Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಟೈಮ್ ಲೆಸ್ ಲಕ್ಷ್ಮಣ್” ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೆಸರಾಂತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್ ಆಧಾರಿತ “ಟೈಮ್ ಲೆಸ್ ಲಕ್ಷ್ಮಣ್” ಪುಸ್ತಕವನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕಾಲಾತೀತ ಪಯಣದಲ್ಲಿ ತಾವು ಭಾಗಿಯಾಗಿದ್ದು ಸಂತಸ ತಂದಿದೆ ಎಂದರು. ಈ ಮೂಲಕ ಲಕ್ಷ್ಮಣ್ ಅವರ ಕಾರ್ಯದ ವಿಸ್ತೃತ ಭಂಡಾರದ ಒಳನೋಟ ಲಭ್ಯವಾಗಿದೆ ಎಂದರು.

ದಶಕಗಳಿಂದ ಲಕ್ಷ್ಮಣ್ ಅವರ ಕೃತಿಗಳ ಅಧ್ಯಯನದ ಮೂಲಕ ಆ ಕಾಲಘಟ್ಟದ ಸಮಾಜ ಶಾಸ್ತ್ರ ಮತ್ತು ಸಾಮಾಜಿಕ ಆರ್ಥಿಕ ಸನ್ನಿವೇಶವನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದು ಉಲ್ಲೇಖಿಸಿದರು.

ಈ ಪ್ರಯತ್ನ ಕೇವಲ ಲಕ್ಷ್ಮಣ್ ಅಥವಾ ಅವರ ಸ್ಮರಣೆಗಾಗಿ ಅಷ್ಟೇ ಅಲ್ಲ, ಇದು ಕೋಟ್ಯಂತರ ಜನರೊಳಗೆ ಜೀವಿಸುತ್ತಿರುವ ಲಕ್ಷ್ಮಣ್ ಅವರ ಸಣ್ಣ ಭಾಗವೂ ಹೌದು ಎಂದು ಪ್ರಧಾನಮಂತ್ರಿ ಹೇಳಿದರು.

ಲಕ್ಷ್ಮಣ್ ಅವರ ಶ್ರೀಸಾಮಾನ್ಯ ಕಾಲಾತೀತನಾಗಿದ್ದು, ಭಾರತದಾದ್ಯಂತ ಇರುವನಾಗಿದ್ದಾನೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿಯೊಬ್ಬ ಭಾರತೀಯರೂ, ಎಲ್ಲ ಪೀಳಿಗೆಯ ಜನರೂ ತಮ್ಮೊಳಗೆ ಗುರುತಿಸಬಲ್ಲರು ಎಂದೂ ಅವರು ಹೇಳಿದರು.

ಪದ್ಮ ಪ್ರಶಸ್ತಿಗಳ ಪ್ರಕ್ರಿಯೆ ಹೇಗೆ ಸಾಮಾನ್ಯ ಜನರತ್ತ ಕೇಂದ್ರೀಕೃತವಾಗಿದೆ ಎಂಬುದನ್ನೂ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.
***