ಲಕ್ಷದ್ವೀಪದ ಆಡಳಿತಾಧಿಕಾರಿ ಶ್ರೀ ದಿನೇಶ್ವರ್ ಶರ್ಮ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿದ್ದ ಶ್ರೀ ದಿನೇಶ್ವರ್ ಶರ್ಮ ಅವರು ಭಾರತೀಯ ಪೊಲೀಸ್ ವ್ಯವಸ್ಥೆ ಮತ್ತು ಭದ್ರತೆಗೆ ಎಂದಿಗೂ ಮರೆಯಲಾಗದ ಕೊಡುಗೆ ನೀಡಿದ್ದಾರೆ. ಅವರು ತಮ್ಮ ಪೊಲೀಸ್ ವೃತ್ತಿಯಲ್ಲಿ ಹಲವು ಸೂಕ್ಷ್ಮ ಭಯೋತ್ಪಾದನಾ ಮತ್ತು ಬಂಡಕೋರರ ನಿಗ್ರಹ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ನಿಧನ ದುಃಖ ತಂದಿದೆ, ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ’’ ಎಂದು ಹೇಳಿದ್ದಾರೆ.
***
Administrator of Lakshadweep Shri Dineshwar Sharma Ji made long lasting contributions to India’s policing and security apparatus. He handled many sensitive counter terror and insurgency ops during his policing career. Anguished by his demise. Condolences to his family. Om Shanti.
— Narendra Modi (@narendramodi) December 4, 2020