Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು.
 
 
ಅವರು 2013-14ರ ದಿನಗಳಲ್ಲಿ ಇದ್ದ ಬಾರೀ ಹಣದುಬ್ಬರ, ಅಧಿಕ ವಿತ್ತೀಯ ಕೊರತೆ ಮತ್ತು ದುರ್ಬಲ ನೀತಿಗಳಂತಹ ಸ್ಥಿತಿಗೂ ಇಂದಿಗೂ ಆಗಿರುವ ಬದಲಾವಣೆಗಳನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದರು.
 
       ಅನುಮಾನ ಅಥವಾ ಸಂದೇಹ ಪಡುತ್ತಿದ್ದ ಜಾಗದಲ್ಲಿ ಇಂದು ಭರವಸೆ ಬಂದಿದೆ. ಅಡೆತಡೆಗಳ ಬದಲಿಗೆ ಇಂದು ಸಕಾರಾತ್ಮಕ ಬೆಳವಣಿಗೆ ಕಾಣುತ್ತಿದ್ದೇವೆ ಎಂದು ಹೇಳಿದರು.
 
       ಪ್ರಧಾನಮಂತ್ರಿ ಅವರು 2014 ರಿಂದೀಚೆಗೆ ಭಾರತ ಬಹುತೇಕ ಎಲ್ಲ ಅಂತಾರಾಷ್ಟ್ರೀಯ ಶ್ರೇಯಾಂಕ ಮತ್ತು ಮಾನದಂಡಗಳಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ ಎಂದರು.
 
ಶ್ರೇಯಾಂಕಗಳು ಬಹುತೇಕ ಹಿಂದುಳಿದಿರುವಿಕೆಯ ಮಾನದಂಡಗಳಾಗಿದ್ದು, ವಾಸ್ತವದಲ್ಲಿ ಬದಲಾವಣೆಗಳಾದಾಗ ಮಾತ್ರ ಅವು ಸಹ ಬದಲಾಗುತ್ತವೆ. ಈ ನಿಟ್ಟಿನಲ್ಲಿ ಅವರು ದೇಶದಲ್ಲಿನ ಕೈಗಾರಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಿರುವುದನ್ನು ಉದಾಹರಣೆ ನೀಡುತ್ತಾ, ಹಲವು ಮಾನದಂಡಗಳು ಸುಧಾರಣೆ ಕಂಡಿರುವುದು ಇದೀಗ ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದರು.
 
ಜಾಗತಿಕ ಆವಿಷ್ಕಾರಿ ಸೂಚ್ಯಂಕದಲ್ಲಿ 2014ರಲ್ಲಿ ಭಾರತದ ಶ್ರೇಯಾಂಕ 76 ಇತ್ತು ಮತ್ತು ಇದೀಗ 2018ರಲ್ಲಿ ಆ ಶ್ರೇಯಾಂಕ 57ಕ್ಕೆ ಏರಿದೆ. ಆವಿಷ್ಕಾರಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವುದು ಇದರಿಂದ ಸ್ಪಷ್ಟವಾಗಿ ಕಾಣಬಹುದಾಗಿದೆ.
 
ಪ್ರಧಾನಮಂತ್ರಿಗಳು 2014ಕ್ಕೆ ಮುಂಚೆ ಇದ್ದ ಹಾಗೂ ಈಗ ಇರುವ ಹಲವು ಬಗೆಯ ಸ್ಪರ್ಧೆಗಳ ವೈರುಧ್ಯವನ್ನು ಅವರು ಬಿಡಿಸಿಟ್ಟರು.
 
ಈಗ ಸ್ಪರ್ಧೆ ಇರುವುದು ಅಭಿವೃದ್ಧಿಯ ಕುರಿತು ಮತ್ತು ಸಂಪೂರ್ಣ ನೈರ್ಮಲೀಕರಣ ಅಥವಾ ಸಂಪೂರ್ಣ ವಿದ್ಯುದೀಕರಣ ಅಥವಾ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತಿತರ ಆಶೋತ್ತರ ಗುರಿಗಳನ್ನು ಸಾಧಿಸುವುದಕ್ಕೆ. ಇದಕ್ಕೂ ಮುನ್ನ ತದ್ವಿರುದ್ಧ ಅಂದರೆ ಭ್ರಷ್ಟಾಚಾರ ಮತ್ತು ವಿಳಂಬದಲ್ಲಿ ಸ್ಪರ್ಧೆ ಇತ್ತು ಎಂದರು.
 
ಪ್ರಧಾನಮಂತ್ರಿ ಅವರು, ಕೆಲವೊಂದು ವ್ಯಾಖ್ಯಾನಗಳನ್ನು ಬಣ್ಣಿಸುತ್ತಾ, ಕೆಲವೊಂದು ಸಂಗತಿಗಳು ಭಾರತದಲ್ಲಿ ಅಸಾಧ್ಯವೆನ್ನುವಂತಹ ವಾತಾವರಣವಿತ್ತೆಂದು ಬಲವಾಗಿ ಟೀಕಿಸಿದರು.
 
ಹಿಂದೆ ಯಾವುದು ಅಸಾಧ್ಯವಾಗಿತ್ತೋ ಇದೀಗ ಅದೆಲ್ಲ ಸಾಧ್ಯವಾಗಿದೆ ಎಂದು ಘೋಷಿಸಿದ ಪ್ರಧಾನಮಂತ್ರಿ ಅವರು, ಭಾರತವನ್ನು ಸ್ವಚ್ಛ ಮತ್ತು ಭ್ರಷ್ಟಾಚಾರಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿಕೊಳ್ಳಲಾಗಿದೆ, ನೀತಿ-ನಿರೂಪಣೆಯಲ್ಲಿನ ಏಕಪಕ್ಷೀಯತೆ ಮತ್ತು ವಿವೇಚನೆ ಬಳಸದಿರುವುದನ್ನು ತೆಗೆದು ಹಾಕಲಾಗಿದೆ.
 
ಸರ್ಕಾರಗಳು ಯಾವಾಗಲೂ ಅಭಿವೃದ್ಧಿಯ ಪರ ಮತ್ತು ಬಡವರ ಪರ ಇರುವುದಿಲ್ಲ ಎಂಬ ಭಾವನೆ ಇತ್ತು. ಆದರೆ ಭಾರತದ ಜನರು ಅದನ್ನು ಸಾಧ್ಯವನ್ನಾಗಿ ಮಾಡಿದ್ದಾರೆ ಎಂದರು.
 
2014ರಿಂದ 2019ರ ವರೆಗೆ ದೇಶ ಸರಾಸರಿ ಶೇಕಡ 7.4ರಷ್ಟು ಪ್ರಗತಿ ದಾಖಲಿಸಿದೆ ಎಂದ ಅವರು, ಸರಾಸರಿ ಹಣದುಬ್ಬರ ಶೇಕಡ 4.5ಕ್ಕೂ ಕಡಿಮೆ ಇದೆ. ಭಾರತದ ಆರ್ಥಿಕತೆ ಜಾಗತೀಕರಣದ ನಂತರ ತಮ್ಮ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚಿನ ಸರಾಸರಿ ಪ್ರಗತಿ ದರವನ್ನು ಕಾಯ್ದುಕೊಳ್ಳಲಾಗಿದೆ ಮತ್ತು ಅತಿ ಕಡಿಮೆ ಹಣದುಬ್ಬರವನ್ನು ಕಾಣಬಹುದಾಗಿದೆ ಎಂದರು.
 
ಕಳೆದ ನಾಲ್ಕು ವರ್ಷಗಳಿಂದೀಚೆಗೆ ದೇಶಕ್ಕೆ ಹರಿದುಬಂದಿರುವ ಒಟ್ಟು ವಿದೇಶಿ ನೇರ ಬಂಡವಾಳ ಹೂಡಿಕೆ 2014ಕ್ಕೆ ಮುಂಚೆ 7 ವರ್ಷಗಳಲ್ಲಿ ಸ್ವೀಕರಿಸಿದ್ದ ಎಫ್ ಡಿ ಐ ಗೆ ಸಮಾನವಾದುದು ಎಂದು ಪ್ರಧಾನಮಂತ್ರಿ ಹೇಳಿದರು. ಇದನ್ನು ಸಾಧಿಸಲು ಭಾರತ ಹಲವು ಸುಧಾರಣೆಗಳನ್ನು ತರಬೇಕಾಯಿತು. ದಿವಾಳಿಸಂಹಿತೆ, ಜಿ ಎಸ್ ಟಿ, ರಿಯಲ್ ಎಸ್ಟೇಟ್ ಮಸೂದೆ ಮತ್ತಿತರ ಕ್ರಮಗಳ ಮೂಲಕ ದಶಕಗಳ ಕಾಲ ಅಭಿವೃದ್ಧಿ ಕಾಯ್ದುಕೊಳ್ಳಲು ಭದ್ರ ಬುನಾದಿ ಹಾಕಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
 
ಭಾರತ 130 ಕೋಟಿ ಜನರ ಆಶೋತ್ತರಗಳನ್ನು ಹೊಂದಿರುವ ದೇಶ ಇಲ್ಲಿ ಅಭಿವೃದ್ಧಿ ಮತ್ತು ಪ್ರಗತಿಯ ಏಕೈಕ ದೃಷ್ಟಿಕೋನ ಹೊಂದಿರುವುದು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ‘ನಮ್ಮ ನವಭಾರತದ ಕನಸು ಸಮಾಜದ ಎಲ್ಲ ವರ್ಗದವರನ್ನು ಅವರ ಆರ್ಥಿಕ ಸ್ಥಿತಿಗತಿ, ಜಾತಿ, ಮತ, ಭಾಷೆ, ಧರ್ಮಗಳನ್ನು ಹೊರತುಪಡಿಸಿ ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ’ ಎಂದರು.
 
ಶ್ರೀ ನರೇಂದ್ರ ಮೋದಿ ಅವರು, “ನಮ್ಮ ನವಭಾರತ ಮುನ್ನೋಟದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸುವುದು ಮತ್ತು ಹಿಂದಿನ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶವಿದೆ” ಎಂದ ಅವರು, ಈ ನಿಟ್ಟಿನಲ್ಲಿ ಕೆಳಗಿನ ಉದಾಹರಣೆಗಳನ್ನು ನೀಡಿದರು.
 
·       ಭಾರತದಲ್ಲಿ ಅತ್ಯಂತ ವೇಗದ ರೈಲು ಸಂಚಾರ ಸಾಧ್ಯವಾಗಿದೆ; ಎಲ್ಲ ಮಾನವರಹಿತ ರೈಲ್ವೆ ಕ್ರಾಸಿಂಗ್ ಗಳನ್ನು ತೆಗೆದು ಹಾಕಲಾಗಿದೆ.
 
·       ಭಾರತದಲ್ಲಿ ಐಐಟಿಗಳು ಮತ್ತು ಏಮ್ಸ್ ಗಳನ್ನು ಕ್ಷಿಪ್ರಗತಿಯಲ್ಲಿ ನಿರ್ಮಿಸಲಾಗುತ್ತಿದೆ; ಜೊತೆಗೆ ದೇಶಾದ್ಯಂತ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.
 
·       ದೇಶಾದ್ಯಂತ ನೂರು ಸ್ಮಾರ್ಟ್ ಸಿಟಿಗಳನ್ನು ಭಾರತ ನಿರ್ಮಿಸುತ್ತಿದೆ. ಜೊತೆಗೆ ಸುಮಾರು ನೂರು ಆಶೋತ್ತರ ಜಿಲ್ಲೆಗಳಲ್ಲಿ ಕ್ಷಿಪ್ರ ಪ್ರಗತಿಯನ್ನು ಖಾತ್ರಿಪಡಿಸುತ್ತಿದೆ.
 
·       ಭಾರತ ವಿದ್ಯುತ್ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ; ಸ್ವಾತಂತ್ರ್ಯಾ ನಂತರ ಕತ್ತಲೆಯಲ್ಲೇ ಕೊಳೆಯುತ್ತಿದ್ದ ಕೋಟ್ಯಾಂತರ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.
 
ಸಾಮಾಜಿಕ ವಲಯದಲ್ಲಿ ಸಕಾರಾತ್ಮಕ ಮಧ್ಯ ಪ್ರವೇಶದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಸರ್ಕಾರ ಸುಮಾರು 12 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ ಪ್ರತಿ ವರ್ಷ ಆರು ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಅವರ ಜೀವನಕ್ಕೆ ನೆರವಾಗುತ್ತಿದೆ. ಇದರಿಂದ ಮುಂದಿನ ಹತ್ತು ವರ್ಷಗಳಲ್ಲಿ ರೈತರಿಗೆ 7.5 ಲಕ್ಷ ಕೋಟಿ ರೂಪಾಯಿ ಅಥವಾ ಒಂದು ನೂರು ಬಿಲಿಯನ್ ಡಾಲರ್ ವರ್ಗಾವಣೆಯಾಗಲಿದೆ ಎಂದರು.
 
ನಮ್ಮ ಆದ್ಯತೆ ಯೋಜನೆಗಳಾದ ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಇನೋವೇಟಿವ್ ಇಂಡಿಯಾ ಯೋಜನೆಗಳು ಒಂದಕ್ಕೊಂದು ಬೆಸೆದುಕೊಂಡಿದ್ದು, ಅವುಗಳಿಂದ ಉತ್ತಮ ಫಲಿತಾಂಶ ಬರುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ 2 ಹಾಗೂ 3ನೇ ದರ್ಜೆ ನಗರಗಳಲ್ಲಿ ಶೇಕಡ 44ರಷ್ಟು ನವೋದ್ಯಮಗಳು ಆರಂಭವಾಗಿವೆ ಎಂದ ಅವರು, ದೇಶದಲ್ಲಿ ಉಳ್ಳವರು ಮತ್ತು ಉಳ್ಳದವರ ನಡುವಿನ ಕಂದಕವನ್ನು ತಂತ್ರಜ್ಞಾನ ಸಮರ್ಪಕವಾಗಿ ನಿವಾರಿಸಿದೆ ಎಂದು ಹೇಳಿದರು.
 
ಭಾರತವನ್ನು ಹತ್ತು ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವನ್ನಾಗಿ ರೂಪಿಸಲು ಸರ್ಕಾರ ಎದುರು ನೋಡುತ್ತಿದೆ ಎಂದ ಅವರು, ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಜಾಗತಿಕ ಮುಂಚೂಣಿಯಲ್ಲಿದೆ ಮತ್ತು ವಿದ್ಯುನ್ಮಾನ ವಾಹನಗಳು ಹಾಗೂ ಇಂಧನ ಸಂಗ್ರಹ ಉಪಕರಣಗಳ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ರೂಪಿಸಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
 
***********