ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿ ಮೆಟ್ರೋ ಕಾರಿಡಾರ್ ಅನ್ನು ದಿಲ್ಶಾದ್ ಗಾರ್ಡನ್ ನಿಂದ ನ್ಯೂ ಬಸ್ ಅಡ್ಡಾ ಗಾಝಿಯಾಬಾದ್ ವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ. ವಿಸ್ತರಿತ ಮಾರ್ಗದ ಒಟ್ಟು ದೂರ 9.41 ಕಿ.ಮೀ. ಆಗಿದೆ. ಸಂಪುಟವು ಈ ವಿಸ್ತರಣೆಗಾಗಿ 324.87 ಕೋಟಿ ರೂಪಾಯಿಗಳ ಕೇಂದ್ರದ ನೆರವಿನ ಕೊಡುಗೆಗೂ ಅನುಮೋದನೆ ನೀಡಿದೆ. ಇದರ ಪೂರ್ಣಗೊಳ್ಳುವವರೆಗಿನ ವೆಚ್ಚ 1,781.21 ಕೋಟಿ ರೂಪಾಯಿಗಳಾಗಿವೆ.
ಈ ಯೋಜನೆಯ ಅನುಷ್ಠಾನದಿಂದ ಎನ್.ಸಿ.ಆರ್.ಗೆ ಬಹು ಅಗತ್ಯವಾಗಿದ್ದ ಹೆಚ್ಚುವರಿ ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ಒದಗಿಸಿದಂತಾಗುತ್ತದೆ.
ಈ ಯೋಜನೆಯು ದೆಹಲಿ ಮೆಟ್ರೋ ರೈಲು ನಿಗಮ ನಿಯಮಿತ (ಡಿ.ಎಂ.ಆರ್.ಸಿ.), ಹಾಲಿ ಇರುವ ಭಾರತ ಸರ್ಕಾರದ ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.) ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (ಜಿಎನ್.ಸಿಟಿಡಿ)ದಿಂದ ಅನುಷ್ಠಾನಗೊಳ್ಳಲಿದೆ.
*****