ಜಾಗತಿಕ ಹವಾಮಾನ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಗೆ ನಾನು ಧನ್ಯವಾದಗಳನ್ನು ಹೇಳುತ್ತಿದ್ದೇನೆ.
ಕಳೆದ ವರ್ಷ “ಚಾಂಪಿಯನ್ ಆಫ್ ಅರ್ಥ್ ಅವಾರ್ಡ್” ಸ್ವೀಕರಿಸಿದ ನಂತರ, ವಿಶ್ವ ಸಂಸ್ಥೆಯನ್ನುದ್ದೇಶಿಸಿ, ಭಾಷಣ ಮಾಡಲು ಇದು ನನಗೆ ದೊರೆತ ಮೊದಲ ಅವಕಾಶವಾಗಿದೆ, ನನ್ನ ನ್ಯೂಯಾರ್ಕ್ ಭೇಟಿ ವೇಳೆ ಮೊದಲ ಸಭೆ ನಡೆಸಿದ ವಿಷಯ ಹವಾಮಾನ ಕುರಿತದ್ದು ಎಂಬುದು ನನಗೆ ಸಂತಸವಾಗಿದೆ.
ಗೌರವಾನ್ವಿತರೇ
ಹವಾಮಾನ ವೈಪರೀತ್ಯ ಎದುರಿಸಲು ವಿವಿಧ ರಾಷ್ಟ್ರಗಳು, ವಿವಿಧ ಬಗೆಯ ಪ್ರಯತ್ನಗಳನ್ನು ಮಾಡುತ್ತಿವೆ. ನಾವು ಹವಾಮಾನ ಬದಲಾವಣೆಯಂತಹ ಗಂಭೀರ ಸಮಸ್ಯೆಯಿಂದ ಹೊರಬರಬೇಕೆಂದರೆ ಈಗ ಮಾಡುತ್ತಿರುವ ಕೆಲಸ ಏನೇನು ಅಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ.
ನಮ್ಮ ಶಿಕ್ಷಣದಿಂದ ಮೌಲ್ಯಗಳವರೆಗೆ ಮತ್ತು ಜೀವನಶೈಲಿಯಿಂದ ಅಭಿವೃದ್ಧಿಯ ತತ್ವ ಸಿದ್ಧಾಂತಗಳನ್ನೊಳಗೊಂಡಂತೆ ಎಲ್ಲದರಲ್ಲೂ ಸಮಗ್ರ ಮನೋಭಾವವನ್ನು ಹೊಂದುವ ಕೆಲಸ ಇಂದು ಆಗಬೇಕಾದ ಅಗತ್ಯವಿದೆ. ನಮ್ಮ ನಡವಳಿಕೆಯಲ್ಲಿ ಬದಲಾವಣೆಗಳನ್ನು ತರಲು ನಾವು ಜಾಗತಿಕ ಜನಾಂದೋಲನ ಮಾಡಬೇಕಾದ ಅಗತ್ಯವಿದೆ.
ನಿಸರ್ಗಕ್ಕೆ ಸಂಬಂಧಿಸಿದಂತೆ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ನ್ಯಾಯಯುತವಾಗಿ ಬಳಕೆ ಮಾಡಿಕೊಳ್ಳಬೇಕು, ನಮ್ಮ ಅಗತ್ಯತೆಗಳನ್ನು ತಗ್ಗಿಸಬೇಕು ಮತ್ತು ನಮ್ಮ ಸಂಪ್ರದಾಯ ಹಾಗೂ ಇಂದಿನ ದಿನದ ಪ್ರಯತ್ನಗಳಿಂದಾಗಿ ಲಭ್ಯವಿರುವ ಸಂಪನ್ಮೂಲದಲ್ಲೇ ನಾವು ಬದುಕುವುದನ್ನು ರೂಢಿಸಿಕೊಳ್ಳಬೇಕು. ಅಗತ್ಯ ನಮ್ಮ ದುರಾಸೆ ಆಗಬಾರದು ಎಂಬುದು ನಮ್ಮ ಮಾರ್ಗದರ್ಶಿ ಸೂತ್ರವಾಗಬೇಕು. ಆದ್ದರಿಂದ ಭಾರತ ಇಂದು ಕೇವಲ ಈ ವಿಷಯದ ಗಂಭೀರತೆ ಬಗ್ಗೆ ಮಾತನಾಡಲು ಇಲ್ಲಿ ಬಂದಿಲ್ಲ, ಆದರೆ ವಾಸ್ತವಿಕ ಮನೋಭಾವದ ಮತ್ತು ಮಾರ್ಗಸೂಚಿಯನ್ನು ಮಂಡಿಸುತ್ತಿದ್ದೇವೆ. ಬೋಧನೆಗಿಂತ ಅದನ್ನು ಪಾಲಿಸುವುದು ಅತ್ಯಂತ ಮಹತ್ವದ್ದು ಎಂಬುದನ್ನು ನಾವು ನಂಬಿದ್ದೇವೆ.
ಭಾರತದಲ್ಲಿ ನವೀಕರಿಸಬಹುದಾದ ಇಂಧನ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇವೆ. 2022ರ ವೇಳೆಗೆ ನಾವು ನಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 175 ಗಿಗಾವ್ಯಾಟ್ ಗೂ ಅಧಿಕಗೊಳಿಸುವ ಗುರಿ ಹೊಂದಲಾಗಿದೆ ಮತ್ತು ಆನಂತರ 450 ಗಿಗಾವ್ಯಾಟ್ ವರೆಗೆ ನಮ್ಮ ಗುರಿ ಇರಲಿದೆ.
ಭಾರತದಲ್ಲಿ ಸಾರಿಗೆ ವಲಯವನ್ನು ಇ-ಸಂಚಾರ(ವಿದ್ಯುನ್ಮಾನ ವಾಹನಗಳ ಬಳಕೆ)ಗೊಳಿಸುವ ಗುರಿ ಹೊಂದಿದ್ದೇವೆ.
ಭಾರತ ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುವ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಸಾಗಿದೆ.
ನಾವು 150 ಮಿಲಿಯನ್ ಕುಟುಂಬಗಳಿಗೆ ಶುದ್ಧ ಅಡುಗೆ ಅನಿಲ ಪೂರೈಸಿದ್ದೇವೆ. ನವು ಜಲಸಂರಕ್ಷಣೆ, ಮಳೆನೀರು ಕುಯ್ಲು ಮತ್ತು ಜಲಸಂಪನ್ಮೂಲಗಳ ಅಭಿವೃದ್ಧಿಗಾಗಿ ಜಲ ಜೀವನ್ ಮಿಷನ್ ಆರಂಭಿಸಿದ್ದೇವೆ. ಭಾರತ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 50 ಬಿಲಿಯನ್ ಡಾಲರ್ ಹಣವನ್ನು ಇದಕ್ಕೆ ವ್ಯಯಿಸಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ 80ಕ್ಕೂ ಅಧಿಕ ರಾಷ್ಟ್ರಗಳು ನಮ್ಮ ಅಂತಾರಾಷ್ಟ್ರೀಯ ಸೌರ ಮೈತ್ರಿ ಅಭಿಯಾನಕ್ಕೆ ಕೈಜೋಡಿಸಿವೆ. ಭಾರತ ಮತ್ತು ಸ್ವೀಡನ್ ಜಂಟಿಯಾಗಿ ಇತರ ಪಾಲುದಾರರೊಡನೆ ಸೇರಿ ಕೈಗಾರಿಕಾ ಟ್ರಾನ್ಸಿಷನ್ ಟ್ರ್ಯಾಕ್ ಅಭಿವೃದ್ಧಿಗೆ ನಾಯಕತ್ವ ಗುಂಪು ರಚಿಸಲು ಚಾಲನೆ ನೀಡಿದ್ದೇವೆ, ಈ ಕ್ರಮದಿಂದಾಗಿ ತಾಂತ್ರಿಕ ನಾವಿನ್ಯತೆ ವಲಯದಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯಕ್ಕೆ ಸಹಕಾರ ಸಾಧಿಸುವ ಅವಕಾಶಗಳು ಲಭ್ಯವಾಗುತ್ತವೆ ಮತ್ತು ಇದು ಕೈಗಾರಿಕೆಗಳಿಗೆ ಕಡಿಮೆ ಇಂಧನದ ಮಾರ್ಗಗಳನ್ನು ಅಭಿವೃದ್ಧಿಗೊಳಿಸಲು ನೆರವಾಗುತ್ತದೆ. ಪ್ರಕೋಪ ನಿರ್ವಹಣೆ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯವೃದ್ಧಿಗೆ ಭಾರತ ಪ್ರಕೋಪ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿಯನ್ನು ಆರಂಭಿಸಿದೆ. ಈ ಮೈತ್ರಿಗೆ ಸೇರ್ಪಡೆಗೊಳ್ಳುವಂತೆ ನಾನು ಆಹ್ವಾನ ನೀಡುತ್ತಿದ್ದೇನೆ.
ಈ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ವೇಳೆ ಬಿಡಿ ಪ್ಲಾಸ್ಟಿಕ್ ಬಳಕೆಗೆ ಅಂತ್ಯ ಹಾಡಲು ಜನಾಂದೋಲನ ಕೈಗೊಳ್ಳಲು ನಾವು ಕರೆ ನೀಡಿದ್ದೇವೆ. ಹಾಗಾಗಿ ಇದರಿಂದ ಜಾಗತಿಕ ಮಟ್ಟದಲ್ಲೂ ಸಹ ಬಿಡಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡುತ್ತದೆ ಎಂಬ ಭರವಸೆ ನನಗಿದೆ.
ಗೌರವಾನ್ವಿತರೇ
ವಿಶ್ವಸಂಸ್ಥೆ ಕಟ್ಟಡದ ಮೇಲ್ಛಾವಣಿ ಮೇಲೆ ಭಾರತ ಸುಮಾರು ಒಂದು ಮಿಲಿಯನ್ ಡಾಲರ್ ನೆರವಿನೊಂದಿಗೆ ಅಳವಡಿಸಿರುವ ಸೌರ ಫಲಕಗಳನ್ನು ನಾಳೆ ಉದ್ಘಾಟನೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಕಾಲ ನಮ್ಮನ್ನು ಹಿಂದಿಕ್ಕಿ ಮುಂದೆ ನುಗ್ಗುತ್ತಿದೆ, ಜಗತ್ತು ಈಗ ಕಾರ್ಯೋನ್ಮುಖವಾಗುವ ಅಗತ್ಯವಿದೆ.
ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು
Earlier today, PM @narendramodi spoke at the @UN Summit on Climate Action. pic.twitter.com/dYVBFqZtqf
— PMO India (@PMOIndia) September 23, 2019
पिछले वर्ष "चैम्पियन ऑफ द अर्थ" अवार्ड मिलने के बाद यह U.N. में मेरा पहला संबोधन है।
— PMO India (@PMOIndia) September 23, 2019
और ये भी सुखद संयोग है कि न्यूयॉर्क दौरे में मेरी पहली सभा क्लाइमेट के विषय पर है: PM @narendramodi
Climate change को लेकर दुनिया भर में अनेक प्रयास हो रहे हैं।
— PMO India (@PMOIndia) September 23, 2019
लेकिन, हमें यह बात स्वीकारनी होगी, कि इस गंभीर चुनौती का मुकाबला करने के लिए उतना नहीं किया जा रहा, जितना होना चाहिए: PM @narendramodi
Addressing a Summit on Climate Change at the @UN. https://t.co/PswS5nEv1Y
— Narendra Modi (@narendramodi) September 23, 2019