ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಾಷರ್ಮನ್ ಪೆಟ್ ನಿಂದ ವಿಮ್ಕೋನಗರದವರೆಗಿನ ಚೆನ್ನೈ ಮೆಟ್ರೋ ರೈಲಿನ ಪ್ರಥಮ ಹಂತದ ಯೋಜನೆಯ ಪ್ರಸ್ತಾಪಕ್ಕೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ.ಇದು 9.051 ಕಿಲೋ ಮೀಟರ್ ಉದ್ದದ ವ್ಯಾಪ್ತಿಯದಾಗಿದ್ದು, ಇದರ ಒಟ್ಟು ವೆಚ್ಚ 3770 ಕೋಟಿ ರೂಪಾಯಿಗಳಾಗಿವೆ.
ಈ ಯೋಜನೆಯನ್ನು ಭಾರತ ಸರ್ಕಾರದ ಹಾಲಿ ಎಸ್.ಪಿ.ವಿ.ಯಿಂದ ಕಾರ್ಯಗತಗೊಳಿಸಲಾಗುತ್ತದೆ ಮತ್ತು ತಮಿಳುನಾಡು ಸರ್ಕಾರ ಅಂದರೆ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್. 50:50 ಈಕ್ವಿಟಿ ಹೊಂದಿರುತ್ತದೆ. ಈ ಯೋಜನೆಯು 2018ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಬೇಕಿದೆ.
ಈ ವಿಸ್ತರಣೆಯು ಜನ ಸಂದಣಿಯ ಅದರಲ್ಲೂ ಕೈಗಾರಿಕಾ ನೌಕರರಿಗೆ ಕೆಲಸಕ್ಕಾಗಿ ಕೇಂದ್ರೀಯ ವಾಣಿಜ್ಯ ಜಿಲ್ಲೆಯತ್ತ ಪ್ರಯಾಣ ಮಾಡಲು ಸುಧಾರಿತ ಸಾರ್ವಜನಿಕ ಸಾರಿಗೆಯ ಸೌಲಭ್ಯವನ್ನು ಕಲ್ಪಿಸಲಿದೆ.
ಯೋಜನೆಯ ಒಟ್ಟು ವೆಚ್ಚದಲ್ಲಿ, ಭಾರತ ಸರ್ಕಾರ(ಭಾ.ಸ)ದ ಪಾಲು 713 ಕೋಟಿ ರೂಪಾಯಿಗಳು ಮತ್ತು ತಮಿಳುನಾಡು ಸರ್ಕಾರ(ತ.ನಾ.ಸ)ದ ಪಾಲು 916 ಕೋಟಿ ರೂಪಾಯಿಗಳು. ತಮಿಳುನಾಡು ಸರ್ಕಾರದ ಪಾಲು ಭೂಮಿಯ ಮೌಲ್ಯವನ್ನೂ ಒಳಗೊಂಡಿರುತ್ತದೆ ಮತ್ತು ಆರ್.ಮತ್ತು ಆರ್ 203 ಕೋಟಿ ರೂಪಾಯಿಗಳಾಗಿರುತ್ತವೆ. ಉಳಿದ ಮೊತ್ತ 2141 ಕೋಟಿ ರೂಪಾಯಿಗಳನ್ನು ಬಹುಪಕ್ಷೀಯ/ದ್ವಿಪಕ್ಷೀಯ/ದೇಶೀಯ ಹೂಡಿಕೆ ಸಂಸ್ಥೆಗಳಿಂದ ಸಾಲರೂಪದಲ್ಲಿ ಹೊಂದಿಸಲಾಗುತ್ತದೆ.
ಮೊದಲ ವರ್ಷದ ಕಾರ್ಯಾಚರಣೆಯಲ್ಲಿ 1.6ಲಕ್ಷ ಪ್ರಯಾಣಿಕರು ಸಂಚರಿಸುವುದಾಗಿ ಅಂದಾಜು ಮಾಡಲಾಗಿದೆ.