Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಬಾಲ ಪುರಸ್ಕಾರ-2019ರ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ

ರಾಷ್ಟ್ರೀಯ ಬಾಲ ಪುರಸ್ಕಾರ-2019ರ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ

ರಾಷ್ಟ್ರೀಯ ಬಾಲ ಪುರಸ್ಕಾರ-2019ರ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ

ರಾಷ್ಟ್ರೀಯ ಬಾಲ ಪುರಸ್ಕಾರ-2019ರ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಬಾಲ ಪುರಸ್ಕಾರ -2019ರ ವಿಜೇತರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದರು.

ಮಕ್ಕಳು ಅವರ ವಿಶೇಷ ಸಾಧನೆಗಳು ಹಾಗೂ ಸ್ಪೂರ್ತಿದಾಯಕ ಕಥೆಗಳನ್ನು ಪ್ರಧಾನಮಂತ್ರಿಯವರಿಗೆ ವಿವರಿಸಿದರು.

ಪುರಸ್ಕಾರ ವಿಜೇತರ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರಿಗೆ ಶುಭಕೋರಿದರು.

ಇಂತಹ ಪುರಸ್ಕಾರಗಳು ಪ್ರತಿಭಾವಂತ ಮಕ್ಕಳನ್ನು ಗುರುತಿಸಲು ಅವಕಾಶ ನೀಡುತ್ತದೆ ಮತ್ತು ಅವರಂತಹ ಉಳಿದವರಿಗೆ ಸ್ಪೂರ್ತಿಯಾಗಿದೆ.

ಪ್ರಧಾನಮಂತ್ರಿ ಅವರು ಅಸಾಧಾರಣ ಪ್ರತಿಭಾವಂತ ಮಕ್ಕಳಿಗೆ ನಿಸರ್ಗದೊಂದಿಗೆ ಸಂಪರ್ಕದಲ್ಲಿರಲು ತಿಳಿಸಿದರು.

ಅವರ ಹಸ್ತಾಕ್ಷರಕ್ಕಾಗಿ ವಿನಂತಿಸಿದ ಮಕ್ಕಳೊಂದಿಗೆ ಪ್ರಧಾನಮಂತ್ರಿ ಅವರು ಕೆಲಕಾಲ ಅನೌಪಚಾರಿಕವಾಗಿ ಕಳೆದರು.

ಹಿನ್ನೆಲೆ:

ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಈ ಎರಡು ವಿಭಾಗಳಲ್ಲಿ ನೀಡಲಾಗುತ್ತದೆ: ಬಾಲ ಶಕ್ತಿ ಪುರಸ್ಕಾರ (ವಯುಕ್ತಿಕ) ಹಾಗೂ ಮಕ್ಕಳಿಗಾಗಿ ಕಾರ್ಯನಿರ್ವಹಿಸುವ ಸಂಘಸಂಸ್ಥೆಗಳು/ವ್ಯಕ್ತಿಗಳಿಗಾಗಿ ಬಾಲ ಕಲ್ಯಾಣ ಪುರಸ್ಕಾರ .

ಈ ಬಾರಿ ಬಾಲ ಶಕ್ತಿ ಪುರಸ್ಕಾರಕ್ಕಾಗಿ 783 ಅರ್ಜಿಗಳನ್ನು ಸ್ವೀಕರಿಸಲಾಯಿತು. ನಾವೀನ್ಯತೆ, ವಿದ್ವತ್, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಾಮಾಜ ಸೇವೆ ಮತ್ತು ಶೌರ್ಯ ವಿಭಾಗಗಳಲ್ಲಿ 26 ಪುರಸ್ಕ್ರತರನ್ನು ಬಾಲಶಕ್ತಿ ಪುರಸ್ಕಾರಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆಯ್ಕೆಮಾಡಿದೆ.

ರಾಷ್ಟ್ರೀಯ ಆಯ್ಕೆ ಸಮಿತಿ ಬಾಲ ಕಲ್ಯಾಣ ಪುರಸ್ಕಾರಕ್ಕಾಗಿ ಇಬ್ಬರು ವ್ಯಕ್ತಿಗಳು ಹಾಗೂ ಮೂರು ಸಂಸ್ಥೆಗಳ ಹೆಸರನ್ನು ಅಂತಿಮಗೊಳಿಸಿದೆ.