಾಂ.

ಕ್ಷೇತ್ರ: ರಾಜ್ಯ ಸಭಾ ಸದಸ್ಯರು, ಮಧ್ಯಪ್ರದೇಶ.

ಹಿಂದಿನ ಶಾಸಕಾಂಗದ ಅನುಭವ: 1990-2002ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಪರಿಷತ್ತಿನ ಸದಸ್ಯರು.

2008ರಿಂದ ರಾಜ್ಯಸಭಾ ಸದಸ್ಯರು.

ಹಿಂದಿನ ಆಡಳಿತಾನುಭವ: 2014ರ ನವೆಂಬರ್ ನಿಂದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ).

2014ರ ಮೇಯಿಂದ ನವೆಂಬರ್ ವರೆಗೆ ಸಮಾಚಾರ ಮತ್ತು ಪ್ರಸಾರ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವರು.

1995-99ರವರೆಗೆ ಮಹಾರಾಷ್ಟ್ರ ರಾಜ್ಯ ಯೋಜನೆ ಮಂಡಳಿ ಕಾರ್ಯ ನಿರ್ವಾಹಕ ಅಧ್ಯಕ್ಷರು.

ಸಹಾಯಕ ಸಚಿವರು:

ಹೆಸರು: ಶ್ರೀ. ಫಗ್ಗಾನ್ ಸಿಂಗ್ ಕುಲಸ್ತೆ

ಹುಟ್ಟಿದ ಸ್ಥಳ : ಬಾರಾಬತಿ, ಮಾಂಡ್ಲಾ (ಜಿಲ್ಲೆ) ಎಂ.ಪಿ.

ಹುಟ್ಟಿದ ದಿನಾಂಕ: ಮೇ 18,1959

ವಿದ್ಯಾರ್ಹತೆ: ಎಂ.ಎ, ಬಿ.ಎಡ್, ಎಲ್ಎಲ್.ಬಿ.

ಕ್ಷೇತ್ರ : 16ನೇ ಲೋಕಸಭೆಗೆ ಮಾಂಡ್ಲಾದಿಂದ ಆಯ್ಕೆ (ಎಸ್.ಟಿ)

ಹಿಂದಿನ ಶಾಸಕಾಂಗದ ಅನುಭವ : ಈ ಹಿಂದೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆ. 1996-2004.

2012-14 ಅವಧಿಯಲ್ಲಿ ರಾಜ್ಯ ಸಭಾ ಸದಸ್ಯರು.

ಹೆಸರು: ಶ್ರೀ. ಎಸ್.ಎಸ್. ಅಹ್ಲುವಾಲಿಯಾ

ಹುಟ್ಟಿದ ಸ್ಥಳ: ಜೇಕೆ ನಗರ, ಜಿಲ್ಲೆ. ಬುರ್ದ್ವಾನ್(ಪಶ್ಚಿಮ ಬಂಗಾಳ)

ಹುಟ್ಟಿದ ದಿನಾಂಕ: 04 ಜುಲೈ 1951

ವಿದ್ಯಾರ್ಹತೆ: ಬಿ.ಎಸ್.ಸಿ., ಎಲ್ಎಲ್.ಬಿ.

ಕ್ಷೇತ್ರ: 16ನೇ ಲೋಕಸಭೆಗೆ ಡಾರ್ಜಲಿಂಗ್ ನಿಂದ ಆಯ್ಕೆ (ಪಶ್ಚಿಮ ಬಂಗಾಳ)

ಹಿಂದಿನ ಶಾಸಕಾಂಗದ ಅನುಭವ: 1986, 1992, 2000 ಮತ್ತು 2006ರಲ್ಲಿ ನಾಲ್ಕು ಬಾರಿ ರಾಜ್ಯ ಸಭೆಗೆ ಆಯ್ಕೆ.

ಹಿಂದಿನ ಆಡಳಿತಾತ್ಮಕ ಅನುಭವ : 1995 ಸೆಪ್ಟೆಂಬರ್ ನಿಂದ – ಮೇ 1996ರವರೆಗೆ ನಗರ ವ್ಯವಹಾರ ಮತ್ತು ಉದ್ಯೋಗ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವರು.

ಹೆಸರು:Shri Rajen Gohain

ಹುಟ್ಟಿದ ಸ್ಥಳ: ನಗಾನ್ ಅಸ್ಸಾಂ

ಹುಟ್ಟಿದ ದಿನಾಂಕ: ನವೆಂಬರ್ 26,1950

ವಿದ್ಯಾರ್ಹತೆ : ಬಿ.ಎಂ. ಎಲ್ಎಲ್.ಬಿ.

ಕ್ಷೇತ್ರ : 16ನೇ ಲೋಕಸಭೆಗೆ ಅಸ್ಸಾಂನ ನೌಗಾಂಗ್ ನಿಂದ ಆಯ್ಕೆ.

ಹಿಂದಿನ ಶಾಸಕಾಂಗದ ಅನುಭವ : 1999ರಿಂದ ನಾಲ್ಕ ಬಾರಿ ಲೋಕ ಸಭಾ ಸದಸ್ಯರು.

ಹೆಸರು: ಶ್ರೀ ಸಿ.ಆರ್. ಚೌಧರಿ

ಹುಟ್ಟಿದ ಸ್ಥಳ: ದಂಡಾಲ್ಸ್, ನಾಗೌರ್, ರಾಜಾಸ್ಥಾನ

ಹುಟ್ಟಿದ ದಿನಾಂಕ: ಮಾರ್ಚ್ 1, 1948

ವಿದ್ಯಾರ್ಹತೆ : ಎಂ.ಎ.

ಕ್ಷೇತ್ರ : ನಾಗೌರ್ ನಿಂದ ಪ್ರಥಮ ಬಾರಿಗೆ ಲೋಕಸಭೆಗೆ ಆಯ್ಕೆ.

ಹಿಂದಿನ ಆಡಳಿತಾತ್ಮಕ ಅನುಭವ : ರಾಜಾಸ್ಥಾನ್ ಆಡಳಿತ ಸೇವೆಯ ಅಧಿಕಾರಿ.

ಹೆಸರು:ಮನ್ಸುಖ್ ಲಕ್ಷ್ಮಣಭಾಯ್ ಮಾಂಡವ್ಯ

ಹುಟ್ಟಿದ ಸ್ಥಳ : ಹನಾಲ್, ಭಾವ್ ನಗರ್ (ಜಿಲ್ಲೆ) ಗುಜರಾತ್

ಹುಟ್ಟಿದ ದಿನಾಂಕ : ಜೂನ್ 1,1972

ವಿದ್ಯಾರ್ಹತೆ: ಪ್ರೌಢಶಾಲಾ ಶಿಕ್ಷಣ

ಕ್ಷೇತ್ರ : 2012ರಿಂದ ರಾಜ್ಯಸಭೆಯ ಸದಸ್ಯರು.

ಹಿಂದಿನ ಶಾಸಕಾಂಗದ ಅನುಭವ : 2002-07ರ ಅವಧಿಯಲ್ಲಿ ಗುಜರಾತ್ ವಿಧಾನಸಭಾ ಸದಸ್ಯರು.

ಹೆಸರು: ಶ್ರೀ. ವಿಜಯ್ ಗೋಯಲ್

ಹುಟ್ಟಿದ ಸ್ಥಳ: ದೆಹಲಿ

ಹುಟ್ಟಿದ ದಿನಾಂಕ: 4 ಜನವರಿ 1954

ವಿದ್ಯಾರ್ಹತೆ: ಎಂ.ಕಾಂ., ಎಲ್ಎಲ್.ಬಿ.

ಕ್ಷೇತ್ರ: ರಾಜಾಸ್ಥಾನದಿಂದ ರಾಜ್ಯ ಸಭಾ ಸದಸ್ಯರು.

ಹಿಂದಿನ ಶಾಸಕಾಂಗದ ಅನುಭವ: 11, 12 ಮತ್ತು 13ನೇ ಲೋಕಸಭೆಯಲ್ಲಿ ದೆಹಲಿಯ ಚಾಂದನಿ ಚೌಕ್ ಮತ್ತು ಸದಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಹಿಂದಿನ ಆಡಳಿತಾತ್ಮಕ ಅನುಭವ: ಭಾರತ ಸರ್ಕಾರದ ಕಾರ್ಮಿಕ, ಸಂಸದೀಯ ವ್ಯವಹಾರ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವರು.

ಹೆಸರು: ಶ್ರೀ ಅರ್ಜುನ್ ರಾಮ್ ಮೇಘ್ವಾಲ್

ಹುಟ್ಟಿದ ಸ್ಥಳ: ಕಿಶ್ಮಿದೇಶರ್ ಗ್ರಾಮ, ಬಿಕನೇರ್ ಜಿಲ್ಲೆ (ರಾಜಾಸ್ಥಾನ)

ಹುಟ್ಟಿದ ದಿನಾಂಕ: 20 ಡಿಸೆಂಬರ್ 1953

ವಿದ್ಯಾರ್ಹತೆ: ಎಂ.ಎ, ಎಲ್ಎಲ್.ಬಿ., ಎಂ.ಬಿ.ಎ.

ಕ್ಷೇತ್ರ: ರಾಜಾಸ್ಥಾನದ ಬಿಕನೇರ್ ನಿಂದ (ಎಸ್.ಸಿ.) 16ನೇ ಲೋಕಸಭೆಗೆ ಆಯ್ಕೆ.

ಹಿಂದಿನ ಶಾಸಕಾಂಗದ ಅನುಭವ: 15ನೇ ಲೋಕಸಭೆಗೂ ಆಯ್ಕೆ.

ಹಿಂದಿನ ಆಡಳಿತಾತ್ಮಕ ಅನುಭವ: ನಿವೃತ್ತ ಐ.ಎ.ಎಸ್. ಅಧಿಕಾರಿ.

ಶ್ರೀ ರಾಮದಾಸ್ ಅಥಾವಲೆ

ಹುಟ್ಟಿದ ಸ್ಥಳ : ಅಗಲ್ಗಾನ್, ಸಾಂಗ್ಲಿ ಜಿಲ್ಲೆ, ಮಹಾರಾಷ್ಟ್ರ

ಹುಟ್ಟಿದ ದಿನಾಂಕ : ಡಿಸೆಂಬರ್ 25, 1959

ವಿದ್ಯಾರ್ಹತೆ: ಸ್ನಾತಕ ಪೂರ್ವ

ಕ್ಷೇತ್ರ : 2014ರಿಂದ ಮಹಾರಾಷ್ಟ್ರದಿಂದ ರಾಜ್ಯಸಭೆ ಸದಸ್ಯರು.

ಹಿಂದಿನ ಶಾಸಕಾಂಗದ ಅನುಭವ : ಎರಡು ಬಾರಿ ಲೋಕಸಭಾ ಸದಸ್ಯರು.

ಹೆಸರು:ಶ್ರೀಮತಿ ಅನುಪ್ರಿಯ ಸಿಂಗ್ ಪಟೇಲ್

ಹುಟ್ಟಿದ ಸ್ಥಳ: ಕಾನ್ಪುರ, ಯು.ಪಿ.

ಹುಟ್ಟಿದ ದಿನಾಂಕ: ಏಪ್ರಿಲ್ 21, 1981

ವಿದ್ಯಾರ್ಹತೆ: ಬಿ.ಎ. ಎಂಬಿಎ

ಕ್ಷೇತ್ರ: ಯುಪಿಯ ಮಿರ್ಜಾಪುರ್ ದಿಂದ ಪ್ರಥಮ ಬಾರಿಗೆ 16ನೇ ಲೋಕಸಭೆಗೆ ಆಯ್ಕೆ..

ಹಿಂದಿನ ಶಾಸಕಾಂಗದ ಅನುಭವ- 2012-14ರವರೆಗೆ ಯು.ಪಿ. ವಿಧಾನಸಭೆಯ ಸದಸ್ಯರು.

ಹೆಸರು:ಅನಿಲ್ ಮಾಧವ್ ದವೆ

ಹುಟ್ಟಿದ ಸ್ಥಳ: ಬಾರ್ ನಗರ್, ಉಜೈನಿ, ಮಧ್ಯಪ್ರದೇಶ

ಹುಟ್ಟಿದ ದಿನಾಂಕ: ಜುಲೈ, 6, 1956

ವಿದ್ಯಾರ್ಹತೆ: ಎಂ.ಕಾಂ,

ಕ್ಷೇತ್ರ: ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರು.

ಹಿಂದಿನ ಶಾಸಕಾಂಗದ ಅನುಭವ: 2009 ಮತ್ತು 2010ರಲ್ಲಿ ಎರಡು ಬಾರಿ ರಾಜ್ಯಸಭೆಗೆ ಆಯ್ಕೆ.

ಹೆಸರು: ಶ್ರೀ ಪಿ.ಪಿ. ಚೌಧರಿ

ಹುಟ್ಟಿದ ಸ್ಥಳ: ಭಾವಿ, ಜೋದ್ ಪುರ ಜಿಲ್ಲೆ, (ರಾಜಾಸ್ಥಾನ)

ಹುಟ್ಟಿದ ದಿನಾಂಕ: ಜುಲೈ 12, 1953

ವಿದ್ಯಾರ್ಹತೆ: ಬಿ.ಎಸ್ಸಿ, ಎಲ್ಎಲ್.ಬಿ.

ಕ್ಷೇತ್ರ: ಪಾಲಿ

ಹೆಸರು: ಡಾ. ಸುಭಾಷ್ ರಾಮ್ ರಾವ್ ಭಮ್ರೆ

ಹುಟ್ಟಿದ ಸ್ಥಳ : ಮಲ್ಪುರ್, ಜಿಲ್ಲೆ ಧುಲೆ, ( ಮಹಾರಾಷ್ಟ್ರ)

ಹುಟ್ಟಿದ ದಿನಾಂಕ: 11 ಸೆಪ್ಟೆಂಬರ್, 1953

ವಿದ್ಯಾರ್ಹತೆ: ಎಂ.ಬಿ.ಬಿ.ಎಸ್., ಎಂ.ಎಸ್. (ಜನರಲ್ ಸರ್ಜರಿ, ತಜ್ಞತೆ- ಗ್ರಂಥಿ ಶಸ್ತ್ರಚಿಕಿತ್ಸೆ)

ಮುಂಬೈ ಗ್ರಾಂಟ್ ವೈದ್ಯಕೀಯ ಕಾಲೇಜ್, ಜೆ.ಜೆ. ಆಸ್ಪತ್ರೆ, ಮುಂಬೈ, ಟಾಟಾ ಕ್ಯಾನ್ಸರ್ ಆಸ್ಪತ್ರೆ ಮುಂಬೈನಿಂದ ಶಿಕ್ಷಣ (ಮುಂಬೈ)

ಕ್ಷೇತ್ರ: ಧುಲೆ

ಹೆಸರು: ಎಂ.ಜೆ. ಅಕ್ಬರ್

ಹುಟ್ಟಿದ ಸ್ಥಳ: ಕಲ್ಕತ್ತಾ ಈಗ ಕೋಲ್ಕತ್ತಾ

ಹುಟ್ಟಿದ ದಿನಾಂಕ: 11.01.1951

ವಿದ್ಯಾರ್ಹತೆ: ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ. (ಹಾನರ್ಸ್) ಇಂಗ್ಲಿಷ್.

ಕ್ಷೇತ್ರ: ಜಾರ್ಖಂಡ್ ನಿಂದ ರಾಜ್ಯಸಭೆ ಸದಸ್ಯರು.

ಹಿಂದಿನ ಶಾಸಕಾಂಗದ ಅನುಭವ: 1989ರಿಂದ 1991ರವರೆಗೆ ಮಧ್ಯಪ್ರದೇಶದ ಕಿಷನ್ ಗಂಜ್ ನಿಂದ ಲೋಕಸಭಾ ಸದಸ್ಯರು.

ಹೆಸರು: ಶ್ರೀ ರಮೇಶ್ ಚಂದಪ್ಪ ಜಿಗಜಿಣಗಿ

ಹುಟ್ಟಿದ ಸ್ಥಳ: ಅಥರ್ಗಾ, ಬಿಜಾಪುರ, ಕರ್ನಾಟಕ

ಹುಟ್ಟಿದ ದಿನಾಂಕ: 28 ಜೂನ್ 1952

ವಿದ್ಯಾರ್ಹತೆ: ಬಿ.ಎ.

ಕ್ಷೇತ್ರ: ಬಿಜಾಪುರ, ಕರ್ನಾಟಕ.

ಹಿಂದಿನ ಶಾಸಕಾಂಗದ ಅನುಭವ: 1998ರಿಂದ ಐದು ಬಾರಿ ಲೋಕ ಸಭಾ ಸದಸ್ಯರು. 1983ರಿಂದ 1998ರವರೆಗೆ ಮೂರು ಅವಧಿಗೆ ಕರ್ನಾಟಕ ವಿಧಾನಸಭೆಯ ಸದಸ್ಯರು.

ಹಿಂದಿನ ಆಡಳಿತಾತ್ಮಕ ಅನುಭವ: ಗೃಹ ಮತ್ತು ಅಬಕಾರಿ ಖಾತೆ ಸಹಾಯಕ ಸಚಿವರು, ಸಮಾಜ ಕಲ್ಯಾಣ ಮತ್ತು ಕಂದಾಯ ಖಾತೆ ಸಂಪುಟ ಸಚಿವರು, ಕರ್ನಾಟಕ ಸರ್ಕಾರ.

ಹೆಸರು: ಶ್ರೀ ಜಸ್ವಂತ್ ಸಿನ್ಹ ಸುಮನ್ ಭಾಯ್ ಭಬೌರ್

ಹುಟ್ಟಿದ ಸ್ಥಳ: ದಾಸ, ದಹೋದ್ ಜಿಲ್ಲೆ (ಗುಜರಾತ್)

ಹುಟ್ಟಿದ ದಿನಾಂಕ: 22 ಆಗಸ್ಟ್ 1966

ವಿದ್ಯಾರ್ಹತೆ: ಬಿ.ಎ.

ಕ್ಷೇತ್ರ: ದಹೋದ್ ಗುಜರಾತ್

ಹಿಂದಿನ ಶಾಸಕಾಂಗದ ಅನುಭವ: 1995ರಿಂದ 2014ರವೆಗೆ ಐದು ಬಾರಿ ಗುಜರಾತ್ ವಿಧಾನಸಭಾ ಸದಸ್ಯರು.

ಹಿಂದಿನ ಆಡಳಿತಾತ್ಮಕ ಅನುಭವ: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಉಪ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅರಣ್ಯ ಮತ್ತು ಪರಿಸರ, ಬುಡಕಟ್ಟು ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣ ವಸತಿ ಖಾತೆ ಸಹಾಯಕ ಸಚಿವರು, ಗುಜರಾತ್ ಸರ್ಕಾರ.

ಹೆಸರು:ಡಾ. ಮಹೇಂದ್ರ ನಾಥ್ ಪಾಂಡೆ

ಹುಟ್ಟಿದ ಸ್ಥಳ: ವಿಲ್, ಪಕಾಪುರ್, ಗಾಜೀಪುರ್ ಜಿಲ್ಲೆ, ಉತ್ತರ ಪ್ರದೇಶ

ಹುಟ್ಟಿದ ದಿನಾಂಕ: 15 ಅಕ್ಟೋಬರ್ 1957

ವಿದ್ಯಾರ್ಹತೆ: ಎಂ.ಎ. ಪತ್ರಿಕೋದ್ಯಮ ಮತ್ತು ಪಿ.ಎಚ್.ಡಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯ.

ಕ್ಷೇತ್ರ: ಚಂದೌಲಿ, ಉತ್ತರ ಪ್ರದೇಶ

ಹಿಂದಿನ ಶಾಸಕಾಂಗದ ಅನುಭವ: 1991ರಿಂದ 1992ರವರೆಗೆ ಮತ್ತು 1996ರಿಂದ 2002ರವರೆಗೆ ಯು.ಪಿ. ವಿಧಾನಸಭೆ ಸದಸ್ಯರು.

ಹಿಂದಿನ ಆಡಳಿತಾತ್ಮಕ ಅನುಭವ: ವಸತಿ ಮತ್ತು ನಗರಾಭಿವೃದ್ಧಿ, ಯೋಜನೆ ಮತ್ತು ಪಂಚಾಯತ್ ರಾಜ್ ಸಹಾಯಕ ಸಚಿವರು, ಉತ್ತರ ಪ್ರದೇಶ ಸರ್ಕಾರ.

ಹೆಸರು: ಶ್ರೀ. ಪುರುಷೋತ್ತಮ ರೂಪಾಲ

ಹುಟ್ಟಿದ ಸ್ಥಳ: ಇಸ್ವಾರಿಯಾ, ಅಮರೇಲಿ ಜಿಲ್ಲೆ, ಗುಜರಾತ್.

ಹುಟ್ಟಿದ ದಿನಾಂಕ: 1 ಅಕ್ಟೋಬರ್ 1954

ವಿದ್ಯಾರ್ಹತೆ: ಬಿ.ಎಸ್ಸಿ ಮತ್ತು ಬಿ.ಇಡಿ.

ಕ್ಷೇತ್ರ: ಜೂನ್ 2016ರಿಂದ ಗುಜರಾತ್ ನಿಂದ ರಾಜ್ಯ ಸಭಾ ಸದಸ್ಯರು..

ಹಿಂದಿನ ಶಾಸಕಾಂಗದ ಅನುಭವ: 2008-09ರ ಅವಧಿಯಲ್ಲಿ ರಾಜ್ಯ ಸಭಾ ಸದಸ್ಯರು.1991ರಿಂದ ಸತತ ಮೂರು ಬಾರಿ ಗುಜರಾತ್ ವಿಧಾನಸಭೆಯ ಸದಸ್ಯರು.

ಹಿಂದಿನ ಆಡಳಿತಾತ್ಮಕ ಅನುಭವ: ನರ್ಮದಾ ನೀರಾವರಿ ಮತ್ತು ನೀರು ಪೂರೈಕೆ ಮತ್ತು ಕೃಷಿ ಸಚಿವರು, ಗುಜರಾತ್ ಸರ್ಕಾರ.

ಹೆಸರು: ಶ್ರೀ ಅಜಯ್ ತಮ್ಟ

ಹುಟ್ಟಿದ ಸ್ಥಳ : ಅಲ್ಮೊರಾ, ಉತ್ತರಾಖಂಡ

ಹುಟ್ಟಿದ ದಿನಾಂಕ: ಜುಲೈ 16,1972

ವಿದ್ಯಾರ್ಹತೆ : ಇಂಟರ್ ಮೀಡಿಯೇಟ್ (ವಿಜ್ಞಾನ)

ಕ್ಷೇತ್ರ : ಉತ್ತರಾಖಂಡದ ಅಲ್ಮೋರಾ (ಎಸ್.ಸಿ.) ಕ್ಷೇತ್ರದಿಂದ ಪ್ರಥಮ ಬಾರಿಗೆ ಲೋಕಸಭೆಗೆ ಆಯ್ಕೆ.

ಹಿಂದಿನ ಶಾಸಕಾಂಗದ ಅನುಭವ : ಉತ್ತರಾಖಂಡದ ವಿಧಾನಸಭೆಗೆ 2007-12 ಮತ್ತು 2012-14 ಅವಧಿಗೆ ಸದಸ್ಯರು.

ಹಿಂದಿನ ಆಡಳಿತಾತ್ಮಕ ಅನುಭವ : ಉತ್ತರಾಖಂಡ ಸರ್ಕಾರದ 2008-09ರ ಅವಧಿಯಲ್ಲಿ ಸಂಪುಟ ಸಚಿವರು, ಮತ್ತು 2007-08ರ ಅವಧಿಯಲ್ಲಿ ರಾಜ್ಯ ಸಚಿವರು.

ಹೆಸರು: ಶ್ರೀಮತಿ. ಕೃಷ್ಣಾ ರಾಜ್

ಹುಟ್ಟಿದ ಸ್ಥಳ : ಫೈಜಾಬಾದ್, ಯು.ಪಿ.

ಹುಟ್ಟಿದ ದಿನಾಂಕ : ಫೆಬ್ರವರಿ 22, 1967

ವಿದ್ಯಾರ್ಹತೆ : ಎಂ.ಎ. ಅವಧಾ ವಿಶ್ವವಿದ್ಯಾಲಯ

ಕ್ಷೇತ್ರ : ಶಹಜಹಾನ್ ಪುರ (ಎಸ್.ಸಿ.)ದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆ, ಯು.ಪಿ.

ಹಿಂದಿನ ಶಾಸಕಾಂಗದ ಅನುಭವ : 1996-2002 ಮತ್ತು 2007-2012ರಲ್ಲಿ ಎರಡು ಬಾರಿ ಉತ್ತರ ಪ್ರದೇಶ ವಿಧಾನಸಭೆ ಸದಸ್ಯರು.