ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಕಟಕ್ ಪೀಠದ ಕಚೇರಿ ಸಹಿತ ವಸತಿ ಸಮುಚ್ಛಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಈ ಪೀಠ ಈಗ ಆಧುನಿಕ ಸೌಲಭ್ಯಗಳನ್ನು ಒಡಿಶಾಗೆ ಮಾತ್ರವಲ್ಲ, ಪೂರ್ವ ಮತ್ತು ಈಶಾನ್ಯದ ಲಕ್ಷಾಂತರ ತೆರಿಗೆದಾರರಿಗೆ ಒದಗಿಸುತ್ತದೆ ಮತ್ತು ವಲಯದ ಎಲ್ಲ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನೆರವಾಗುತ್ತದೆ ಎಂದರು.
ಇಂದು ದೇಶ ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯತ್ತ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಬದಲಾವಣೆ ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ದೃಷ್ಟಿಕೋನದಿಂದ ಬಂದಿದೆ ಎಂದರು. ತಂತ್ರಜ್ಞಾನದ ನೆರವಿನಿಂದ ನಿಯಮಗಳು ಮತ್ತು ಪ್ರಕ್ರಿಯೆಗಳಲ್ಲಿ ಸುಧಾರಣೆ ಮಾಡಲಾಗಿದೆ ಎಂದರು. “ನಾವು ಸ್ಪಷ್ಟ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಅದೇ ಸಮಯದಲ್ಲಿ ತೆರಿಗೆ ಆಡಳಿತದ ಮನಸ್ಥಿತಿಯನ್ನು ಪರಿವರ್ತಿಸುತ್ತೇವೆ.” ಎಂದು ಹೇಳಿದರು.
ದೇಶದ ಸಂಪತ್ತಿನ ಸೃಷ್ಟಿಕರ್ತರ ತೊಂದರೆಗಳು ಕಡಿಮೆಯಾದಾಗ ಅವರಿಗೆ ರಕ್ಷಣೆ ಸಿಗುತ್ತದೆ, ನಂತರ ದೇಶದ ವ್ಯವಸ್ಥೆಗಳಲ್ಲಿ ಅವರ ನಂಬಿಕೆ ಬೆಳೆಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಬೆಳೆಯುತ್ತಿರುವ ನಂಬಿಕೆಯ ಫಲಶ್ರುತಿಯಿಂದಾಗಿ ದೇಶದ ಅಭಿವೃದ್ಧಿಗಾಗಿ ತೆರಿಗೆ ವ್ಯವಸ್ಥೆಯಲ್ಲಿ ಸೇರಲು ಹೆಚ್ಚು ಹೆಚ್ಚು ಪಾಲುದಾರರು ಮುಂದೆ ಬರುತ್ತಿದ್ದಾರೆ. ತೆರಿಗೆ ಕಡಿತ ಮತ್ತು ಪ್ರಕ್ರಿಯೆಯಲ್ಲಿನ ಸರಳತೆಯ ಜೊತೆಗೆ, ಮಾಡಲಾಗಿರುವ ಅತಿದೊಡ್ಡ ಸುಧಾರಣೆಗಳು ಪ್ರಾಮಾಣಿಕ ತೆರಿಗೆದಾರರ ಘನತೆಗೆ ಸಂಬಂಧಿಸಿದ್ದಾಗಿದ್ದು, ಅವರನ್ನು ತೊಂದರೆಯಿಂದ ರಕ್ಷಿಸುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ಸರ್ಕಾರದ ಆಲೋಚನಾ ಪ್ರಕ್ರಿಯೆಯು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ ಅದನ್ನು ಸಂಪೂರ್ಣವಾಗಿ ನಂಬುವುದಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಇದರ ಫಲವಾಗಿ, ಇಂದು ದೇಶದಲ್ಲಿ ದಾಖಲಾದ ಶೇ.99.75ರಷ್ಟು ರಿಟರ್ನ್ಸ್ ಅನ್ನು ಯಾವುದೇ ಆಕ್ಷೇಪಣೆಗಳಿಲ್ಲದೆ ಸ್ವೀಕರಿಸಲಾಗಿದೆ. ಇದು ದೇಶದ ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂದರು.
ದೀರ್ಘಕಾಲದ ಗುಲಾಮಗಿರಿಯ ಬಳಿಕ ತೆರಿಗೆದಾರರು ಮತ್ತು ತೆರಿಗೆ ಸಂಗ್ರಹಕಾರರ ನಡುವಿನ ಸಂಬಂಧವನ್ನು ಶೋಷಿತರು ಮತ್ತು ಶೋಷಿಸುವವರನ್ನಾಗಿ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು. ಗೋಸ್ವಾಮಿ ತುಳಸೀದಾಸರ “बरसत हरसत सब लखें, करसत लखे न कोय तुलसी प्रजा सुभाग से, भूप भानु सो होय” ಅರ್ಥ: ಯಾವಾಗ ಮೋಡಗಳು ಮಳೆ ಸುರಿಸುತ್ತವೆಯೋ ಆಗ ಅದರ ಪ್ರಯೋಜನ ನಮಗೆಲ್ಲರಿಗೂ ಗೋಚರಿಸುತ್ತದೆ; ಆದರೆ, ಮೋಡಗಳು ರೂಪುಗೊಂಡಾಗ ಸೂರ್ಯ ನೀರನ್ನು ಹೀರಿಕೊಂಡರೆ ಯಾರಿಗೂ ತೊಂದರೆ ಆಗುವುದಿಲ್ಲ ಎಂದ ಅವರು, ಅದೇ ರೀತಿ ಆಡಳಿತ ಕೂಡ ಶ್ರೀಸಾಮಾನ್ಯರಿಂದ ತೆರಿಗೆ ಸಂಗ್ರಹಿಸುವಾಗ ತೊಂದರೆ ನೀಡಬಾರದು; ಆದರೆ, ಆ ಹಣ ನಾಗರಿಕರನ್ನು ತಲುಪಿದಾಗ ಜನರು ತಮ್ಮ ಬದುಕಿನಲ್ಲಿ ಅದರ ಪ್ರಯೋಜನಗಳ ಅನುಭವ ಪಡೆಯುತ್ತಾರೆ ಎಂದರು. ಕೆಲವು ವರ್ಷಗಳಲ್ಲಿ, ಸರ್ಕಾರವು ಈ ದೃಷ್ಟಿಕೋನದೊಂದಿಗೆ ಮುಂದುವರೆದಿದೆ ಮತ್ತು ಇಂದಿನ ತೆರಿಗೆದಾರರು ಇಡೀ ತೆರಿಗೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳು ಮತ್ತು ಪಾರದರ್ಶಕತೆಗೆ ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು. ತೆರಿಗೆ ಪಾವತಿದಾರರು ಈಗ ಮರುಪಾವತಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ ಮತ್ತು ಕೆಲವೇ ವಾರಗಳಲ್ಲಿ ಮರುಪಾವತಿಯನ್ನು ಪಡೆದು, ಪಾರದರ್ಶಕತೆಯ ಫಲ ಅನುಭವಿಸುತ್ತಾರೆ ಎಂದು ಹೇಳಿದರು. ಇಲಾಖೆಯು ಅತ್ಯಂತ ಹಳೆಯ ವಿವಾದಗಳನ್ನು ಸ್ವಯಂ ಪರಿಹರಿಸುವುದನ್ನು ನೋಡಿದಾಗ, ಅವರಿಗೆ ಪಾರದರ್ಶಕತೆಯ ಅನುಭವವಾಗುತ್ತದೆ. ಅವರು ಮುಖಾಮುಖಿ ರಹಿತ ಮೇಲ್ಮನವಿಯನ್ನು ಆನಂದಿಸಿದಾಗ, ಅವರು ತೆರಿಗೆ ಪಾರದರ್ಶಕತೆಯನ್ನು ಅನುಭವಿಸುತ್ತಾರೆ. ಯಾವಾಗ ಆದಾಯ ತೆರಿಗೆ ನಿರಂತರವಾಗಿ ಕಡಿಮೆಯಾಗುತ್ತಿರುವುದನ್ನು ಅವರು ನೋಡಿದಾಗ, ಅವರಿಗೆ ಹೆಚ್ಚು ತೆರಿಗೆ ಪಾರದರ್ಶಕತೆಯ ಅನುಭವವಾಗುತ್ತದೆ ಎಂದರು.
5 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಶೂನ್ಯ ತೆರಿಗೆಯಿದ್ದು, ಇದರ ದೊಡ್ಡ ಪ್ರಯೋಜನ ಇಂದು ಕೆಳ ಮಧ್ಯಮವರ್ಗದ ಯುವಕರಿಗೆ ಲಭಿಸುತ್ತಿದೆ ಎಂದರು. ಈ ವರ್ಷ ಬಜೆಟ್ ನಲ್ಲಿ ನೀಡಲಾದ ಆದಾಯ ತೆರಿಗೆಯ ಹೊಸ ಆಯ್ಕೆಗಳು ತೆರಿಗೆದಾರರ ಜೀವನವನ್ನು ಸರಳಗೊಳಿಸಿವೆ ಎಂದೂ ತಿಳಿಸಿದರು. ಪ್ರಗತಿಯ ವೃದ್ಧಿಯನ್ನು ವೇಗಗೊಳಿಸಲು ಮತ್ತು ಭಾರತವನ್ನು ಹೆಚ್ಚು ಹೂಡಿಕೆದಾರ ಸ್ನೇಹಿ ಮಾಡಲು, ಸಾಂಸ್ಥಿಕ ತೆರಿಗೆಯಲ್ಲಿ ಐತಿಹಾಸಿಕ ಕಡಿತ ಮಾಡಲಾಗಿದೆ. ದೇಶವನ್ನು ಉತ್ಪಾದನಾ ವಲಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ದೇಶೀಯ ಹೊಸ ಉತ್ಪಾದನಾ ಕಂಪನಿಗಳಿಗೆ ತೆರಿಗೆ ದರವನ್ನು ಶೇ.15ರಷ್ಟು ನಿಗದಿ ಮಾಡಲಾಗಿದೆ ಎಂದರು. ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಲಾಭಾಂಶ ವಿತರಣಾ ತೆರಿಗೆಯನ್ನು ಸಹ ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು. ಜಿಎಸ್ಟಿಯಲ್ಲಿ ಸಹ ತೆರಿಗೆ ನಿವ್ವಳವನ್ನು ಕಡಿಮೆ ಮಾಡಲಾಗಿದೆ ಮತ್ತು ಹೆಚ್ಚಿನ ಸರಕು ಮತ್ತು ಸೇವೆಗಳಲ್ಲಿನ ತೆರಿಗೆ ದರವೂ ಕಡಿಮೆಯಾಗಿದೆ. ಐಟಿಎಟಿಯಲ್ಲಿ ಮೇಲ್ಮನವಿಯ ಮಿತಿಯನ್ನು 3 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗೆ ಮತ್ತು ಸುಪ್ರೀಂ ಕೋರ್ಟ್ ನಲ್ಲಿ 2 ಕೋಟಿ ರೂ.ಗೆ ಹೆಚ್ಚಿಸಿದ ಪರಿಣಾಮ ವಿವಾದಗಳ ಹೊರೆ ಕಡಿಮೆಯಾಗಿದ್ದು, ದೇಶದಲ್ಲಿ ವ್ಯವಹಾರ ಸುಲಭವಾಗಿದೆ ಎಂದರು.
ಐಟಿ ಮೇಲ್ಮನವಿ ನ್ಯಾಯಾಧಿಕರಣ ದೇಶಾದ್ಯಂತ ಇರುವ ತನ್ನ ಪೀಠಗಳಲ್ಲಿ ವರ್ಚುವಲ್ ವಿಚಾರಣೆಗಾಗಿ ನವೀಕರಣಗೊಳ್ಳುತ್ತಿರುವ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನದ ಯುಗದಲ್ಲಿ ಇಡೀ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು. ತಂತ್ರಜ್ಞಾನದ ಹೆಚ್ಚು ಹೆಚ್ಚು ಬಳಕೆ ಅದರಲ್ಲೂ ನಮ್ಮ ನ್ಯಾಯಾಂಗದಲ್ಲಿ ಅವುಗಳ ಬಳಕೆ ದೇಶದ ಜನರಿಗೆ ಹೊಸ ಅನುಕೂಲತೆಗಳನ್ನು ನೀಡಲು ಆರಂಭಿಸಿದೆ ಎಂದರು.
***
गुलामी के लंबे कालखंड ने Tax Payer और Tax Collector, दोनों के रिश्तों को शोषित और शोषक के रूप में ही विकसित किया।
— PMO India (@PMOIndia) November 11, 2020
दुर्भाग्य से आज़ादी के बाद हमारी जो टैक्स व्यवस्था रही उसमें इस छवि को बदलने के लिए जो प्रयास होने चाहिए थे, वो उतने नहीं किए गए: PM#TransparencyInTaxation
जब बादल बरसते हैं, तो उसका लाभ हम सभी को दिखाई देता है। लेकिन जब बादल बनते हैं, सूर्य पानी को सोखता है, तो उससे किसी को तकलीफ नहीं होती।
— PMO India (@PMOIndia) November 11, 2020
इसी तरह शासन को भी होना चाहिए: PM
जब आम जन से वो टैक्स ले तो किसी को तकलीफ न हो, लेकिन जब देश का वही पैसा नागरिकों तक पहुंचे, तो लोगों को उसका इस्तेमाल अपने जीवन में महसूस होना चाहिए: PM
— PMO India (@PMOIndia) November 11, 2020
आज का टैक्सपेयर पूरी टैक्स व्यवस्था में बहुत बड़े बदलाव और पारदर्शिता का साक्षी बन रहा है।
— PMO India (@PMOIndia) November 11, 2020
जब उसे Refund के लिए महीनों इंतजार नहीं करना पड़ता, कुछ ही सप्ताह में उसे Refund मिल जाता है, तो उसे पारदर्शिता का अनुभव होता है: PM
जब वो देखता है कि विभाग ने खुद पुराने विवाद को सुलझा दिया है, तो उसे पारदर्शिता का अनुभव होता है।
— PMO India (@PMOIndia) November 11, 2020
जब उसे faceless appeal की सुविधा मिलती है, तब वो tax transparency को और ज्यादा महसूस करता है।
जब वो देखता है कि income tax कम हो रहा है, तब उसे tax transparency अनुभव होती है: PM
पहले की सरकारों के समय शिकायतें होती थीं Tax Terrorism की।
— PMO India (@PMOIndia) November 11, 2020
आज देश उसे पीछे छोड़कर Tax Transparency की तरफ बढ़ रहा है।
Tax Terrorism से Tax transparency का ये बदलाव इसलिए आया है क्योंकि हम Reform, Perform और Transform की अप्रोच के साथ आगे बढ़ रहे हैं: PM
हम Reform कर रहे हैं rules में, procedures में और इसमें technology की भरपूर मदद ले रहे हैं।
— PMO India (@PMOIndia) November 11, 2020
हम Perform कर रहे हैं साफ नीयत के साथ, स्पष्ट इरादों के साथ।
और
साथ ही साथ हम Tax Administration के mindset को भी Transform कर रहे हैं: PM
आज भारत दुनिया के उन चुनिंदा देशों में है जहां टैक्सपेयर के अधिकारों और कर्तव्यों दोनों को codify किया गया है, उनको कानूनी मान्यता दी गई है।
— PMO India (@PMOIndia) November 11, 2020
टैक्सपेयर और टैक्स कलेक्ट करने वाले के बीच विश्वास बहाली के लिए, पारदर्शिता के लिए, ये बहुत बड़ा कदम रहा है: PM
देश के Wealth Creator की जब मुश्किलें कम होती हैं, उसे सुरक्षा मिलती है, तो उसका विश्वास देश की व्यवस्थाओं पर और ज्यादा बढ़ता है।
— PMO India (@PMOIndia) November 11, 2020
इसी बढ़ते विश्वास का परिणाम है कि अब ज्यादा से ज्यादा साथी देश के विकास के लिए टैक्स व्यवस्था से जुड़ने के लिए आगे आ रहे हैं: PM
अब सरकार की सोच ये है कि जो इनकम टैक्स रिटर्न फाइल हो रहा है, उस पर पहले पूरी तरह विश्वास करो।
— PMO India (@PMOIndia) November 11, 2020
इसी का नतीजा है कि आज देश में जो रिटर्न फाइल होते हैं, उनमें से 99.75 प्रतिशत बिना किसी आपत्ति के स्वीकार कर लिए जाते हैं।
ये बहुत बड़ा बदलाव है जो देश के टैक्स सिस्टम में आया है: PM