ಎನ್ ಡಿ ಎ ಸರಕಾರವು ಉದ್ಯಮಶೀಲತೆಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದೆ. ಭಾರತದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಮೇಕ್ ಇನ್ ಇಂಡಿಯಾ ಅಭಿಯಾನವು ನಾಲ್ಕು ಪ್ರಮುಖ ಆಧಾರಸ್ತಂಭಗಳ ಮೇಲೆ ರೂಪಿತವಾಗಿದೆ. ಇದು ಕೇವಲ ಉತ್ಪಾದನಾ ಕ್ಷೇತ್ರವಷ್ಟೇ ಅಲ್ಲ ಇತರ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ.
ಹೊಸ ಕಾರ್ಯವಿಧಾನಗಳು : ಉದ್ಯಮಶೀಲತೆಯನ್ನು ಉತ್ತೇಜಿಸಲು ಮೇಕ್ ಇನ್ ಇಂಡಿಯಾ ಅಭಿಯಾನವು ವ್ಯವಹಾರವನ್ನು ಸರಳೀಕರಿಸುವ ಏಕಮಾತ್ರ ಪ್ರಮುಖ ಅಂಶವನ್ನಾಗಿ ಪರಿಗಣಿಸುತ್ತದೆ.
ಹೊಸ ಮೂಲಸೌಕರ್ಯ : ಆಧುನಿಕ ಮತ್ತು ಸರಿಯಾದ ಸವಲತ್ತುಗಳನ್ನು ಒದಗಿಸುವುದು ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಸರಕಾರವು ಕೈಗಾರಿಕಾ ಕಾರಿಡಾರ್ ಗಳು ಮತ್ತು ಸ್ಮಾರ್ಟ್ ಸಿಟಿಗಳನ್ನು ರಚಿಸುವ ಮೂಲಕ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತಿವೇಗದ ಸಂವಹನ ಹಾಗೂ ಏಕೀಕೃತ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಿದೆ.
ಹೊಸ ವಲಯಗಳು : ಮೇಕ್ ಇನ್ ಇಂಡಿಯಾವು ಉತ್ಪಾದನಾ, ಮೂಲಸೌಕರ್ಯ ಮತ್ತು ಸೇವಾ ಕ್ಷೇತ್ರದಲ್ಲಿ 25 ವಲಯಗಳನ್ನು ಗುರುತಿಸಿದ್ದು, ಸಂಬಂಧ ಪಟ್ಟವರ ಜೊತೆಗೆ ಇವುಗಳ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಹೊಸ ಚಿಂತನೆ : ಯಾವುದೇ ಕ್ಷೇತ್ರವು ಸರ್ಕಾರವನ್ನು ನಿಯಂತ್ರಕನಾಗಿ ನೋಡುತ್ತದೆ. ಆದರೆ, ಮೇಕ್ ಇನ್ ಇಂಡಿಯಾ ಅಭಿಯಾನವು ಸರಕಾರವು ಉದ್ಯಮದ ಜೊತೆ ವ್ಯವಹರಿಸುವ ರೀತಿಯನ್ನೇ ಬದಲಾಯಿಸಿದೆ. ಸರಕಾರವು ಈಗ ನಿಯಂತ್ರಕನಾಗಿ ಅಲ್ಲ ಉತ್ತೇಜಕನಾಗಿ ಕೆಲಸ ಮಾಡುತ್ತಿದೆ.
ಉದ್ಯಮಶೀಲತೆಯನ್ನು ಉತ್ತೇಜಿಸಲು ಸರಕಾರವು 3 ಹಂತದ ನೀತಿಯನ್ನು ಅಳವಡಿಸಿಕೊಂಡಿದೆ. ಇದು 3-ಸಿ ಮಾದರಿಯದ್ದಾಗಿದೆ. ಎಂದರೆ ಕಂಪ್ಲಯಾನ್ಸೆಸ್, ಕ್ಯಾಪಿಟಲ್ ಮತ್ತು ಕಾಂಟ್ರಾಕ್ಟ್ ಎನ್ಫೋರ್ಸ್ ಮೆಂಟ್.
ಕಂಪ್ಲಯಾನ್ಸೆಸ್ : ಭಾರತವು ಈಗ ವ್ಯವಹಾರ ನಡೆಸುವುದನ್ನು ತುಂಬಾ ಸರಳೀಕರಿಸಿದೆ. ವಿಶ್ವಬ್ಯಾಂಕ್ ನ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯಲ್ಲಿ ಭಾರತವು ಈಗ 130ನೇ ಸ್ಥಾನಕ್ಕೆ ಜಿಗಿದಿದೆ. ಈಗ ಭಾರತದಲ್ಲಿ ಉದ್ಯಮ ನಡೆಸುವುದು ಹಿಂದೆಂದಿಗಿಂತ ಸುಲಭವಾಗಿದೆ. ಅನವಶ್ಯಕ ಅಂಗೀಕಾರ ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ. ಬಹಳಷ್ಟು ಅನುಮತಿಗಳನ್ನು ಈಗ ಆನ್ ಲೈನ್ ಮೂಲಕ ಪಡೆಯಬಹುದಾಗಿದೆ.
ಪಡೆಯಬಹುದಾಗಿದೆ.
ಕೈಗಾರಿಕಾ ಅನುಮತಿ ಮತ್ತು ಕೈಗಾರಿಕಾ ಉದ್ಯಮಶೀಲತೆ ಒಡಂಬಡಿಕೆಗಳನ್ನು ಪಡೆಯುವ ಪ್ರಕ್ರಿಯೆಗಳನ್ನು ಆನ್ ಲೈನ್ ಗೊಳಿಸಲಾಗಿದೆ. ಈ ಸೇವೆಯು 24X7 ಲಭ್ಯವಿದೆ. ಸುಮಾರು 20ಕ್ಕೂ ಹೆಚ್ಚು ಸೇವೆಗಳನ್ನು ಏಕೀಕೃತಗೊಳಿಸಲಾಗಿದೆ ಮತ್ತು ಏಕಗವಾಕ್ಷಿಯಂತೆ ಕಾರ್ಯನಿರ್ವಹಿಸುವ ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಲಾಗಿದ್ದು, ಸರಕಾರ ಮತ್ತು ಸರಕಾರಿ ಸಂಸ್ಥೆಗಳಿಂದ ನಿರಪೇಕ್ಷಣೆ ಪಡೆಯುವ ಪ್ರಕ್ರಿಯೆಗಳನ್ನು ಸುಲಭಗೊಳಿಸಲಾಗಿದೆ.
ಭಾರತ ಸರ್ಕಾರವು ವಿಶ್ವಬ್ಯಾಂಕ್ ಸಮೂಹ ಮತ್ತು ಕೆಪಿಎಂಜಿ ಜೊತೆ ಸೇರಿಕೊಂಡು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುವ ಯೋಜನೆಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಈ ರಾಂಕಿಂಗ್ ಪದ್ದತಿಯು ರಾಜ್ಯ ಸರ್ಕಾರಗಳಿಗೆ ಇತರರನ್ನು ನೋಡಿ ತಿಳಿದುಕೊಳ್ಳುವ ಮತ್ತು ಯಶಸ್ಸನ್ನು ಅಳವಡಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. ಈ ಯಶೋಗಾಥೆಯಿಂದಾಗಿ, ರಾಷ್ಟ್ರಾದ್ಯಂತ ಉದ್ಯಮ ನಡೆಸುವ ನಿಯಂತ್ರಕ ವಾತಾವರಣವನ್ನು ಬದಲಾಯಿಸುತ್ತಿದೆ.
ಸರ್ಕಾರವು ಭಾರತದ ಎಫ್ ಡಿ ಐ ನಿಯಮಗಳನ್ನೂ ಸಡಿಲಿಸಿದ್ದು, ವಿವಿಧ ವಲಯಗಳನ್ನು ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ನೀಡಿದೆ.
ಬಂಡವಾಳ
ಸುಮಾರು 58 ದಶಲಕ್ಷ ಕಾರ್ಪೋರೇಟೇತರ ಉದ್ಯಮಗಳು ಸುಮಾರು 128 ದಶಲಕ್ಷ ಉದ್ಯೋಗವಕಾಶಗಳನ್ನು ಭಾರತದಲ್ಲಿ ಸೃಷ್ಟಿಸಿವೆ. ಈ ಪೈಕಿ 60% ಉದ್ಯೋಗವಕಾಶಗಳು ಗ್ರಾಮೀಣ ಭಾಗದಲ್ಲಿ ಸೃಷ್ಟಿಯಾಗಿವೆ. ಸುಮಾರು 40% ಉದ್ಯಮಗಳನ್ನು ಹಿಂದುಳಿದ ವರ್ಗಗಳ ಉದ್ಯಮಿಗಳು ಹಾಗೂ 15% ಉದ್ಯಮಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯಮಿಗಳು ನಡೆಸುತ್ತಿದ್ದಾರೆ. ವಿಶೇಷವೆಂದರೆ, ಈ ಸಣ್ಣ ಉದ್ಯಮಗಳು ಬ್ಯಾಂಕ್ ಸಾಲವನ್ನು ನೆಚ್ಚಿಕೊಂಡಿಲ್ಲ. ಬಹುತೇಕ ಮಂದಿ ಬ್ಯಾಂಕ್ ಸಾಲವನ್ನೇ ಪಡೆದಿಲ್ಲ. ಬೇರೆ ಮಾತಿನಲ್ಲಿ ಹೇಳುವುದಾದರೆ, ಬಹುತೇಕ ಉದ್ಯೋಗ ಆಧರಿತ ಉದ್ದಿಮೆಗಳು ಕನಿಷ್ಟ ಸಾಲವನ್ನು ಆಧರಿಸಿವೆ. ಇದನ್ನು ಬದಲಾಯಿಸುವ ದೃಷ್ಟಿಯಿಂದ ಸರಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ಮುದ್ರಾ ಬ್ಯಾಂಕ್ ಅನ್ನು ಆರಂಭಿಸಿದೆ.
ಸಾಧಾರಣವಾಗಿ ಹೆಚ್ಚಿನ ಬಡ್ಡಿಗೆ ಹಣ ಪಡೆದುಕೊಳ್ಳುವ ಸಣ್ಣ ಉದ್ಯಮಿಗಳಿಗೆ ಭದ್ರತೆ ಆಧಾರವಿಲ್ಲದೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಯೋಜನೆಯ ಆರಂಭದ ಬಳಿಕ ಅತ್ಯಂತ ಕಡಿಮೆ ಅವಧಿಯಲ್ಲಿ ಈಗಾಗಲೇ ಸುಮಾರು 1.18 ಕೋಟಿ ಫಲಾನುಭವಿಗಳಿಗೆ 65 ಸಾವಿರ ಕೋಟಿಯಷ್ಟು ಸಾಲ ವಿತರಿಸಲಾಗಿದೆ. 50.000 ರೂಪಾಯಿಗಳಿಗಿಂತ ಕಡಿಮೆ ಸಾಲಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ 2015ರ ಏಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ 555% ಏರಿಕೆಯಾಗಿದೆ.
ಕಾಂಟ್ರಾಕ್ಟ್ ಅನುಷ್ಠಾನ
ಗುತ್ತಿಗೆ ಅನುಷ್ಟಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಲು ಮಧ್ಯಸ್ಥಿಕೆ ಕಾನೂನನ್ನು ಸಡಿಲಗೊಳಿಸಲಾಗಿದ್ದು, ಮಧ್ಯಸ್ಥಿಕೆಯನ್ನು ತ್ವರಿತಗೊಳಿಸಲಾಗಿದೆ. ಈ ಕಾನೂನು ಈಗ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕಾಲಮಿತಿಯನ್ನು ಹಾಕುತ್ತದೆ ಮತ್ತು ನ್ಯಾಯಾಧಿಕರಣಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತದೆ.
ಸರಕಾರವು ಈಗ ಹೊಸ ದಿವಾಳಿ ನೀತಿಯನ್ನು ಜಾರಿಗೆ ತಂದಿದ್ದು, ಉದ್ಯಮ ನಡೆಸುವುದನ್ನು ಸರಳಗೊಳಿಸಿದೆ.