Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಮಾನ್ ಸುಲ್ತಾನರೊಂದಿಗೆ ಪ್ರಧಾನಿ ದೂರವಾಣಿ ಮಾತುಕತೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಒಮಾನ್ ಸುಲ್ತಾನ್ ಶ್ರೀ ಹೈಥಮ್ ಬಿನ್ ತಾರಿಕ್ ಅವರೊಂದಿಗೆ ಇಂದು ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

COVID-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರೋಗ್ಯ ಮತ್ತು ಆರ್ಥಿಕ ಸವಾಲುಗಳು ಮತ್ತು ಅವುಗಳಿಗೆ ಸ್ಪಂದಿಸಲು ಆಯಾ ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಬಿಕ್ಕಟ್ಟನ್ನು ಎದುರಿಸಲು ಎರಡೂ ದೇಶಗಳು ಪರಸ್ಪರರಿಗೆ ಬೆಂಬಲ ನೀಡಲು ಎಂದು ಅವರು ಒಪ್ಪಿಕೊಂಡರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಒಮಾನ್‌ನಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಸುಲ್ತಾನರು ಪ್ರಧಾನಿಯವರಿಗೆ ಭರವಸೆ ನೀಡಿದರು. ಭಾರತದಲ್ಲಿರುವ ಒಮಾನಿ ನಾಗರಿಕರಿಗೆ ಭಾರತ ಸರ್ಕಾರ ಇತ್ತೀಚೆಗೆ ನೀಡಿದ ಬೆಂಬಲಕ್ಕೆ ಅವರು ಪ್ರಧಾನ ಮಂತ್ರಿಗಳಿಗೆ ಧನ್ಯವಾದ ತಿಳಿಸಿದರು.

ದಿವಂಗತ ಸುಲ್ತಾನ್ ಖಬೂಸ್ ಅವರ ನಿಧನಕ್ಕೆ ಪ್ರಧಾನಿಯವರು ತಮ್ಮ ಸಂತಾಪವನ್ನು ಪುನರುಚ್ಚರಿಸಿದರು. ಸುಲ್ತಾನ್ ಹೈಥಮ್ ಅವರ ಆಳ್ವಿಕೆಗೆ ಮತ್ತು ಒಮಾನ್ ಜನರ ಶಾಂತಿ ಮತ್ತು ಸಮೃದ್ಧಿಗೆ ಪ್ರಧಾನಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು. ಭಾರತವು ಒಮಾನ್ ಅನ್ನು ತನ್ನ ವಿಸ್ತೃತ ನೆರೆಹೊರೆಯ ಒಂದು ಪ್ರಮುಖ ಭಾಗವೆಂದು ಪರಿಗಣಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

****