ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೋರ್ಡಾನ್ ನ ಹ್ಯಾಶೆಮೈಟೆ ಸಂಸ್ಥಾನದ ದೊರೆ ಘನತೆವೆತ್ತ ಅಬ್ದುಲ್ಲಾ II ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಪ್ರಧಾನಮಂತ್ರಿಯವರು ಮುಂಬರುವ ಪವಿತ್ರ ಮಾಸ ರಂಜಾನ್ ಹಿನ್ನೆಲೆಯಲ್ಲಿ ಘನತೆವೆತ್ತ ದೊರೆ ಹಾಗೂ ಜೋರ್ಡಾನ್ ಜನತೆಗೆ ಶುಭಾಶಯಗಳನ್ನು ಸಲ್ಲಿಸಿದರು.
ಇಬ್ಬರೂ ನಾಯಕರು ಕೋವಿಡ್ -19 ಸಾಂಕ್ರಾಮಿಕದಿಂದ ವಿಶ್ವಕ್ಕೆ ಎದುರಾಗಿರುವ ಸವಾಲುಗಳು ಮತ್ತು ಅದರ ಪರಿಣಾಮವನ್ನು ತಗ್ಗಿಸಲು ಆಯಾ ದೇಶಗಳು ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಚರ್ಚಿಸಿದರು. ಮಾಹಿತಿ ಮತ್ತು ಉತ್ತಮ ರೂಢಿಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಅಗತ್ಯವಾದ ಪೂರೈಕೆ ಸುಗಮಗೊಳಿಸುವ ಮೂಲಕ ಪರಸ್ಪರರ ಪ್ರಯತ್ನಗಳನ್ನು ಗರಿಷ್ಠ ಮಟ್ಟದಲ್ಲಿ ಬೆಂಬಲಿಸಲು ಅವರು ಸಮ್ಮತಿಸಿದರು.
ಪ್ರಧಾನಮಂತ್ರಿಯವರು ಜೋರ್ಡಾನ್ ನಲ್ಲಿರುವ ಭಾರತೀಯ ನಾಗರಿಕರಿಗೆ ಒದಗಿಸಿದ ಬೆಂಬಲಕ್ಕಾಗಿ ಘನತೆವೆತ್ತ ದೊರೆಗೆ ಧನ್ಯವಾದ ಅರ್ಪಿಸಿದರು.
ಕೋವಿಡ್ 19ಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಇತರ ಜಾಗತಿಕ ಮತ್ತು ಪ್ರಾದೇಶಿಕ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ತಂಡಗಳು ನಿರಂತರ ಸಂಪರ್ಕದಲ್ಲಿರಲು ಇಬ್ಬರೂ ನಾಯಕರು ಸಮ್ಮತಿಸಿದರು.
Spoke with His Majesty @KingAbdullahII about the challenges posed by COVID-19. We agreed that India and Jordan would collaborate closely during this crisis, to support each other in controlling the pandemic and its effects.
— Narendra Modi (@narendramodi) April 16, 2020