Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಪ್ರಗತಿ ಮೈದಾನದ ಭೂಮಿ ಮಂಜೂರಾತಿಗೆ ಅನುಮೋದನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಯೋಜನೆಗೆ ಮಂಜೂರಾತಿಯನ್ನು ನೀಡಿದ್ದು 611 ಕೋಟಿ ರೂ ಗಳ ಬೆಲೆಗೆ 99 ವರ್ಷಗಳ ನಿಗದಿತ ಅವಧಿಯ ಗುತ್ತಿಗೆ ಆಧಾರದ ಮೇಲೆ ಎಸ್ ಪಿ ವಿ ಗೆ 3.7 ಎಕರೆ ಭೂಮಿಯನ್ನು ಇಂಡಿಯಾ ಟ್ರೇಡ್ ಪ್ರಮೋಶನ್ ಆರ್ಗನೈಸೇಶನ್ (ಐಟಿಪಿಒ) ಗೆ ವರ್ಗಾಯಿಸುವಂತೆ ಅಧಿಕೃತ ಸೂಚನೆ ನೀಡಿದೆ. ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ಇದನ್ನು ನಿರ್ಮಿಸಲಿದ್ದು ಪಂಚತಾರಾ ಹೋಟೆಲ್ ಅಭಿವೃದ್ಧಿ ಮತ್ತು ಕಾರ್ಯ ಚಟುವಟಿಕೆಗೆ ಭಾರತೀಯ ರೈಲ್ವೇ ಸೌಲಭ್ಯ ನಿಗಮ (ಐಟಿಡಿಸಿ) ಮತ್ತು ಪ್ರವಾಸೋದ್ಯಮ ನಿಗಮ (ಐ ಆರ್ ಸಿ ಟಿ ಸಿ) ಕೈ ಜೋಡಿಸಲಿವೆ.

ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನಾ ಕೇಂದ್ರದ (ಐಇಸಿಸಿ) ಯೋಜನೆ ಅನುಷ್ಠಾನ ಭರದಿಂದ ಸಾಗಿದ್ದು 2020 – 21 ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.

ತ್ವರಿತವಾಗಿ ಪ್ರಗತಿ ಮೈದಾನದ ಹೋಟೆಲ್ ಯೋಜನೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಲು ಎಸ್ ಪಿ ವಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕಾಗಿ ನಿರ್ಮಾಣ ಮತ್ತು ಹೋಟೆಲ್ ನ್ನು ಸುದೀರ್ಘಾವಧಿಗೆ ನಿಗದಿತ ಗುತ್ತಿಗೆ ಆಧಾರದ ಮೇಲೆ ನಿರ್ವಹಿಸಲು ಪಾರದರ್ಶಕ ಸ್ಪರ್ಧಾತ್ಮದ ಹರಾಜಿನ ಮೂಲಕ ಸೂಕ್ತ ವ್ಯಕ್ತಿಗತ ಅಥವಾ ಯಾವುದೇ ವೃತ್ತಿಪರ ಬ್ರಾಂಡ್ ನ ಅಭಿವೃದ್ಧಿದಾರರು ಮತ್ತು ನಿರ್ವಹಣೆದಾರರನ್ನು ಆಯ್ಕೆ ಮಾಡಬಹುದಾಗಿದೆ.

ಉತ್ತಮ ಗುಣಮಟ್ಟ ಮತ್ತು ಸೇವೆಗಳೊಂದಿಗೆ ಭಾರತದ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮವನ್ನು ಆಮೂಲಾಗ್ರ ಬದಲಾವಣೆಗೊಳಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಗತಿ ಮೈದಾನವನ್ನು ವಿಶ್ವ ದರ್ಜೆ ಐಇಸಿಸಿ ರೂಪದಲ್ಲಿ ಪುನರಾಭಿವೃದ್ಧಿಗೊಳಿಸಲು ಐಟಿಪಿಒ ಬೃಹತ್ ಯೋಜನೆಯನ್ನು ಜಾರಿಗೆ ತರುತ್ತಿದೆ. ವಿಶ್ವಾದ್ಯಂತ ಯಾವುದೇ ಸಭೆ ಸಮಾರಂಭಗಳು, ಸಮಾವೇಶಗಳು ಮತ್ತು ಪ್ರದರ್ಶನಗಳಿಗೆ ಹೋಟೆಲ್ ಸೌಲಭ್ಯ ಅವಿಭಾಜ್ಯ ಅಂಗವಾಗಿದೆ.

ಭಾರತವನ್ನು ಜಾಗತಿಕ ಸಭೆ ಸಮಾರಂಭ, ಸಮಾವೇಶ ಮತ್ತು ಪ್ರದರ್ಶನ (ಎಂಐಸಿಇ) ಕೇಂದ್ರವನ್ನಾಗಿ ಪ್ರೋತ್ಸಾಹಿಸಲು ಹೋಟೆಲ್ ಸೌಲಭ್ಯ ಐಇಸಿಸಿಯ ಒಂದು ಅವಿಭಾಜ್ಯ ಅಂಗವಾಗಿದೆ. ಜೊತೆಗೆ ಇದು ಉದ್ಯೋಗ ಸೃಷ್ಟಿಯನ್ನು ಮಾಡುವುದಲ್ಲದೆ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉತ್ತೇಜನವನ್ನು ನೀಡಲಿದೆ. ಐ ಇ ಸಿ ಸಿ ಯೋಜನೆಗೆ ಈ ಹೋಟೆಲ್ ಮೌಲ್ಯ ವೃದ್ಧಿಸಲಿದೆ ಮತ್ತು ಭಾರತೀಯ ವ್ಯಾಪಾರ ಮತ್ತು ಉದ್ಯಮಕ್ಕೆ ಲಾಭದಾಯಕವಾಗಲಿದೆ.

ಪ್ರಗತಿ ಮೈದಾನದ ರೂಪಾಂತರದಿಂದಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರು ಮತ್ತು ಕಿರು ವ್ಯಾಪಾರಿಗಳಿಗೂ ಲಾಭವಾಗಲಿದೆ. ಸೌಕರ್ಯಾಭಿವೃದ್ಧಿ ಮತ್ತು ಆಧುನಿಕ ಸೌಲಭ್ಯಗಳು ಪಾಲ್ಗೊಳ್ಳುವ ವ್ಯಾಪಾರಿಗಳಿಗೆ, ಉದ್ದಿಮೆದಾರರಿಗೆ ಮತ್ತು ಪ್ರವಾಸಿಗರಿಗೆ ಬಹಳ ಲಾಭದಾಯಕವಾಗಿವೆ. ಈ ವ್ಯಾಪಾರ ಮೇಳವು ವಹಿವಾಟು ವಿಸ್ತರಣೆ ಮತ್ತು ಭಾರತೀಯ ಸರಕು ಮತ್ತು ಸೇವೆಗಳನ್ನು ಉತ್ತೇಜಿಸಲು ಉಜ್ವಲ ವೇದಿಕೆಯಾಗಲಿದೆ.