ಗುರು ಗೋವಿಂದ ಸಿಂಗ್ ಅವರ ಬೋಧನೆಗಳು ಮಾನವತೆಯ ಹಾದಿ ತೋರಿಸುವಂತಹವು ಎಂದು ಶ್ಲಾಘನೆ
ಲೋಹ್ರಿಯಂದು ರಾಷ್ಟ್ರಕ್ಕೆ ಶುಭಾಶಯ ಕೋರಿದ ಪ್ರಧಾನಮಂತ್ರಿ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರದ ರಾಜಧಾನಿಯಲ್ಲಿ ಗುರು ಗೋವಿಂದ ಸಿಂಗ್ ಜೀ ಅವರ ಜನ್ಮ ವರ್ಷಾಚರಣೆಯ ಸ್ಮರಣಾರ್ಥ ರೂ 350 ರ ನಾಣ್ಯವನ್ನು ಬಿಡುಗಡೆ ಮಾಡಿದರು. ಅವರು ಗುರು ಗೋವಿಂದ ಸಿಂಗ್ ಜೀ ಅವರ ಉದಾತ್ತ ಚಿಂತನೆ ಮತ್ತು ಮೌಲ್ಯಗಳನ್ನು ಕೊಂಡಾಡಿದರು. ಮಾನವತೆಯ ನಿಟ್ಟಿನಲ್ಲಿ ಅವರ ನಿಸ್ವಾರ್ಥ ಸೇವೆ, ಅರ್ಪಣಾಭಾವ, ನಾಯಕತ್ವ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು ಗುರು ಗೋವಿಂದ ಸಿಂಗ್ ಜೀ ಅವರ ಹಾದಿಯಲ್ಲಿ ಸಾಗುವಂತೆ ಜನತೆಗೆ ಮನವಿ ಮಾಡಿದರು.
ಲೋಕ ಕಲ್ಯಾಣ ಮಾರ್ಗದಲ್ಲಿಯ ತಮ್ಮ ನಿವಾಸದಲ್ಲಿ ಗುರು ಗೋವಿಂದ ಸಿಂಗ್ ಜೀ ಅವರ ಜನ್ಮ ವರ್ಷಾಚರಣೆಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ಬಳಿಕ ಅವರು ಆಯ್ದ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಗುರು ಗೋವಿಂದ ಸಿಂಗ್ ಜೀ ಓರ್ವ ಶ್ರೇಷ್ಠ ಹೋರಾಟಗಾರರು, ತತ್ವಜ್ಞಾನಿ, ಕವಿಗಳು, ಮತ್ತು ಗುರು ಆಗಿದ್ದರು. ಅವರು ಅನ್ಯಾಯ ಮತ್ತು ಶೋಷಣೆಯ ವಿರುದ್ದ ಹೋರಾಡಿದರು. ಜನತೆಗೆ ಅವರ ಬೋಧನೆಗಳು ಧರ್ಮ ಮತ್ತು ಜಾತಿಯ ಅಡೆ ತಡೆಗಳನ್ನು ದಾಟುವ ಆದ್ಯತೆಯನ್ನು ಕೇಂದ್ರೀಕರಿಸಿದ್ದವು. ಪ್ರೀತಿ, ಶಾಂತಿ, ಮತ್ತು ತ್ಯಾಗಕ್ಕೆ ಸಂಬಂಧಿಸಿ ಅವರ ಬೋಧನೆಗಳು ಈಗಲೂ ಪ್ರಸ್ತುತವಾಗಿವೆ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು.
ಗುರು ಗೋವಿಂದ ಸಿಂಗ್ ಜೀ ಅವರ ಮೌಲ್ಯಗಳು ಮತ್ತು ಬೋಧನೆಗಳು ಸ್ಪೂರ್ತಿಯ ಸೆಲೆಯಾಗಿವೆ ಮತ್ತು ಮುಂದಿನ ದಿನಗಳಲ್ಲಿ ಮಾನವ ಕುಲಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಒಳಗೊಂಡಿವೆ ಎಂದು ಪ್ರಧಾನಮಂತ್ರಿ ಅವರು ನುಡಿದರು. ಸ್ಮರಣಾರ್ಥ ನಾಣ್ಯ , ಅವರಲ್ಲಿ ಪೂಜ್ಯತೆಯನ್ನು ಮತ್ತು ಗೌರವವನ್ನು ತೋರ್ಪಡಿಸುವ ನಿಟ್ಟಿನಲ್ಲಿ ನಮ್ಮದೊಂದು ಸಣ್ಣ ಪ್ರಯತ್ನ, ಜನತೆ ಗುರು ಗೋವಿಂದ ಸಿಂಗ್ ಜೀ ಮಹಾರಾಜ ಅವರು ತೋರಿದ 11 ಅಂಶಗಳ ಪಥದಲ್ಲಿ ಸಾಗುವ ನಿರ್ಧಾರ ಕೈಗೊಳ್ಳಬೇಕು ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.
ಈ ಸಂಧರ್ಭದಲ್ಲಿ ಪ್ರಧಾನಮಂತ್ರಿ ಅವರು ರಾಷ್ಟ್ರದ ಜನತೆಗೆ ಲೋಹ್ರಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಪ್ರಧಾನಮಂತ್ರಿ ಅವರು ಈ ಮೊದಲು 2018 ರ ಡಿಸೆಂಬರ್ 30 ರಂದು ನಡೆದ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಗುರು ಗೋವಿಂದ ಸಿಂಗ್ ಜೀ ಅವರ ಭಕ್ತಿ ಮತ್ತು ತ್ಯಾಗದ ಪಥವನ್ನು ಅನುಸರಿಸುವಂತೆ ದೇಶಕ್ಕೆ ಕರೆ ನೀಡಿದ್ದರು. 2017ರ ಜನವರಿ 5 ರಂದು ಪಾಟ್ನಾದಲ್ಲಿ ನಡೆದ ಗುರು ಗೋವಿಂದ ಸಿಂಗ್ ಅವರ 350 ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮತ್ತು ಆ ಸಂಧರ್ಭದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು. 2016ರ ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲಿನಿಂದ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಗುರು ಗೋವಿಂದ ಸಿಂಗ್ ಜೀ ಅವರ ಆದರ್ಶ ಮತ್ತು ಮೌಲ್ಯಗಳು ಮಾನವತೆಯ ತಿರುಳು ಆಗಿರುವುದನ್ನು ಸ್ಮರಿಸಿಕೊಂಡಿದ್ದರು ಮತ್ತು ಆ ಬಳಿಕ 2016ರ ಆಕ್ಟೋಬರ್ 18 ರಂದು ಲೂಧಿಯಾನಾದಲ್ಲಿ ನಡೆದ ರಾಷ್ಟ್ರೀಯ ಎಂ.ಎಸ್. ಎಂ.ಇ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ಅವರು ಗುರು ಗೋವಿಂದ ಸಿಂಗ್ ಜೀ ಅವರನ್ನು ನೆನಪಿಸಿಕೊಂಡಿದ್ದರು.
A tribute to Sri Guru Gobind Singh Ji. https://t.co/7xNCkqWgF7
— PMO India (@PMOIndia) January 13, 2019
I bow to Sri Guru Gobind Singh Ji on his Jayanti.
— Narendra Modi (@narendramodi) January 13, 2019
ਮੈਂ ਸਾਹਿਬ-ਏ-ਕਮਾਲ ਸਰਬੰਸ ਦਾਨੀ ਸਾਹਿਬ ਸ੍ਰੀ ਗੁਰੂ ਗੋਬਿੰਦ ਸਿੰਘ ਮਹਾਰਾਜ ਜੀ ਦੇ ਪ੍ਰਕਾਸ਼ ਪੁਰਬ ਦੀ ਸਮੂਹ ਸੰਗਤਾਂ ਨੂੰ ਵਧਾਈ ਦਿੰਦਾ ਹਾਂ ਤੇ ਗੁਰੂ ਸਾਹਿਬ ਅੱਗੇ ਸੀਸ ਝੁਕਾਉਂਦਾ ਹਾਂ। pic.twitter.com/Pt4k2BgLDS