Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೋಲ್ಕತ್ತಾದಲ್ಲಿ ನಾಲ್ಕು ನವೀಕೃತ ಪಾರಂಪರಿಕ ಕಟ್ಟಡಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋಲ್ಕತ್ತಾದಲ್ಲಿಂದು ನಾಲ್ಕು ನವೀಕೃತ ಪಾರಂಪರಿಕ ಕಟ್ಟಡಗಳನ್ನು ದೇಶಕ್ಕೆ ಸಮರ್ಪಿಸಿದರು. ಇವು ಓಲ್ಡ್ ಕರೆನ್ಸಿ ಬಿಲ್ಡಿಂಗ್, ಬೆಲ್ವೆಡೆರೆ ಹೌಸ್, ಮೆಟ್‌ಕಾಲ್ಫ್ ಹೌಸ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಗಳಾಗಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಮರುಶೋಧಿಸಲು, ರಿಬ್ರಾಂಡ್ ಮಾಡಲು, ನವೀಕರಿಸಲು ಮತ್ತು ಪುನರ್ ಸ್ಥಾಪಿಸಲು ದೇಶವ್ಯಾಪಿ ನಡೆಯುತ್ತಿರುವ ಆಂದೋಲನದಕ್ಕೆ ನಾಂದಿಯಾಗಿದ್ದು, ಇದೊಂದು ವಿಶೇಷ ದಿನ ಎಂದು ಬಣ್ಣಿಸಿದರು.

ವಿಶ್ವದ ಪಾರಂಪರಿಕ ಪ್ರವಾಸೋದ್ಯಮ ಕೇಂದ್ರ:

ಭಾರತವು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ವಿನ್ಯಾಸಗಳನ್ನು ಸಂರಕ್ಷಿಸಲು ಮತ್ತು ಆಧುನೀಕರಿಸಲು ಸದಾ ಬಯಸುತ್ತದೆ. ಈ ಸ್ಫೂರ್ತಿಯಿಂದಲೇ ಕೇಂದ್ರ ಸರ್ಕಾರ ಭಾರತವನ್ನು ವಿಶ್ವದ ಪ್ರಮುಖ ಪಾರಂಪರಿಕ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪ್ರಯತ್ನ ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು.  
ದೇಶದಲ್ಲಿರುವ ಐದು 5 ಮಹತ್ವದ ಸಂಕೇತದಂತಿರುವ ವಸ್ತುಸಂಗ್ರಹಾಲಯಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾರ್ಪಡಿಸಲಾಗುವುದು ಎಂದು ಅವರು ಹೇಳಿದರು. ವಿಶ್ವದ ಅತ್ಯಂತ ಹಳೆಯ ವಸ್ತುಸಂಗ್ರಹಾಲಯಗಳಲ್ಲಿ ಒಂದಾದ ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಿಂದ ಇದನ್ನು ಪ್ರಾರಂಭಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.
ಸಂಪನ್ಮೂಲ ಸೃಷ್ಟಿಸುವ ಸಲುವಾಗಿ, ಈ ಮಹತ್ವದ ಸಂಕೇತದ ಸಾಂಸ್ಕೃತಿಕ ಪಾರಂಪರಿಕ ಕೇಂದ್ರಗಳ ನಿರ್ವಹಣೆಗಾಗಿ, ಕೇಂದ್ರ ಸರ್ಕಾರ ಭಾರತೀಯ ಪರಂಪರೆಯ ಸಂರಕ್ಷಣಾ ಸಂಸ್ಥೆಯನ್ನು ಆರಂಭಿಸಲು ಚಿಂತಿಸುತ್ತಿದೆ, ಇದಕ್ಕೆ ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನ ನೀಡಲಾಗುವುದು ಎಂದು ಶ್ರೀ ಮೋದಿ ಹೇಳಿದರು.
ಕೋಲ್ಕತ್ತಾದ ನಾಲ್ಕು ಐಕಾನಿಕ್ ವಸ್ತುಸಂಗ್ರಹಾಲಯಗಳಾದ ಓಲ್ಡ್ ಕರೆನ್ಸಿ ಬಿಲ್ಡಿಂಗ್, ಬೆಲ್ವೆಡೆರೆ ಹೌಸ್, ಮೆಟ್‌ಕಾಲ್ಫ್ ಹೌಸ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಗಳ ನವೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸರ್ಕಾರವು ಬೆಲ್ವೆಡೆರೆ ಹೌಸ್ ಅನ್ನು ವಿಶ್ವದ ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸುವ ಪ್ರಯತ್ನ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಕೋಲ್ಕತ್ತಾದಲ್ಲಿರುವ ಭಾರತ ಸರ್ಕಾರದ ನಾಣ್ಯಾಗಾರದಲ್ಲಿ “ನಾಣ್ಯ ಮತ್ತು ವಾಣಿಜ್ಯ” ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಭಾರತ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ಬಿಪ್ಲಾಬಿ ಭಾರತ
ವಿಕ್ಟೋರಿಯಾ ಸ್ಮಾರಕದಲ್ಲಿದ್ದ 5 ಗ್ಯಾಲರಿಗಳ ಪೈಕಿ 3 ದೀರ್ಘಕಾಲದಿಂದ ಮುಚ್ಚಿದ್ದವು, ಅದು ಉತ್ತಮ ಪರಿಸ್ಥಿತಿ ಅಲ್ಲ. ನಾವು ಈಗ ಅವುಗಳನ್ನು ಪುನಾರಂಭಿಸಲು ಪ್ರಯತ್ನಿಸುತ್ತಿದ್ದೇವೆ, ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಲು ಜಾಗವಿರಬೇಕು ಇದು ನನ್ನ ಮನವಿ. ಇದನ್ನು ಬಿಪ್ಲಾಬಿ ಭಾರತ ಎಂದು ಕರೆಯಬೇಕು. ಇಲ್ಲಿ ಸುಭಾಷ್ ಚಂದ್ರ ಬೋಸ್, ಅರಬಿಂದೋ ಘೋಷ್, ರಸ್ ಬಿಹಾರಿ ಬೋಸ್, ಖೌದಿ ರಾಮ್ ಬೋಸ್, ಬಘಾ ಜತಿನ್, ಬಿನೋಯ್, ಬಾದಲ್, ದಿನೇಶ್ ಮತ್ತಿರರ ನಾಯಕರ ಕುರಿತಂತೆ ಪ್ರದರ್ಶಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು.
ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಭಾರತ ದಶಕಗಳಿಂದ ಹೊಂದಿರುವ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ದೆಹಲಿಯ ಕೆಂಪು ಕೋಟೆಯಲ್ಲಿ ಒಂದು ವಸ್ತುಸಂಗ್ರಹಾಲಯ ಸ್ಥಾಪಿಸಲಾಗಿದೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ದ್ವೀಪವೊಂದಕ್ಕೆ ಅವರ ಹೆಸರಿಡಲಾಗಿದೆ ಎಂದು ಅವರು ಹೇಳಿದರು.

ಬಂಗಾಲದ ಮೇರು ನಾಯಕರಿಗೆ ಶ್ರದ್ಧಾಂಜಲಿ
ನವ ಯುಗದಲ್ಲಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪಶ್ಚಿಮ ಬಂಗಾಳದ ಮೇರು ನಾಯಕರು ಮತ್ತು ಪುತ್ರರಿಗೆ ಸರಿಯಾದ ಗೌರವ ಸಲ್ಲಿಸಬೇಕು ಎಂದು ಪ್ರಧಾನಿ ಹೇಳಿದರು.
“ನಾವು ಈಗ ಶ್ರೀ ಈಶ್ವರ ಚಂದ್ರ ವಿದ್ಯಾಸಾಗರ್ ಅವರ 200ನೇ ಜಯಂತಿ ಆಚರಿಸುತ್ತಿದ್ದೇವೆ. ಅದೇ ರೀತಿ 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಹೆಸರಾಂತ ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ ಶ್ರೀ ರಾಜಾ ರಾಮ್ ಮೋಹನ ರಾಯ್ ಅವರ 250ನೇ ಜಯಂತಿಯನ್ನೂ ಆಚರಿಸುತ್ತೇವೆ. ನಾವು ದೇಶದ ಸ್ವಾಭಿಮಾನವನ್ನು ಹೆಚ್ಚಿಸುವಲ್ಲಿ, ಯುವಜನರ, ಮಹಿಳಾ ಮತ್ತು ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಅವರು ಮಾಡಿದ ಪ್ರಯತ್ನವನ್ನು ಸ್ಮರಿಸಬೇಕು. ಈ ಸ್ಫೂರ್ತಿಯಲ್ಲಿ ನಾವು ಅವರ 250ನೇ ಜಯಂತಿಯನ್ನು ಹಿರಿಮೆಯ ಹಬ್ಬವಾಗಿ ಆಚರಿಸಬೇಕು ಎಂದು ಹೇಳಿದರು.

ಭಾರತೀಯ ಇತಿಹಾಸದ ಸಂರಕ್ಷಣೆ
 
ಭಾರತೀಯ ಪರಂಪರೆ, ಭಾರತದ ಶ್ರೇಷ್ಠ ನಾಯಕರುಗಳು, ಭಾರತದ ಇತಿಹಾಸ ಸಂರಕ್ಷಣೆಯು ರಾಷ್ಟ್ರ ನಿರ್ಮಾಣದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
“ಭಾರತದ ಇತಿಹಾಸವನ್ನು ಬ್ರಿಟಿಷರ ಕಾಲದಲ್ಲಿ ಬರೆಯಲಾಗಿದ್ದು, ಹಲವು ಮಹತ್ವದ ಅಂಶಗಳು ಇದರಿಂದ ಬಿಟ್ಟು ಹೋಗಿದೆ ಎಂಬುದು ಅತ್ಯಂತ ದುಃಖದ ಸಂಗತಿ. ನಾನು ಗುರುದೇವ ರಬೀಂದ್ರ ನಾಥ ಠಾಗೋರ್ ಅವರು 1903ರಲ್ಲಿ ಬರೆದಿದ್ದನ್ನು ಉಲ್ಲೇಖಿಸಲು ಇಚ್ಛಿಸುತ್ತೇನೆ. ಭಾರತದ ಇತಿಹಾಸ ನಾವು ಓದುವುದು ಮತ್ತು ಪರೀಕ್ಷೆಗಾಗಿ ನೆನಪಿಟ್ಟುಕೊಳ್ಳುವುದಷ್ಟೇ ಅಲ್ಲ. ಹೊರಗಿನಿಂದ ಬಂದ ಜನರು ನಮ್ಮನ್ನು ಹೇಗೆ ಗೆಲ್ಲಲು ಪ್ರಯತ್ನಿಸಿದರು, ಮಕ್ಕಳು ತಮ್ಮ ತಂದೆಯನ್ನು ಹೇಗೆ ಕೊಲ್ಲಲು ಪ್ರಯತ್ನಿಸಿದರು ಮತ್ತು ಸಹೋದರರು ಸಿಂಹಾಸನಕ್ಕಾಗಿ ತಮ್ಮ ನಡುವೆ ಹೇಗೆ ಕಚ್ಚಾಡಿದರು ಎಂಬುದರ ಬಗ್ಗೆ ಮಾತ್ರವೇ ಇದು ಹೇಳುತ್ತದೆ. ಈ  ಇತಿಹಾಸವು  ಭಾರತೀಯ ನಾಗರಿಕರು, ಭಾರತೀಯ ಜನರು ಹೇಗೆ ವಾಸಿಸುತ್ತಿದ್ದರು ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಅದು ಅವರಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ‘.
“ಗುರುದೇವ್ ಇನ್ನೂ ಒಂದು ಹೇಳುತ್ತಾರೆ ‘ಚಂಡಮಾರುತದ ಶಕ್ತಿ ಏನೇ ಇರಲಿ, ಅದನ್ನು ಎದುರಿಸಿದ ಜನರು ಅದನ್ನು ಹೇಗೆ ಎದುರಿಸಿದರು ಎಂಬುದು ಹೆಚ್ಚು ಮುಖ್ಯವಾಗುತ್ತದೆ.