Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಜಂಟಿಯಾಗಿ ಅಂಚೆ ಚೀಟಿ ಬಿಡುಗಡೆ ಕುರಿತಂತೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ “ಮಹಾತ್ಮ ಗಾಂಧಿಯವರ ಪೀಟರ್ ಮಾರ್ರಿಟ್ಜ್ ಬರ್ಗ್ ಸ್ಟೇಷನ್ ಘಟನೆಯ 125 ನೇ ವರ್ಷ ಮತ್ತು ನೆಲ್ಸನ್ ಮಂಡೇಲಾರ ಜನ್ಮ ಶತಮಾನೋತ್ಸವದ” ವಿಷಯದ ಮೇಲೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಜಂಟಿಯಾಗಿ ಅಂಚೆ ಚೀಟಿ ಬಿಡುಗಡೆ ಮಾಡಿರುವ ಕುರಿತಂತೆ ವಿವರಿಸಲಾಯಿತು. ಅಂಚೆ ಚೀಟಿಯನ್ನು ಜಂಟಿಯಾಗಿ ಬಿಡುಗಡೆ ಮಾಡುವ ಕುರಿತಂತೆ 2018ರ ಜುಲೈ 24ರಂದು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.

ಭಾರತ ಮತ್ತು ದಕ್ಷಿಣ ಆಫ್ರಿಕಾ “ಮಹಾತ್ಮ ಗಾಂಧಿಯವರ ಪೀಟರ್ ಮಾರ್ರಿಟ್ಜ್ ಬರ್ಗ್ ಸ್ಟೇಷನ್ ಘಟನೆಯ 125 ನೇ ವರ್ಷ ಮತ್ತು ನೆಲ್ಸನ್ ಮಂಡೇಲಾರ ಜನ್ಮ ಶತಮಾನೋತ್ಸವದ” ವಿಷಯದ ಮೇಲೆ ಭಾರತ – ದಕ್ಷಿಣ ಆಫ್ರಿಕಾ ಕುರಿತಂತೆ ಜಂಟಿಯಾಗಿ ಅಂಚೆ ಚೀಟಿ ಹೊರತರುವ ಕುರಿತಂತೆ ಪರಸ್ಪರ ಸಮ್ಮತಿಸಿದ್ದವು. 2018ರ ಜುಲೈ 26ರಂದು ಜಂಟಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು.

ಮೇಲಿನ ವಿಷಯದ ಮೇಲಿನ ಈ ಸ್ಮರಣಾರ್ಥ ಅಂಚೆ ಚೀಟಿ ಭಾರತದ ಮಹಾತ್ಮಾ ಗಾಂಧಿ ಮತ್ತು ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾರ ಚಿತ್ರಗಳನ್ನು ಒಳಗೊಂಡಿದೆ.

*****