ವೆಬ್ ತಾಣ ವೀಕ್ಷಕರ ಅನುಕೂಲಕ್ಕಾಗಿ ಪ್ರಧಾನಮಂತ್ರಿಯವರ ಕಾರ್ಯಾಲಯವು ಆರ್.ಟಿ.ಐ. ಅರ್ಜಿಗಳಿಗೆ ಪ್ರತ್ಯೇಕ ಇ-ಮೇಲ್ ವಿಳಾಸ ಹೊಂದಿದೆ – rti.appeal[at]gov[dot]in. ನೀವು ನಿಮ್ಮ ಆರ್.ಟಿ.ಐ. ಅರ್ಜಿಗಳನ್ನು ಈ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ವಿಳಂಬಕ್ಕೆ ತಡೆ
ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿ ಅರ್ಜಿಗಳು ಬರುತ್ತಿವೆ, ಈ ಪೈಕಿ ಬಹುತೇಕ ಅರ್ಜಿಗಳು ಸಚಿವರ ಮತ್ತು ಇಲಾಖೆಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಇಂಥ ಅರ್ಜಿಗಳನ್ನು ನಾವು ಆರ್.ಟಿ.ಐ. ಕಾಯಿದೆ ರೀತ್ಯ ಸಂಬಂಧಿತ ಸಾರ್ವಜನಿಕ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತಿದೆ.
ಯಾವುದೇ ವ್ಯಕ್ತಿ ಕೇಳುವ ಯಾವುದೇ ಮಾಹಿತಿ ಬೇರಾವುದೇ ಅಥವಾ ಪ್ರಾಥಮಿಕವಾಗಿ ಬೇರೆ ಸಾರ್ವಜನಿಕ ಪ್ರಾಧಿಕಾರದ್ದಾಗಿದ್ದರೆ ಅಂಥ ಅರ್ಜಿಗಳನ್ನು ಆ ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸಬೇಕು ಎಂಬ ಅವಕಾಶವನ್ನು ಆರ್.ಟಿ.ಐ.ಕಾಯಿದೆ 2005 ಒದಗಿಸುತ್ತದೆ.
ಹೀಗಾಗಿ ಯಾವುದೇ ಸಚಿವಾಲಯದ ನಿರ್ದಿಷ್ಟ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾಗಿದ್ದಲ್ಲಿ, ಅಂಥ ಅರ್ಜಿಗಳನ್ನು ನೇರವಾಗಿ ಆಯಾ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೇ ಸಲ್ಲಿಸಲು ಮನವಿ ಮಾಡಲಾಗಿದೆ. ಹೀಗಾದಾಗ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಶೀಲಿಸಲು ಅವಕಾಶ ಆಗುತ್ತದೆ.
ಶುಲ್ಕ
ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ ಮಾಹಿತಿ ಕೋರಿಕೆ ಅರ್ಜಿಗಳ ಜೊತೆಗೆ 10 ರೂಪಾಯಿಗಳ ಶುಲ್ಕವನ್ನು ಈ ಕೆಳಗಿನ ಮಾದರಿಯಲ್ಲಿ ಲಗತ್ತಿಸಬೇಕು:-
ಪ್ರಧಾನಮಂತ್ರಿಯವರ ಕಾರ್ಯಾಲಯದಲ್ಲಿ ಖುದ್ದು ಕ್ಯಾಷಿಯರ್ ಬಳಿ ನಗದು ಪಾವತಿ,
ರೂ. 10/- ಡಿಮ್ಯಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್ (ಅರ್ಜಿ ಶುಲ್ಕ) ಡ್ರಾಫ್ಟ್ ಅನ್ನು
“ಸೆಕ್ಷನ್ ಅಧಿಕಾರಿ, ಪ್ರಧಾನಮಂತ್ರಿಯವರ ಕಾರ್ಯಾಲಯ” ಹೆಸರಿಗೆ ನವ ದೆಹಲಿಯಲ್ಲಿ ಪಾವತಿ ಆಗುವಂತೆ ಪಡೆದಿರಬೇಕು. “ಸೆಕ್ಷನ್ ಅಧಿಕಾರಿ, ಪ್ರಧಾನಮಂತ್ರಿಯವರ ಕಾರ್ಯಾಲಯ” ಇವರ ಹೆಸರಿಗೆ ಪಡೆದ ಪೋಸ್ಟಲ್ ಆರ್ಡರ್ ಗಳನ್ನು ಅಥವಾ ಬಡತನ ರೇಖೆಗಿಂತ (ಬಿಪಿಎಲ್)ಕೆಳಗಿರುವ ವರ್ಗಕ್ಕೆ ಸೇರಿರುವ ಕಾರಣ ಆಕೆ/ಆತ ಶುಲ್ಕ ಪಾವತಿಯಿಂದ ವಿನಾಯಿತಿ ಪಡೆದಿರುವ ಬಗ್ಗೆ ಸೂಕ್ತ ದಾಖಲೆಯನ್ನು ಅರ್ಜಿಯ ಜೊತೆಗೆ ಒದಗಿಸಬೇಕು.