Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿಗಳು ಎನ್ ಸಿ ಸಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು

ಪ್ರಧಾನ ಮಂತ್ರಿಗಳು  ಎನ್ ಸಿ ಸಿ  ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು

ಪ್ರಧಾನ ಮಂತ್ರಿಗಳು  ಎನ್ ಸಿ ಸಿ  ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು

ಪ್ರಧಾನ ಮಂತ್ರಿಗಳು  ಎನ್ ಸಿ ಸಿ  ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು


ಪ್ರಧಾನಿ ಮಂತ್ರಿ, ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಎನ್ ಸಿ ಸಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಎನ್ ಸಿ ಸಿ ಕೆಡೆಟ್ ಗಳ ಜೊತೆಯಲ್ಲಿರುವಾಗಲೆಲ್ಲಾ ಅವರಿಗೆ ಭಾವುಕತೆ ತುಂಬುವುದು ಎಂದು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಎನ್.ಸಿ.ಸಿ ಕೆಡೆಟ್ ಗಳು ಸ್ವಚ್ಛ ಭಾರತ್ ಅಭಿಯಾನ್ , ಡಿಜಿಟಲ್ ವಹಿವಾಟು ಮುಂತಾದ ಹಲವಾರು ಪ್ರಮುಖ ಉಪಕ್ರಮಗಳ ಜೊತೆ ಕೂಡಿಕೊಂಡಿರುವರು ಎಂದು ಅವರು ಸಂತೋಷ ವ್ಯಕ್ತಪಡಿಸಿದರು . ಕೇರಳದ ಪ್ರವಾಹದ ಸಮಯದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಅವರ ಕೊಡುಗೆಯು ವಿಶೇಷವಾಗಿ ಪ್ರಶಂಸನೀಯವಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಗಳು ಇಡೀ ಪ್ರಪಂಚವು ಭಾರತವನ್ನು ಒಂದು ಪ್ರಕಾಶಿಸುತ್ತಿರುವ ನಕ್ಷತ್ರದಂತೆ ನೋಡುತ್ತಿದೆ ಎಂದು ಇಂದು ಹೇಳಿದರು. ಭಾರತವು ಕೇವಲ ಸಾಕಷ್ಟು ಸಾಮರ್ಥ್ಯ ಹೊಂದಿದೆ ಎನ್ನುವ ತಿಳುವಳಿಕೆಯೊಂದೇ ಅಲ್ಲದೆ ಅದಕ್ಕೆ ಪೂರಕವಾಗಿಯೂ ಇದೆ ಎಂದು ಹೇಳಿದರು.

ಆರ್ಥಿಕ ಕ್ಷೇತ್ರವೇ ಇರಲಿ ಅಥವಾ ರಕ್ಷಣಾ ಕ್ಷೇತ್ರವೇ ಇರಲಿ ಭಾರತದ ಸಾಮರ್ಥ್ಯವು ಹೆಚ್ಚಾಗಿದೆ ಎಂದು ಅವರು ಹೇಳಿದರು . ಭಾರತವು ಶಾಂತಿಯನ್ನು ಬೆಂಬಲಿಸುತ್ತದೆ ಆದರೆ ರಾಷ್ಟ್ರದ ಭದ್ರತೆಗಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು. ಕಳೆದ ನಾಲ್ಕುವರೆ ವರ್ಷಗಳಲ್ಲಿ ರಕ್ಷಣಾ ಮತ್ತು ಭದ್ರತೆಗಾಗಿ ಬಹಳಷ್ಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು . ನೆಲ,ಜಲ ಮತ್ತು ವಾಯುವಿನಲ್ಲಿ ಪರಮಾಣು ಅಸ್ತ್ರವನ್ನು (ನ್ಯೂಕ್ಲಿಯರ್ ಟ್ರೈಯಾಡ್ ) ಅಭಿವೃದ್ಧಿಪಡಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಈಗ ಒಂದಾಗಿದೆ ಎಂದು ಅವರು ಹೇಳಿದರು. ದೇಶವು ಸುರಕ್ಷಿತವಾಗಿದ್ದರೆ ಮಾತ್ರ ಯುವಜನರು ಅವರ ಕನಸುಗಳನ್ನು ಸಾಕಾರಗೊಳಿಸಬಹುದು ಎಂದು ಅವರು ಹೇಳಿದರು.

ಹಲವಾರು ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳಿಂದ ಹೆಚ್ಚಾಗಿ ಬಂದಿರುವ ಕೆಡೆಟ್ ಗಳ ಪರಿಶ್ರಮವನ್ನು ಶ್ಲಾಘಿಸಿದರು, ಹಲವಾರು ಎನ್ ಸಿ ಸಿ ಕೆಡೆಟ್ ಗಳು ದೇಶವು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅವರು ಪ್ರಖ್ಯಾತ ಅಥ್ಲೀಟ್ ಹಿಮಾ ದಾಸ್ ಅವರನ್ನು ಉಲ್ಲೇಖಿಸಿದರು . ಅವರು ಸತತ ಪರಿಶ್ರಮ ಮತ್ತು ಮತ್ತು ಪ್ರತಿಭೆ ಯಶಸ್ಸಿನ ಅಂಶಗಳು ಎಂದು ಹೇಳಿದರು. ಸರ್ಕಾರವು ವಿಐಪಿ ಸಂಸ್ಕೃತಿಯ ಬದಲಿಗೆ ಇಪಿಐ ಸಂಸ್ಕೃತಿಯನ್ನು ತರಲು ಪ್ರಯತ್ನಿಸುತ್ತಿದೆ – “ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯ” ಎಂದು ಅವರು ಹೇಳಿದರು. ಎಲ್ಲಾ ವಿಧವಾದ ಋಣಾತ್ಮಕ ಅಂಶಗಳಿಂದ ದೂರವಿದ್ದು ಸ್ವಯಂ ಮತ್ತು ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡಬೇಕೆಂದು ಅವರು ಕೆಡೆಟ್ ಗಳನ್ನು ಒತ್ತಾಯಿಸಿದರು. ಮಹಿಳೆಯರಿಗೆ ಅವಕಾಶಗಳನ್ನು ಒದಗಿಸಲು ಮತ್ತು ಕಾರ್ಯಪಡೆಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ ಭಾರತೀಯ ವಾಯುಪಡೆಯಲ್ಲಿ ಮಹಿಳೆಯರು ಪೈಲಟ್ ಗಳಾಗಿದ್ದಾರೆ ಎಂದು ಹೇಳಿದರು.

ಭ್ರಷ್ಟಾಚಾರವು ನವ ಭಾರತದ ಭಾಗವಾಗಿರಬಾರದು ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಬಿಡುವುದಿಲ್ಲ ಎಂದು ಅವರು ಹೇಳಿದರು.

ಸ್ವಚ್ಛ ಭಾರತ್ ಮತ್ತು ಡಿಜಿಟಲ್ ಇಂಡಿಯಾ ಮುಂತಾದ ಪ್ರಮುಖ ಉಪಕ್ರಮಗಳಲ್ಲಿ ಯುವಕರ ಸಕ್ರಿಯ ತಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿದರು. ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸಲು ಅವರು ಕೆಡೆಟ್ ಗಳಿಗೆ ಒತ್ತಾಯಿಸಿದರು. ಅವರು ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಯುವಕರನ್ನು ಪ್ರೇರೇಪಿಸಬೇಕೆಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಭಾರತದ ಪರಂಪರೆ ಮತ್ತು ಶ್ರೇಷ್ಠ ನಾಯಕರ ಬಗ್ಗೆ ಇರುವ ಹಲವಾರು ಹೊಸ ಮುಖ್ಯ ಸ್ಥಳಗಳನ್ನು ಭೇಟಿ ಮಾಡಬಹುದೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ಅವರು ಕೆಂಪು ಕೋಟೆಯಲ್ಲಿರುವ ಕ್ರಾಂತಿ ಮಂದಿರ ಮತ್ತು ಅಲಿಪುರ್ ರಸ್ತೆಯಲ್ಲಿರುವ ಡಾ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ಸ್ಥಳಗಳನ್ನು ಉಲ್ಲೇಖಿಸಿದರು. ಈ ಸ್ಥಳಗಳಿಗೆ ನೀಡುವ ಭೇಟಿ ಜನರಿಗಾಗಿ ಕೆಲಸ ಮಾಡಲು ನವ ಚೈತನ್ಯ ತುಂಬುವುದು ಎಂದು ಅವರು ಹೇಳಿದರು.