Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡಿನ ಕೂನೂರಿನಲ್ಲಿ ಹೊಸ ವೈರಲ್ ಲಸಿಕೆ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಭಾರತೀಯ ಪ್ಯಾಶ್ಚರ್ ಸಂಸ್ಥೆಗೆ 30 ಎಕರೆ ಭೂಮಿ ನೀಡುವ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತದ ಪ್ಯಾಶ್ಚರ್ ಸಂಸ್ಥೆಗೆ (ಪಿ.ಐ.ಐ.) ತಮಿಳುನಾಡಿನ ಕೂನೂರಿನಲ್ಲಿ ಹೊಸ ವೈರಲ್ ಲಸಿಕೆ ತಯಾರಿಕಾ ಘಟಕ ಸ್ಥಾಪಿಸುವುದಕ್ಕಾಗಿ 30 ಎಕರೆ ಭೂಮಿ ನೀಡುವ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿತು.

ಈ ಯೋಜನೆಯು ವೈರಲ್ ಲಸಿಕೆಗಳನ್ನು ( ಟಿ.ಸಿ.ಎ.-ದಢಾರ ನಿರೋಧಕ ಲಸಿಕೆ, ಜೆ.ಇ. ಲಸಿಕೆ ಇತ್ಯಾದಿ ) ವಿಷ ನಿರೋಧಕ (ಹಾವಿನ ವಿಷ ನಿರೋಧಕ ಮತ್ತು ರೇಬಿಸ್ ನಿರೋಧಕ) ಲಸಿಕೆಗಳನ್ನು ಪಿ.ಐ.ಐ. ಯ ಕೂನೂರು ಘಟಕದಲ್ಲಿ ತಯಾರಿಸುವ ಉದ್ದೇಶವನ್ನು ಹೊಂದಿದೆ. ಭೂಮಿಯನ್ನು ಯೋಜನೆಗೆ ಉಚಿತವಾಗಿ ವರ್ಗಾಯಿಸಲಾಗುತ್ತದೆ.

ಯೋಜನೆಗೆ ಒದಗಿಸುವ ಭೂಮಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ’ಕೈಗಾರಿಕಾ’ ಉದ್ದೇಶದಿಂದ “ಸಾಂಸ್ಥಿಕ” ಎಂದು ಪರಿವರ್ತಿಸಲಿದೆ.

ಪ್ರಯೋಜನಗಳು:

ಭೂಮಿ ಮಂಜೂರಾತಿಯಿಂದ ಮಕ್ಕಳ ಜೀವ ರಕ್ಷಕ ಲಸಿಕೆಗಳ ಉತ್ಪಾದನೆಗೆ ಬೆಂಬಲ ದೊರೆಯಲಿದೆ, ದೇಶದ ಲಸಿಕೆ ಸುರಕ್ಷೆ ಬಲಗೊಳ್ಳಲಿದೆ ಮತ್ತು ವೆಚ್ಚ ಕಡಿತವಾಗಲಿದೆ. ಈಗ ಇವುಗಳನ್ನು ಆಮದು ಮಾಡಲಾಗುತ್ತಿದ್ದು ಇದು ಆಮದಿಗೆ ಪರ್ಯಾಯವಾಗಲಿದೆ.