Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ನಲ್ಲಿ ಮೆಟ್ರೋ ಎಕ್ಸ್ ಪ್ರೆಸ್ ಮತ್ತು ಇಎನ್ ಟಿ ಆಸ್ಪತ್ರೆಯನ್ನು ಜಂಟಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ವೇಳೆ ಪ್ರಧಾನಿ ಮಾಡಿದ ಭಾಷಣ


ಮಾರಿಷಸ್ ಗಣರಾಜ್ಯದ ಪ್ರಧಾನಮಂತ್ರಿ, ಗೌರವಾನ್ವಿತ ಶ್ರೀ ಪ್ರವಿಂದ್ ಜುಗನ್ನಾಥ್ ಜಿ,

ಹಿರಿಯ ಸಚಿವರೇ ಮತ್ತು ಮಾರಿಷಸ್ ನ ಗಣ್ಯರೇ, ಗೌರವಾನ್ವಿತ ಅತಿಥಿಗಳೇ, ಮಿತ್ರರೇ

ನಮಸ್ಕಾರ ! ಬೋಂಜೂರ್ ! ಶುಭ ಮಧ್ಯಾಹ್ನ !

ಮಾರಿಷಸ್ ನಲ್ಲಿನ ನನ್ನೆಲ್ಲ ಮಿತ್ರರಿಗೆ ನಾನು ಆತ್ಮೀಯ ಶುಭಾಶಯಗಳನ್ನು ಕೋರಲು ಬಯಸುತ್ತೇನೆ. ಈ ಸಂವಾದ ನಮ್ಮ ರಾಷ್ಟ್ರಗಳಿಗೆ ಅತ್ಯಂತ ವಿಶೇಷವಾದುದು, ನಮ್ಮ ಇತಿಹಾಸ, ಪರಂಪರೆ ಮತ್ತು ಸಹಕಾರ ವಿನಿಮಯದಡಿ ಇದು ಹೊಸ ಅಧ್ಯಾಯವಾಗಲಿದೆ. ತುಂಬಾ ದೂರವೇನಿಲ್ಲ, ಇತ್ತೀಚೆಗಷ್ಟೇ ಭಾರತೀಯ ಸಾಗರ ದ್ವೀಪ ಕ್ರೀಡೆಗಳ ಆತಿಥ್ಯವನ್ನು ಮಾರಿಷಸ್ ವಹಿಸಿತ್ತು ಮತ್ತು ಅದಕ್ಕೆ ಸಾಧನೆಯ ಮೆರುಗನ್ನು ತಂದುಕೊಟ್ಟಿತು.

ಎರಡೂ ರಾಷ್ಟ್ರಗಳು ಇದೀಗ ‘ದುರ್ಗಾ ಪೂಜೆ’ಯನ್ನು ಆಚರಿಸುತ್ತಿವೆ ಮತ್ತು ಸದ್ಯದಲ್ಲೇ ದೀಪಾವಳಿ ಹಬ್ಬವನ್ನು ಆಚರಿಸಲಿವೆ. ಮೊದಲನೇ ಹಂತದ ಮೆಟ್ರೋ ಯೋಜನೆ ಉದ್ಘಾಟನೆ ಇಂತಹ ಶುಭ ಸಂದರ್ಭದಲ್ಲಿ ನಡೆಯುತ್ತಿರುವ ಬೆಳವಣಿಗೆಯಾಗಿದೆ.

ಮೆಟ್ರೋ ಸ್ವಚ್ಛ, ಪರಿಣಾಮಕಾರಿ ಮತ್ತು ಸಮಯ ಉಳಿಸುವ ಸಾರಿಗೆ ಒದಗಿಸಲಿದೆ. ಅಲ್ಲದೆ ಇದು ಆರ್ಥಿಕ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮಕ್ಕೂ ನೆರವಾಗಲಿದೆ. ಇಂದು ಉದ್ಘಾಟನೆಗೊಂಡ ಮತ್ತೊಂದು ಯೋಜನೆ ಎಂದರೆ ಅತ್ಯಾಧುನಿಕ ಇ ಎನ್ ಟಿ ಆಸ್ಪತ್ರೆ, ಇದು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ, ಈ ಆಸ್ಪತ್ರೆ ಇಂಧನ ಪರಿಣಾಮಕಾರಿ ಕಟ್ಟಡವನ್ನು ಒಳಗೊಂಡಿದ್ದು, ಅಲ್ಲಿ ಕಾಗದರಹಿತ ಸೇವೆಗಳನ್ನು ನೀಡಲಾಗುವುದು.

ಈ ಎರಡು ಯೋಜನೆಗಳು ಮಾರಿಷಸ್ ಜನರಿಗೆ ಸೇವೆಗಳನ್ನು ಒದಗಿಸಲಿದೆ. ಇವು ಮಾರಿಷಸ್ ಅಭಿವೃದ್ಧಿಗೆ ಭಾರತ ಬಲವಾದ ಬದ್ಧತೆಯನ್ನು ಹೊಂದಿರುವ ಸಂಕೇತವಾಗಿದೆ. ಈ ಯೋಜನೆಗಳಿಗಾಗಿ ಸಹಸ್ರಾರು ಕೆಲಸಗಾರರು ಹಗಲಿರುಳೆನ್ನದೆ, ಬಿಸಿಲು, ಮಳೆ ಎನ್ನದೆ ದುಡಿದಿದ್ದಾರೆ.

ಹಿಂದಿನ ಶತಮಾನಗಳಲ್ಲಿದ್ದಂತಹ ಪರಿಸ್ಥಿತಿ ಇಲ್ಲ, ಇಂದು ನಾವು ನಮ್ಮ ಜನರ ಭವಿಷ್ಯವನ್ನು ಉತ್ತಮಗೊಳಿಸಲು ಕೆಲಸ ಮಾಡುತ್ತಿದ್ದೇವೆ.

ಪ್ರಧಾನಮಂತ್ರಿ ಪ್ರವಿಂದ್ ಜುಗನ್ನಾಥ್ ಅವರ ದೂರದೃಷ್ಟಿಯ ನಾಯಕತ್ವವನ್ನು ನಾನು ಶ್ಲಾಘಿಸುತ್ತೇನೆ, ಅವರಿಂದಾಗಿ ಮಾರಿಷಸ್ ಗೆ ಆಧುನಿಕ ಮೂಲಸೌಕರ್ಯ ಮತ್ತು ಸೇವೆಗಳು ಲಭ್ಯವಾಗುತ್ತಿವೆ. ಅದಕ್ಕಾಗಿ ನಾನು ಅವರಿಗೆ ವಿನಯಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತೇನೆ ಮತ್ತು ಸಹಕಾರಕ್ಕಾಗಿ ಮಾರಿಷಸ್ ಸರ್ಕಾರವನ್ನೂ ಸಹ ಅಭಿನಂದಿಸುತ್ತೇನೆ. ಈ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳಲು ಸಹಕಾರವೇ ಕಾರಣ.

ಮಿತ್ರರೇ,

ಈ ಯೋಜನೆಗಳು ಹಾಗೂ ನೇರ ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಇತರೆ ಯೋಜನೆಗಳಲ್ಲಿ ಮಾರಿಷಸ್ ನೊಂದಿಗೆ ಪಾಲುದಾರಿಕೆ ಹೊಂದಿರುವುದು ಭಾರತಕ್ಕೆ ಹೆಮ್ಮೆ ಎನಿಸುತ್ತಿದೆ. ಕಳೆದ ವರ್ಷ ಜಂಟಿ ಯೋಜನೆಯಲ್ಲಿ ಯುವ ಮಕ್ಕಳಿಗೆ ಇ-ಟ್ಯಾಬ್ಲೆಟ್ ಗಳನ್ನು ಒದಗಿಸಲಾಯಿತು. ಹೊಸ ಸುಪ್ರೀಂಕೋರ್ಟ್ ಕಟ್ಟಡ ಮತ್ತು ಒಂದು ಸಾವಿರ ಸಾಮಾಜಿಕ ವಸತಿ ಘಟಕಗಳು ಸದ್ಯದಲ್ಲೇ ತಲೆ ಎತ್ತಲಿವೆ.

ಪ್ರಧಾನಿ ಜುಗನ್ನಾಥ್ ಅವರು ಸಲಹೆ ನೀಡಿರುವಂತೆ ಮೆಡಿಕ್ಲಿನಿಕ್ ಮತ್ತು ಪ್ರದೇಶ ಆರೋಗ್ಯ ಕೇಂದ್ರ ಹಾಗೂ ಮೂತ್ರಜನಕಾಂಗದ ಘಟಕಗಳ ನಿರ್ಮಾಣಕ್ಕೆ ಭಾರತ ಬೆಂಬಲ ನೀಡಲಿದೆ ಎಂದು ಪ್ರಕಟಿಸಲು ನನಗೆ ಸಂತೋಷವಾಗುತ್ತಿದೆ.

ಗೆಳೆಯರೇ,

ಭಾರತ ಮತ್ತು ಮಾರಿಷಸ್ ಎರಡೂ ಕಡೆ ವೈವಿಧ್ಯ ಹಾಗೂ ಕ್ರಿಯಾಶೀಲ ಪ್ರಜಾಪ್ರಭುತ್ವಗಳಿದ್ದು, ಅವು ನಮ್ಮ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಬದ್ಧತೆ ಹೊಂದಿವೆ ಮತ್ತು ನಮ್ಮ ಪ್ರದೇಶ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಕಾರ್ಯತತ್ಪರವಾಗಿದೆ.

ನಮ್ಮಿಬ್ಬರ ಪರಸ್ಪರ ವಿಶ್ವಾಸ ಹಲವು ವಿಧಾನಗಳಲ್ಲಿ ವ್ಯಕ್ತವಾಗುತ್ತಿದೆ. ಈ ವರ್ಷ ಪ್ರಧಾನಿ ಜುಗನ್ನಾಥ್ ಅವರು ಅತಿದೊಡ್ಡ ಪ್ರವಾಸಿ ಭಾರತೀಯ ದಿನದ ವಿಶೇಷ ಅತಿಥಿಯಾಗಿ ಬಂದು ಅನುಗ್ರಹಿಸಿ ಮತ್ತು ತಮ್ಮ ಸರ್ಕಾರದ ಎರಡನೇ ಅವಧಿಯ ಉದ್ಘಾಟನಾ ಸಮಾರಂಭಕ್ಕೂ ಆಗಮಿಸಿದ್ದರು.

ಮಾರಿಷಸ್ ನ 50ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ನಮ್ಮ ರಾಷ್ಟ್ರಪತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು, ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನವನ್ನು ಮಾರಿಷಸ್ ನಲ್ಲಿ ಗಾಂಧೀಜಿ ಅವರಿಗೆ ನಮನ ಸಲ್ಲಿಸಲಾಯಿತು ಮತ್ತು ಗಾಂಧೀಜಿ ಅವರೊಂದಿಗಿನ ಸಂಬಂಧವನ್ನು ಮೆಲುಕು ಹಾಕಲಾಯಿತು.

ಗೆಳೆಯರೇ,

ಹಿಂದೂ ಮಹಾಸಾಗರ ಭಾರತ ಮತ್ತು ಮಾರಿಷಸ್ ನಡುವಿನ ಸೇತುವೆಯಾಗಿದೆ. ಸಾಗರ ಆರ್ಥಿಕತೆ ನಮ್ಮ ಜನರಿಗೆ ಪ್ರಮುಖ ಭರವಸೆಯಾಗಿದೆ. ಸಾಗರ ದೂರದೃಷ್ಟಿ-ಪ್ರಾಂತ್ಯದ ಎಲ್ಲ ಪ್ರದೇಶಗಳ ಭದ್ರತೆ ಮತ್ತು ಬೆಳವಣಿಗೆ ಇದು ನಮಗೆ ಸಾಗರೋತ್ತರ ಆರ್ಥಿಕತೆ ಭದ್ರತೆ ಮತ್ತು ಪ್ರಕೋಪ ನಿರ್ವಹಣೆ ಸೇರಿದಂತೆ ಎಲ್ಲ ಆಯಾಮಗಳಲ್ಲಿ ನಿಕಟವಾಗಿ ಕಾರ್ಯನಿರ್ವಹಿಸಲು ಮಾರ್ಗದರ್ಶನ ನೀಡುತ್ತಿದೆ.

ಪ್ರಕೋಪ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿಗೆ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾದ ಮಾರಿಷಸ್ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತಿದ್ದೇನೆ.

ಗೌರವಾನ್ವಿತರೇ,

ಇನ್ನೊಂದು ತಿಂಗಳಲ್ಲಿ ವಿಶ್ವ ಪಾರಂಪರಿಕ ತಾಣ, ಅಪರವಸಿ ಘಾಟ್ ನಲ್ಲಿ ಅಪರವಸಿ ದಿವಸ್ ಆಚರಿಸಲಾಗುವುದು. ಇದು ನಮ್ಮ ಧೈರ್ಯಶಾಲಿ ಪೂರ್ವಜರ ಹೋರಾಟ ಯಶಸ್ಸಿನ ಸಂಕೇತವಾಗಿದೆ. ಆ ಹೋರಾಟದಿಂದ ಈ ಶತಮಾನದಲ್ಲಿ ಮಾರಿಷಸ್ ಗೆ ಅತಿದೊಡ್ಡ ಯಶಸ್ಸು ಮತ್ತು ಎಲ್ಲ ರೀತಿಯ ಪ್ರತಿಫಲ ಸಿಕ್ಕಿದೆ.

ಮಾರಿಷಸ್ ಜನರ ಅದ್ಭುತ ಸ್ಫೂರ್ತಿಗೆ ನಾವು ನಮಿಸುತ್ತೇವೆ.

ಭಾರತ್ ಔರ್ ಮಾರಿಷಸ್ ಮೈತ್ರಿ ಅಮರ್ ರಹೆ !

ಭಾರತ – ಮಾರಿಷಸ್ ಸ್ನೇಹ ಸಂಬಂಧ ದೀರ್ಘಕಾಲವಿರಲಿ

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು