ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ದೂರವಾಣಿಯಲ್ಲಿ ಜಪಾನ್ ಪ್ರಧಾನಿ ಶ್ರೀ ಶಿಂಜೋ ಅಬೆ ಅವರೊಂದಿಗೆ ಮಾತುಕತೆ ನಡೆಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉದ್ಭವಿಸುವ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಸವಾಲುಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಈ ಬಿಕ್ಕಟ್ಟನ್ನು ಎದುರಿಸಲು ತಮ್ಮ ದೇಶಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಚರ್ಚಿ ನಡೆಸಿದರು.
ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ದೇಶಗಳಲ್ಲಿರುವ ಪರಸ್ಪರ ನಾಗರಿಕರಿಗೆ ಒದಗಿಸಿದ ಬೆಂಬಲ ಮತ್ತು ಸೌಲಭ್ಯಕ್ಕಾಗಿ ಇಬ್ಬರೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಈ ಸಮನ್ವಯವನ್ನು ಮುಂದುವರಿಸಲು ಒಪ್ಪಿದರು.
ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಜಗತ್ತಿಗೆ ನೆರವಾಗುವಲ್ಲಿ ಭಾರತ-ಜಪಾನ್ ಸಹಭಾಗಿತ್ವವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಉಭಯ ನಾಯಕರು ಒಪ್ಪಿಕೊಂಡರು.
*****