ಸಿಂಗಾಪೂರದ ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಗಳು ಶ್ರೀ ಷಣ್ಮುಗರತ್ನಂ ಅವರನ್ನು ಸ್ವಾಗತಿಸಿದರು ಮತ್ತು ಶ್ರೀ ಷಣ್ಮುಗರತ್ನಂ ಅವರಿಗೆ ಹೋಸ ವರ್ಷದ ಶುಭ ಕೋರಿದರು ಮತ್ತು ಅವರ ಮೂಲಕ ಸಿಂಗಾಪೂರದ ಪ್ರಧಾನಿ ಶ್ರೀ ಲೀ ಸೇನ್ ಲೂಂಗ್ ಅವರಿಗೂ ಶುಭ ಕೋರಿದರು.
ದ್ವಿಪಕ್ಷೀಯ ಸಂಬಂಧ ವೃದ್ಧಿಯ ಕುರಿತು ಶ್ರೀ ಷಣ್ಮುಗರತ್ನಂ ಮತ್ತು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತೃಪ್ತಿ ವ್ಯಕ್ತಪಡಿಸಿದರು. ಮೂಲಭೂತ ಸೌಕರ್ಯ, ಕೌಶಲ್ಯ, ಭಾರತ ಸಿಂಗಾಪೂರ್ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA) ಮತ್ತು ಡಿಜಿಟಲ್ ಆರ್ಥಿಕತೆ ಸೇರಿದಂತೆ ಆರ್ಥಿಕ ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಆಸಕ್ತಿಯ ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಶ್ರೀ ಷಣ್ಮುಗರತ್ನಂ ಅವರು ಡಿಜಿಟಲ್ ಆರ್ಥಿಕತೆ ಮತ್ತು ಭಾರತದ ಸಾಮಾಜಿಕ ಪರಿವರ್ತನೆಗೆ ಪ್ರೋತ್ಸಾಹ ನೀಡುತ್ತಿರುವ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು.
ಮೂಲಭೂತ ಸೌಕರ್ಯಗಳು, ಪ್ರವಾಸೋದ್ಯಮ, ಡಿಜಿಟಲ್ ಪಾವತಿಯ ವ್ಯವಸ್ಥೆ, ಆವಿಷ್ಕಾರ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಭಾರತ ಮತ್ತು ಸಿಂಗಾಪೂರ್ ಮಧ್ಯೆ ಸಹಕಾರ ವೃದ್ಧಿಯ ಇಚ್ಛೆಯನ್ನು ಸಹ ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.
******
Happy to have met Singapore’s Senior Minister and Coordinating Minister for Social Policies, Mr. @Tharman_S. We talked about numerous policy related subjects. pic.twitter.com/mtMEFr7WSL
— Narendra Modi (@narendramodi) January 6, 2020