Search

ಪಿಎಂಇಂಡಿಯಾಪಿಎಂಇಂಡಿಯಾ

ಶ್ರೀ ವಿಶ್ವನಾಥ್ ಪ್ರತಾಪ್ ಸಿಂಗ್

ಡಿಸೆಂಬರ್ 2, 1989 - ನವೆಂಬರ್ 10, 1990 | ಜನತಾ ದಳ

ಶ್ರೀ ವಿಶ್ವನಾಥ್ ಪ್ರತಾಪ್ ಸಿಂಗ್


ಶ್ರೀ ವಿ.ಪಿ.ಸಿಂಗ್ ಅವರು ಜೂನ್ 25, 1931ರಂದು ಅಲಹಾಬಾದ್ನಲ್ಲಿ ರಾಜಾ ಬಹದ್ದೂರ್ ರಾಮ್ ಗೋಪಾಲ್ ಸಿಂಗ್ ಅವರ ಪುತ್ರರಾಗಿ ಜನಿಸಿದರು. ಅವರು ಅಲಹಾಬಾದ್ ಮತ್ತು ಪೂನಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದರು. ಅವರು ಜೂನ್ 25, 1955ರಲ್ಲಿ ಶ್ರೀಮತಿ ಸೀತಾ ಕುಮಾರಿ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಪುತ್ರರಿದ್ದಾರೆ.

ವಿಧ್ವಾಂಸರಾಗಿದ್ದ ಅವರು ಅಲಹಾಬಾದ್ನ ಕೊರೊಅನ್ ಇಂಟರ್ಮಿಡಿಯೇಟ್ ಕಾಲೇಜು ಆದ ಗೋಪಾಲ ವಿದ್ಯಾಲಯದ ಹೆಮ್ಮೆಯ ಸಂಸ್ಥಾಪಕರು. 1947-48ರಲ್ಲಿ ಅವರು ವಾರಾಣಾಸಿಯ ಉದಯ್ ಪ್ರತಾಪ್ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದರು ಹಾಗೂ ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾಗಿದರು. 1957ರಲ್ಲಿ ಭೂ ದಾನ ಚಳವಳಿಯಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು ಹಾಗೂ ಅಲಹಾಬಾದ್ನ ಪಾಸ್ನಾ ಗ್ರಾಮದಲ್ಲಿ ಚೆನ್ನಾಗಿ ಅಭಿವೃದ್ಧಿಗೊಳಿಸಿದ ತೋಟವನ್ನು ದಾನವಾಗಿ ನೀಡಿದರು.

ಶ್ರೀ ಸಿಂಗ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು ; 1969-71ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಹಾಗೂ 1969-71ರಲ್ಲಿ ಉತ್ತರಪ್ರದೇಶ ಶಾಸನಸಭೆ ಸದಸ್ಯರಾಗಿದ್ದರು ; 1970-71ರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಚೇತಕರಾಗಿ ಕಾರ್ಯನಿರ್ವಹಿಸಿದ್ದರು ; 1971-74ರಲ್ಲಿ ಸಂಸತ್ ಸದಸ್ಯರಾಗಿದ್ದರು (ಲೋಕಸಭೆ) ; ಅಕ್ಟೋಬರ್ 1974 ರಿಂದ ನವೆಂಬರ್ 1976ರವರೆಗೆ ಕೇಂದ್ರ ವಾಣಿಜ್ಯ ಖಾತೆ ಉಪ ಸಚಿವರಾಗಿದ್ದರು ; ನವೆಂಬರ್ 1976 ರಿಂದ ಮಾರ್ಚ್ 1977ರವರೆಗೆ ಕೇಂದ್ರ ವಾಣಿಜ್ಯ ರಾಜ್ಯ ಸಚಿವರಾಗಿ ಕೆಲಸ ಮಾಡಿದರು. ಜನವರಿ 3-ಜುಲೈ 26, 1980ರ ತನಕ ಸಂಸತ್ ಸದಸ್ಯರಾಗಿದ್ದರು (ಲೋಕಸಭೆ). ಜೂನ್ 9, 1980-ಜೂನ್ 28, 1982ರವರೆಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ನವೆಂಬರ್ 21, 1980-ಜೂನ್ 14, 1981ರವರೆಗೆ ಉತ್ತರಪ್ರದೇಶ ವಿಧಾನಸಭೆ ಸದಸ್ಯರಾಗಿದ್ದರು ; ಜೂನ್ 15, 1981-ಜುಲೈ 16, 1983ರವರೆಗೆ ಉತ್ತರಪ್ರದೇಶ ಶಾಸನಸಭೆ ಸದಸ್ಯರಾಗಿದ್ದರು.

ಕೇಂದ್ರ ವಾಣಿಜ್ಯ ಸಚಿವರಾಗಿ ಜನವರಿ 29, 1983ರಲ್ಲಿ ಅಧಿಕಾರ ವಹಿಸಿಕೊಂಡ ಅವರಿಗೆ ಫೆಬ್ರವರಿ 15, 1983ರಲ್ಲಿ ನಾಗರಿಕ ಪೂರೈಕೆ ಇಲಾಖೆಯ ಹೆಚ್ಚುವರಿ ಉಸ್ತುವಾರಿ ನೀಡಲಾಯಿತು. ಜುಲೈ 16, 1983ರಲ್ಲಿ ಅವರು ಸಂಸತ್ ಸದಸ್ಯರಾದರು (ರಾಜ್ಯ ಸಭೆ) ; ಸೆಪ್ಟೆಂಬರ್ 1, 1984ರಂದು ಅವರು ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು ಹಾಗೂ ಡಿಸೆಂಬರ್ 31, 1984ರಲ್ಲಿ ಅವರು ಕೇಂದ್ರ ಹಣಕಾಸು ಸಚಿವರಾದರು.