Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡುಮೇಜಿನ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ

ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡುಮೇಜಿನ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ


ನಮಸ್ಕಾರ. ಹಬ್ಬದ ಋತುವಿನ ಶುಭಾಶಯಗಳು

ನಿಮ್ಮನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ನಮ್ಮೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವ ನಿಮ್ಮ ಉತ್ಸುಕತೆಯನ್ನು ಕಂಡು ನನಗೆ ಸಂತಸವಾಗುತ್ತಿದೆ. ಇಬ್ಬರು ಪರಸ್ಪರ ನಮ್ಮ ದೃಷ್ಟಿಕೋನಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಎಂಬ ಭರವಸೆ ನನಗಿದ್ದು, ಅದರ ಪರಿಣಾಮ ನಿಮ್ಮ ಯೋಜನೆಗಳು ಮತ್ತು ನಮ್ಮ ಕನಸುಗಳು ಉತ್ತಮ ರೀತಿಯಲ್ಲಿ ಸಂಯೋಜನೆಗೊಂಡು ಒಳ್ಳೆಯ ಫಲಿತಾಂಶವನ್ನು ನೀಡಲಿವೆ.

ಮಿತ್ರರೇ,

ಈ ವರ್ಷವಿಡೀ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಭಾರತ ಅತ್ಯಂತ ದಿಟ್ಟತನದಿಂದ ಹೋರಾಡುತ್ತಿರುವುದರಿಂದ, ಜಗತ್ತು ಭಾರತದ ನಿಜವಾದ ಸ್ವರೂಪ ಮತ್ತು ಭಾರತದ ನಿಜವಾದ ಸಾಮರ್ಥ್ಯವನ್ನೂ ಸಹ ವಿಶ್ವ ನೋಡಿದೆ. ಅದು ಅತ್ಯಂತ ಯಶಸ್ವಿಯಾಗಿ ಭಾರತೀಯರು ಒಂದು ಉತ್ತರದಾಯಿತ್ವದ ಪ್ರಜ್ಞೆಗೆ ಹೆಸರಾಗಿ ಗುಣಲಕ್ಷಣಗಳನ್ನು ಹೊಂದಿದ್ದೇವೆ. ಸಂಯಮಕ್ಕೆ ಪ್ರೇರಣೆ, ರಾಷ್ಟ್ರೀಯ ಐಕ್ಯತೆ, ಆವಿಷ್ಕಾರದ ಕಿಡಿ ಕಾರಣವಾಗಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಗಮನಾರ್ಹ ಪುನಶ್ಚೇತನ ಕಾಣುತ್ತಿದೆ. ಅದು ಸೋಂಕಿನ ವಿರುದ್ಧದ ಹೋರಾಟದ್ದಾಗಿರಬಹುದು ಅಥವಾ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವುದ್ದಾಗಿರಬಹುದು. ಈ ಪುನಶ್ಚೇತನ ನಮ್ಮ ವ್ಯವಸ್ಥೆ ಬಲವನ್ನು ಆಧರಿಸಿದೆ. ನಮ್ಮ ಜನರ ಬೆಂಬಲವನ್ನು ಮತ್ತು ನಮ್ಮ ನೀತಿಯ ಸ್ಥಿರತೆಯನ್ನು ಆಧರಿಸಿದೆ. ನಮ್ಮ ವ್ಯವಸ್ಥೆಯ ಬಲದ ಕಾರಣಕ್ಕಾಗಿ ನಾವು ಸುಮಾರು 800 ಮಿಲಿಯನ್ ಜನರಿಗೆ ಆಹಾರಧಾನ್ಯಗಳನ್ನು ನೀಡಲು ಸಾಧ್ಯವಾಗಿದೆ. 420 ಮಿಲಿಯನ್ ಜನರಿಗೆ ನಗದನ್ನು ಮತ್ತು ಸುಮಾರು 800 ಮಿಲಿಯನ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲವನ್ನು ನೀಡಲಾಗಿದೆ. ಇದಕ್ಕೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಗಳನ್ನು ಧರಿಸುವ ಪದ್ಧತಿಯನ್ನು ರೂಢಿಸಿಕೊಂಡಿರುವ ಜನರೇ ಕಾರಣ. ಸೋಂಕಿನ ವಿರುದ್ಧದ ಸಮರದಲ್ಲಿ ಭಾರತ ಅತ್ಯಂತ ಪ್ರಬಲವಾಗಿ ಹೋರಾಡಿದೆ. ಇದಕ್ಕೆ ನಮ್ಮ ನೀತಿಗಳಲ್ಲಿನ ಸ್ಥಿರತೆ ಮತ್ತು ಭಾರತ ವಿಶ್ವದ ಅತ್ಯಂತ ನೆಚ್ಚಿನ ಹೂಡಿಕೆ ತಾಣವಾಗಿ ರೂಪುಗೊಂಡಿರುವುದು ಕಾರಣವಾಗಿದೆ.

ಮಿತ್ರರೇ,

ನಾವು ಹಳೆಯ ಪದ್ಧತಿಗಳಿಂದ ಮುಕ್ತವಾಗಿ ನವಭಾರತವನ್ನು ನಿರ್ಮಿಸುತ್ತಿದ್ದೇವೆ. ಇಂದು ಭಾರತ ಉತ್ತಮಕ್ಕಾಗಿ ಬದಲಾಗುತ್ತಿದೆ. ವಿತ್ತೀಯ ಬೇಜವಾಬ್ದಾರಿತನದಿಂದ ವಿತ್ತೀಯ ಶಿಸ್ತಿನೆಡೆಗೆ, ಹೆಚ್ಚಿನ ಹಣದುಬ್ಬರದಿಂದ ಕಡಿಮೆ ಹಣದುಬ್ಬರದವರೆಗೆ, ಸಾಲ ನೀಡಿ ಅನುಪಯುಕ್ತ ಆಸ್ತಿಗಳನ್ನು ಸೃಷ್ಟಿಸುವುದರಿಂದ ಜೇಷ್ಠತೆ ಆಧರಿಸಿದ ಸಾಲ ನೀಡುವವರೆಗೆ, ಮೂಲಸೌಕರ್ಯ ಕೊರತೆಯಿಂದ ಅಧಿಕ ಮೂಲಸೌಕರ್ಯದವರೆಗೆ, ನಗರದ ಬೆಳವಣಿಗೆ ದುರ್ಬಳಕೆಯಿಂದ ಸಮಗ್ರ ಮತ್ತು ಸಮತೋಲಿತ ಬೆಳವಣಿಗೆ ಭೌತಿಕದಿಂದ ಡಿಜಿಟಲ್ ಮೂಲಸೌಕರ್ಯದವರೆಗೆ ಅಭಿವೃದ್ಧಿಯತ್ತ ಸಾಗುತ್ತಿದೆ.

ಮಿತ್ರರೇ,

ಆತ್ಮನಿರ್ಭರ ಸಾಧಿಸುವ ಭಾರತದ ಇಚ್ಛೆ ಕೇವಲ ಕನಸಲ್ಲ, ಒಂದು ಉತ್ತಮ ಯೋಜಿತ ಆರ್ಥಿಕ ಕಾರ್ಯತಂತ್ರವಾಗಿದೆ. ಈ ಕಾರ್ಯತಂತ್ರದಡಿ ನಮ್ಮ ವಾಣಿಜ್ಯ ಮತ್ತು ಕಾರ್ಮಿಕರ ಕೌಶಲ್ಯ ಸಾಮರ್ಥ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು. ಆ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಯ ತಾಣವನ್ನಾಗಿ ರೂಪಿಸಲಾಗುವುದು, ತಂತ್ರಜ್ಞಾನದಲ್ಲಿ ನಮ್ಮ ಸಾಮರ್ಥ್ಯವನ್ನು ಬಳಕೆ ಮಾಡಿಕೊಂಡು ಆವಿಷ್ಕಾರದಲ್ಲಿ ಜಾಗತಿಕ ಕೇಂದ್ರವಾಗಿ ರೂಪುಗೊಳ್ಳುವುದು. ನಮ್ಮ ವಿಫುಲ ಮಾನವ ಸಂಪನ್ಮೂಲ ಮತ್ತು ಅದರ ಪ್ರತಿಭೆಯನ್ನು ಬಳಸಿಕೊಂಡು ಜಾಗತಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಯತಂತ್ರದ ಗುರಿಯನ್ನು ಹೊಂದಲಾಗಿದೆ.

ಮಿತ್ರರೇ,

ಇಂದು ಹೂಡಿಕೆದಾರರು ಹೆಚ್ಚಿನ ಪರಿಸರ, ಸಾಮಾಜಿಕ ಮತ್ತು ಆಡಳಿತದ ಅಂಶಗಳಿರುವ ಕಡೆಗೆ ಸಾಗಿದ್ದಾರೆ. ಭಾರತದಲ್ಲಿ ಈಗಾಗಲೇ ಅಂತಹ ವ್ಯವಸ್ಥೆಯಿದೆ ಮತ್ತು ಗರಿಷ್ಠ ಶ್ರೇಯಾಂಕದ ಕಂಪನಿಗಳೂ ಕೂಡ ಇಲ್ಲಿವೆ. ಇ ಎಸ್ ಜಿಗೆ ಸಮಾನ ಆದ್ಯತೆ ನೀಡುವ ಬೆಳವಣಿಗೆಯ ಹಾದಿಯಲ್ಲಿ ಭಾರತ ನಂಬಿಕೆ ಹೊಂದಿದೆ.

ಮಿತ್ರರೇ,

ಭಾರತ ನಿಮಗೆ ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಜೊತೆಗೆ ವೈವಿಧ್ಯತೆಯ ಕೊಡುಗೆ ನೀಡುತ್ತದೆ. ನಮ್ಮ ವೈವಿಧ್ಯತೆಯಲ್ಲಿ ನೀವು ಒಂದು ಮಾರುಕಟ್ಟೆಯೊಳಗೆ ಹಲವು ಮಾರುಕಟ್ಟೆಗಳನ್ನು ಕಾಣಬಹುದು. ಇವು ಹಲವು ಗಾತ್ರದ ಮತ್ತು ಹಲವು ಆಯ್ಕೆಯಾಗಿರಲಿವೆ. ಬಹು ವಿಧದ ಹವಾಮಾನ ಮತ್ತು ಬಹುಹಂತದ ಅಭಿವೃದ್ಧಿಯನ್ನು ಒಳಗೊಂಡಿವೆ. ಈ ವೈವಿಧ್ಯತೆಯಲ್ಲಿ ಮುಕ್ತ ಮನಸ್ಸು ಮತ್ತು ಮುಕ್ತ ಮಾರುಕಟ್ಟೆಗಳು ಇದ್ದು, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸಮಗ್ರ ಮತ್ತು ಕಾನೂನು ಪಾಲನಾ ವ್ಯವಸ್ಥೆ ಹೊಂದಿವೆ.

ಮಿತ್ರರೇ,

ನನಗೆ ಅರಿವಿದೆ ನಾನು ಶ್ರೇಷ್ಠ ಹಣಕಾಸು ಚಿಂತಕರನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದು. ಯಾರು ಹೊಸ ಆವಿಷ್ಕಾರಿ ಮತ್ತು ಅಭಿವೃದ್ಧಿ ವಲಯಗಳನ್ನು ಸುಸ್ಥಿರ ವ್ಯಾಪಾರಗಳನ್ನಾಗಿ ಪರಿವರ್ತಿಸುತ್ತಾರೋ ಅಂತಹವರನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದು. ಇದೇ ವೇಳೆ  ನೀವು ವಿಶ್ವಾಸದಿಂದ ಹೂಡಿಕೆಗಳನ್ನು ಮಾಡಲು ನೋಡುತ್ತಿರುವ ಅಗತ್ಯತೆಗಳ ಬಗ್ಗೆ ನನಗೆ ಅರಿವಿದೆ. ನೀವು ದೀರ್ಘಾವಧಿಯ ವರೆಗೆ ಉತ್ತಮ ಮತ್ತು ಸುರಕ್ಷಿತ ಆದಾಯವನ್ನು ನಿರೀಕ್ಷಿಸುತ್ತೀದ್ದೀರಿ.

ಆದ್ದರಿಂದ ಮಿತ್ರರೇ,

ಹಾಗಾಗಿ ನಾವು ದೀರ್ಘಾವಧಿಯ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಮನೋಭಾವದಲ್ಲಿ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಅಂತಹ ಮನೋಭಾವ ನಿಮ್ಮ ಅಗತ್ಯತೆಗಳ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅದನ್ನು ಕೆಲವು ಉದಾಹರಣೆಗಳ ಸಹಿತ ನಾನು ಇಲ್ಲಿ ವಿವರಿಸ ಬಯಸುತ್ತೇನೆ.

ಮಿತ್ರರೇ,

ಮಿತ್ರರೇ ನಮ್ಮ ಉತ್ಪಾದನಾ ಸಾಮರ್ಥ್ಯವೃದ್ಧಿಗೆ ನಾವು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ನಾವು ಜಿಎಸ್ ಟಿ ರೂಪದಲ್ಲಿ ಒಂದು ರಾಷ್ಟ್ರ ಒಂದು ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದ್ದೇವೆ. ನಮ್ಮಲ್ಲಿ ಅತಿ ಕಡಿಮೆ ಕಾರ್ಪೊರೇಟ್ ತೆರಿಗೆ ಇದೆ ಮತ್ತು ಹೊಸ ಉತ್ಪಾದನೆಗೆ ಹೆಚ್ಚುವರಿ ಪ್ರೋತ್ಸಾಹಕ ಯೋಜನೆಗಳಿವೆ. ಆದಾಯ ತೆರಿಗೆ ಮೌಲ್ಯಮಾಪನ ಮತ್ತು ಮೇಲ್ಮನವಿಗೆ ಮುಖಾಮುಖಿರಹಿತ (ಫೇಸ್ ಲೆಸ್) ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ. ಕಾರ್ಮಿಕರ ಹಿತರಕ್ಷಣೆ ಮತ್ತು ಉದ್ಯೋಗದಾತರಿಗೆ  ವ್ಯವಹಾರ ನಡೆಸಲು ಅನುಕೂಲವಾಗುವಂತೆ ಸಮತೋಲಿತ  ಹೊಸ ಕಾರ್ಮಿಕ ಕಾನೂನು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ನಿರ್ದಿಷ್ಟ ವಲಯಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕರ ಯೋಜನೆಗಳನ್ನು ತರಲಾಗಿದೆ. ಹೂಡಿಕೆದಾರರ ಕೈಹಿಡಿಯಲು ಉನ್ನತ ಅಧಿಕಾರವಿರುವ ಸಾಂಸ್ಥಿಕ ವ್ಯವಸ್ಥೆಗಳನ್ನು ರೂಪಿಸಲಾಗಿದೆ.

ಮಿತ್ರರೇ,

ನಾವು ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆಯಲ್ಲಿ 1.5 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆ ಹೊಂದಿದ್ದೇವೆ. ಬಹು ವಿಧದ ಸಂಪರ್ಕ ಮೂಲಸೌಕರ್ಯ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸುತ್ತಿದ್ದೇವೆ. ಭಾರತ ಹೆದ್ದಾರಿ, ರೈಲ್ವೆ, ಮೆಟ್ರೋ, ಜಲಮಾರ್ಗಗಳು, ದೇಶಾದ್ಯಂತ ವಿಮಾನ ನಿಲ್ದಾಣಗಳು ಸೇರಿದಂತೆ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ನಾವು ನವ ಮಧ್ಯಮ ವರ್ಗದವರಿಗಾಗಿ ಕೈಗೆಟಕುವ ದರದಲ್ಲಿ ವಸತಿ ಸೌಕರ್ಯ ಕಲ್ಪಿಸಲು ಮಿಲಿಯನ್ ಗಟ್ಟಲೆ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಕೇವಲ ದೊಡ್ಡ ನಗರಗಳಲ್ಲಿ ಮಾತ್ರವಲ್ಲ, ಸಣ್ಣ ನಗರ ಮತ್ತು ಪಟ್ಟಣಗಳಲ್ಲೂ ಕೂಡ ಹೂಡಿಕೆ ಮಾಡುತ್ತಿದ್ದೇವೆ. ಗುಜರಾತ್ ನ ಗಿಫ್ಟ್ ಸಿಟಿ ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅಂತಹ ನಗರಗಳ ಅಭಿವೃದ್ಧಿಗಾಗಿ ನಾವು ಮಿಷನ್ ಆಧಾರಿತ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ.

ಮಿತ್ರರೇ,

          ನಮ್ಮ ಉತ್ಪಾದನಾ ಮೂಲ ಬಲವರ್ಧನೆಗೊಳಿಸುವ ಮತ್ತು ವಿಶ್ವದರ್ಜೆಯ ಮೂಲಸೌಕರ್ಯ ವೃದ್ಧಿಸುವ ನಮ್ಮ ಕಾರ್ಯತಂತ್ರದಂತೆ ಹಣಕಾಸು ವಲಯದಲ್ಲೂ ಸಹ ನಾವು ಸಮಗ್ರ ಕಾರ್ಯತಂತ್ರವನ್ನು ಪಾಲಿಸುತ್ತಿದ್ದೇವೆ. ಸಮಗ್ರ ಬ್ಯಾಂಕಿಂಗ್ ವಲಯದ ಸುಧಾರಣೆಗಳೂ ಸೇರಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಣಕಾಸು ಮಾರುಕಟ್ಟೆಗಳನ್ನು ಬಲವರ್ಧನೆಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವನ್ನು ಏಕೀಕೃತ ಪ್ರಾಧಿಕಾರವನ್ನಾಗಿ ಮಾಡಲಾಗಿದೆ. ನಮ್ಮಲ್ಲಿ ಅತ್ಯಂತ ಸರಳ ವಿದೇಶಿ ನೇರ ಬಂಡವಾಳ ವ್ಯವಸ್ಥೆ ಇದೆ. ವಿದೇಶಿ ಹೂಡಿಕೆಗೆ ಆರಂಭದಲ್ಲಿ ಸರಳ ತೆರಿಗೆ ಪದ್ಧತಿ ಇದೆ. ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ ಮತ್ತಿತರ ಹೂಡಿಕೆ ವಲಯಗಳಲ್ಲಿ ಸೂಕ್ತ ನೀತಿಗಳನ್ನು ಜಾರಿಗೊಳಿಸಲಾಗಿದೆ. ದಿವಾಳಿತನ ಮತ್ತು ದಿವಾಳಿ ಸಂಹಿತೆ ಅನುಷ್ಠಾನಗೊಳಿಸಲಾಗಿದೆ. ನೇರ ನಗದು ವರ್ಗಾವಣೆ ಮೂಲಕ ಹಣಕಾಸು ಸಬಲೀಕರಣ ಕೈಗೊಳ್ಳಲಾಗಿದೆ. ಫಿನ್-ಟೆಕ್ ಆಧರಿಸಿದ ಪಾವತಿ ವ್ಯವಸ್ಥೆಗಳಲ್ಲಿ ರುಪೆ ಕಾರ್ಡ್ ಮತ್ತು ಭೀಮ್-ಯುಪಿಐ ಪರಿಚಯಿಸಲಾಗಿದೆ.

ಮಿತ್ರರೇ,

ಆವಿಷ್ಕಾರ ಮತ್ತು ಡಿಜಿಟಲ್ ವಲಯದಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು, ಇವು ಸರ್ಕಾರದ ನೀತಿ ಮತ್ತು ಸುಧಾರಣೆಗಳ ಕೇಂದ್ರ ಬಿಂದುವಾಗಿವೆ. ನಮ್ಮಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಸಂಖ್ಯೆಯ ನವೋದ್ಯಮಗಳು ಮತ್ತು ಯುನಿಕಾರ್ನ್ ಗಳಿವೆ. 2019ರಿಂದೀಚೆಗೆ ಪ್ರಗತಿ ದರ ಮುಂದುವರಿದಿದ್ದು, ಪ್ರತಿ ದಿನ ಸರಾಸರಿ 2 ರಿಂದ 3 ನವೋದ್ಯಮಗಳು ಹೊಸದಾಗಿ ಸ್ಥಾಪನೆಯಾಗುತ್ತಿವೆ.

ಮಿತ್ರರೇ,

ಖಾಸಗಿ ವಲಯದ ಬೆಳವಣಿಗೆಗೆ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಿಂದೆಂದೂ ಕಾರಣದ ಪ್ರಮಾಣದಲ್ಲಿ ಸ್ವತ್ತುಗಳ ನಗದೀಕರಣ ಮತ್ತು ಬಂಡವಾಳ ಹೂಡಿಕೆ ಹಿಂತೆಗೆತ ಕಾರ್ಯತಂತ್ರಗಳನ್ನು ಪಾಲಿಸಲಾಗುತ್ತಿದೆ. ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ನಮ್ಮ ಪಾಲನ್ನು ಶೇ.51ಕ್ಕಿಂತ ಕಡಿಮೆ ಮಾಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಲ್ಲಿದ್ದಲು, ಬಾಹ್ಯಾಕಾಶ, ಅಣು ಇಂಧನ, ರೈಲ್ವೆ, ನಾಗರಿಕ ವಿಮಾನಯಾನ ಮತ್ತು ರಕ್ಷಣಾ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಖಾಸಗಿ ಪಾಲುದಾರಿಕೆಗೆ ಹೊಸ ನೀತಿಗಳನ್ನು ರೂಪಿಸಲಾಗಿದೆ. ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಏಕರೂಪಗೊಳಿಸಲು ಹೊಸ ಸಾರ್ವಜನಿಕ ವಲಯಗಳ ಉದ್ದಿಮೆ ನೀತಿಯನ್ನು ಜಾರಿಗೊಳಿಸಲಾಗಿದೆ.

ಮಿತ್ರರೇ,

ಭಾರತದಲ್ಲಿ ಇಂದು ಪ್ರತಿಯೊಂದು ವಲಯವೂ ಉತ್ಪಾದನೆ, ಮೂಲಸೌಕರ್ಯ, ತಂತ್ರಜ್ಞಾನ, ಕೃಷಿ, ಹಣಕಾಸು ಮತ್ತು ಸಾಮಾಜಿಕ ವಲಯಗಳಾದ ಆರೋಗ್ಯ ಮತ್ತು ಶಿಕ್ಷಣ ವಲಯ ಕೂಡ ಪ್ರಗತಿಯತ್ತ ದಾಪುಗಾಲಿಟ್ಟಿದೆ. ನಮ್ಮ ಇತ್ತೀಚಿನ ಕೃಷಿ ವಲಯದ ಸುಧಾರಣೆಗಳು ಭಾರತದ ರೈತರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಹೊಸ ಸಾಧ್ಯತೆಗಳನ್ನು ತೆರೆದಿವೆ. ತಂತ್ರಜ್ಞಾನ ಮತ್ತು ಆಧುನಿಕ ಸಂಸ್ಕರಣಾ ಪರಿಹಾರಗಳ ನೆರವಿನಿಂದಾಗಿ ಭಾರತ ಸದ್ಯದಲ್ಲೇ ಕೃಷಿ ರಫ್ತು ತಾಣವಾಗಿ ರೂಪುಗೊಳ್ಳಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಇಲ್ಲಿನ ಕ್ಯಾಂಪಸ್ ಗಳಲ್ಲಿ ವಿದೇಶಿ ವಿಶ್ವ ವಿದ್ಯಾಲಯಗಳು ಸ್ಥಾಪನೆಯಾಗಲಿವೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅಡಿ ಹಣಕಾಸು ತಂತ್ರಜ್ಞಾನಗಳ ವ್ಯಾಪ್ತಿ ವಿಸ್ತರಿಸಲಾಗಿದೆ.

ಮಿತ್ರರೇ,

          ನಮ್ಮ ಭವಿಷ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮುದಾಯ ವಿಶ್ವಾಸ ತೋರುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಳೆದ ಐದು ತಿಂಗಳಲ್ಲಿ ಎಫ್ ಡಿಐ ಒಳಹರಿವಿನಲ್ಲಿ ಶೇ.13ರಷ್ಟು ಹೆಚ್ಚಾಗಿದೆ. ಈ ದುಂಡುಮೇಜಿನ ಸಭೆಯಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಿರುವುದು ನಮ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಮಿತ್ರರೇ,

ನೀವು ವಿಶ್ವಾಸಾರ್ಹತೆಯೊಂದಿಗೆ ಆದಾಯ ಬೇಕಾದರೆ, ಭಾರತ ಅದಕ್ಕೆ ಅತ್ಯುತ್ತಮ ತಾಣ. ನಿಮಗೆ ಪ್ರಜಾಪ್ರಭುತ್ವದ ಜೊತೆಗೆ ಬೇಡಿಕೆಯೂ ಬೇಕೆಂದರೆ ಭಾರತ ಅದಕ್ಕೆ ಪ್ರಶಸ್ತ ತಾಣ. ನಿಮಗೆ ಸ್ಥಿರತೆಯೊಂದಿಗೆ ಸುಸ್ಥಿರತೆಯೂ ಬೇಕೆಂದರೆ ಭಾರತ ಅದಕ್ಕೆ ಸೂಕ್ತ ತಾಣ. ನೀವು ಬೆಳವಣಿಗೆಯ ಜೊತೆ ಪರಿಸರಸ್ನೇಹಿ ಕ್ರಮಗಳೂ ಬೇಕೆಂದರೆ ಅದಕ್ಕೂ ಭಾರತ ಸೂಕ್ತ ತಾಣವಾಗಿದೆ.

ಮಿತ್ರರೇ,

ಭಾರತದ ಪ್ರಗತಿ, ಜಾಗತಿಕ ಆರ್ಥಿಕ ಪುನರುಜ್ಜೀವನಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿನ ಯಾವುದೇ ಸಾಧನೆಗಳು ವಿಶ್ವದ ಅಭಿವೃದ್ಧಿ ಮತ್ತು ಕಲ್ಯಾಣದ ಮೇಲೆ ಬಹು ವಿಧದ ಪರಿಣಾಮಗಳನ್ನು ಬೀರುತ್ತದೆ. ಬಲಿಷ್ಠ ಮತ್ತು ಕ್ರಿಯಾಶೀಲ ಭಾರತ ವಿಶ್ವದ ಆರ್ಥಿಕ ವ್ಯವಸ್ಥೆ ಸ್ಥಿರೀಕರಣಕ್ಕೆ ಕೊಡುಗೆ ನೀಡಬಲ್ಲದು. ಭಾರತವನ್ನು ಜಾಗತಿಕ ಪ್ರಗತಿಯ ಪುನರುಜ್ಜೀವನದ ಇಂಜಿನ್ ಅನ್ನಾಗಿ ಮಾಡಲು ಏನು ಸಾಧ್ಯವಿದೆಯೋ ಆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಗತಿಯ ಕುತೂಹಲಕಾರಿ ಅವಧಿ ಮುಂದಿನ ದಿನಗಳಲ್ಲಿದೆ. ನೀವು ಅದರ ಭಾಗವಾಗಬೇಕೆಂದು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ.

ತುಂಬಾ ಧನ್ಯವಾದಗಳು

*****