ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಭಾರತ ಗಣರಾಜ್ಯ ಮತ್ತು ಬೆಲಾರುಸ್ ಗಣರಾಜ್ಯದ ನಡುವೆ ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವಿನ ಮ್ಯೂಚುಯಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟಿ – (ಎಮ್ಎಲ್ಎಟಿ) ಒಪ್ಪಂದವನ್ನು ಅನುಮೋದಿಸಿತು.
ಒಪ್ಪಂದವು ಜಾರಿಗೆ ಬಂದ ನಂತರ ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಉಭಯ ಗುತ್ತಿಗೆದಾರರ ನಡುವೆ ಪರಸ್ಪರ ಕಾನೂನು ಸಹಾಯವನ್ನು ಉತ್ತೇಜಿಸುತ್ತದೆ.
ಯಾವುದೇ ಲಿಂಗ, ವರ್ಗ ಅಥವಾ ಆದಾಯ ಭೇದವಿಲ್ಲದೆ ವಿನಂತಿಸಿದವರಲ್ಲಿ ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಕಾನೂನು ನೆರವು ಪಡೆಯಲು ಆಯಾ ನಾಗರಿಕರಿಗೆ ಪ್ರಯೋಜನವಾಗುವಂತೆ ಮಾಡುವುದು ಈ ಒಪ್ಪಂದದ ಉದ್ದೇಶವಾಗಿದೆ.
*********