Search

ಪಿಎಂಇಂಡಿಯಾಪಿಎಂಇಂಡಿಯಾ

ಸಮೃದ್ಧ ಭಾರತಕ್ಕಾಗಿ ರೈತರ ಸಬಲೀಕರಣ


ಕೃಷಿಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ರೈತರು ಎಂದೆಂದಿಗೂ ಭಾರತದ ಬೆನ್ನೆಲುಬಾಗಿದ್ದಾರೆ. ಎನ್ ಡಿ ಎ ಸರಕಾರವು ದೇಶದ ಬೆನ್ನೆಲುಬನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿಸಲು ಹಲವು ಹೊಸ ಮತ್ತು ಬಲಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ.

empowering farmers (1)

ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯು ನೀರಾವರಿ ವ್ಯವಸ್ಥೆಯನ್ನು ಖಾತರಿಪಡಿಸುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ನೆರವಾಗುತ್ತಿದೆ. ಸಮಸ್ತ ಕೃಷಿ ಭೂಮಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರತಿ ಹನಿಗೆ ಹೆಚ್ಚು ಬೆಳೆ ಅಭಿಯಾನದ ಅಡಿಯಲ್ಲಿ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ರೈತರ ಸಮೂಹಕ್ಕೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ಪರಂಪರಾಗತ ಕೃಷಿ ವಿಕಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಾವಯವ ಕೃಷಿ ಮತ್ತು ಸಾವಯವ ಉತ್ಪನ್ನಗಳ ರಫ್ತಿಗಾಗಿ ಈಶಾನ್ಯ ಭಾರತಕ್ಕಾಗಿಯೇ ವಿಶೇಷ ಯೋಜನೆಯನ್ನು ಆರಂಭಿಸಲಾಗಿದೆ.

ಮಣ್ಣು ಆರೋಗ್ಯ ಕಾರ್ಡ್ ಅನ್ನು ವಿತರಿಸಲಾಗುತ್ತಿದ್ದು, ಸುಸ್ಥಿರ ಕೃಷಿ ಅಭಿವೃದ್ಧಿಗೆ ನೆರವಾಗುತ್ತಿದೆ. ದೇಶದ ಎಲ್ಲಾ 14 ಕೋಟಿ ರೈತ ಕುಟುಂಬಗಳಿಗೆ ಈ ಕಾರ್ಡ್ ವಿತರಿಸಲಾಗುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ 248 ಲಕ್ಷ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ದೇಶೀ ಉತ್ಪಾದನೆ ಹೆಚ್ಚಿಸಲು ಹೊಸ ಯೂರಿಯಾ ನೀತಿಯನ್ನು ಜಾರಿಗೆ ತರಲಾಗಿದೆ. ಗೋರಖ್ ಪುರ, ಬರೋನಿ ಮತ್ತು ತಲಚೇರಿಗಳಲ್ಲಿ ರಸಗೊಬ್ಬರ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ.

empowering farmers (2) [ PM India 388KB ]

ಇತ್ತೀಚೆಗಿನ ಅಸಮರ್ಪಕ ಮಳೆಯಿಂದಾಗಿ, ಎನ್ ಡಿ ಎ ಸರಕಾರವು ರೈತರಿಗೆ 33%ಗಿಂತ ಹೆಚ್ಚಿನ ಬೆಳೆಹಾನಿಗೆ ಸಬ್ಸಿಡಿ ಒದಗಿಸುವುದಾಗಿ ಘೋಷಿಸಿದೆ. ಈ ಹಿಂದೆ 50%ಗಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಮಾತ್ರ ರೈತರು ಈ ಯೋಜನೆಗೆ ಅರ್ಹರಾಗಿರುತ್ತಿದ್ದರು. ಅಲ್ಲದೆ ಆರ್ಥಿಕ ನೆರವನ್ನು 50%ಗಿಂತ ಹೆಚ್ಚಿನ ಬೆಳೆ ಹಾನಿಗೆ ಅನ್ವಯಿಸಲಾಗಿದೆ.

500 ಕೋಟಿ ರೂಪಾಯಿಗಳ ಆವರ್ತನಿಧಿಯೊಂದಿಗೆ ಬೆಲೆ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸಲಾಗಿದೆ. ಇದರಿಂದ ಬೆಲೆ ಕುಸಿತದ ಸಂದರ್ಭದಲ್ಲಿ, ಸರ್ಕಾರ ಮಧ್ಯಪ್ರವೇಶ ಮಾಡಿ ಹಾನಿ ತಪ್ಪಿಸಲು ಸಾಧ್ಯವಾಗುತ್ತಿದೆ.

ಫೀಡರ್ ಗಳನ್ನು ಪ್ರತ್ಯೇಕಿಸುವ ಮೂಲಕ ಗ್ರಾಮ ಜ್ಯೋತಿ ಯೋಜನೆಯಡಿ ರೈತರಿಗೆ ಅನಿರ್ಭಂಧಿತ ವಿದ್ಯುತ್ ನೀಡುವ ಯೋಜನೆ ರೂಪಿಸಲಾಗಿದೆ. ಇದು ಕೇವಲ ಉತ್ಪಾದನೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ರೈತರ ಒಟ್ಟಾರೆ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಗುಡಿಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಕ್ಕೂ ಇದರಿಂದ ಲಾಭವಾಗಿದೆ.

empowering farmers (3)

ಡಬ್ಲ್ಯುಟಿಒ ಒಪ್ಪಂದ ಕುರಿತು ಎನ್ ಡಿ ಎ ಸರ್ಕಾರದ ಬಲಿಷ್ಟ ಮತ್ತು ತಾತ್ವಿಕ ನಿಲುವುಗಳು ರೈತರ ದೂರಗಾಮಿ ಲಾಭವನ್ನು, ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಶಕ್ತವಾಗಿದೆ. ಕೃಷಿ ಸಾಲದ ಪ್ರಮಾಣವನ್ನು 8.5ಲಕ್ಷ ಕೋಟಿಗೆ ಏರಿಸಲಾಗಿದೆ. ರೈತರಿಗೆ ಸುಲಭ ರೀತಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತಿದೆ. ಹವಾಮಾನ ವರದಿ, ರಸಗೊಬ್ಬರ ಮಾಹಿತಿ, ಕೃಷಿ ವಿಧಾನಗಳು ಮತ್ತಿತರ ಮಾಹಿತಿಗಳನ್ನು ತಂತ್ರಜ್ಞಾನದ ಬಳಕೆಯ ಮೂಲಕ ಕಿಸಾನ್ ತಾಣದ ಮೂಲಕ ರೈತರಿಗೆ ತ್ವರಿತವಾಗಿ ರವಾನಿಸಲಾಗುತ್ತಿದೆ, ಮೊಬೈಲ್ ಆಡಳಿತದ ಜಾರಯಿಂದಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಲಭಿಸಿದೆ. ಸುಮಾರು 1 ಕೋಟಿಗೂ ಹೆಚ್ಚು ರೈತರಿಗೆ 550 ಕೋಟಿಗೂ ಹೆಚ್ಚು ಎಸ್ ಎಂಎಸ್ ಸಂದೇಶಗಳನ್ನು ಕಳುಹಿಸಲಾಗಿದೆ.

Know more about Soil Health Cards here

Know how farmers are being empowered here

Loading... Loading