Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೂರ್ವ ರೈಲ್ವೆಯ ಮೆಕಾನಿಕಲ್ ವಿಭಾಗದಲ್ಲಿ ಒಂದು ಮುಖ್ಯ ಕಾಮಗಾರಿ ವ್ಯವಸ್ಥಾಪಕ ಹುದ್ದೆ ಸೃಷ್ಟಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಒಂದು ಹಿರಿಯ ಆಡಳಿತಾತ್ಮಕ ಶ್ರೇಣಿಯ (ಎಸ್.ಎ.ಜಿ.) ಹುದ್ದೆಯಾದ ಮುಖ್ಯ ಕಾಮಗಾರಿ ವ್ಯವಸ್ಥಾಪಕ (ಸಿ.ಡಬ್ಲ್ಯುಎಂ) ಹುದ್ದೆಯನ್ನು ಪೂರ್ವ ರೈಲ್ವೆಯ ಡಂಕುಣಿ ಡೀಸೆಲ್ ಕಾಂಪೊನೆಂಟ್ ಕಾರ್ಖಾನೆಯ, ಮೆಕಾನಿಕಲ್ ವಿಭಾಗದಲ್ಲಿ ಸೃಷ್ಟಿಸಲು ತನ್ನ ಅನುಮೋದನೆ ನೀಡಿದೆ.

ಪೂರ್ವ ರೈಲ್ವೆಯ ಡಂಕುಣಿ ಡೀಸೆಲ್ ಕಾಂಪೊನೆಂಟ್ ಕಾರ್ಖಾನೆಯಲ್ಲಿ ಈ ಹುದ್ದೆ ಪ್ರಮುಖ ಭಾಗವಾಗಲಿದೆ ಮತ್ತು ಕಾರ್ಖಾನೆಯ ಸಮರ್ಪಕ ಕಾರ್ಯ ನಿರ್ವಹಣೆಯ ಖಾತ್ರಿಗಾಗಿ ಮತ್ತು ಗುರಿ ಸಾಧನೆಗಾಗಿ ಆಡಳಿತಾತ್ಮಕ ಚೌಕಟ್ಟನ್ನು ಬಲಪಡಿಸಲಿದೆ. ಇದರಿಂದ ರೈಲ್ವೆಗೆ ಒಟ್ಟು ವಾರ್ಷಿಕ 1679400/- ರೂ ವೆಚ್ಚ ತಗುಲಲಿದೆ.

ಹಿನ್ನೆಲೆ

ಪೂರ್ವ ರೈಲ್ವೆಯ ಡಂಕುಣಿ ಡೀಸೆಲ್ ಲೋಕೋಮೋಟೀವ್ ಕಾಂಪೊನೆಂಟ್ ಕಾರ್ಖಾನೆಯನ್ನು ಚಾಲನೆಯ ಉತ್ಪಾದನೆಯ ಅಗತ್ಯ ಮತ್ತು ಡೀಸೆಲ್ ಲೋಕೋಮೋಟಿವ್ ವರ್ಕ್ಸ್/ವಾರಾಣಸಿಯ ಸ್ವಂತ ಉತ್ಪಾದನೆ ಮತ್ತು ಯಾಂತ್ರೀಕರಣ ಸಾಮರ್ಥ್ಯದ ನಡುವಿನ ಅಂತರವನ್ನು ತುಂಬುವ ಸಲುವಾಗಿ 100 ಹೈ ಹಾರ್ಸ್ ಪವರ್ ಡೀಸೆಲ್ ಲೋಕೋಮೋಟಿವ್ ಗಳನ್ನು ಚೌಕಟ್ಟಿನಡಿಯಲ್ಲಿ ಪ್ರತಿ ವರ್ಷ ಉತ್ಪಾದಿಸಲು ಮತ್ತು ವಾರ್ಷಿಕ 72 ಕ್ರಾಂಕ್ ಕೇಸ್ ಗಳ ಯಾಂತ್ರೀಕರಣಕ್ಕಾಗಿ ಸ್ಥಾಪಿಸಲಾಗಿದೆ. ಈ ಕಾರ್ಖಾನೆಯು ಡೀಸೆಲ್ ಲೋಕೋಮೋಟಿವ್ ವರ್ಕ್ಸ್/ವಾರಾಣಸಿಯ ಸೋದರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

AKT/NT/VK