Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಪೈನ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಿಯವರ ದೂರವಾಣಿ ಸಂಭಾಷಣೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಪೇನ್‌ನ ಸರ್ಕಾರದ ಅಧ್ಯಕ್ಷ (ಪ್ರಧಾನ ಮಂತ್ರಿಗೆ ಸಮಾನ) ಪೆಡ್ರೊ ಸ್ಯಾಂಚೆಜ್ ಪೆರೇಜ್-ಕ್ಯಾಸ್ಟೆಜಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. COVID-19 ಸಾಂಕ್ರಾಮಿಕ ರೋಗದಿಂದಾಗಿ ಎದುರಾಗಿರುವ ಜಾಗತಿಕ ಸವಾಲನ್ನು ಉಭಯ ನಾಯಕರು ಚರ್ಚಿಸಿದರು.

ಸ್ಪೇನ್‌ನಲ್ಲಿನ ಪ್ರಾಣಹಾನಿಗೆ ಪ್ರಧಾನಿ ತಮ್ಮ ಸಂತಾಪ ವ್ಯಕ್ತಪಡಿಸಿದರು ಮತ್ತು ಇನ್ನೂ ಕಾಯಿಲೆಯಿಂದ ಬಳಲುತ್ತಿರುವವರ ಶೀಘ್ರ ಚೇತರಿಕೆಗಾಗಿ ಹಾರೈಸಿದರು. ಭಾರತವು ಸ್ಪ್ಯಾನಿಷ್ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತಿದೆ ಮತ್ತು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ನೆರವು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಸ್ಪ್ಯಾನಿಷ್ ಗಣ್ಯರಿಗೆ ಭರವಸೆ ನೀಡಿದರು.

ಜಾಗತಿಕ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಅಂತರರಾಷ್ಟ್ರೀಯ ಸಹಕಾರದ ಮಹತ್ವವನ್ನು ಉಭಯ ನಾಯಕರು ಒಪ್ಪಿಕೊಂಡರು. COVID ನಂತರದ ಯುಗದಲ್ಲಿ ಜಾಗತೀಕರಣದ ಹೊಸ, ಮಾನವ ಕೇಂದ್ರಿತ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವುದು ಅಗತ್ಯವಾಗಿದೆ ಎಂಬ ಪ್ರಧಾನ ಮಂತ್ರಿಯವರ ಅಭಿಪ್ರಾಯಕ್ಕೆ ಸ್ಪ್ಯಾನಿಷ್ ಪ್ರಧಾನಿಯವರು ಸಮ್ಮತಿ ಸೂಚಿಸಿದರು.

ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಮನೆಗಳಲ್ಲೇ ಇರುವ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಖಾತ್ರಿಪಡಿಸಿಕೊಳ್ಳಲು ಸುಲಭ ವಿಧಾನಗಳಾದ ಯೋಗ ಮತ್ತು ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳ ಉಪಯುಕ್ತತೆಯನ್ನು ಉಭಯ ನಾಯಕರು ಒಪ್ಪಿದರು.

ಹೆಚ್ಚುತ್ತಿರುವ COVID-19 ಪರಿಸ್ಥಿತಿ ಮತ್ತು ಅದರ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ತಮ್ಮ ತಂಡಗಳು ನಿರಂತರ ಸಂಪರ್ಕದಲ್ಲಿರುತ್ತವೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.