ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೋಲ್ಕತಾ ಪೂರ್ವ–ಪಶ್ಚಿಮ ಕಾರಿಡಾರ್ ಯೋಜನೆಯ ಮಾರ್ಪಡಿಸಿದ ಮಾರ್ಗಗಳ ಪರಿಷ್ಕೃತ ವೆಚ್ಚಕ್ಕೆ ಅಂಗೀಕಾರ ನೀಡಿದೆ.
ಅನುಷ್ಠಾನ ತಂತ್ರಗಳು ಮತ್ತು ಗುರಿಗಳು:
ಪ್ರಮುಖ ಪರಿಣಾಮ:
ಈ ಬೃಹತ್ ಯೋಜನೆಯು ಕೋಲ್ಕತ್ತಾದ ವ್ಯಾಪಾರ ಜಿಲ್ಲೆಗೆ ಪಶ್ಚಿಮದಲ್ಲಿ ಕೈಗಾರಿಕಾ ನಗರವಾದ ಹೌರಾ ಮತ್ತು ಪೂರ್ವದಲ್ಲಿ ಸಾಲ್ಟ್ ಲೇಕ್ ಸಿಟಿಯೊಂದಿಗೆ ಸುರಕ್ಷಿತ, ಲಭ್ಯ ಮತ್ತು ಆರಾಮದಾಯಕವಾದ ದಕ್ಷ ಸಾರ್ವಜನಿಕ ಸಾರಿಗೆಯನ್ನು ಒದಗಿಸಲು ಉದ್ದೇಶಿಸಿದೆ. ಈ ಯೋಜನೆಯು ಸಂಚಾರ ದಟ್ಟಣೆಯನ್ನು ಸರಾಗಗೊಳಿಸುತ್ತದೆ ಮತ್ತು ನಗರವಾಸಿಗಳಿಗೆ ಸ್ವಚ್ಛ ಸಾರಿಗೆಯನ್ನು ಒದಗಿಸುತ್ತದೆ. ಇದು ಕೋಲ್ಕತಾ ನಗರಕ್ಕೆ ಆರ್ಥಿಕ, ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಸಾರಿಗೆಯ ಪರಿಹಾರವನ್ನು ಒದಗಿಸುತ್ತದೆ. ಇದು ಕೋಲ್ಕತಾ ಪ್ರದೇಶದ ಬೃಹತ್ ಸಾರಿಗೆ ಸಮಸ್ಯೆಯನ್ನು ನಿವಾರಿಸುತ್ತದೆ, ಇದು ಈ ಯೋಜನೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಉತ್ಪಾದಕತೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಇದು ಇಂಟರ್ಚೇಂಜ್ ಹಬ್ಗಳ ಮೂಲಕ ಮೆಟ್ರೊ, ಉಪ–ನಗರ ರೈಲ್ವೆ, ದೋಣಿ ಮತ್ತು ಬಸ್ ಸಾರಿಗೆಯಂತಹ ಅನೇಕ ಸಾರಿಗೆ ವಿಧಾನಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಸುಗಮ ಮತ್ತು ತಡೆರಹಿತ ಸಾರಿಗೆ ವಿಧಾನವನ್ನು ಖಚಿತಪಡಿಸುತ್ತದೆ.
ಯೋಜನೆಯ ಪ್ರಯೋಜನಗಳು:
ಹಿನ್ನೆಲೆ:
ಕೋಲ್ಕತಾ ಪೂರ್ವ–ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಯು ಕೋಲ್ಕತಾ ನಗರ ಮತ್ತು ಅದರ ಪಕ್ಕದ ನಗರ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗೆ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದೆ. ಈ ಯೋಜನೆಯು ಸಂಚಾರ ದಟ್ಟಣೆಯನ್ನು ಸರಾಗಗೊಳಿಸುತ್ತದೆ ಮತ್ತು ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಸ್ವಚ್ಛ ಸಂಚಾರ ವ್ಯವಸ್ಥೆಯನ್ನು ಒದಗಿಸುತ್ತದೆ. ಇದು ರೈಲು ಆಧಾರಿತ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಮೂಲಕ ಕೋಲ್ಕತಾ, ಹೌರಾ ಮತ್ತು ಸಾಲ್ಟ್ ಲೇಕ್ಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ದಕ್ಷ ಮತ್ತು ತಡೆರಹಿತ ಸಾರಿಗೆ ಇಂಟರ್ಚೇಂಜ್ ಹಬ್ಗಳನ್ನು ನಿರ್ಮಿಸುವ ಮೂಲಕ ಮೆಟ್ರೊ, ರೈಲ್ವೆ ಮತ್ತು ಬಸ್ ಸಾರಿಗೆಯಂತಹ ಎಲ್ಲಾ ಇತರ ಸಾರಿಗೆ ವಿಧಾನಗಳನ್ನು ಇದು ಸಂಪರ್ಕಿಸುತ್ತದೆ. ಈ ಯೋಜನೆಯಡಿ ಹೂಗ್ಲಿ ನದಿಯೊಳಗಿನ ಸುರಂಗವನ್ನು ಒಳಗೊಂಡಂತೆ 16.6 ಕಿ.ಮೀ ಉದ್ದದ ಮೆಟ್ರೋ ರೈಲ್ವೆ ಕಾರಿಡಾರ್ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಯಾವುದೇ ಪ್ರಮುಖ ನದಿಯೊಳಗಿನ ಭಾರತದ ಮೊದಲ ಸಾರಿಗೆ ಸುರಂಗವಾಗಿದೆ ಮತ್ತು ಹೌರಾ ನಿಲ್ದಾಣ ಭಾರತದ ಹೆಚ್ಚು ಆಳದ ಮೆಟ್ರೋ ನಿಲ್ದಾಣಗಳಲ್ಲಿ ಒಂದಾಗಲಿದೆ.
***
Today’s Cabinet decision will further ‘Ease of Living’ for my sisters and brothers of Kolkata. It will also give an impetus to local infrastructure and help commerce as well as tourism in the city. https://t.co/ozHmwwMNQu
— Narendra Modi (@narendramodi) October 7, 2020