Search

ಪಿಎಂಇಂಡಿಯಾಪಿಎಂಇಂಡಿಯಾ

ಶ್ರೀ ಚಂದ್ರಶೇಖರ್

ನವೆಂಬರ್ 10, 1990 - ಜೂನ್ 21, 1991 | ಜನತಾ ದಳ (ಎಸ್)

ಶ್ರೀ  ಚಂದ್ರಶೇಖರ್


ಶ್ರೀಚಂದ್ರಶೇಖರ್ ಅವರು ಏಪ್ರಿಲ್ 17, 1927ರಂದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಇಬ್ರಾಹಿಂಪಟ್ಟಿ ಗ್ರಾಮದ ಕೃಷಿ ಕುಟುಂಬವೊಂದರಲ್ಲಿ ಜನಿಸಿದರು. ಅವರು 1977 ರಿಂದ 1988ರ ತನಕ ಜನತಾ ಪಕ್ಷದ ಅಧ್ಯಕ್ಷರಾಗಿದ್ದರು.

ಶ್ರೀಚಂದ್ರಶೇಖರ್ ಅವರು ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯದತ್ತ ಆಕರ್ಷಿತರಾಗಿದ್ದರು ಹಾಗೂ ಕ್ರಾಂತಿಕಾರಿ ಬೇಗೆಯೊಂದಿಗೆ ಬೆಂಕಿ ಚೆಂಡಿನಂಥ ಯುವ ನಾಯಕರಾಗಿ ಗುರುತಿಸಿಕೊಂಡಿದ್ದರು. ಅಲಹಾಬಾದ್ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ (1950-51) ಅವರು ಸಮಾಜವಾದಿ ಚಳವಳಿಗೆ ಧುಮುಕಿದರು. ಅವರು ಆಚಾರ್ಯ ನರೇಂದ್ರ ದೇವ್ ಅವರ ಆಪ್ತ ನಿಕಟವರ್ತಿಗಳಾಗಿದ್ದರು. ಬಲ್ಲಿಯಾದ ಜಿಲ್ಲಾ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಕಾರ್ಯದರ್ಶಿಯಾಗಿ ಅವರು ಆಯ್ಕೆಯಾದರು. ಬಳಿಕ ಒಂದು ವರ್ಷದೊಳಗೆ ಉತ್ತರ ಪ್ರದೇಶ ರಾಜ್ಯ ಪ್ರಜಾ ಸಮಾಜವಾದಿ ಪಕ್ಷದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡರ. 1955-56ರಲ್ಲಿ ಅವರು ಉತ್ತರ ಪ್ರದೇಶ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.

1962ರಲ್ಲಿ, ಅವರು ಉತ್ತರಪ್ರದೇಶದಿಂದ ರಾಜ್ಯ ಸಭೆಗೆ ಆಯ್ಕೆಯಾದರು. 1965ರಲ್ಲಿ ಭಾರತೀಯ ರಾಷ್ಟೀಯ ಕಾಂಗ್ರೆಸ್ಗೆ ಸೇರಿದರು. 1967ರಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದರು. ಸಂಸತ್ ಸದಸ್ಯರಾಗಿ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರ ದತ್ತಿ ಎತ್ತಿ ಕ್ಷಿಪ್ರ ಸಾಮಾಜಿಕ ಪರಿವರ್ತನೆಗ ನೀತಿಗಳನ್ನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ, ರಾಜ್ಯದ ಕೃಪಾಕಟಾಕ್ಷದೊಂದಿಗೆ ಸದನಗಲ್ಲಿ ಏಕಸ್ವಾಮತ್ಯೆಯ ಅಸಮರ್ಪಕ ಬೆಳವಣಿಗೆ ವಿರುದ್ದ ವಾಗ್ದಾಳಿ ನಡೆಸಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.

ಪಟ್ಟಭದ್ರಾ ಹಿತಾಸಕ್ತಿಗಳ ವಿರುದ್ಧ ಹೋರಾಡಲು ತಮ್ಮ ಪರಿಕಲ್ಪನೆ, ಧೈರ್ಯ ಮತ್ತು ಏಕತೆಯೊಂದಿಗೆ ‘ಯಂಗ್ ಟರ್ಕ್’ ನಾಯಕರಾಗಿ ಗುರುತಿಸಿಕೊಂಡರು. 1969ರಲ್ಲಿ ದೆಹಲಿಯಿಂದ ಪ್ರಕಟವಾಗುತ್ತಿದ್ದ ಯಂಗ್ ಇಂಡಿಯನ್ ಎಂಬ ವಾರ ಪತ್ರಿಕೆಯನ್ನು ಸ್ಥಾಪಿಸಿ ಅದರ ಸಂಪಾದಕರಾದರು. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಂಪಾದಕೀಯವು ಅತ್ಯಂತ ತೀಕ್ಷ್ಣವಾಗಿದ್ದು ಆ ಕಾಲದಲ್ಲೇ ಸುದ್ದಿ ಮಾಡಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ (ಜೂನ್ 1975ರಿಂದ ಮಾರ್ಚ್ 1977) ಯಂಗ್ ಇಂಡಿಯಾ ಪತ್ರಿಕಾ ಕಚೇರಿಯನ್ನು ಮುಚ್ಚಲಾಯಿತು. 1989ರ ಫೆಬ್ರವರಿಯಲ್ಲಿ ಇದು ಮತ್ತೆ ಪ್ರಕಟಗೊಂಡಿತು. ಶ್ರೀಚಂದ್ರಶೇಖರ್ ಅವರು ಸಂಪಾದಕೀಯ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದರು.

ಚಂದ್ರಶೇಖರ್ ಅವರು ಯಾವಾಗಲೂ ವ್ಯಕ್ತಿ ರಾಜಕಾರಣಕ್ಕೆ ವಿರೋಧವಾಗದ್ದರು. ಅವರು ತತ್ವ, ಆದರ್ಶ ಮತ್ತು ಸಾಮಾಜಿಕ ಪರಿವರ್ತನೆಯ ರಾಜಕಾರಣದ ಪರ ಒಲವು ಹೊಂದಿದ್ದರು. ಇದು 1973-75ರ ಪ್ರಕ್ಷುಬ್ಧ ಸಮಯದಲ್ಲಿ ಅವರನ್ನು ಶ್ರೀಜಯಪ್ರಕಾಶ್ ನಾರಾಯಣ್ ಹಾಗೂ ಅವರ ಆದರ್ಶ ಜೀವನದ ದೃಷ್ಟಿಕೋನದತ್ತ ಒಲವು ಮೂಡುವಂತೆ ಮಾಡಿತು. ಅವರು ನಂತರ ಕಾಂಗ್ರೆಸ್ ಪಕ್ಷದೊಂದಿಗೆ ಅಸಮ್ಮತಿಯ ಕೇಂದ್ರ ಬಿಂದುವಾದರು.

ಜೂನ್ 25, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅತ್ಯುನ್ನತ ಅಂಗಸಂಸ್ಥೆಗಳಾದ ಕೇಂದ್ರೀಯ ಚುನಾವಣಾ ಸಮತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರೂ ಅವರನ್ನು ಆಂತರಿಕ ಭದ್ರತೆ ನಿರ್ವಹಣೆ ಕಾಯ್ದೆ ಅನ್ವಯ ಬಂಧಿಸಲಾಯಿತು.

ತುರ್ತು ಪರಿಸ್ಥಿತಿ ವೇಳೆ ಕಾರಾಗೃಹ ಶಿಕ್ಷೆಗೆ ಒಳಗಾದ ಆಡಳಿತ ಪಕ್ಷದ ಕೆಲವು ನಾಯಕರಲ್ಲಿ ಶ್ರೀಚಂದ್ರಶೇಖರ್ ಅವರೂ ಒಬ್ಬರಾಗಿದ್ದಾರೆ.

ಅಧಿಕಾರಕ್ಕಾಗಿ ರಾಜಕೀಯ ಧೋರಣೆಯನ್ನು ಅವರು ಎಂದು ಸಹಿಸುತ್ತಿರಲಿಲ್ಲ. ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಮಾಜಿಕ ಪರಿವರ್ತನೆಗೆ ಬದ್ಧವಾದ ರಾಜಕೀಯವನ್ನು ಅನುಸರಿಸುತ್ತಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ಅವರು ಹಿಂದಿಯಲ್ಲಿ ಬರೆದ ತಮ್ಮ ದಿನಚರಿಯನ್ನು ನಂತರ ‘ಮೇರಿ ಜೈಲ್ ಡೈರಿ’ ಹೆಸರಿನಲ್ಲಿ ಪ್ರಕಟಿಸಲಾಯಿತು. ಅವರ ಅತ್ಯುತ್ತಮ ಬರಹವೆಂದರೆ “ಡೈನಾಮಿಕ್ಸ್ ಆಫ್ ಸೋಷಿಯಲ್ ಚೈಂಜಸ್’.

ಶ್ರೀಚಂದ್ರಶೇಖರ್ ಅವರು ಜನವರಿ 6, 1983 ರಿಂದ ಜೂನ್ 25, 1983ರ ತನಕ ದಕ್ಷಿಣ ಭಾಗದ ತುತ್ತುತುದಿಯಾದ ಕನ್ಯಾಕುಮಾರಿಯಿಂದ ನವದೆಹಲಿಯ ರಾಜ್ಘಾಟ್ (ಮಹಾತ್ಮ ಗಾಂಧಿ ಅವರ ಸಮಾಧಿ) ತನಕ 4,260 ಕಿ.ಮೀ.ತನಕ ರಾಷ್ಟ್ರಾದ್ಯಂತ ಪಾದಯಾತ್ರೆ ಮಾಡಿದರು. ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಈ ಪಾದಯಾತ್ರೆಯನ್ನು ಅವರು ನಡೆಸಿದರು.

ದೇಶದ ಹಿಂದುಳಿದ ಪ್ರದೇಶಗಳಲ್ಲಿ ಸಾಮೂಹಿಕ ಶಿಕ್ಷಣ ಮತ್ತು ಬೇರುಮಟ್ಟದಲ್ಲಿ ಕಾರ್ಯನಿರ್ವಹಿಸಲು ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಿಗೆ ತರಬೇತಿ ನೀಡಲು ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ ಮತ್ತು ಹರಿಯಾಣ ಸೇರಿದಂತೆ ದೇಶ ವಿವಿಧ ಭಾಗಗಳಲ್ಲಿ ಹದಿನೈದು ಭಾರತ ಯಾತ್ರ ಕೇಂದ್ರಗಳನ್ನು ಅವರು ಸ್ಥಾಪಿಸಿದರು.

ಅವರು 1984 ರಿಂದ 1989ರ ಅವಧಿಯನ್ನು ಹೊರತುಪಡಿಸಿ 1962ರಿಂದ ಸಂಸತ್ ಸದಸ್ಯರಾಗಿದ್ದರು. 1989ರಲ್ಲಿ ಅವರು ತಮ್ಮ ಸ್ವಕ್ಷೇತ್ರ ಬಲ್ಲಿಯಾ ಮತ್ತು ಬಿಹಾರದ ಮಹಾರಾಜ್ಗಂಜ್ ಕ್ಷೇತ್ರ ಇವರೆಡರಲ್ಲೂ ಸ್ಪರ್ಧಿಸಿ ಜಯ ಸಾಧಿಸಿದ್ದರು.

ಶ್ರೀಚಂದ್ರಶೇಖರ್ ಅವರು ಶ್ರೀಮತಿ ದುಜಾ ದೇವಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಪಂಕಜ್ ಮತ್ತು ನೀರಜ್ ಎಂಬ ಇಬ್ಬರು ಪುತ್ರರಿದ್ದಾರೆ.