Search

ಪಿಎಂಇಂಡಿಯಾಪಿಎಂಇಂಡಿಯಾ

ಶ್ರೀ ಇಂದರ್ ಕುಮಾರ್ ಗುಜ್ರಾಲ್

ಏಪ್ರಿಲ್ 21, 1997 - ಮಾರ್ಚ್ 19, 1998 | ಜನತಾ ದಳ

ಶ್ರೀ ಇಂದರ್ ಕುಮಾರ್ ಗುಜ್ರಾಲ್


ಶ್ರೀ ಇಂದರ್ ಕುಮಾರ್ ಗುಜ್ರಾಲ್ ಅವರು 21ನೇ ಏಪ್ರಿಲ್ 1997ರಂದು, ಸೋಮವಾರ ಭಾರತದ 12ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ದಿವಂಗತ ಶ್ರೀ ಅವತಾರ್ ನಾರಾಯಣ್ ಗುಜ್ರಾಲ್ ಮತ್ತು ದಿವಂಗತ ಶ್ರೀಮತಿ ಪುಪ್ಷಾ ಗುಜ್ರಾಲ್ ಅವರ ಪುತ್ರರಾದ ಶ್ರೀ ಗುಜ್ರಾಲ್ ಅವರು ಎಂ.ಎ., ಬಿ.ಕಾಂ., ಪಿಎಚ್.ಡಿ ಹಾಗೂ ಡಿ.ಲಿಟ್ (ಹಾನರ್ಸ್ ಕೌಸಾ) ಪದವಿಗಳನ್ನು ಪಡೆದಿದ್ದಾರೆ. ಇವರು 4ನೇ ಡಿಸೆಂಬರ್ 1919ರಂದು ಜೆಲಮ್ (ಅವಿಭಜಿತ ಪಂಜಾಬ್) ಪಟ್ಟಣದಲ್ಲಿ ಜನಿಸಿದರು. ಅವರು ಮತ್ತು ಶ್ರೀಮತಿ ಶೈಲಾ ಗುಜ್ರಾಲ್ ಮೇ 26, 1945ರಂದು ವಿವಾಹವಾದರು.

ಶ್ರೀ ಗುಜ್ರಾಲ್ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವರು : ಅವರು ಪೋಷಕರಿಬ್ಬರೂ ಪಂಜಾಬ್ನಲ್ಲಿ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಹನ್ನೊಂದನೇ ವರ್ಷದಲ್ಲೇ 1931ರಲ್ಲಿ ಇವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡರು. ಜೆಲುಮ್ ಪಟ್ಟಣದಲ್ಲಿ ಮಕ್ಕಳ ಚಳವಳಿಯನ್ನು ಸಂಘಟಿಸಿದ್ದಾಕ್ಕಾಗಿ ಇವರನ್ನು ಪೊಲೀಸರು ಬಂಧಿಸಿ ತೀವ್ರವಾಗಿ ಥಳಿಸಿದ್ದರು. ಭಾರತ ಬಿಟ್ಟು ತೊಲಗಿ ಚಳವಳಿ ವೇಳೆ ಇವರನ್ನು ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಶ್ರೀ ಗುಜ್ರಾಲ್ ಅವರು ಜೂನ್ 1, 1996ರಿಂದ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು. ಜೂನ್ 28, 1996ರಿಂದ ಜಲ ಸಂಪನ್ಮೂಲ ಸಚಿವಾಲಯದ ಹೆಚ್ಚುವರಿ ಉಸ್ತುವಾರಿಯನ್ನು ಅವರಿಗೆ ನೀಡಲಾಗಿತ್ತು. ಈ ಮುನ್ನ 1989-1990ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1976-1980ರವರೆಗೆ ಇವರು ಯುಎಸ್ಎಸ್ಆರ್ಗೆ ಭಾರತದ ರಾಯಭಾರಿಯಾಗಿದ್ದರು (ಸಂಪುಟ ದರ್ಜೆ) ಹಾಗೂ 1967-1976ರವರೆಗೆ ಈ ಕೆಳಕಂಡ ಸಚಿವ ಸ್ಥಾನಗಳನ್ನು ಹೊಂದಿದ್ದರು.
ಸಂಪರ್ಕ ಮತ್ತು ಸಂಸದೀಯ ವ್ಯವಹಾರ ಸಚಿವರು ; ವಾರ್ತಾ ಮತ್ತು ಪ್ರಸಾರ ಹಾಗೂ ಸಂಪರ್ಕ ಸಚಿವರು ; ಕಾಮಗಾರಿ ಮತ್ತು ವಸತಿ ಸಚಿವರು ; ವಾರ್ತಾ ಮತ್ತು ಪ್ರಸಾರ ಸಚಿವರು ; ಯೋಜನಾ ಸಚಿವರು.

ಸಂಸದೀಯ ಸ್ಥಾನಗಳು :

ಜೂನ್ 1996ರಿಂದ ರಾಜ್ಯಸಭೆಯ ಸಭಾ ನಾಯಕರು ; 1993ರಿಂದ ಏಪ್ರಿಲ್ 1996ರವರೆಗೆ ವಾಣಿಜ್ಯ ಮತ್ತು ಜವಳಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರು ; ಎಪ್ರಿಲ್ 1996ರವರೆಗೆ ವಿದೇಶಾಂಗ ವ್ಯವಹಾರ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರು ; 1964ರಿಂದ 1976, 1989ರಿಂದ 1991ರವರೆಗೆ ಸಂಸತ್ ಸದಸ್ಯರು ; 1992ರಲ್ಲಿ ಬಿಹಾರದಿಂದ ರಾಜ್ಯ ಸಭಾ ಸದಸ್ಯರಾಗಿ ಮರು ಆಯ್ಕೆ ; ರಾಜ್ಯ ಸಭೆಯ ಪಿರ್ಯಾದುಗಳು ಕುರಿತ ಸಮಿತಿ, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ನಿಯಮಗಳ ಸಮಿತಿ ; ರಾಜ್ಯಸಭೆಯ ಅಧೀನ ಶಾಸನ ಕುರಿತು ಸಮಿತಿ ; ರಾಜ್ಯ ಸಭೆಯ ಸಾಮಾನ್ಯ ಉದ್ದೇಶಗಳ ಸಮಿತಿ : ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಸದಸ್ಯರು.

ಇತರೆ ಮುಖ್ಯ ಸ್ಥಾನಮಾನಗಳು :

ಅಧ್ಯಕ್ಷರು, ಇಂಡಿಯನ್ ಕೌನ್ಸಿಲ್ ಆಫ್ ಸೌತ್ ಏಷ್ಯನ್ ಕೋ-ಆಪರೇಷನ್ ; ಬಂಡವಾಳ ಯೋಜನೆ ಉಸ್ತುವಾರಿ ಸಮಿತಿ ಸದಸ್ಯರು ; ರಕ್ಷಣಾ ಅಧ್ಯಯನಗಳು ಮತ್ತು ವಿಶ್ಲೇಷಣಾ ಸಂಸ್ಥೆ (ಐಡಿಎಸ್ಎ) ಮಾಜಿ ಅಧ್ಯಕ್ಷರು ; ಉರ್ದು ಪ್ರವರ್ತನ ಅಧಿಕೃತ ಸಮಿತಿ (ಗುಜ್ರಾಲ್ ಸಮಿತಿ) ಅಧ್ಯಕ್ಷರು ; 1959-64ರವರೆಗೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಉಪಾಧ್ಯಕ್ಷರು ; ಲಾಹೋರ್ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರು ; ಪಂಜಾಬ್ ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ; ಕೊಲ್ಕತ್ತಾ, ಶ್ರೀನಗರ ಮತ್ತು ದೆಹಲಿಯ ರಾಜ್ಯಗಳಲ್ಲಿ ನಡೆದ ವಿರೋಧ ಪಕ್ಷಗಳ ಸಂಯುಕ್ತ ರಂಗ ಸಮಾವೇಶ ಸಂಚಾಲಕರು ಮತ್ತು ವಕ್ತಾರರು.

ಅಂತಾರಾಷ್ಟೀಯ ನಿಯೋಗಗಳು :

1996ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನಕ್ಕೆ ಭಾರತೀಯ ನಿಯೋಗದ ನಾಯಕರು ; 1995ರಲ್ಲಿ ಜಿನಿವಾದಲ್ಲಿ ನಡೆದ ಮಾನವ ಹಕ್ಕುಗಳ ವಿಶ್ವಸಂಸ್ಥೆ ಅಧಿವೇಶನಕ್ಕೆ ಭಾರತೀಯ ನಿಯೋಗದ ನಾಯಕರು ; 1990ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನಕ್ಕೆ ಭಾರತೀಯ ನಿಯೋಗದ ನಾಯಕರು ; 1990ರಲ್ಲಿ ಆರ್ಥಿಕ ಅಭಿವೃದ್ದಿಯ ವಿಶ್ವಸಂಸ್ಥೆ ವಿಶೇಷ ಅಧಿವೇಶನಕ್ಕೆ ಭಾರತೀಯ ನಿಯೋಗದ ನಾಯಕರು ; 1995 ಮತ್ತು 1994ರಲ್ಲಿ ಯುಎನ್ಒಗೆ ಭಾರತೀಯ ನಿಯೋಗದ ಸದಸ್ಯರು ; 1977ರಲ್ಲಿ ಶಿಕ್ಷಣ ಮತ್ತು ಪರಿಸರ ಕುರಿತ ಯುನೆಸ್ಕೋ ಸಮಾವೇಶಕ್ಕೆ ಭಾರತೀಯ ನಿಯೋಗದ ನಾಯಕರು ; 1970, 1972 ಹಾಗೂ 1974ರಲ್ಲಿ ಯುನೆಸ್ಕೋ ಸಮಾವೇಶ್ಕೆಕ ಭಾರತೀಯ ನಿಯೋಗದ ಪರ್ಯಾಯ ನಾಯಕರು ; ಪ್ಯಾರಿಸ್ನಲ್ಲಿ 1973ರಲ್ಲಿ ನಡೆದ ಮಾನವ ಮತ್ತು ನೂತನ ಸಂವಹನ ವ್ಯವಸ್ಥೆಗಳು ಕುರಿತ ಯುನೆಸ್ಕೋ ವಿಚಾರಸಂಕಿರಣದ ಅಧ್ಯಕ್ಷರು ; 1995ರಲ್ಲಿ ಬುಚರೆಸ್ಟ್ನಲ್ಲಿ ನಡೆದ ಅಂತರ್-ಸಂಸದೀಯ ಒಕ್ಕೂಟ ಸಮಾವೇಶದ ಪ್ರತಿನಿಧಿ ; 1994ರಲ್ಲಿ ಕೆನಡಾದಲ್ಲಿ ನಡೆದ ಕಾಮನ್ವೆಲ್ತ್ ಸಂಸದೀಯ ಸಂಘ ಸಮಾವೇಶದ ಪ್ರತಿನಿಧಿ ; 1967ರಲ್ಲಿ ಕ್ಯಾನ್ಬೆರಾದಲ್ಲಿ (ಆಸ್ಟ್ರೇಲಿಯಾ) ನಡೆದ ಅಂತರ್-ಸಂಸದೀಯ ಒಕ್ಕೂಟ ಸಭೆಯ ಪ್ರತಿನಿಧಿ ; 1974ರಲ್ಲಿ ಸ್ಟಾಕ್ಹೋಂನಲ್ಲಿ ನಡೆದ ಪರಿಸರ ಕುರಿತ ವಿಶ್ವಸಂಸ್ಥೆ ಅಧಿವೇಶನಕ್ಕೆ ಭಾರತೀಯ ನಿಯೋಗದ ಪರ್ಯಾಯ ನಾಯಕರು ; 1975ರಲ್ಲಿ ಗ್ಯಾಬೋನ್, ಕ್ಯಾಮರೂನ್, ಕಾಂಗೋ, ಚಾಡ್ ಮತ್ತು ರಿಪಬ್ಲಿಕ್ ಆಫ್ ಸೆಂಟ್ರಲ್ ಆಫ್ರಿಕಾಗೆ ಭಾರತದ ವಿಶೇಷ ಧೂತರು : 1966ರಲ್ಲಿ ರಿಪಬ್ಲಿಕ್ ಆಫ್ ಮಾಲವಿ ಉದ್ಘಾಟನೆಗೆ ಭಾರತದ ವಿಶೇಷ ಧೂತರು ; 1961ರಲ್ಲಿ ಬಲ್ಗೇರಿಯಾಗೆ ವಿಶೇಷ ಧೂತರು ; ಶ್ರೀಲಂಕಾ, ಭೂತಾನ್, ಈಜಿಪ್ಟ್ ಮತ್ತು ಸೂಡಾನ್ ದೇಶಗಳಿಗೆ ಭಾರತದ ರಾಷ್ಟ್ರಪತಿಯವರ ಭೇಟಿ ವೇಳೆ ಕೇಂದ್ರ ಸಚಿವರಾಗಿ ಹಾಜರಿ ; ಅಧ್ಯಕ್ಷರು-ಇಂಡಿಯನ್ ಕೌನ್ಸಿಲ್ ಆಫ್ ಸೌತ್ ಏಷ್ಯನ್ ಕೋ-ಆಪರೇಷನ್ ; 1961ರಲ್ಲಿ ನಡೆದ ಏಷ್ಯನ್ ರೋಟರಿ ಸಮಾವೇಶದ ಸಹ ಅಧ್ಯಕ್ಷರು.

ಸಾಮಾಜಿಕ ಸಂಘಟನೆಗಳೊಂದಿಗೆ ಒಡನಾಟ:

ಅಧ್ಯಕ್ಷರು, ನಾರಿ ನಿಕೇತನ್ ಟ್ರಸ್ಟ್ ಹಾಗೂ ಎ.ಎನ್.ಗುಜ್ರಾಲ್ ಮೆಮೋರಿಯಲ್ ಸ್ಕೂಲ್, ಜಲಂಧರ್ (ಪಂಜಾಬ್) ; ಅಧ್ಯಕ್ಷರು, ಇಂಡೋ-ಪಾಕ್ ಫ್ರೆಂಡ್ಶಿಫ್ ಸೊಸೈಟಿ ; ಸಂಸ್ಥಾಪಕ ಅಧ್ಯಕ್ಷರು, ದೆಹಲಿ ಆರ್ಟ್ ಥಿಯೇಟರ್ ; ಉಪಾಧ್ಯಕ್ಷರು, ಲೋಕಸಭಾ ಕಲ್ಯಾಣ ಸಮಿತಿ : ಅಧ್ಯಕ್ಷರು, ದೆಹಲಿ ರೋಟರಿ ಕ್ಲಬ್, 1960 ; 1961ರಲ್ಲಿ ಏಷ್ಯನ್ ರೋಟರಿ ಸಮಾವೇಶದ ಸಹ ಅಧ್ಯಕ್ಷರು.

ವಿಶೇಷ ಆಸಕ್ತಿಗಳು :

ಶ್ರೀ ಗುಜ್ರಾಲ್ ಅವರು ಬರಹಗಾರರು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳು ಹಾಗೆಯೇ ರಂಗಭೂಮಿಯ ವೀಕ್ಷಕ ವಿವರಣೆಗಾರರು.