ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಚಂಡೀಗಢದಲ್ಲಿ ಎರಡನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು. ಈ ಸಮಾರಂಭದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.
ಕ್ಯಾಪಿಟಲ್ ಸಮುಚ್ಛಯದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ದೇಶದ ಎಲ್ಲ ಭಾಗಗಳಲ್ಲಿ ಜನತೆ ಯೋಗದೊಂದಿಗೆ ನಂಟು ಹೊಂದಿದ್ದಾರೆ ಎಂದರು. ಇಂದು ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಬೆಂಬಲಿಸಲು ಮುಂದೆ ಬಂದಿದೆ. ಸಮಾಜದ ಎಲ್ಲ ವರ್ಗಗಳೂ ಒಂದಾಗಿ ಈ ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಯೋಗ ದಿನವು ಉತ್ತಮ ಆರೋಗ್ಯದೊಂದಿಗೆ ನಂಟು ಹೊಂದಿರುವ ದಿನವಾಗಿದೆ ಮತ್ತು ಒಂದು ಸಮೂಹಿಕ ಚಳವಳಿಯಾಗಿದೆ.
ಒಬ್ಬ ವ್ಯಕ್ತಿ ಏನು ಪಡೆಯುತ್ತಾನೆ ಎಂಬುದು ಯೋಗವಲ್ಲ, ಆದರೆ, ಒಬ್ಬ ವ್ಯಕ್ತಿ ಏನನ್ನು ತ್ಯಜಿಸುತ್ತಾನೆ ಎಂಬುದಾಗಿದೆ ಎಂದು ಪ್ರಧಾನಿ ಹೇಳಿದರು. ಶೂನ್ಯ ಆಯವ್ಯಯದಲ್ಲಿ ಯೋಗವು ಆರೋಗ್ಯದ ಖಾತ್ರಿ ನೀಡುತ್ತದೆ ಮತ್ತು ಇದು ಬಡವ ಮತ್ತು ಬಲ್ಲಿದ ಎಂಬ ತಾರತಮ್ಯ ತೋರುವುದಿಲ್ಲ ಎಂದರು.
ಮುಂದಿನ ಒಂದು ವರ್ಷದ ಅವಧಿಯಲ್ಲಿ ಯೋಗದ ಮೂಲಕ ಮಧುಮೇಹವನ್ನು ಹೇಗೆ ನಿಯಂತ್ರಿಸಬಹುದು ಎಂಬ ಬಗ್ಗೆ ಗಮನಹರಿಸುವಂತೆ ಕರೆ ನೀಡಿದರು. ಯೋಗವನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವವರನ್ನು ಗುರುತಿಸಿ ಗೌರವಿಸಲು ರಾಷ್ಟ್ರಮಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು ಸ್ಥಾಪಿಸಲಾಗುವುದು ಎಂದರು.
ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಜನರ ಬಳಿ ನಡೆದ ಪ್ರಧಾನಮಂತ್ರಿಯವರು ಜನತೆಯೊಂದಿಗೆ ಬೆರೆತು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.
AKT/SH
Glimpses from the #IDY2016 celebrations in Chandigarh. #YogaDay pic.twitter.com/oAFiIfyKFG
— Narendra Modi (@narendramodi) June 21, 2016
Thank you Rashtrapati ji for your continuous support and encouragement to #IDY2016. #YogaDay https://t.co/kcOZTWJ5p4
— Narendra Modi (@narendramodi) June 21, 2016
These Divyang friends are the pride of the #IDY2016 celebrations. Spent time with them in Chandigarh. #YogaDay pic.twitter.com/gDTVKcSj5q
— Narendra Modi (@narendramodi) June 21, 2016