1. ಸಂಯುಕ್ತ ಮೆಕ್ಸಿಕನ್ ರಾಜ್ಯದ ಘನತೆವೆತ್ತ ಅಧ್ಯಕ್ಷ ಶ್ರೀ ಎನ್ರಿಕ್ ಪೆನಾ ನಿಯೆಟೋ ಅವರ ಆಹ್ವಾನದ ಮೇರೆಗೆ ಭಾರತದ ಘನತೆವೆತ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015ರ ಸೆಪ್ಟೆಂಬರ್ 28ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 70ನೇ ನಿಯಮಿತ ಅಧಿವೇಶನದ ವೇಳೆ ಇಬ್ಬರೂ ನಾಯಕರು ನಡೆಸಿದ್ದ ಮಾತುಕತೆಯ ಮುಂದುವರಿಕೆಯ ಉದ್ದೇಶದೊಂದಿಗೆ 2016ರ ಜೂನ್ 8ರಂದು ಮೆಕ್ಸಿಕೋಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದರು.
2. ಆರ್ಥಿಕ ಕ್ಷೇತ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಜಾಗತಿಕ ಕಾರ್ಯಕ್ರಮಪಟ್ಟಿಯಲ್ಲಿ ಪ್ರತಿಫಲಿಸಬಹುದಾದ ವಿಸ್ತೃತವಾದ ದೀರ್ಘಕಾಲೀನ ರಾಜಕೀಯ, ಆರ್ಥಿಕ ಮತ್ತು ಕಾರ್ಯತಂತ್ರಾತ್ಮಕ ಗುರಿಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಬಾಂಧವ್ಯ ಬೆಳವಣಿಗೆಗೆ ಅವಕಾಶ ನೀಡುವ ಭಾರತ ಮತ್ತು ಮಿಕ್ಸಿಕೋದ 21ನೇ ಶತಮಾನದ ಗೌರವಯುತ ಪಾಲುದಾರಿಕೆಗೆ ದಾರಿ ತೋರುವ ಅವಕಾಶಗಳನ್ನು ನಾಯಕರು ಗುರುತಿಸಿದರು.
3. ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೋ ಅವರು ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ಮೆಕ್ಸಿಕೋ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ವಿವರಿಸಿದರು. ತಮ್ಮ ಸರದಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರ ಆರ್ಥಿಕ ಪ್ರಗತಿ ಮತ್ತು ಜನರ ಜೀವನಮಟ್ಟ ಸುಧಾರಣೆಗೆ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಇಬ್ಬರೂ ನಾಯಕರು:
ರಾಜಕೀಯ ಚರ್ಚೆ
4. 2016ರಲ್ಲಿ ಮೆಕ್ಸಿಕೋದಲ್ಲಿ ನಡೆಯಲಿರುವ 7ನೇ ಮೆಕ್ಸಿಕೋ- ಭಾರತ ಜಂಟಿ ಆಯೋಗದ ಸಭೆಯ ಚೌಕಟ್ಟಿನಲ್ಲಿ 21ನೇ ಶತಮಾನದ ಸೂಕ್ತ ಗೌರವಯುತ ಪಾಲುದಾರಿಕೆಗೆ ದಾರಿಯಾಗುವಂಥ ನಕಾಶೆ ಸಿದ್ಧಪಡಿಸುವಂತೆ ಎರಡೂ ದೇಶಗಳ ವಿದೇಶಾಂಗ ಸಚಿವರುಗಳಿಗೆ ಸೂಚನೆ ನೀಡಿದರು.
5. ಮೆಕ್ಸಿಕೋದಲ್ಲಿ 2016ರ ದ್ವಿತೀಯಾರ್ಧದಲ್ಲಿ ನಡೆಯಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ 6ನೇ ಜಂಟಿ ಸಮಿತಿ ಸಭೆ ಮತ್ತು ವಾಣಿಜ್ಯ, ಹೂಡಿಕೆ ಮತ್ತು ಸಹಕಾರ ಕುರಿತ ಉನ್ನತ ಮಟ್ಟದ ಗುಂಪಿನ 4ನೇ ಸಭೆಯ ಫಲಿತಾಂಶಕ್ಕಾಗಿ ಕಾಯುತ್ತಿವೆ.
6. ಎರಡೂ ರಾಷ್ಟ್ರಗಳು ಒಮ್ಮುಖ ಮತ್ತು ಸಮಗ್ರ ಯೋಜನೆಗೆ ಅನುಗುಣವಾಗಿ ಸಹಕಾರದ ನೆಲೆಯನ್ನು ಆಧುನೀಕರಿಸಿ, ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯ ಮೌಲ್ಯಮಾಪನ ಮಾಡಿ ಮತ್ತು ದ್ವಿಪಕ್ಷೀಯ ಬಾಂಧವ್ಯದ ಕಾರ್ಯಕ್ರಮಪಟ್ಟಿಯನ್ನು ಬಲಪಡಿಸುವ ಹೊಸ ದ್ಯೇಯ ಮತ್ತು ಉದ್ದೇಶ ರೂಪಿಸಲಿವೆ.
7. ಲ್ಯಾಟಿನ್ ಅಮೆರಿಕದಲ್ಲಿನ ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ, ಸಿಇ.ಎಲ್.ಎ.ಸಿ ಮತ್ತು ಪೆಸಿಪಿಕ್ ಸಹಯೋಗ, ಏಷ್ಯಾ ಖಂಡದ ವಲಯದಲ್ಲಿನ ಪ್ರಸಕ್ತ ವಿಧ್ಯಮಾನ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಷಯಗಳ ಮೇಲೆ ತಮ್ಮ ವಿವರವಾದ ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಆರ್ಥಿಕ ಪಾಲುದಾರಿಕೆ
8. ತಮ್ಮ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಹೂಡಿಕೆ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಆರ್ಥಿಕ ಬದಲಾವಣೆಯನ್ನು ವೈವಿಧ್ಯಗೊಳಿಸುವ ಮಹತ್ವದ ಬಗ್ಗೆ ಒತ್ತಿ ಹೇಳಲಾಯಿತು.
9. ಎರಡು ರಾಷ್ಟ್ರಗಳ ನಡುವೆ ಶ್ರೇಷ್ಠ ಸಂಪರ್ಕ ಅಭಿವೃದ್ಧಿಪಡಿಸುವ ಮತ್ತು ಮೂಲಸೌಕರ್ಯ ವಲಯದಲ್ಲಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ, ಔಷಧ ಉತ್ಪನ್ನಗಳಲ್ಲಿ, ಇಂಧನ ಕ್ಷೇತ್ರದಲ್ಲಿ, ವಾಹನ ವಲಯದಲ್ಲಿ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿ, ಕೃಷಿಯಲ್ಲಿ ಮತ್ತು ಆಹಾರ ಸಂಸ್ಕರಣೆಯಲ್ಲಿ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಸಹಕಾರ ಉತ್ತೇಜಿಸುವ ಅಗತ್ಯವನ್ನು ಪ್ರತಿಪಾದಿಸಲಾಯಿತು.
10. ಮೆಕ್ಸಿಕೋದಲ್ಲಿ ಕೈಗೊಳ್ಳಲಾಗಿರುವ ವಿನ್ಯಾಸಿತ ಸುಧಾರಣೆ ಹಿನ್ನೆಲೆಯಲ್ಲಿ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಭಾರತೀಯ ಕಂಪನಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಮೆಕ್ಸಿಕನ್ ಕಂಪನಿಗಳಿಗೆ ಅವಕಾಶ ಕುರಿತಂತೆ ತೃಪ್ತಿವ್ಯಕ್ತಪಡಿಸಲಾಯಿತು.
11. ಹೂಡಿಕೆ ಉತ್ತೇಜನ ಮತ್ತು ಸೌರ ಇಂಧನ ಬಳಕಿಗೆ ಸಹಕಾರ ಪ್ರಮುಖ ಅಂಶ ಎಂಬುದನ್ನು ಒಪ್ಪಿಕೊಂಡ ಎರಡೂ ಪಕ್ಷಗಳು, ಅಂತಾರಾಷ್ಟ್ರೀಯ ಸೌರ ಸಹಯೋಗದ ಉದ್ದೇಶಗಳನ್ನು ಉತ್ತೇಜಿಸಲು ದಾರಿಗಳನ್ನು ಹುಡುಕಲು ಸಮ್ಮತಿ ಸೂಚಿಸಿದವು.
12. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಪರ್ಕವನ್ನು ಬಲಪಡಿಸುವ ಮತ್ತು ಉತ್ತಮವಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಎರಡೂ ದೇಶಗಳ ಜನರ ವಿನಿಮಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಮಹತ್ವನ್ನು ಪ್ರತಿಪಾದಸಲಾಯಿತು.
ದ್ವಿಪಕ್ಷೀಯ ಸಹಕಾರ
13. ಸಮಾನವಾದ ಉದ್ದೇಶವನ್ನು ಹೊಂದಿರುವ ಮೆಕ್ಸಿಕೋದ ರಾಷ್ಟ್ರೀಯ ಡಿಜಿಟಲ್ ಕಾರ್ಯತಂತ್ರ ಮತ್ತು ಡಿಜಿಟಲ್ ಇಂಡಿಯಾ ಉಪಕ್ರಮಗಳ ನಡುವಿನ ಸಮಾನಲಕ್ಷಣ ಹಾಗೂ ನೀಡಲಾದ ಅವಕಾಶಗಳನ್ನು ಸ್ವಾಗತಿಸಲಾಯಿತು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು.
14. ಬಾಹ್ಯಾಕಾಶ ವಿಜ್ಞಾನ, ಭೂ ಪರಿವೀಕ್ಷಣೆ, ಹವಾಮಾನ ಮತ್ತು ಪರಿಸರ ಅಧ್ಯಯನದ ಸಹಯೋಗ ಮತ್ತು ಭಾರತದಲ್ಲಿ ಮತ್ತು ದೂರ ಸಂವೇದನೆಗೆ, ವಿಕೋಪ ತಡೆಗೆ ಮೊದಲೇ ಮುನ್ನಚ್ಚರಿಕೆ ನೀಡುವುದಕ್ಕೆ ಮೆಕ್ಸಿಕೋದಲ್ಲಿ ಲಭ್ಯವಿರುವ ಬಾಹ್ಯಾಕಾಶ ಸಂಬಂಧಿತ ಸಂಪನ್ಮೂಲದ ಸಮರ್ಥ ಬಳಕೆ ಹಾಗೂ ಮೆಕ್ಸಿಕೋದ ಬಾಹ್ಯಾಕಾಶ ಸಂಸ್ಥೆ (ಎ.ಇ.ಎಂ.) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡುವೆ ಉಪಗ್ರಹಗಳ ಉಡಾವಣೆಯನ್ನು ಸ್ವಾಗತಿಸಲಾಯಿತು.
15. ಎರಡೂ ದೇಶಗಳ ಜನ ಸಮುದಾಯ ವಿದೇಶಗಳಲ್ಲಿರುವುದನ್ನು ಪರಿಗಣಿಸಿ, ಇಬ್ಬರೂ ನಾಯಕರು ಭಾಗವಹಿಸುವಿಕೆ ಜಾಲಗಳು, ಸಂಘಟನೆ ಮತ್ತು ವ್ಯಕ್ತಿಗಳು ವಿದೇಶೀ ನೆಲದಲ್ಲಿರುವ ತಮ್ಮ ವಲಸೆ ಪ್ರದೇಶದಲ್ಲಿನ ತಮ್ಮ ಮೂಲದ ಸಮುದಾಯದ ಅಭಿವೃದ್ಧಿ ಮತ್ತು ಅವರ ನಿವಾಸ, ಅವರುಗಳ ಕಲ್ಯಾಣ ಮತ್ತು ರಕ್ಷಣೆ ವಿಚಾರದಲ್ಲಿ ಕೈಗೊಂಡಿರುವ ಉತ್ತಮ ಪದ್ಥತಿಗಳನ್ನು ಮತ್ತು ಮಾಹಿತಿಯನ್ನು ಹಾಗೂ ಅಭಿಪ್ರಾಯವನ್ನು ವಿನಿಮಯ ಮಾಡಿಕೊಳ್ಳಲು ಸಮ್ಮತಿಸಿದರು.
ಜಾಗತಿಕ ವಿಚಾರಗಳ ಮೇಲೆ ಚರ್ಚೆ
16. ಅಂತಾರಾಷ್ಟ್ರೀಯ ಭದ್ರತೆ ವಿಚಾರಗಳಲ್ಲಿ ನಿರಂತರ ಸಹಕಾರ ಉತ್ತೇಜಿಸಲು ಮತ್ತು ಪರಮಾಣು ನಿಶ್ಶಸ್ತ್ರೀಕರಣ, ಅಣ್ವಸ್ತ್ರ ಪ್ರಸರಣ ತಡೆ ಮೊದಲಾದ ಬಹುಪಕ್ಷೀಯ ದೃಷ್ಟಿಕೋನದ ಪರಿಹಾರದ ವಿನಿಮಯಿತ ಗುರಿಗಳನ್ನು ಮುಂದುವರಿಸಲು ಸಂಕಲ್ಪಿಸಿದರು.
17. ಎಲ್ಲ ಸ್ವರೂಪದ ಭಯೋತ್ಪಾದನೆ ಮತ್ತು ಅದರ ಅಭಿವ್ಯಕ್ತಿಯನ್ನು ಬಲವಾಗಿ ಖಂಡಿಸುವ ತಮ್ಮ ನಿಲುವನ್ನು ಪುನರುಚ್ಚರಿಸಿದರು.
18. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆಗಳ ಪ್ರಕ್ರಿಯೆಯಲ್ಲಿ ಪ್ರಗತಿ ಬೆಂಬಲಿಸುವುದನ್ನು ಮುಂದುವರೆಸುವುದರ ಪ್ರಾಮುಖ್ಯತೆಯನ್ನು ಒಪ್ಪಿಕೊಂಡು, ಬಹುಪಕ್ಷೀಯವಾದ ಸಮರ್ಥ ವ್ಯವಸ್ಥೆಯೊಂದನ್ನು ಹೊಂದುವ ಮಹತ್ವನ್ನು ಪುನರುಚ್ಚರಿಸಿದರು.
19. ಜಿ 20ರಲ್ಲಿ ತಮ್ಮ ಭಾಗವಹಿಸುವಿಕೆಯ ವೇಳೆ ಫಲಪ್ರದ ಮತ್ತು ಭೌದ್ಧಿಕ ಸಹಕಾರವನ್ನು ಉಲ್ಲೇಖಿಸಿದರು.
20. 2015ರ ಡಿಸೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದ ಯಶಸ್ವೀ ನಿರ್ಣಯಕ್ಕೆ ತೃಪ್ತಿ ವ್ಯಕ್ತಪಡಿಸಿ, ಅದನ್ನು ಸ್ವಾಗತಿಸಿದರು. ಮತ್ತು 2016ರ ಏಪ್ರಿಲ್ 22ರಂದು ಎರಡೂ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಪ್ಯಾರಿಸ್ ಒಪ್ಪಂದಕ್ಕೆಎಷ್ಟು ಸಾಧ್ಯವೋ ಅಷ್ಟು ಬೇಗ ಸ್ಥಿರೀಕರಣ ನೀಡಲೂ ತಮ್ಮ ಬದ್ಧತೆ ವ್ಯಕ್ತಪಡಿಸಿದರು. ಜೊತೆಗೆ ತಮ್ಮ ತಮ್ಮ ರಾಷ್ಟ್ರಗಳಲ್ಲಿನ ಅಭಿವೃದ್ಧಿಗೆ ಅನುಗುಣವಾದ ಸವಾಲುಗಳನ್ನು ಎದುರಿಸಲು ಹೊಸ ಮತ್ತು ಪುನರ್ನವೀಕರಿಸುವ ಇಂಧನ ಮೂಲಗಳ ಅಭಿವೃದ್ಧಿಯ ಬದ್ಧತೆ ವ್ಯಕ್ತಪಡಿಸಿದರು.
21. ಅಧ್ಯಕ್ಷ ಎನ್ರಿಕ್ ಪಿನಾ ನಿಯೆಟೋ ಅವರು ಭಾರತದ ಪ್ರಧಾನಮಂತ್ರಿಯವರಿಗೆ ಆದಷ್ಟು ಹತ್ತಿರದ ಭವಿಷ್ಯದಲ್ಲೇ ಹಾಗೂ ಮತ್ತೊಮ್ಮೆ ಮೆಕ್ರಿಕೋ ರಾಷ್ಟ್ರ ಭೇಟಿ ಕೈಗೊಳ್ಳುವಂತೆ ಆಹ್ವಾನಿಸಿದರು. ಅದೇ ರೀತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಅಧ್ಯಕ್ಷ ಪಿನಾ ನಿಯೆಟೋ ಅವರಿಗೆ ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಆಹ್ವಾನಿಸಿದರು. ರಾಜತಾಂತ್ರಿಕ ಮಾರ್ಗಗಳ ಮೂಲಕ ಸೂಕ್ತ ದಿನಾಂಕ ನಿಗದಿ ಪಡಿಸಲು ಅವರು ಒಪ್ಪಿಗೆ ಸೂಚಿಸಿದರು.