ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತದಿಂದ ದೇಶಕ್ಕೆ ಭಾರೀ ಹಿತಾನುಭವ.
ಕಳೆದೊಂದು ದಶಕದಲ್ಲಿ ನಿರ್ಣಾಯಕ ನಿರ್ಧಾರಗಳ ಬದಲು ಅರೆಬರೆ ನಿರ್ಣಯಗಳು, ಭ್ರಷ್ಟಾಚಾರ ಮತ್ತು ವಿವೇಚನೆ ರಹಿತ ನಿರ್ಧಾರಗಳಿಗೆ ಸಾಕ್ಷಿಯಾಗಿತ್ತು. ಆದರೆ ಕಳೆದ ವರ್ಷದಲ್ಲಿ ಸ್ವಾಗತಾರ್ಹ ಬದಲಾವಣೆಯಾಗಿದೆ.
ಕಳೆದ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯನ್ನು ರದ್ದುಪಡಿಸಿತ್ತು. ಆದರೆ ಪ್ರಸಕ್ತ ಸರ್ಕಾರವು ಪಾರದರ್ಶಕತೆ ಮತ್ತು ಸಕಾಲಿಕ ಹರಾಜಿನ ಮೂಲಕ ಎಲ್ಲವನ್ನೂ ಬದಲಾಯಿಸಿತು. ಕೇವಲ 67 ನಿಕ್ಷೇಪಗಳ ಹಂಚಿಕೆಯಿಂದಲೇ ಸರ್ಕಾರಕ್ಕೆ 3.35 ಲಕ್ಷ ಕೋಟಿ ಆದಾಯ ಸಂದಿದೆ. ದೆಹಲಿ ಹೈಕೋರ್ಟ್ ಅಭಿಪ್ರಾಯ
“ಹರಾಜು ಪ್ರಕ್ರಿಯೆಯು ಸರಿಯಾಗಿ ಮತ್ತು ಒಳ್ಳೆಯ ರೀತಿಯಲ್ಲಿ ನಡೆದಿದೆ ಎನ್ನುವುದು ನಮಗೆ ಮನವರಿಕೆಯಾಗಿದೆ. ಹರಾಜು ಪ್ರಕ್ರಿಯೆಯು ಅಸಮರ್ಪಕವಾಗಿ ನಡೆದಿದೆ ಎಂದು ನಮಗೆ ಅನ್ನಿಸುವುದಿಲ್ಲ. ಅಷ್ಟೇ ಅಲ್ಲ, ಹರಾಜು ಪ್ರಕ್ರಿಯೆ ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭವಾಗುವಂತೆ ರೂಪಿತವಾಗಿದೆ ಎನ್ನುವ ದೂರುಗಳೂ ಕೇಳಿ ಬಂದಿಲ್ಲ.”
ತರಂಗಾಂತರ ಹಂಚಿಕೆಯಲ್ಲೂ ಸರ್ಕಾರದ ನಡೆಯಿಂದ ಬೊಕ್ಕಸಕ್ಕೆ ಭಾರೀ ಲಾಭವಾಗಿದ್ದು, ಶೂನ್ಯ ನಷ್ಟ ನೀತಿಗೆ ವಿರುದ್ಧವಾಗಿ ನಡೆದಿದೆ. ಅಷ್ಟೇ ಅಲ್ಲ ರಕ್ಷಣಾ ಬ್ಯಾಂಡ್ ನ ಗುರುತಿಸುವಿಕೆ ಕಳೆದ 7 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿತ್ತು. ಆದರೆ ಪ್ರಸಕ್ತ ಸರಕಾರವು ಅತ್ಯಂತ ತ್ವರಿತ ಗತಿಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ರಕ್ಷಣಾ ಸಚಿವಾಲಯವು 2100 ಮೆಗಾಹರ್ಟ್ಸ್ ತರಂಗಾಂತರಗಳನ್ನು ಬಿಡುಗಡೆ ಮಾಡಿದೆ. 800 ಮೆ.ಹ, 900 ಮೆ.ಹ, 1800 ಮೆ.ಹ ಮತ್ತು 2100 ಮೆ.ಹ ಬ್ಯಾಂಡ್ ಗಳಲ್ಲಿ ಈ ತರಂಗಾಂತರಗಳನ್ನು ಹರಾಜು ಹಾಕಲಾಗಿತ್ತು. ಮೊದಲ ಬಾರಿಗೆ ಬಹು ಸುತ್ತಿನಲ್ಲಿ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಖರೀದಿದಾರರಿಗೆ ಸಂಪೂರ್ಣ ಮಾಹಿತಿ ಸಿಗುಂತೆ ಮಾಡಲಾಗಿತ್ತು. ಸರಕಾರದ ಈ ಕ್ರಮದಿಂದಾಗಿ ತರಂಗಾಂತರ ಹಂಚಿಕೆಯಿಂದ ಬೊಕ್ಕಸಕ್ಕೆ ನಿಗದಿತ 80277 ಕೋ.ರೂ ಬದಲಾಗಿ 109875 ಕೋ.ರೂ ಸಂಗ್ರಹಣೆಯಾಗಿತ್ತು.
ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಿಸರ ಸಚಿವಾಲಯವು ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಪರಿಸರ ಸಂಬಂಧಿತ ನಿರಪೇಕ್ಷಣೆಗಳನ್ನು ಪಡೆಯಲು ಆನ್ ಲೈನ್ ಪದ್ಧತಿ ಆರಂಭಿಸಿದೆ. ಇನ್ನು ಮುಂದೆ ಅನುಮತಿಗಳಿಗಾಗಿ ಸಚಿವಾಲಯವನ್ನು ಸಂಪರ್ಕಿಸುವ ಅಗತ್ಯವಿಲ್ಲ. ಆನ್ ಲೈನ್ ನಲ್ಲಿಯೇ ಅರ್ಜಿಗಳ ಸ್ಥಿತಿಗತಿ ತಿಳಿದುಕೊಳ್ಳಬಹುದು.
ಕಪ್ಪುಹಣದ ವಿಚಾರದಲ್ಲಿ ಸರಕಾರ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಎಸ್ ಐಟಿಯನ್ನು ರಚಿಸಿದೆ. ಸ್ವಿಸ್ ಸರಕಾರದ ಜೊತೆಗೆ ಸರಕಾರವು ಸದಾ ಸಂಪರ್ಕದಲ್ಲಿದ್ದು, ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ತನಿಖೆಯಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಸರಕಾರವು ಅಘೋಷಿತ ವಿದೇಶಿ ಆದಾಯ ಮತ್ತು ಸ್ವತ್ತು ಕಾಯ್ದೆ-2015ಕ್ಕೆ ಒಪ್ಪಿಗೆ ನೀಡಿದೆ. ಈ ಕಾಯ್ದೆಯಡಿ ಅಘೋಷಿತ ಆದಾಯ ಮತ್ತು ಆಸ್ತಿಗಳನ್ನು ಹೊಂದಿರುವವರ ವಿರುದ್ಧ ಕಠಿಣ ಕ್ರಮ ಹಾಗೂ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ 1 ಲಕ್ಷ ರೂಪಾಯಿಗೂ ಮೇಲ್ಪಟ್ಟ ಪ್ರತಿ ಖರೀದಿ ಮತ್ತು ಮಾರಾಟಕ್ಕೆ ಪಾನ್ ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದೆ.