ಟೋಕಿಯೊದ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರು ಭಾರತ-ಜಪಾನ್ ಪಾಲುದಾರಿಕೆಯ ಹಲವಾರು ಅಂಶಗಳನ್ನು ತಮ್ಮ ಭಾಷಣದಲ್ಲಿ ವಿವರಿಸಿದರು.
ತಮಗೆ ನೀಡಿದ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ಶಿಂಜೊ ಅಬೆ ಮತ್ತು ಜಪಾನಿನ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದರು. ಜಪಾನಿನ ಭಾರತೀಯ ಸಮುದಾಯಕ್ಕೆ ಪ್ರಧಾನಮಂತ್ರಿ ಅವರು ದೀಪಾವಳಿ ಹಬ್ಬದ ಶುಭಾಶಯ ಕೋರಿದರು.
ಭಾರತೀಯ ಸಮುದಾಯವನ್ನು ಜಪಾನಿನ ಭಾರತದ ರಾಯಭಾರಿಗಳೆಂದು ವಿಶ್ಲೇಷಿಸಿದ ಪ್ರಧಾನಮಂತ್ರಿ , ಭಾರತದಲ್ಲಿ ಹೂಡಿಕೆ ಮಾಡಲು ಹಾಗೂ ತಾಯಿನಾಡಿನೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಕಾಯ್ದಿರಿಸಲು ಭಾರತೀಯ ಸಮುದಾಯಕ್ಕೆ ಒತ್ತಾಯಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರವು ಮಾಡಿದ ಸಾಧನೆಗಳನ್ನು ವಿವರಿಸುತ್ತಾ, ಪ್ರಧಾನಮಂತ್ರಿ ಅವರು ಇಂಡಿಯನ್ ಸೊಲ್ಯೂಷನ್ಸ್ – ಗ್ಲೋಬಲ್ ಆ್ಯಪ್ಲಿಕೇಷನ್ಸ್ (ಜಾಗತಿಕ ಅನುಷ್ಠಾನಕ್ಕಾಗಿ ಭಾರತೀಯ ವ್ಯವಸ್ಥೆಗಳು) ನಿಟ್ಟಿನಲ್ಲಿ ಭಾರತವು ನಿರಂತರವಾಗಿ ಕೆಲಸಮಾಡುತ್ತಿದೆ ಎಂದು ಹೇಳಿದರು. ಭಾರತದ ಆರ್ಥಿಕತೆಯಲ್ಲಿ ಸೇರಿಸಿಕೊಳ್ಳುವ ಮಾದರಿ, ಅದರಲ್ಲೂ ವಿಶೇಷವಾಗಿ, ಜಾಮ್ ( ಜನ್ ಧನ್ ಯೋಜನಾ, ಮೊಬೈಲ್, ಆಧಾರ್) ತ್ರಿಕೂಟ ಮತ್ತು ಡಿಜಿಟಲ್ ವ್ಯವಹಾರಗಳ ಮಾದರಿಗಳು ಜಾಗತಿಕವಾಗಿ ಈಗ ಎಲ್ಲಡೆ ಪ್ರಶಂಶಿಸಲ್ಪಟ್ಟಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಕಂಡ ಯಶಸ್ಸು ಹಾಗೂ ದೇಶದಲ್ಲಾಗುತ್ತಿರುವ ಸದೃಢ ಡಿಜಿಟಲ್ ಮೂಲಸೌಕರ್ಯಗಳ ನಿರ್ಮಾಣದ ಕುರಿತು ಪ್ರಧಾನಮಂತ್ರಿ ಅವರು ವಿವರಿಸಿದರು. ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಎಲೆಕ್ಟ್ರಾನಿಕ್ಸ್ ಮತ್ತು ಅಟೊಮೊಬೈಲ್ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರ ಸ್ಥಾನವನ್ನಾಗಿ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ನವಭಾರತ ನಿರ್ಮಾಣಕ್ಕಾಗಿ ಸ್ಮಾರ್ಟ್ ಮೂಲಸೌಕರ್ಯಗಳನ್ನು ಸೃಷ್ಠಿಸುವಲ್ಲಿ ಜಪಾನಿನ ಕೊಡುಗೆಗಳನ್ನು ವಿವರಿಸಿದರು ಮತ್ತು ಭಾರತ ಹಾಗೂ ಜಪಾನ್ ನಡುವಣ ಸಂಬಂಧಗಳು ಸದಾ ಉತ್ತಮ ಪ್ರಗತಿಯಲ್ಲಿರಲು ಭಾರತೀಯ ಸಮುದಾಯವು ಕಠಿಣ ಪ್ರಯತ್ನ ಮಾಡುತ್ತಿರಬೇಕು ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಅವರು ಎರಡು ದಿನಗಳ ಜಪಾನ್ ಪ್ರವಾಸದಲ್ಲಿದ್ದಾರೆ.
Had a delightful interaction with the Indian community in Japan.
— Narendra Modi (@narendramodi) October 29, 2018
The accomplishments of our diaspora make us very proud.
Talked at length about the rich history, robust present and strong future of India-Japan relations. https://t.co/9jdURuB6Il pic.twitter.com/BLiYLMepPq