Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ 2019ಕ್ಕೆ ಸಂಪುಟದ ಅನುಮೋದನೆ


ಪ್ರಧಾನ ಮಂತ್ರಿ ಶ್ರೀ.ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ 2019 ರ ಪ್ರಸ್ತಾಪವನ್ನು ಅಂಗೀಕರಿಸಿದೆ. ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು.

ಮಸೂದೆ ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಒಂದು ವ್ಯವಸ್ಥೆಯನ್ನು ಒದಗಿಸುತ್ತದೆ.

ಪರಿಣಾಮ

ಮಸೂದೆಯು ಹೆಚ್ಚಿನ ಸಂಖ್ಯೆಯ ತೃತೀಯ ಲಿಂಗಿ ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಅವರ ವಿರುದ್ಧದ ಕಳಂಕ, ತಾರತಮ್ಯ ಮತ್ತು ನಿಂದನೆಯನ್ನು ತೊಲಗಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತದೆ. ಇದು ಅಂತರ್ಗತತೆಗೆ ಕಾರಣವಾಗುತ್ತದೆ ಮತ್ತು ತೃತೀಯ ಲಿಂಗಿ ವ್ಯಕ್ತಿಗಳನ್ನು ಸಮಾಜದ ಪ್ರಮುಖ ಸದಸ್ಯರನ್ನಾಗಿ ಮಾಡುತ್ತದೆ.

ಹಿನ್ನೆಲೆ

ತೃತೀಯ ಲಿಂಗಿ ಸಮುದಾಯವು ದೇಶದ ಅತ್ಯಂತ ಅಂಚಿನಲ್ಲಿರುವ ಸಮುದಾಯಗಳಲ್ಲಿ ಒಂದಾಗಿದೆ, ಏಕೆಂದರೆ ಅವರು ‘ಪುರುಷರು’ ಅಥವಾ ‘ಮಹಿಳೆಯರ’ ಲಿಂಗದ ರೂಢಿಗತ ವರ್ಗಗಳಿಗೆ ಹೊಂದಿಕೊಳ್ಳುವುದಿಲ್ಲ. ಪರಿಣಾಮವಾಗಿ, ಅವರು ಸಾಮಾಜಿಕ ಬಹಿಷ್ಕಾರದಿಂದ ತಾರತಮ್ಯ, ಶಿಕ್ಷಣ ಸೌಲಭ್ಯಗಳ ಕೊರತೆ, ನಿರುದ್ಯೋಗ, ವೈದ್ಯಕೀಯ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಸೂದೆಯು ತೃತೀಯ ಲಿಂಗಿ ಸಮುದಾಯವನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಶಕ್ತಗೊಳಿಸುತ್ತದೆ.