Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂತರರಾಷ್ಟ್ರೀಯ ಮಹಿಳಾ ದಿನ, ನಾರಿ ಶಕ್ತಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಧಾನಿ ಸಂವಾದ


ಪ್ರಧಾನಮಂತ್ರಿಯವರು ರಾಜಧಾನಿಯಲ್ಲಿ ನಾರಿ ಶಕ್ತಿ ಪುರಸ್ಕಾರ್ ವಿಜೇತರೊಂದಿಗೆ ಸಂವಾದ ನಡೆಸಿದರು. ಲೇಹ್, ಕಾಶ್ಮೀರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಮಹಿಳಾ ಸಾಧಕರು ತಮ್ಮ ಪ್ರಯೋಗಗಳು, ಹೋರಾಟಗಳು ಮತ್ತು ಅವರು ತಮ್ಮ ಗುರಿಗಳನ್ನು ಹೇಗೆ ಸಾಧಿಸಿದರು ಎನ್ನುವುದನ್ನು ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಂಡರು.

ಸಾಧಕರಲ್ಲಿ 103 ವರ್ಷದ ಎಂ.ಎಸ್. ಮನ್ ಕೌರ್ ಸಹ ಸೇರಿದ್ದಾರೆ, ಅವರು ತಮ್ಮ 93 ನೇ ವಯಸ್ಸಿನಲ್ಲಿ ಅಥ್ಲೆಟಿಕ್ಸ್ ಅನ್ನು ಪ್ರಾರಂಭಿಸಿದರು ಮತ್ತು ಪೋಲೆಂಡ್ ದೇಶದ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಫೀಲ್ಡ್ ಮತ್ತು ಟ್ರ್ಯಾಕ್ ಈವೆಂಟ್‌ಗಳಲ್ಲಿ 4 ಚಿನ್ನದ ಪದಕಗಳನ್ನು ಗೆದ್ದರು.

ನುಮ್ಡಾ ಕರಕುಶಲ ವಸ್ತುಗಳ ಸಂಸ್ಥಾಪಕರಾಗಿರುವ ಜಮ್ಮು ಮತ್ತು ಕಾಶ್ಮೀರದ ಆರಿಫಾ ಜಾನ್, ನಮ್ಧಾ ಕರಕುಶಲ ವಸ್ತುಗಳ ಮರೆತುಹೋದ ಕಲೆಯನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ಕಾಶ್ಮೀರದಲ್ಲಿ 100 ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡುವ ಮತ್ತು ಬಣ್ಣ ಹಾಕುವ ಕರಕುಶಲ ವಸ್ತುಗಳ ವೃತ್ತಿಯನ್ನು ಪುನರುಜ್ಜೀವನಗೊಳಿಸುವ ಅನುಭವವನ್ನು ಹಂಚಿಕೊಂಡರು.

ಭಾರತೀಯ ವಾಯುಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್‌ಗಳಾದ ಮೋಹನಾ ಸಿಂಗ್, ಭಾವನಾ ಕಾಂತ್ ಮತ್ತು ಅವನಿ ಚತುರ್ವೇದಿ ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪ್ರಾಯೋಗಿಕ ಆಧಾರದ ಮೇಲೆ ಮಹಿಳೆಯರಿಗಾಗಿ ಐಎಎಫ್‌ನಲ್ಲಿ ಫೈಟರ್ ಸ್ಟ್ರೀಮ್ ತೆರೆಯಲು ಭಾರತ ಸರ್ಕಾರ ನಿರ್ಧರಿಸಿದ ನಂತರ ಈ ಮೂವರನ್ನು ಐಎಎಫ್ ಫೈಟರ್ ಸ್ಕ್ವಾಡ್ರನ್‌ಗೆ ಸೇರಿಸಲಾಯಿತು. ಅವರು 2018 ರಲ್ಲಿ MIG- 21 ರಲ್ಲಿ ಏಕವ್ಯಕ್ತಿ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳಾ ಪೈಲಟ್‌ಗಳಾದರು.

ಪಾದಾಲಾ ಭೂದೇವಿ ಬುಡಕಟ್ಟು ಮಹಿಳಾ ಕೃಷಿಕ ಮತ್ತು ಆಂಧ್ರಪ್ರದೇಶದ ಗ್ರಾಮೀಣ ಉದ್ಯಮಿ, ಬಿನಾ ದೇವಿ, ಮುಂಗರ್ ಬಿಹಾರದ ಅಣಬೆ ಕೃಷಿಯನ್ನು ಜನಪ್ರಿಯಗೊಳಿಸಿದಕ್ಕಾಗಿ ‘ಮಶ್ರೂಮ್ ಮಹಿಳಾ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರು ಕೃಷಿ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ತಮ್ಮ ಅನುಭವಗಳನ್ನು ಪ್ರಧಾನಿಯೊಂದಿಗೆ ಹಂಚಿಕೊಂಡರು.

ಕಟ್ಟಡ ಕಾರ್ಮಿಕರಾದ ಮಹಿಳಾ ಮೇಸನ್ ಕಲಾವತಿ ದೇವಿ ಯವರು ಉತ್ತರಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ಬಯಲು ಮಲವಿಸರ್ಜನೆಯನ್ನು ಕಡಿಮೆ ಮಾಡುವ ಪ್ರೇರಣಾ ಶಕ್ತಿಯಾಗಿದ್ದಾರೆ . ಕಾನ್ಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ 4000 + ಶೌಚಾಲಯಗಳನ್ನು ನಿರ್ಮಿಸುವ ಜವಾಬ್ದಾರಿ ಅವರ ಮೇಲಿದೆ. ಬಯಲು ಮಲವಿಸರ್ಜನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಅವರು ಮನೆ ಮನೆ ಬಾಗಿಲಿಗೆ ಹೇಗೆ ಹೋಗಿದ್ದಾರೆ ಮತ್ತು ಬಯಲು ಮಲವಿಸರ್ಜನೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಕಾನ್ಪುರದಾದ್ಯಂತದ ಹಳ್ಳಿಗಳಿಗೆ ಅವರು ಹಲವು ಗಂಟೆಗಳ ಕಾಲ ಪ್ರಯಾಣ ಮಾಡಿದ ಬಗ್ಗೆ ಅವರು ಪ್ರಧಾನ ಮಂತ್ರಿಯವರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

30,000 ಕ್ಕೂ ಹೆಚ್ಚು ಮಹಿಳೆಯರೊಂದಿಗೆ 2800 ಕ್ಕೂ ಹೆಚ್ಚು ಗುಂಪುಗಳನ್ನು ರಚಿಸಿದ ಉತ್ಸಾಹಭರಿತ ಪರಿಸರವಾದಿ ಜಾರ್ಖಂಡ್‌ನ ಚಮಿ ಮುರ್ಮು 25 ಲಕ್ಷಕ್ಕೂ ಹೆಚ್ಚು ಮರಗಳನ್ನು ಬಂಜರು ಭೂಮಿಯಲ್ಲಿ ನೆಟ್ಟ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕೇರಳದ 98 ವರ್ಷದ ಕಾತ್ಯಾಯಿನಿ ಅಮ್ಮ ಅವರು ಆಗಸ್ಟ್ 2018 ರಲ್ಲಿ ಕೇರಳ ಸಾಕ್ಷರತಾ ಮಿಷನ್‌ನ ಆಕಾಶರಲಕ್ಷಂ ಯೋಜನೆಯಡಿ ನಾಲ್ಕನೆಯ ತರಗತಿ ಸಮಾನವಾದ ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾದರು ಎಂಬುದನ್ನು ತಮ್ಮ ಅನುಭವವನ್ನು ಹಂಚಿಕೊಂಡರು. ಅವರು ಪ್ರಥಮ ರ‍್ಯಾಂಕ್ ಗಳಿಸಿ 98% ಅಂಕಗಳನ್ನು ಗಳಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನಾರಿ ಶಕ್ತಿ ಪ್ರಶಸ್ತಿ ವಿಜೇತರು ಸಮಾಜವನ್ನು ಕಟ್ಟುವಲ್ಲಿ ಮತ್ತು ರಾಷ್ಟ್ರಕ್ಕೆ ಸ್ಫೂರ್ತಿ ನೀಡುವಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಮಹಿಳೆಯರ ಮಹತ್ವದ ಕೊಡುಗೆ ಇಲ್ಲದೆ ದೇಶವು ಬಯಲುಮುಕ್ತ ಶೌಚದ ಸ್ಥಾನಮಾನವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅದೇ ರೀತಿ ಹೆಚ್ಚಿನ ಮಹಿಳೆಯರ ಭಾಗವಹಿಸುವಿಕೆಯೊಂದಿಗೆ ಅಪೌಷ್ಟಿಕತೆಯ ಸಮಸ್ಯೆಯನ್ನು ಸಹ ಪರಿಹರಿಸಬಹುದು ಎಂದು ಅವರು ಹೇಳಿದರು.

ಜಲ ಸಂರಕ್ಷಣೆಯ ವಿಷಯದ ಬಗ್ಗೆಯೂ ಸಹ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು ಮತ್ತು ಜಲ ಜೀವನ್ ಮಿಷನ್ ಗೆ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯ ಅಗತ್ಯವಿದೆ ಎನ್ನುವ ಅಂಶವನ್ನು ಎತ್ತಿ ತೋರಿಸಿದರು.

ಪ್ರಧಾನಮಂತ್ರಿಯವರು ಸಾಧಕರನ್ನು ಅಭಿನಂದಿಸಿದರು ಮತ್ತು ಅವರುಗಳು ಇಡೀ ದೇಶಕ್ಕೆ ಸ್ಫೂರ್ತಿಯ ಸೆಲೆ ಎಂದು ಹೇಳಿದರು.

**********