Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಮಾನ್ಯ ವರ್ಗದ ಕಾರ್ಮಿಕರ ನೇಮಕಾತಿ ಕುರಿತಂತೆ ಭಾರತ-ಸೌದಿ ಅರೇಬಿಯಾ ನಡುವೆ ಕಾರ್ಮಿಕ ಸಹಕಾರದ ಒಪ್ಪಂದಕ್ಕೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಕಾರ್ಮಿಕ ಸಹಕಾರ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಒಪ್ಪಿಗೆ ನೀಡಿದೆ. ಈ ಒಪ್ಪಂದಕ್ಕೆ ಪ್ರಧಾನಮಂತ್ರಿಯವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ವೇಳೆ ರಿಯಾದ್ ನಲ್ಲಿ 2016ರ ಏಪ್ರಿಲ್ 2-3ರಂದು ಅಂಕಿತ ಹಾಕಲಾಗಿತ್ತು.

ಈ ಒಪ್ಪಂದವು ಭಾರತದ ವಲಸೆ ಕಾರ್ಮಿಕರಿಗೆ, ಅದರಲ್ಲೂ ಸೌದಿ ಅರೇಬಿಯಾದಲ್ಲಿ ಜಾತಿ, ಮತ, ಧರ್ಮ, ಅಥವಾ ಲಿಂಗ ಪರಿಗಣನೆ ಇಲ್ಲದೆ ದುಡಿಯುತ್ತಿರುವ ಕೌಶಲ್ಯರಹಿತ, ಅರೆ ಕೌಶಲವಿರುವ ಮತ್ತು ಕೌಶಲವುಳ್ಳ ವರ್ಗದ ಕಾರ್ಮಿಕರಿಗೆ ಲಾಭವಾಗಲಿದೆ.