ಘೋಷಣೆಗಳು
29ನೇ ಅಕ್ಟೋಬರ್ 2018ರ ಅನುಮೋದನೆಯ (ಸ್ಪಷ್ಠೀಕರಣದ) ಉಪಕರಣಗಳನ್ನು ಸಲ್ಲಿಸುವ ಮೂಲಕ ಜಪಾನ್ ಅಂತರಾಷ್ಟ್ರೀಯ ಸೌರಶಕ್ತಿ ಒಕ್ಕೂಟವನ್ನು (ಐ.ಎಸ್.ಎ.) ಸೇರುವುದಾಗಿ ಘೋಷಿಸಿದೆ. ಈ ತನಕ ಒಟ್ಟು 70 ದೇಶಗಳು ಐ.ಎಸ್.ಎ. ಚೌಕಟ್ಟು ಒಪ್ಪಂದಗಳು (ಐ.ಎಸ್.ಎ. ಎಫ್.ಎ) ಮತ್ತು 47 ದೇಶಗಳು ಇದನ್ನು ಅನಮೋದಿಸಿವೆ(ಸ್ಪಷ್ಠೀಕರಿಸಿವೆ). ಜಪಾನ್ ಸಹಿ ಹಾಕಿದ 71ನೇ ದೇಶವಾಗಿದೆ ಮತ್ತು ಐ.ಎಸ್.ಎ. ಎಫ್.ಎ. ಸ್ಪಷ್ಠೀಕರಿಸಿದ 48ನೇ ದೇಶವಾಗಿದೆ.
ಎ. ರಕ್ಷಣೆ ಮತ್ತು ವ್ಯೂಹಾತ್ಮಕ |
||
1. |
ಜಪಾನ್ ಮ್ಯಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ ಮತ್ತು ಭಾರತೀಯ ಜಲಸೇನೆ ನಡುವೆ ಆಳವಾದ ಸಹಕಾರಗಳ ಅನುಷ್ಠಾನ ವ್ಯವಸ್ಥೆ |
ಭಾರತೀಯ ನೌಕಾಪಡೆ ಮತ್ತು ಜಪಾನಿನ ಸಾಗರ ಸ್ವರಕ್ಷಣಾ ಪಡೆಗಳ ನಡುವೆ ಸಾಗರ ( ಸಮುದ್ರ) ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಗಳ ವಿನಿಮಯ ಮತ್ತು ಹೆಚ್ಚಿನ ಸಹಕಾರ. |
ಬಿ. ಡಿಜಿಟಲ್ ಮತ್ತು ನವ ತಂತ್ರಜ್ಞಾನಗಳು |
||
2. |
ಎಲೆಕ್ಟ್ರೋನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕೆಗಳ ಸಚಿವಾಲಯಗಳ ನಡುವೆ ಜಪಾನ್ – ಭಾರತ ಡಿಜಿಟಲ್ ಪಾಲುಗಾರಿಕೆ ನಿಟ್ಟಿನಲ್ಲಿ ಸಹಕಾರಗಳ ಗೊತ್ತುವಳಿ. |
ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಇಂಟರ್ನೆಟ್ ಆಫ್ ತಿಂಗ್ಸ್ (ಐ.ಒ.ಟಿ)ಗಳೇ ಮುಂತಾದ ಮುಂದಿನ ಜನಾಂಗದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಪಾನಿನ “ಸೊಸೈಟಿ 50” ಮತ್ತು ಭಾರತದ ಮುಂಚೂಣಿಯ ಯೋಜನೆಗಳಾದ “ಡಿಜಿಟಲ್ ಇಂಡಿಯ”, “ಸ್ಮಾರ್ಟ್ ಸಿಟಿ” ಮತ್ತು “ ಸ್ಟಾರ್ಟ್ ಅಪ್ ಇಂಡಿಯ” ಗಳಲ್ಲಿ ಒಗ್ಗೂಡಿಸುವಿಕೆ (ಸಂಚಯನ/ಸಹಕಾರ) ಮತ್ತು ಸಮಾನತೆಯನ್ನು ತರುವುದು. |
3. |
ನೀತಿ ಆಯೋಗ ಮತ್ತು ಜಪಾನಿನ ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕೆಗಳ ಸಚಿವಾಲಯ(ಎಮ್.ಇ.ಟಿ.ಐ)ಗಳ ನಡುವೆ ಕೃತಕ ಬುದ್ಧಿಮತ್ತೆ (ಎ.ಐ) ನಿಟ್ಟಿನಲ್ಲಿ ಉದ್ಧೇಶದ ಹೇಳಿಕೆ |
ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳಲ್ಲಿ ಸಹಕಾರಗಳನ್ನು ಪ್ರೋತ್ಸಾಹಿಸುವುದು ಮತ್ತು ಅಭಿವೃದ್ಧಿ ಪಡಿಸುವುದು. |
ಸಿ. ಆರೋಗ್ಯಕಾಳಜಿ ಮತ್ತು ಸ್ವಾಸ್ಥ್ಯ |
||
4. |
ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮತ್ತು ಜಪಾನ್ ಸರಕಾರದ ಆರೋಗ್ಯ ರಕ್ಷಣಾ ನೀತಿ, ಸಂಪುಟ ಸಚಿವಾಲಯ ಹಾಗು ಜಪಾನಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ನಡುವೆ ಆರೋಗ್ಯ ರಕ್ಷಣೆ ಮತ್ತು ಕ್ಷೇಮಕ್ಕಾಗಿ ಸಹಕಾರಕ್ಕಾಗಿ ಎಂ.ಒ.ಸಿ. |
ಪ್ರಾಥಮಿಕ ಆರೋಗ್ಯಕಾಳಜಿ (ಸ್ವಾಸ್ಥ), ಸಂವಹನ ರಹಿತ ರೋಗಗಳು, ಹೆರಿಗೆ ಮತ್ತು ಮಕ್ಕಳ ಆರೋಗ್ಯ ಸೇವೆಗಳು, ನೈರ್ಮಲ್ಯತೆ, ಶುಚಿತ್ವ, ಪೌಷ್ಠಿಕತೆ ಮತ್ತು ಹಿರಿಯರ ಕಾಳಜಿ ಮುಂತಾದ ಸಾಮಾನ್ಯ ಕ್ಷೇತ್ರಗಳಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಯೋಗಕ್ಕಾಗಿ ಸಾಧ್ಯತೆಯ ಕ್ಷೇತ್ರಗಳನ್ನು (ಪ್ರದೇಶಗಳನ್ನು) ಗುರುತಿಸುವ ವ್ಯವಸ್ಥೆಗಳನ್ನು ಸ್ಥಾಪಿಸುವುದು. |
5. |
ಭಾರತದ ಆಯುಶ್ ಸಚಿವಾಲಯ ಮತ್ತು ಜಪಾನಿನ ಕನಗಾವಾ ಪ್ರಿಫೆಕ್ಟುರಲ್ ಗವರ್ನಮೆಂಟ್ ನಡುವೆ ಆರೋಗ್ಯ ಮತ್ತು ಕ್ಷೇಮ ಕ್ಷೇತ್ರದಲ್ಲಿ ಎಂ.ಒ.ಸಿ. |
ಆರೋಗ್ಯ ಕಾಳಜಿ ಮತ್ತು ಸ್ವಾಸ್ಥ ಕ್ಷೇತ್ರಗಳಲ್ಲಿ ಕನಗವ ಆಡಳಿತಾಧಿಕಾರಿ (ಪ್ರಿಫೆಕ್ಚುರಲ್) ಸರಕಾರ ಮತ್ತು ಭಾರತ ಸರಕಾರದ ಆಯುಷ್ ಸಚಿವಾಲಯಗಳ ನಡುವೆ ಸಹಕಾರಗಳ ಗೊತ್ತುವಳಿ |
6. |
ಭಾರತದ ಆಹಾರ ಸುರಕ್ಷೆ ಮತ್ತು ಗುಣಮಾನಕಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ಹಾಗು ಜಪಾನಿನ ಆಹಾರ ಸುರಕ್ಷೆ ಆಯೋಗ , ಜಪಾನಿನ ಬಳಕೆದಾರರ ಏಜೆನ್ಸಿ, ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ನಡುವೆ ತಿಳುವಳಿಕಾ ಒಡಂಬಡಿಕೆ. |
ಆಹಾರ ಸುರಕ್ಷತೆಯ ಕ್ಷೇತ್ರಗಳಲ್ಲಿ ಭಾರತ ಮತ್ತು ಜಪಾನ್ ದೇಶಗಳ ಸಂಸ್ಥೆಗಳ ನಡುವೆ ಹೆಚ್ಚುವರಿ ಸಹಕಾರ. |
ಡಿ. ಆಹಾರದ ಮೌಲ್ಯ ಶೃಂಖಲೆ ಮತ್ತು ಕೃಷಿ ಪ್ರದೇಶಗಳು |
||
7. |
ಆಹಾರ ಸಂಸ್ಕರಣಾ ಮತ್ತು ಕೈಗಾರಿಕಾ ಸಚಿವಾಲಯ ಮತ್ತು ಜಪಾನಿನ ಕೃಷಿ, ಅರಣ್ಯ ಮತ್ತು ಮೀನುಗಾರಿಕಾ ಸಚಿವಾಲಯದ ನಡುವೆ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಎಂ.ಒ.ಸಿ. |
ಸ್ಥಳೀಯ ಸರಕಾರ, ಖಾಸಗಿ ಸಂಸ್ಥೆಗಳು ಇತ್ಯಾದಿ ಪ್ರಸ್ತುತ ಪಾಲುದಾರರ ಪಾಲ್ಗೊಳ್ಳುವಿಕೆಯೊಂದಿಗೆ ಭಾರತದ ಆಹಾರ ಸಂಸ್ಕರಣಾ ಉದ್ಯಮಗಳ ಅಭಿವೃದ್ಧಿಯ ಗುರಿ. |
8. |
ಕೃಷಿ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಜಪಾನಿನಿಂದ ಭಾರತದಲ್ಲಿ ಹೂಡಿಕೆ ಉತ್ತೇಜಿಸಲು ಭಾರತದ ಕೃಷಿ ಮತ್ತು ಕಾರ್ಮಿಕ ಕಲ್ಯಾಣ ಹಾಗು ಜಪಾನಿನ ಕೃಷಿ, ಅರಣ್ಯ ಮತ್ತು ಮೀನುಗಾರಿಕಾ ಸಚಿವಾಲಯದ ನಡುವೆ ಕಾರ್ಯಕ್ರಮ. |
ಜಪಾನಿನ ಸಂಸ್ಥೆಗಳಿಗೆ ಹೂಡಿಕೆಯ ವಾತಾವರಣವನ್ನು ವೃದ್ಧಿಗೊಳಿಸುವ ಮೂಲಕ ಕೃಷಿ ಮೌಲ್ಯ ಸರಣಿ ಮತ್ತು ಮೀನುಗಾರಿಕೆಯೂ ಸೇರಿದಂತೆ ಮತ್ಸ್ಯೋದ್ಯಮಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು. |
9. |
ಮಹಾರಾಷ್ಟ್ರದಲ್ಲಿ ಆಹಾರ ಮೌಲ್ಯ ಸರಪಳಿ ಅಭಿವೃದಿಗಾಗಿ ಮಹಾರಾಷ್ಟ್ರ ಸರಕಾರ ಮತ್ತುಜಪಾನಿನ ಕೃಷಿ, ಅರಣ್ಯ, ಮತ್ತು ಮೀನುಗಾರಿಕಾ ಸಚಿವಾಲಯದ ನಡುವೆ ಎಂ.ಒ.ಸಿ. |
ಮಹಾರಾಷ್ಟ್ರ ರಾಜ್ಯದಲ್ಲಿ ಆಹಾರ ಮೌಲ್ಯ ಸರಣಿ(ಮಾರುಕಟ್ಟೆ ಸರಪಣಿ)ಗಳಲ್ಲಿ ಜಪಾನಿನ ಸಂಸ್ಥೆಗಳ ಹೂಡಿಕೆಗಳಿಗೆ ಅವಕಾಶ ಮಾಡುವುದು. |
10. |
ಉತ್ತರಪ್ರದೇಶದಲ್ಲಿ ಆಹಾರ ಮೌಲ್ಯ ಸರಪಳಿ ಅಭಿವೃದಿಗಾಗಿ ಉತ್ತರ ಪ್ರದೇಶ ಸರಕಾರ ಮತ್ತು ಜಪಾನಿನ ಕೃಷಿ, ಅರಣ್ಯ, ಮತ್ತು ಮೀನುಗಾರಿಕಾ ಸಚಿವಾಲಯದ ನಡುವೆ ಸಹಕಾರದ ಒಡಂಬಡಿಕೆ. |
ಉತ್ತರಪ್ರದೇಶ ರಾಜ್ಯದಲ್ಲಿ ಆಹಾರ ಮೌಲ್ಯ ಸರಣಿ(ಮಾರುಕಟ್ಟೆ ಸರಪಣಿ)ಗಳಲ್ಲಿ ಜಪಾನಿನ ಸಂಸ್ಥೆಗಳ ಹೂಡಿಕೆಗಳಿಗೆ ಅವಕಾಶ ಮಾಡುವುದು. |
ಇ. ಆರ್ಥಿಕ |
||
11. |
ಭಾರತದ ರಪ್ತು ಮುಂಗಡ ಖಾತ್ರಿ ಕಾರ್ಪೋರೇಶನ್ ಮತ್ತು ಜಪಾನಿನ ಎನ್.ಎ.ಎಕ್ಸ್. ಐ. ನಡುವೆ ತಿಳುವಳಿಕಾ ಒಡಂಬಡಿಕೆ |
ಮೂರನೇ ದೇಶಗಳಲ್ಲಿರುವ ಯೋಜನೆಗಳಿಗೆ ಸಹಕಾರ ಬಲಿಷ್ಠಗೊಳಿಸುವುದು ಮತ್ತು ಭಾರತ ಮತ್ತು ಜಪಾನ್ ನಡುವೆ ಹೂಡಿಕೆಯನ್ನು ಚುರುಕುಗೊಳಿಸುವುದು. |
ಎಫ್. ಅಂಚೆ |
||
12. |
ಅಂಚೆ ಕ್ಷೇತ್ರದಲ್ಲಿ ಭಾರತ ಸರಕಾರದ ಸಂಪರ್ಕ ಸಚಿವಾಲಯ ಮತ್ತು ಜಪಾನ್ ಸರಕಾರದ ಆಂತರಿಕ ವ್ಯವಹಾರ ಮತ್ತು ಸಂಪರ್ಕ ಸಚಿವಾಲಯದ ನಡುವೆ ಎಂ.ಒ.ಸಿ. |
ಕೇಂದ್ರ ಸಂಪರ್ಕ ಸಚಿವಾಲಯ ಮತ್ತು ಆಂತರಿಕ ವ್ಯವಹಾರಗಳು ಮತ್ತು ಸಂಪರ್ಕ ಸಚಿವಾಲಯಗಳ ನಡುವೆ ಅಂಚೆ ಸೇವೆ ಮಾತುಕತೆ ಸ್ಥಾಪಿಸುವುದೂ ಸೇರಿದಂತೆ ಅಂಚೆ ಕ್ಷೇತ್ರದಲ್ಲಿ ಸಹಕಾರಗಳನ್ನು ಬಲಿಷ್ಠಗೊಳಿಸುವುದು. |
ಜಿ. ಎಸ್. ಮತ್ತು ಟಿ. ಶೈಕ್ಷಣಿಕ ವಿನಿಮಯ ಮತ್ತು ವಾತಾವರಣ |
||
13. |
ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್.) , ಮತ್ತು ಜಪಾನಿನ ಹಿರೋಶಿಮಾ ವಿಶ್ವವಿದ್ಯಾಲಯ ನಡುವೆ ಸಂಶೋಧನಾ ಸಹಭಾಗಿತ್ವಕ್ಕಾಗಿ ಎಂ.ಒ.ಯು. |
ಎಲೆಕ್ಟ್ರೋನಿಕ್ಸ್ , ಸೆನ್ಸರ್ಸ್ , ಹೈ ಸ್ಪೀಡ್ ವಿಷನ್, ರೊಬೊಟಿಕ್ಸ್ , ಮೆಕಟ್ರೋನಿಕ್ಸ್ ಸೇರಿದಂತೆ ಅಧುನಿಕ ಉತ್ಪಾದನೆ, ಪರಿಸರ ಸಂಬಂಧಿತ ಸಂಶೋಧನೆ, ಜಾಣತನದಿಂದ (ಬುದ್ಧಿವಂತ) ಸಾಗಣೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನಾ ಪಾಲುದಾರಿಗೆಯನ್ನು ಉತ್ತೇಜಿಸುವುದು. |
14. |
ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್ ) , ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಆರ್.ಸಿ.ಎ.ಎಸ್.ಟಿ.) , ಟೋಕಿಯೋ ವಿಶ್ವವಿದ್ಯಾಲಯ, ಜಪಾನ್ ನಡುವೆ ಸಂಶೋಧನಾ ಸಹಭಾಗಿತ್ವಕ್ಕಾಗಿ ತಿಳುವಳಿಕಾ ಒಡಂಬಡಿಕೆ.
|
ನವೀಕರಿಸಬಹುದಾದ ಇಂಧನ, ರೊಬೊಟಿಕ್ಸ್ / ಐಒಟಿ ಸೇರಿದಂತೆ ಎಲೆಕ್ಟ್ರೋನಿಕ್ಸ್, ಅಧುನಿಕ ಸಲಕರಣೆಗಳು, ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆಯ ಪಾಲುದಾರಿಕೆಯನ್ನು ಉತ್ತೇಜಿಸುವುದು. |
15. |
ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿ.ಎಸ್.ಐ.ಆರ್.) ಮತ್ತು ಜಪಾನಿನ ಟೋಕಿಯೋ ವಿಶ್ವವಿದ್ಯಾಲಯದ ನವೀನ ಸಂಶೋಧನಾ ಸಂಸ್ಥೆ (ಟಿ.ಐ.ಟಿ.) ಜೊತೆ ಕೈಗಾರಿಕಾ ಸಂಶೋಧನೆಯ ಆನ್ವಯಿಕತೆಗಾಗಿ ಅಂತರ್ಶಿಸ್ತೀಯ ಕ್ಷೇತ್ರಗಳ ಜಂಟಿ ಸಂಶೋಧನೆಗಾಗಿ ಒಪ್ಪಂದ |
ಅಧುನಿಕ ಉಪಕರಣ(ಸಲಕರಣೆ)ಗಳು, ಜೀವವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಟೋಕಿಯೊ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ(ಟಿ.ಟಿ.ಟಿ)ಯ ಇನ್ಸ್ಟಿಟ್ಯೂಟ್ ಆಫ್ ಇನ್ನೊವೇಟಿವ್ ರಿಸರ್ಚ್ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟ್ರೀಯಲ್ ರಿಸರ್ಚ್ (ಸಿ.ಎಸ್.ಐ.ಆರ್) ನಡುವೆ ಸಂಶೋಧನಾ ಪಾಲುದಾರಿಕೆ ಸ್ಥಾಪಿಸುವುದು. |
16. |
ಅಂಚೆವ್ ಕ್ಷೇತ್ರದಲ್ಲಿ ಭಾರತ ಸರಕಾರದ ಸಂಪರ್ಕ ಸಚಿವಾಲಯ ಮತ್ತು ಜಪಾನ್ ಸರಕಾರದ ಆಂತರಿಕ ವ್ಯವಹಾರ ಮತ್ತು ಸಂಪರ್ಕ ಸಚಿವಾಲಯದ ನಡುವೆ ಎಂ.ಒ.ಸಿ. |
ಸಂಪರ್ಕಗಳ ಸಚಿವಾಲಯ ಮತ್ತು ಆಂತರಿಕ ವ್ಯವಹಾರಗಳು ಹಾಗೂ ಸಂಪರ್ಕಗಳ ಸಚಿವಾಲಯ ನಡುವೆ ಅಂಚೆ ಸೇವೆಗಳ ಮಾತುಕತೆ ಗಳನ್ನು ಏರ್ಪಡಿಸುವ ಮೂಲಕ ಅಂಚೆ ಕ್ಷೇತ್ರದಲ್ಲಿ ಸಹಕಾರವನ್ನು ಬಲಿಷ್ಠಗೊಳಿಸುವುದು. |
17. |
ಭಾರತ ಮತ್ತು ಜಪಾನ್ ನಡುವೆ ಪರಿಸರ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಎಂ.ಒ.ಸಿ. |
ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಭಾರತ ಮತ್ತು ಜಪಾನ್ ನಡುವೆ ಅಧಿಕ ಸಹಕಾರಗಳ ಉತ್ತೇಜನ |
18. |
ಭಾರತದ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಎನ್.ಐ.ಪಿ.ಇ.ಆರ್.) ಮತ್ತು ಜಪಾನಿನ ಶಿಜೌಕಾ ವಿಶ್ವವಿದ್ಯಾಲಯ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್ ಎಜುಕೇಶನ್ ಎಂಡ್ ರಿಸರ್ಚ್, ಎಸ್.ಎ.ಎಸ್. ನಗರ ಮತ್ತು ಶಿಜೌಕಾ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಂಪರ್ಕ |
19. |
ಭಾರತ- ಜಪಾನ್ ಜಾಗತಿಕ ನವೋದ್ಯಮ ನಿಟ್ಟಿನಲ್ಲಿ ಇನ್ನಷ್ಟು ಸಹಕಾರಕ್ಕಾಗಿ ನಾಗಸಾಕಿ ವಿಶ್ವವಿದ್ಯಾಲಯ ಮತ್ತು ಭಾರತದ ಐ.ಐ.ಐ.ಟಿ.ಡಿ.ಎಂ. ಕಾಂಚೀಪುರಂ ನಡುವೆ ತಿಳುವಳಿಕಾ ಒಡಂಬಡಿಕೆ. |
ಭಾರತ-ಜಪಾನ್ ಗ್ಲೋಬಲ್ ಸ್ಟಾರ್ಟಪ್ ನೊಂದಿಗೆ ಮಾಹಿತಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿ |
20. |
ಭಾರತದ ಹೈದರಾಬಾದಿನ ಭಾರತೀಯ ತಂತ್ರಜ್ಞಾನ ಸಂಸ್ಥೆ ಮತ್ತು ಜಪಾನಿನ ಹಿರೋಶಿಮಾ ವಿಶ್ವವಿದ್ಯಾಲಯದ ನಡುವೆ ಶೈಕ್ಷಣಿಕ ವಿನಿಮಯಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
ಎರಡು ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿಗಳ ವಿನಿಮಯ ಮತ್ತು ಜಂಟಿ ಸಂಶೋಧನೆಗೆ ಉತ್ತೇಜನ. |
21. |
ಭಾರತದ ಹೈದರಾಬಾದಿನ ಭಾರತೀಯ ತಂತ್ರಜ್ಞಾನ ಸಂಸ್ಥೆ ಮತ್ತು ರಾಷ್ಟ್ರೀಯ ಆಧುನಿಕ ಕೈಗಾರಿಕಾ ವಿಜ್ಞಾನ ಹಾಗು ತಂತ್ರಜ್ಞಾನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ. |
ಎರಡು ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿಗಳ ವಿನಿಮಯ ಮತ್ತು ಜಂಟಿ ಸಂಶೋಧನೆಗೆ ಉತ್ತೇಜನ. |
22. |
ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮತ್ತು ಗ್ರಾಜ್ಯುಯೇಟ್ ಸ್ಕೂಲ್ ಮತ್ತು ಇಂಜಿನಿಯರಿಂಗ್ ಸ್ಕೂಲ್ ಬೋಧಕ ಸಿಬ್ಬಂದಿ, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಗ್ರಾಜ್ಯುಯೇಟ್ ಸ್ಕೂಲ್,ರಾಸಾಯನಿಕ ವಿಜ್ಞಾನಗಳು ಮತ್ತು ಇಂಜಿನಿಯರಿಂಗ್ ಮತ್ತು ಇಂಜಿನಿಯರಿಂಗ್ ಗ್ರಾಜ್ಯುಯೇಟ್ ಸ್ಕೂಲ್ – ಹೊಕೈಡೋ ವಿಶ್ವವಿದ್ಯಾಲಯಗಳ ನಡುವೆ ವಿದ್ಯಾರ್ಥಿ ವಿನಮಯಕ್ಕಾಗಿ ಒಡಂಬಡಿಕೆ. |
ಎರಡು ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿಗಳ ವಿನಿಮಯ ಮತ್ತು ಜಂಟಿ ಸಂಶೋಧನೆಗೆ ಉತ್ತೇಜನ. |
ಹೆಚ್. ಕ್ರೀಡೆ |
||
23. |
ಭಾರತದ ಕ್ರೀಡಾ ಪ್ರಾಧಿಕಾರ (ಎಸ್.ಎ.ಐ.) ಮತ್ತು ಜಪಾನಿನ ತ್ಸುಕುಬಾ ವಿಶ್ವವಿದ್ಯಾಲಯ ನಡುವೆ ಶೈಕ್ಷಣಿಕ ವಿನಿಮಯ ಮತ್ತು ಕ್ರೀಡಾ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
ಕ್ರೀಡಾ ಅಭಿವೃದ್ದಿ ಮತ್ತು ಪ್ರಾವೀಣ್ಯತೆ ಕ್ಷೇತ್ರಗಳನ್ನು ಜಂಟಿ ಕಾರ್ಯಕ್ರಮಗಳ ಮೂಲಕ ಬಲಪಡಿಸಲು ಸಹಕಾರ. |
ಐ. ಸಾಲ ಒಪ್ಪಂದಗಳಿಗಾಗಿ ಟಿಪ್ಪಣಿ ವಿನಿಮಯ |
||
24. |
ಮುಂಬಯಿ-ಅಹ್ಮದಾಬಾದ್ ಅತಿ ವೇಗದ ರೈಲು (೧೧) ನಿರ್ಮಾಣ ಯೋಜನೆ. |
|
25. |
ಉಮಿಯಾಮ್ –ಉಮ್ಟ್ರೂ ಜಲವಿದ್ಯುತ್ ಉತ್ಪಾದನಾ ಯೋಜನೆಯ ನವೀಕರಣ ಮತ್ತು ಆಧುನೀಕರಣ ಯೋಜನೆ |
|
26. |
ದಿಲ್ಲಿ ಸಮೂಹ ತ್ವರಿತ ಸಾರಿಗೆ ವ್ಯವಸ್ಥೆ ಯೋಜನೆ (ಹಂತ ೩) (೧೧೧) |
|
27. |
ಈಶಾನ್ಯ ರಸ್ತೆ ಸಂಪರ್ಕ ಜಾಲ ಸುಧಾರಣಾ ಯೋಜನೆ (ಹಂತ ೩) (೧) |
|
28. |
ತ್ರಿಪುರಾದಲ್ಲಿ ಸಹ್ಯ ಜಲಾನಯನ ಅರಣ್ಯ ನಿರ್ವಹಣೆ ಯೋಜನೆ. |
|
ಜಿ2ಬಿ/ಬಿ2ಬಿ ಒಪ್ಪಂದಗಳು |
||
29. |
ಜಪಾನಿನ ಕೆ.ಎ.ಜಿ.ಒ.ಎಮ್.ಇ. ಕಂ. ನಿಯಮಿತ. ಮತ್ತು ಭಾರತ ಸರಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳು ಸಚಿವಾಲಯ ನಡುವೆ ತಿಳುವಳಿಕಾ ಗೊತ್ತುವಳಿ |
|
30. |
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ.) ಮತ್ತು ಎಸ್.ಬಿ.ಐ. ಪಾವತಿ ಸೇವೆ ಪ್ಪ್ರೈ. ಲಿಮಿಟೆಡ್ ಮತ್ತು ಹಿಟಾಚಿ ಪಾವತಿ ಸೇವೆಗಳು ಪ್ರೈ. ನಿಯಮಿತ ನಡುವೆ ಜಂಟಿ ಪಾಲುದಾರಿಗೆಯ ಒಪ್ಪಂದ |
|
31. |
ಜಪಾನಿನ ನಿಸ್ಸಾನ್ ಸ್ಟೀಲ್ ಕೈಗಾರಿಕಾ ಕಂಪೆನಿ ಲಿಮಿಟೆಡ್ ಮತ್ತು ಭಾರತ ಸರಕಾರದ ಆಹಾರ ಸಂಸ್ಕರಣಾ ಸಚಿವಾಲಯ ನಡುವೆ ತಿಳುವಳಿಕಾ ಒಡಂಬಡಿಕೆ. |
|
32. |
೫೭ ಜಪಾನೀ ಕಂಪೆನಿಗಳಿಂದ ಭಾರತದ ಖಾಸಗಿ ರಂಗದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಮಾಡುವ ಮತ್ತು ಅಂಗೀಕರಿಸುವಂತಹ ಪತ್ರಗಳನ್ನು ಮತ್ತು ಜಪಾನಿನಲ್ಲಿ ಭಾರತದ ೧೫ ಕಂಪೆನಿಗಳು ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿ ಆಸಕ್ತಿ ವ್ಯಕ್ತಪಡಿಸುವ ಮತ್ತು ಸ್ವೀಕೃತಿ ಪಡೆಯುವ ಕಾಗದ ಪತ್ರಗಳು. ಇದಕ್ಕೆ ಉಭಯ ದೇಶಗಳ ಸರಕಾರಗಳು ಬೆಂಬಲ ವ್ಯಕ್ತಪಡಿಸಿವೆ. |
|
ಕ್ರ. ಸಂ | ಘೋಷಣೆ/ ಒಪ್ಪಂದ/ ಕರಾರುಗಳ ಹೆಸರು | ವಿವರಣೆ |
---|