Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಮೋದಿಯವರಿಂದ ಗುಜರಾತ್‌ನ ಕೆವಾಡಿಯಾದಲ್ಲಿ ಆರೋಗ್ಯ ವನ, ಆರೋಗ್ಯ ಕುಟೀರ, ಏಕ್ತಾ ಮಾಲ್ ಮತ್ತು ಮಕ್ಕಳ ಪೌಷ್ಠಿಕಾಂಶ ಉದ್ಯಾನಗಳ ಉದ್ಘಾಟನೆ

ಪ್ರಧಾನಿ ಮೋದಿಯವರಿಂದ ಗುಜರಾತ್‌ನ ಕೆವಾಡಿಯಾದಲ್ಲಿ ಆರೋಗ್ಯ ವನ, ಆರೋಗ್ಯ ಕುಟೀರ, ಏಕ್ತಾ ಮಾಲ್ ಮತ್ತು ಮಕ್ಕಳ ಪೌಷ್ಠಿಕಾಂಶ ಉದ್ಯಾನಗಳ ಉದ್ಘಾಟನೆ


ಗುಜರಾತ್ನಲ್ಲಿ ಕೆವಾಡಿಯಾದ ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ ವಿವಿಧ ಯೋಜನೆಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು.

ಶ್ರೀ ಮೋದಿ ಅವರು ಆರೋಗ್ಯ ವನ, ಆರೋಗ್ಯ ಕುಟೀರ, ಏಕ್ತಾ ಮಾಲ್ ಮತ್ತು ಮಕ್ಕಳ ಪೌಷ್ಠಿಕಾಂಶ ಉದ್ಯಾನಗಳನ್ನು ಉದ್ಘಾಟಿಸಿದರು.

ಆರೋಗ್ಯ ವನ ಮತ್ತು ಆರೋಗ್ಯ ಕುಟೀರ

17 ಎಕರೆ ಪ್ರದೇಶದಲ್ಲಿರುವ ಆರೋಗ್ಯ ವನದಲ್ಲಿ 380 ವಿವಿಧ ಜಾತಿಗಳ 5 ಲಕ್ಷ ಸಸ್ಯಗಳಿವೆ. ಆರೋಗ್ಯ ಕುಟೀರವು ಸಂತಿಗಿರಿ ಕ್ಷೇಮ ಕೇಂದ್ರ ಎಂಬ ಸಾಂಪ್ರದಾಯಿಕ ಚಿಕಿತ್ಸಾ ಸೌಲಭ್ಯವನ್ನು ಹೊಂದಿದ್ದು, ಇದು ಆಯುರ್ವೇದ, ಸಿದ್ಧ, ಯೋಗ ಮತ್ತು ಪಂಚಕರ್ಮಗಳನ್ನು ಆಧರಿಸಿದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

 

ಏಕ್ತಾ ಮಾಲ್

ಮಾಲ್ ವೈವಿಧ್ಯತೆಯಲ್ಲಿ ಏಕತೆಯನ್ನು ಸಂಕೇತಿಸುವ ಭಾರತದಾದ್ಯಂತದ ವಿವಿಧ ರೀತಿಯ ಕರಕುಶಲ ವಸ್ತುಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶಿಸುತ್ತದೆ ಮತ್ತು ಇದು 35,000 ಚದರ ಅಡಿ ವಿಸ್ತೀರ್ಣದಲ್ಲಿದೆ. ಮಾಲ್ 20 ಎಂಪೋರಿಯಾಗಳನ್ನು ಹೊಂದಿದ್ದು, ಪ್ರತಿಯೊಂದೂ ಭಾರತದ ಒಂದು ನಿರ್ದಿಷ್ಟ ರಾಜ್ಯವನ್ನು ಪ್ರತಿನಿಧಿಸುತ್ತವೆ ಮತ್ತು ಇದನ್ನು ಕೇವಲ 110 ದಿನಗಳಲ್ಲಿ ನಿರ್ಮಿಸಲಾಗಿದೆ.

ಮಕ್ಕಳ ಪೌಷ್ಠಿಕಾಂಶ ಉದ್ಯಾನ ಮತ್ತು ಮಿರರ್ ಮೇಜ್

ಇದು ಮಕ್ಕಳಿಗಾಗಿರುವ ವಿಶ್ವದ ಮೊಟ್ಟಮೊದಲ ತಂತ್ರಜ್ಞಾನ ಚಾಲಿತ ಪೌಷ್ಠಿಕಾಂಶ ಉದ್ಯಾನವನವಾಗಿದೆ ಮತ್ತು ಇದು 35,000 ಚದರ ಅಡಿ ವಿಸ್ತೀರ್ಣದಲ್ಲಿದೆ. ನ್ಯೂಟ್ರಿ ರೈಲು ಉದ್ಯಾನವನದಾದ್ಯಂತ ಇರುವ ಫಲ್ ಶಾಖಾ ಗೃಹಂ‘, ‘ಪಯೋನಗರಿ‘, ‘ಅನ್ನಪೂರ್ಣ‘, ‘ಪೋಶಣ್ ಪುರಾಣ್‘, ಮತ್ತುಸ್ವಸ್ಥ ಭಾರತಂಎಂಬ ಹೆಸರಿರುವ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ. ಇದು ಮಿರರ್ ಮೇಜ್, 5 ಡಿ ವರ್ಚುವಲ್ ರಿಯಾಲಿಟಿ ಥಿಯೇಟರ್ ಮತ್ತು ರಿಯಾಲಿಟಿ ಗೇಮ್ಗಳಂತಹ ವಿವಿಧ ಶಿಕ್ಷಣ ಚಟುವಟಿಕೆಗಳ ಮೂಲಕ ಪೌಷ್ಠಿಕಾಂಶದ ಬಗ್ಗೆ ಅರಿವನ್ನು ಮೂಡಿಸುತ್ತದೆ.

***