Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಶ್ರೀ ರಾಮ ಜನ್ಮಭೂಮಿ ಮಂದಿರ’ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ


 

ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವದ ಅಡಿಪಾಯದ ಮೇಲೆ ಮಂದಿರ ನಿರ್ಮಿಸಬೇಕು

ನಾವು ಸಬ್ಕಾ ಸಾಥ್’ ಮೂಲಕ ‘ಸಬ್ಕಾ ವಿಶ್ವಾಸ್ಗಳಿಸಿ ‘ಸಬ್ಕಾ ವಿಕಾಸ್’ ಸಾಧಿಸಬೇಕಾಗಿದೆ

ರಾಮ ಮಂದಿರ, ನಮ್ಮ ಸಂಸ್ಕೃತಿಚಿರಂತನ ನಂಬಿಕೆರಾಷ್ಟ್ರೀಯ ಮನೋಭಾವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಆಧುನಿಕ ಸಂಕೇತವಾಗಲಿದ್ದುಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ

ಮಂದಿರ ನಿರ್ಮಾಣ  ಪ್ರದೇಶದ ಆರ್ಥಿಕತೆಯಲ್ಲಿ ಬದಲಾವಣೆ ತರಲಿದೆ

ರಾಮ ಮಂದಿರದ ಕನಸು ನನಸಾಗಲು ಹೋರಾಟ ನಡೆಸಿದವರನ್ನು ಸ್ಮರಿಸಿವಂದಿಸಿದ ಪ್ರಧಾನ ಮಂತ್ರಿ

ಶ್ರೀ ರಾಮ ದೇಶದ ವೈವಿಧ್ಯತೆಯಲ್ಲಿನ ಏಕತೆಯ ಸಂಕೇತ

ಇಂದಿನ ಕೋವಿಡ್ ಪರಿಸ್ಥಿತಿಯು ‘ಮರ್ಯಾದಾನಡವಳಿಕೆಯನ್ನು ಬಯಸುತ್ತದೆ: ‘ದೊ ಗಜ್ ಕಿ ದೂರಿ – ಮಾಸ್ಕ್ ಹೈ ಜರೂರಿ’: ಪ್ರಧಾನಿ ನರೇಂದ್ರ ಮೋದಿ

 

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯಲ್ಲಿ ‘ಶ್ರೀ ರಾಮ ಜನ್ಮಭೂಮಿ ಮಂದಿರ ಭೂಮಿ ಪೂಜೆ ನೆರವೇರಿಸಿದರು.

ಭಾರತಕ್ಕೆ ವೈಭವದ ಅಧ್ಯಾಯ

 ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರುಪವಿತ್ರ ಸಂದರ್ಭದಲ್ಲಿ ದೇಶವಾಸಿಗಳು ಹಾಗೂ ವಿಶ್ವದಾದ್ಯಂತದ ರಾಮ ಭಕ್ತರಿಗೆ ಅಭಿನಂದನೆ ತಿಳಿಸಿದರುಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ ಅವರುಭಾರತವು ಇಂದು ವೈಭವದ ಅಧ್ಯಾಯವೊಂದನ್ನು ಆರಂಭಿಸುತ್ತಿದೆದೇಶಾದ್ಯಂತ ಜನರು ಶತಮಾನಗಳಿಂದ ಉತ್ಸಾಹದಿಂದ ಮತ್ತು ಭಾವನಾತ್ಮಕವಾಗಿ ಕಾಯುತ್ತಿದ್ದದ್ದನ್ನು ಅಂತಿಮವಾಗಿ ಸಾಧಿಸಿದ್ದಕ್ಕಾಗಿ ಸಂಭ್ರಮ ಪಡುತ್ತಿದ್ದಾರೆಅವರಲ್ಲಿ ಅನೇಕರಿಕೆ ತಮ್ಮ ಜೀವಿತಾವಧಿಯಲ್ಲಿ  ದಿನಕ್ಕೆ ಸಾಕ್ಷಿಯಾಗಿದ್ದೇವೆಂದು ನಂಬಲು ಸಾಧ್ಯವಾಗುತ್ತಿಲ್ಲರಾಮ ಜನ್ಮಭೂಮಿಯು ಒಡೆಯುವ ಮತ್ತು ಮತ್ತೆ ಕಟ್ಟುವ ಆವರ್ತನದಿಂದ ವಿಮೋಚನೆಗೊಂಡಿದೆ ಮತ್ತು ಈಗ ಡೇರೆಯಲ್ಲಿರುವ ರಾಮ್ಲಲ್ಲಾಗೆ ಭವ್ಯವಾದ ಮಂದಿರವನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಆಗಸ್ಟ್ 15, ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶಾದ್ಯಂತ ಜನರು ಮಾಡಿದ ತ್ಯಾಗದ ಪ್ರತೀಕವಾಗಿರುವಂತೆ ದಿನವು ರಾಮ ಮಂದಿರಕ್ಕಾಗಿ ತಲೆಮಾರುಗಳಿಂದ ನಡೆದ ಅಪಾರ ಸಮರ್ಪಣೆ ಮತ್ತು ನಿರಂತರ ಹೋರಾಟವನ್ನು ಸೂಚಿಸುತ್ತದೆ ಎಂದು ಪ್ರಧಾನಿ ಹೇಳಿದರುರಾಮ ಮಂದಿರದ ಕನಸು ನನಸಾಗಲು ಹೋರಾಟ ನಡೆಸಿದವರನ್ನು ಸ್ಮರಿಸಿದ ಪ್ರಧಾನಿಯವರು ಅವರಿಗೆ ವಂದನೆ ಸಲ್ಲಿಸಿದರು.

ಶ್ರೀ ರಾಮ – ನಮ್ಮ ಸಂಸ್ಕೃತಿಯ ಬುನಾದಿ

ಶ್ರೀರಾಮನ ಅಸ್ತಿತ್ವವನ್ನು ಅಳಿಸಿಹಾಕಲು ಹಲವಾರು ಪ್ರಯತ್ನಗಳು ನಡೆದರೂಶ್ರೀ ರಾಮ ನಮ್ಮ ಸಂಸ್ಕೃತಿಯ ಬುನಾದಿಯಾಗಿ ಮುಂದುವರೆದಿದ್ದಾರೆ ಎಂದು ಪ್ರಧಾನಿ ಹೇಳಿದರುರಾಮ ಮಂದಿರವು ನಮ್ಮ ಸಂಸ್ಕೃತಿಚಿರಂತನ ನಂಬಿಕೆರಾಷ್ಟ್ರೀಯ ಮನೋಭಾವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಆಧುನಿಕ ಸಂಕೇತವಾಗಲಿದ್ದುಇದು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದರುಮಂದಿರ ನಿರ್ಮಾಣವು ಅನೇಕ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳನ್ನು ತೆರೆಯುತ್ತದೆ ಮತ್ತು  ಪ್ರದೇಶದ ಆರ್ಥಿಕತೆಯನ್ನು ಬದಲಾಯಿಸುತ್ತದೆ ಎಂದು ತಿಳಿಸಿದರು.

ಕೋಟ್ಯಂತರ ರಾಮಭಕ್ತರ ನಂಬಿಕೆ ಮತ್ತು ಸಂಕಲ್ಪಕ್ಕೆ  ದಿನ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರುಕಳೆದ ವರ್ಷ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗಎಲ್ಲರ ಭಾವನೆಗಳನ್ನು ಗೌರವಿಸಿ ನಮ್ಮ ದೇಶವಾಸಿಗಳು ತೋರಿದ ಘನತೆ ಮತ್ತು ಸಂಯಮವನ್ನು ಅವರು ಶ್ಲಾಘಿಸಿದರು ಮತ್ತು ಅದೇ ರೀತಿಯ ಘನತೆ ಮತ್ತು ಸಂಯಮ ಇಂದೂ ಗೋಚರಿಸುತ್ತಿದೆ ಎಂದರು.

ಬಡವರುಹಿಂದುಳಿದವರುದಲಿತರುಬುಡಕಟ್ಟು ಸಮುದಾಯದವರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಶ್ರೀ ರಾಮನ ಗೆಲುವುಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದ್ದುಛತ್ರಪತಿ ಶಿವಾಜಿಯಿಂದ ಸ್ವರಾಜ್ಯ ಸ್ಥಾಪನೆಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ನೇತೃತ್ವ ಮುಂತಾದ ಹಲವಾರು ಅದ್ಭುತಗಳನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ಪ್ರಧಾನಿ ನೆನಪಿಸಿಕೊಂಡರುಜನಸಾಮಾನ್ಯರ ನೆರವು ಮತ್ತು ಕೊಡುಗೆಯಿಂದ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಶ್ರೀ ರಾಮನ ವಿಶಿಷ್ಟ ಗುಣಲಕ್ಷಣಗಳನ್ನು ವಿವರಿಸಿದ ಪ್ರಧಾನಿಯವರುಶ್ರೀ ರಾಮ ಯಾವಾಗಲೂ ಸತ್ಯಕ್ಕೆ ಅಂಟಿಕೊಂಡಿದ್ದವನು ಮತ್ತು ಸಾಮಾಜಿಕ ಸಾಮರಸ್ಯವನ್ನು ತನ್ನ ಆಡಳಿತದ ಮೂಲಾಧಾರವನ್ನಾಗಿ ಮಾಡಿದ್ದವನು ಎಂದರುಅವನು ತನ್ನ ಪ್ರಜೆಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದನುಆದರೆ ಬಡವರು ಮತ್ತು ನಿರ್ಗತಿಕರ ಬಗ್ಗೆ ವಿಶೇಷ ದಯೆ ಹೊಂದಿದ್ದನುಜೀವನದಲ್ಲಿ ಶ್ರೀ ರಾಮನು ಸ್ಫೂರ್ತಿಯಾಗಿಲ್ಲದ ಯಾವುದೇ ಅಂಶಗಳಿಲ್ಲಅವನ ಪ್ರಭಾವವು ದೇಶದ ಸಂಸ್ಕೃತಿತತ್ವನಂಬಿಕೆ ಮತ್ತು ಸಂಪ್ರದಾಯದ ಹಲವಾರು ಅಂಶಗಳಲ್ಲಿ ಗೋಚರಿಸುತ್ತದೆ ಎಂದರು.

ಶ್ರೀ ರಾಮ – ವೈವಿಧ್ಯತೆಯಲ್ಲಿ ಏಕತೆಯ ಸಂಕೇತ

ಪ್ರಾಚೀನ ಕಾಲದಲ್ಲಿ ವಾಲ್ಮೀಕಿ ರಾಮಾಯಣದ ಮೂಲಕಮಧ್ಯಯುಗದಲ್ಲಿ ತುಳಸಿದಾಸಕಬೀರ ಮತ್ತು ಗುರುನಾನಕ್ ಮೂಲಕ ಶ್ರೀ ರಾಮ ಜನರಿಗೆ ಮಾರ್ಗದರ್ಶಕ ಬೆಳಕಾಗಿದ್ದಾನೆಅಹಿಂಸೆ ಮತ್ತು ಸತ್ಯಾಗ್ರಹದ ಶಕ್ತಿಯ ಮೂಲವಾಗಿ ಮಹಾತ್ಮ ಗಾಂಧಿಯವರ ಭಜನೆಗಳಲ್ಲಿ ಶ್ರೀ ರಾಮ ಇದ್ದನು ಎಂದು ಪ್ರಧಾನಿ ಹೇಳಿದರುಭಗವಾನ್ ಬುದ್ಧನು ಶ್ರೀ ರಾಮನೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಅಯೋಧ್ಯೆ ನಗರವು ಶತಮಾನಗಳಿಂದ ಜೈನರ ಶದ್ಧಾ ಕೇಂದ್ರವಾಗಿದೆ ಎಂದು ಅವರು ಹೇಳಿದರುವಿವಿಧ ಭಾಷೆಗಳಲ್ಲಿ ಬರೆದಿರುವ ವಿಭಿನ್ನ ರಾಮಾಯಣಗಳನ್ನು ವಿವರಿಸಿದ ಪ್ರಧಾನಿಯವರುಶ್ರೀ ರಾಮ ದೇಶದಲ್ಲಿನ ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಎಂದರು.

ಶ್ರೀ ರಾಮನನ್ನು ಹಲವಾರು ದೇಶಗಳಲ್ಲಿ ಪೂಜಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದರುಗರಿಷ್ಠ ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾಕಾಂಬೋಡಿಯಾಲಾವೋಸ್ಮಲೇಷ್ಯಾಥೈಲ್ಯಾಂಡ್ಶ್ರೀಲಂಕಾನೇಪಾಳ ಮುಂತಾದ ದೇಶಗಳಲ್ಲಿ ಜನಪ್ರಿಯವಾಗಿರುವ ರಾಮಾಯಣಗಳನ್ನು ಅವರು ಪಟ್ಟಿ ಮಾಡಿದರುಇರಾನ್ ಮತ್ತು ಚೀನಾದಲ್ಲಿ ಶ್ರೀ ರಾಮನ ಉಲ್ಲೇಖಗಳಿವೆ ಮತ್ತು ಹಲವಾರು ದೇಶಗಳಲ್ಲಿ ರಾಮ ಕಥೆಗಳು ಜನಪ್ರಿಯವಾಗಿವೆ ಎಂದು ಹೇಳಿದರುರಾಮ ಮಂದಿರ ನಿರ್ಮಾಣದ ಪ್ರಾರಂಭದೊಂದಿಗೆ  ಎಲ್ಲ ದೇಶಗಳ ಜನರು ಇಂದು ಸಂತೋಷಪಟ್ಟಿದ್ದಾರೆ ಎಂದು ಅವರು ಹೇಳಿದರು.

ಮನುಕುಲಕ್ಕೆ ಸ್ಫೂರ್ತಿ

 ಮಂದಿರವು ಯುಗ ಯುಗಳವರೆಗೂ ಇಡೀ ಮನುಕುಲಕ್ಕೆ ಸ್ಫೂರ್ತಿಯಾಗಿರುತ್ತದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರುಶ್ರೀ ರಾಮರಾಮ ಮಂದಿರ ಮತ್ತು ನಮ್ಮ ಪ್ರಾಚೀನ ಸಂಪ್ರದಾಯದ ಸಂದೇಶವು ಇಡೀ ಜಗತ್ತಿಗೆ ತಲುಪುವುದು ಮುಖ್ಯಇದನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ರಾಮ ಪರಿಧಿ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಮ ರಾಜ್ಯ

ಮಹಾತ್ಮ ಗಾಂಧಿಯವರು ಕಂಡ ರಾಮ ರಾಜ್ಯದ ಕನಸುಗಳ ಬಗ್ಗೆ ಪ್ರಧಾನಿ ವಿವರಿಸಿದರುಶ್ರೀ ರಾಮನ ಬೋಧನೆಗಳು ದೇಶಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸುತ್ತವೆಯಾರೂ ಬಡವರಿರಬಾರದು ಅಥವಾ ಅತೃಪ್ತರಿರಬಾರದುಪುರುಷರು ಮತ್ತು ಮಹಿಳೆಯರು ಸಮಾನವಾಗಿ ಸಂತೋಷವಾಗಿರಬೇಕುರೈತರು ಮತ್ತು ಪಶು ಪಾಲಕರು ಯಾವಾಗಲೂ ಸಂತೋಷವಾಗಿರಬೇಕುಹಿರಿಯರುಮಕ್ಕಳು ಮತ್ತು ವೈದ್ಯರನ್ನು ಯಾವಾಗಲೂ ರಕ್ಷಿಸಬೇಕುಆಶ್ರಯ ಬಯಸಿ ಬಂದವರನ್ನು ರಕ್ಷಿಸುವುದು ಎಲ್ಲರ ಕರ್ತವ್ಯತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು ಮತ್ತು ಹೆಚ್ಚು ಶಕ್ತಿಯನ್ನು ಹೊಂದಿರುವ ಒಂದು ರಾಷ್ಟ್ರವು ಶಾಂತಿಯನ್ನು ಮತ್ತಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಇವು ಶ್ರೀ ರಾಮನ ಬೋಧನೆಗಳಲ್ಲಿ ಸೇರಿವೆಶ್ರೀ ರಾಮ ಆಧುನಿಕತೆ ಮತ್ತು ಬದಲಾವಣೆಯ ಪ್ರತೀಕಶ್ರೀ ರಾಮನ  ಆದರ್ಶಗಳನ್ನು ಅನುಸರಿಸಿ ದೇಶ ಪ್ರಗತಿಯಲ್ಲಿದೆ ಎಂದು ಪ್ರಧಾನಿ ಹೇಳಿದರು.

ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವದ  ಬುನಾದಿ

ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವದ ಬುನಾದಿಯ ಮೇಲೆ ಮಂದಿರವನ್ನು ನಿರ್ಮಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ‘ಸಬ್ಕಾ ಸಾಥ್ಮೂಲಕ ‘ಸಬ್ಕಾ ವಿಶ್ವಾಸ್ಗಳಿಸಿ ನಾವು ‘ಸಬ್ಕಾ ವಿಕಾಸ್ಸಾಧಿಸಬೇಕುಆತ್ಮವಿಶ್ವಾಸ ಮತ್ತು ಆತ್ಮನಿರ್ಭರ ಭಾರತ ನಿರ್ಮಿಸಬೇಕು ಎಂದು ಹೇಳಿದರುಯಾವುದೇ ವಿಳಂಬ ಮಾಡದೇನಾವು ಮುಂದೆ ಸಾಗಬೇಕು ಎಂಬ ಶ್ರೀ ರಾಮನ ಬೋಧನೆಯು ದೇಶವು ಅನುಸರಿಸಬೇಕಾದ ಸಂದೇಶವಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ‘ಮರ್ಯಾದಾ

ಕೋವಿಡ್ ಹಿನ್ನೆಲೆಯಲ್ಲಿ ಶ್ರೀ ರಾಮನ ‘ಮರ್ಯಾದಾಮಾರ್ಗದ ಮಹತ್ವವನ್ನು ನೆನಪಿಸಿಕೊಳ್ಳುವ ಮೂಲಕ ಪ್ರಧಾನಿಯವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರುಪ್ರಸ್ತುತ ಪರಿಸ್ಥಿತಿಯು ‘ದೋ ಗಜ್ ಕಿ ದೂರಿ – ಮಾಸ್ಕ್ ಹೈ ಜರೂರಿ’ ಎಂಬ ಮರ್ಯಾದಾ ನಡವಳಿಕೆಯನ್ನು ಬಯಸುತ್ತದೆ ಮತ್ತು ಎಲ್ಲರೂ ಇದನ್ನು ಅನುಸರಿಸಬೇಕು ಎಂದು ತಿಳಿಸಿದರು.